Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಬೆಂಗಳೂರಿನಲ್ಲಿ 2BHK ಫ್ಲ್ಯಾಟ್ ಬೇಕೆಂದು ರೀಲ್ಸ್ ಮಾಡಿದ ಯುವತಿಯ ವೀಡಿಯೋ ವೈರಲ್
ಕೆಲವರು ಸಿಂಪಲ್ ವಿಷಯವನ್ನು ತುಂಬಾನೇ ಕ್ರಿಯೇಟಿವಿಟಿಯಿದ ಹ್ಯಾಂಡಲ್ ಮಾಡುತ್ತಾರೆ, ಇಲ್ಲಿ ಕೂಡ ಅಷ್ಟೇ ಯುವತಿಯೊಬ್ಬಳು ತನಗೆ ಬೆಂಗಳೂರಿನಲ್ಲಿ 2 ಬೆಡ್‌ರೂಂನ ಫ್ಲ್ಯಾಟ್ ಬೇಕೆಂಬುವುದನ್ನು ಹಾಡಿನ ರೂಪದಲ್ಲಿ ಹೇಳಿದ್ದು ಇದೀಗ ಈ ವೀಡಿಯೋ ತುಂಬಾನೇ ವೈರಲ್ ಆಗಿದೆ.

ಅದರಲ್ಲಿ ಆಕೆ ನನಗೆ ಬೆಂಗಳೂರಿನಲ್ಲಿ ಯಾವ ರೀತಿಯ ಫ್ಲ್ಯಾಟ್ ಬೇಕೆಂಬುವುದನ್ನು ಹೇಳಿರುವಂತೆ ಇದುವರೆಗೂ ಯಾರೂ ಹೇಳಿಲ್ಲ, ಪ್ರಸಿದ್ಧ Man in Finance ಲಿರಿಕ್ಸ್ ರೀತಿಯಲ್ಲಿ I am looking for flat in Bengaluru ಎಂದು ಹಾಡಿನ ಮೂಲಕ ಹೇಳಿ ಗಮನ ಸೆಳೆದಿದ್ದಾಳೆ, ಅದಕ್ಕೆ ನೆಟ್ಟಿಗರು ಹಣವಿರುವ ಹುಡುಗ ಬೇಕೆಂದು ಕೇಳಿದ್ದರೂ ಸಿಗುತ್ತಿದ್ದ ಆದರೆ ಆಕೆ ಡಿಮ್ಯಾಂಡ್ ಮಾಡಿರುವಂತೆ ಮನೆ ಸಿಗುವುದೇ ಕಷ್ಟ ಎಂದು ಕಮೆಂಟ್ ಮಾಡಿದ್ದಾರೆ.
ಈಕೆ ಕೂಡ ಮನೆ ಹುಡುಕಿ ಸಾಕಾದಾಗ ಈ ರೀತಿ ರೀಲ್ಸ್ ಮಾಡಿರಬಹುದು, ಆದರೆ ಈ ಬದಲಾದ ಲಿರಿಕ್ಸ್ ಮಾತ್ರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗೆ ಮಾಡಿರುವುದರಿಂದ ಬ್ರೋಕರ್ ಚಾರ್ಜ್ ಅಥವಾ ಮನೆ ಹುಡುಕಿ ಕೊಡಲು ಸಹಾಯ ಮಾಡುವ ಕೆಲ ವೆಬ್‌ಸೈಟ್‌ಗಳಿಗೆ ಕೊಡುವ ಹಣ ಉಳಿಯಬಹುದೆಂದು ಮಾಡಿರಬಹುದು, ಆದರೆ ಈಕೆಯ ಐಡಿಯಾ ಮಾತ್ರ ಸೂಪರ್ ಆಗಿದೆ, ಈಗ ಈ ರೀಲ್ಸ್ ನೋಡಿ ಅವರು ಹೇಳುವಂಥ ಫ್ಲ್ಯಾಟ್ ಇದ್ದರೆ ನೆಟ್ಟಿಗರೇ ಅವರಿಗೆ ತಿಳಿಸಬಹುದು.
ಅಷ್ಟಕ್ಕೂ ಆಕೆ ಇರಬಯಸುವ ಫ್ಲ್ಯಾಟ್ ಹೇಗಿರಬೇಕು?
ಫುಲ್ ಫರ್ನಿಶ್ಡ್, 2 ಬೆಡ್‌ರೂಂ ರೂಂ, ಬಾಲ್ಕನಿ ಇದ್ದು ಅದು ಬೆಂಗಳೂರಿನಲ್ಲಿ ಇರಬೇಕು ಎಂದು ಹೇಳಿದ್ದಾರೆ. ಇದೀಗ ಈ ಹಾಡು ಟ್ರೆಂಡ್ ಆಗಿದೆ.
ಒರಿಜಿನಲ್ ಹಾಡಿನಲ್ಲಿ ಏನಿದೆ?
ಇದರ ವರ್ಜಿನಲ್ ವರ್ಷನ್ ಹಾಡಿನಲ್ಲಿ ಯುವತಿಯೊಬ್ಬಳು 'Man in Finance' ಹಣವಿರುವ ಪುರುಷ ಬೇಕು ಎಂದು ಹಾಡುತ್ತಿದ್ದಾಳೆ, ಈ ವೀಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಈ ಹಾಡನ್ನು ಆ ಯುವತಿ ಮನೆ ಹುಡುಕಲು ಬಳಸಿಕೊಂಡಿರುವುದಕ್ಕೆ ಆಕೆಯನ್ನು ಬಲೇ ಹೆಣ್ಣು ಎಂದು ಹೇಳಬೇಕು.
ಈ ಜಮಾನದಲ್ಲಿ ರೀಲ್ಸ್ ಗಮನ ಸೆಳೆಯುತ್ತಿದೆ
ಈಗ ಏನಿದ್ದರೂ ರೀಲ್ಸ್, ಮನೆಯಲ್ಲಿ ಯಾರಾದರೂ ಸತ್ತರೆ ಅವರ ತಿಥಿ ಕರ್ಮವನ್ನು ಕೂಡ ರೀಲ್ಸ್ ಮಾಡಿ ಹಾಕುವವರು ಇದ್ದಾರೆ. ಯಾರು ಯಾವಾಗ ತಮ್ಮ ರೀಲ್ಸ್‌ನಿಂದ ಫೇಮಸ್ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ದಿನ ಕಳೆದು ಬೆಳಗಾಗುವಷ್ಟರಲ್ಲಿ ಸೆಲೆಬ್ರಿಟಿ ಆಗಿರುತ್ತಾರೆ, ಇಲ್ಲಿ ಕೂಡ ತನಗೆ ಫ್ಲ್ಯಾಟ್ ಬೇಕು ಎಂಬುವುದನ್ನು ರೀಲ್ಸ್ ಮೂಲಕ ಹೇಳಿದ್ದಾರೆ, ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಈ ಹುಡುಗಿ ಈಗ ತುಂಬಾನೇ ವೈರಲ್ ಆಗಿದೆ.



Click it and Unblock the Notifications
