Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಶಾಂತಿಯುತ ದೇಶಗಳ ಪಟ್ಟಿಯಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನ ಪಡೆದ ಬಾಂಗ್ಲಾ, ಲಂಕಾ..!!
ಬಾಂಗ್ಲಾದೇಶ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದೆ. ಪ್ರತಿಭಟನೆ ಹಿಂಸಾರೂಪ ಪಡೆದು ಇಡಿ ದೇಶ ಹೊತ್ತಿ ಉರಿದಿತ್ತು. ಹೀಗಾಗಿ ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಭಾರತಕ್ಕೆ ಬಂದಿಳಿದಿದ್ದರು. ಇದಾದ ಬಳಿಕ ಬಾಂಗ್ಲಾದಲ್ಲಿ ಅಕ್ಷರಶಃ ನಕರವಾಗಿತ್ತು. ಪ್ರಧಾನಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಕೈಗೆ ಸಿಕ್ಕ ವಸ್ತುವೆಲ್ಲಾ ಹೊತ್ತೊಯ್ದಿದ್ದರು. ಸದ್ಯಕ್ಕೀಗ ಬಾಂಗ್ಲಾದಲ್ಲಿ ಮಿಲಿಟರಿ ಆಡಳಿತ ಆರಂಭಗೊಂಡಿದೆ.
ಆದ್ರೆ ಎರಡು ತಿಂಗಳ ಹಿಂದೆ ದಕ್ಷಿಣ ಏಷ್ಯಾದ ಮೂರನೇ ಅತ್ಯಂತ ಶಾಂತಿಯುತ ದೇಶ ಎಂದು ಬಾಂಗ್ಲಾದೇಶಕ್ಕೆ ಹೊಗಳಿಕೆ ಸಿಕ್ಕಿತ್ತು. ಗ್ಲೋಬಲ್ ಪೀಸ್ ಇಂಡೆಕ್ಸ್ (GPI) 2024ರ ವರದಿಯಲ್ಲಿ ಈ ರೀತಿಯ ಅಂಕಿ ಅಂಶ ಹೊರಬಿದ್ದಿತ್ತು. ಅದ್ರಲ್ಲೂ ಬಾಂಗ್ಲಾ, ಶ್ರೀಲಂಕಾಗಿಂತಲೂ ಭಾರತ ಕೆಳಗಿನ ಸ್ಥಾನದಲ್ಲಿತ್ತು.

2007 ರಿಂದ ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ (ಐಇಪಿ) ಈ ಪಟ್ಟಿಯನ್ನು ತಯಾರಿಸಿದ್ದು, ಶಾಂತಿಯುತತೆಯ ವಿಶ್ವದ ಅತ್ಯಂತ ಸಮಗ್ರ ಅಳತೆಯಾಗಿದೆ. ಗ್ಲೋಬಲ್ ಪೀಸ್ ಇಂಡೆಕ್ಸ್ ವಿಶ್ವಾದ್ಯಂತ 163 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಶಾಂತಿಯ ಮಟ್ಟವನ್ನು ನಿರ್ಣಯಿಸಲು ಹಲವು ಆಯಾಮಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
ಬಾಂಗ್ಲಾದೇಶವು ನೆರೆಯ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನವನ್ನು ಮೀರಿದ ಸ್ಥಾನ ಪಡೆದಿತ್ತು. ಕೇವಲ ಎರಡು ವರ್ಷಗಳ ಹಿಂದೆ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಂಡ ಶ್ರೀಲಂಕಾ 100 ಅಂಕ ಪಡೆದಿದೆ. ಶ್ರೀಲಂಕಾದಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿ ಅಲ್ಲಿನ ಪ್ರಧಾನಿ ಸಹ ದೇಶ ಬಿಡಬೇಕಾದ ಅನಿವಾರ್ತಯೆ ಎದುರಾಗಿತ್ತು. ಅಲ್ಲಿಯೂ ಅರಾಜಕತೆ ಉಂಟಾಗಿ ಹಿಂಸಾರೂಪ ಪಡೆದಿತ್ತು. ವ್ಯಾಪಕ ಸಾರ್ವಜನಿಕ ಅಶಾಂತಿಯ ನಂತರ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದ ಪ್ರಕರಣಗಳು ಸಹ ನಡೆದಿತ್ತು.
ಇನ್ನೊಂದು ಕಡೆ ಇಂಗ್ಲೆಂಡ್‌ನಲ್ಲಿ ವಲಸಿಗರು ಹಾಗೂ ಸರ್ಕಾರ ಅಲ್ಲಿನ ಸ್ಥಳೀಯರ ನಡುವಿನ ಕದನ ತಾರಕಕ್ಕೇರಿದೆ. ವಲಸಿಗ ನೀತಿ ವಿರುದ್ಧ ಅಲ್ಲಿ ದಂಗೆ ಆರಂಭವಾಗಿದೆ. ಆದರೆ ಶಾಂತಿಯುತ ದೇಶಗಳ ಪಟ್ಟಿಯಲ್ಲಿ 34ನೇ ಸ್ಥಾನದಲ್ಲಿತ್ತು. ಆದರೆ ಅಲ್ಲೀಗ ನಿತ್ಯ ಪ್ರತಿಭಟನೆ, ಘರ್ಷಣೆ ನಡೆಯುತ್ತಿದೆ. ಇನ್ನೊಂದು ಕಡೆ ಜರ್ಮನಿಯಲ್ಲೂ ಇದೇ ರೀತಿ ಪ್ರತಿಭಟನೆ, ಪೊಲೀಸರ ನಡುವಿನ ಕದನ ನಡೆಯುತ್ತಲೇ ಇದೆ ಹೀಗಿದ್ದರು ಈ ಪಟ್ಟಿಯಲ್ಲಿ ಜರ್ಮನಿ 20ನೇ ಸ್ಥಾನದಲ್ಲಿದೆ.
ಭಾರತಕ್ಕೆ 116ನೇ ಸ್ಥಾನ
ಭಾರತದ ಅಕ್ಕ ಪಕ್ಕದ ಎಲ್ಲಾ ದೇಶಗಳಲ್ಲು ಒಂದಲ್ಲಾ ಒಂದು ರೀತಿಯ ಪ್ರತಿಭಟನೆ, ಘರ್ಷಣೆ, ಅರಾಜಕತೆ ಇದ್ದರೂ ಆ ದೇಶಗಳೆಲ್ಲ ಭಾರತಕ್ಕಿಂತ ಉತ್ತಮ ಸ್ಥಾನ ಪಡೆದಿದೆ. ಆದರೆ ಭಾರತ ಈ ಶಾಂತಿಯುತ ದೇಶಗಳಲ್ಲಿ ಪಟ್ಟಿಯಲ್ಲಿ 116ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಐಸ್‌ಲ್ಯಾಂಡ್, ನಂತರದ ಸ್ಥಾನದಲ್ಲಿ ಕ್ರಮವಾಗಿ ಐರ್ಲ್ಯಾಂಡ್, ಆಸ್ಟ್ರಿಯಾ, ನ್ಯೂಜಿಲ್ಯಾಂಡ್, ಸಿಂಗಾಪೂರ್, ಸ್ವಿಡ್ಜರ್‌ಲ್ಯಾಂಡ್, ಪೋರ್ಚುಗಲ್, ಡೆನಾರ್ಮ್ ದೇಶಗಳು ಸ್ಥಾನ ಪಡೆದಿದೆ.
ಈ ನಡುವೆ ಅಮೆರಿಕದಲ್ಲಿ ಶಾಂತಿಯುತೆಯು ಶೇ.5.7ರಷ್ಟು ಇಳಿಕೆ ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ರಾಜಕೀಯ ಪ್ರೇರಿತ ದಾಳಿಗಳಿ, ಘರ್ಷಣೆಯು ಅಲ್ಲಿ ನಡೆಯುತ್ತಿರುವ ಹಿನ್ನೆಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವರದಿ ವೈರಲ್ ಆಗಿದ್ದು, ಜನರು ಶಾಕ್ ಆಗಿದ್ದಾರೆ, ಭಾರತದಲ್ಲಿ ಕೆಲವು ವರ್ಷಗಳಿಂದ ದೊಡ್ಡ ಪ್ರಮಾಣದ ಹಿಂಸಾತ್ಮಕ ಘಟನೆಗಳು ವರದಿಗಳಾಗಿಲ್ಲ. ಪ್ರತಿಭಟನೆಗಳು ಯಾವುದೂ ಹಿಂಸಾರೂಪ ಪಡೆದಿಲ್ಲ. ಹೀಗಿದ್ದರೂ 116ನೇ ಸ್ಥಾನ ಪಡೆದಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಆದರೆ ಕಣ್ಣ ಎದುರಿನಲ್ಲಿಯೇ ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಘರ್ಷಣೆಗಳು ನಡೆಯುತ್ತಿದ್ದರೂ ಕೂಡ ಈ ದೇಶದಗಳು ಉತ್ತಮ ಸ್ಥಾನ ಪಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.



Click it and Unblock the Notifications