Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ವಿವಾಹ ಸಮಾರಂಭ ನಿಷೇಧಿಸಿದ ಬೆಂಗಳೂರು ದೇವಾಲಯ; ಕಾರಣ ಏನ್ ಗೊತ್ತಾ?
ಮದುವೆ ಅನ್ನೋದು ಮಾನವರ ಬದುಕಿನ ಬಹುಮುಖ್ಯ ಭಾಗವಾಗ. ಹಲವರು ವಿಭಿನ್ನ ರೀತಿಯಲ್ಲಿ ವಿವಾಹವಾಗಬೇಕು ಅಂದುಕೊಳ್ಳುತ್ತಾರೆ. ಮತ್ತೆ ಕೆಲವರು ದುಬಾರಿ ಮದುವೆಯಾದರೆ ಇನ್ನು ಕೆಲವರು ಸರಳವಾಗಿ ವಿವಾಹವಾಗಲು ಬಯಸುತ್ತಾರೆ. ಆದ್ರೆ ಮತ್ತೊಂದಿಷ್ಟು ಜನರು ದೇವಸ್ಥಾನಗಳಲ್ಲಿ ಮದುವೆಯಾಗುವುದು ಉತ್ತಮ ಆಶೀರ್ವಾದಕ್ಕೆ ಕಾರಣವಾಗಲಿದೆ ಎಂದು ಸಹ ನಂಬುತ್ತಾರೆ.
ದೇವಾಲಯಗಳಲ್ಲಿ ಮದುವೆಯಾಗುವುದು ದಾಂಪತ್ಯದಲ್ಲಿ ಸಂತಸಕ್ಕೆ ಕಾರಣವಾಗುತ್ತೆ, ದೇವರ ಸಾಕ್ಷಿಯಾಗಿ ವಿವಾಹವಾದ ನೆಮ್ಮದಿ ಇರಲಿದೆ ಎಂದು ಸಹ ಹೇಳುತ್ತಾರೆ, ಆದ್ರೆ ಇಂತಹ ಹಲವು ವಿಚಾರಗಳ ನಡುವೆ ಈಗ ಇಲ್ಲೊಂದು ದೇವಾಲಯವು ವಿವಾಹ ಆಗುವುದನ್ನೇ ನಿಷೇಧಿಸಿದೆ. ಹೌದು ಬೆಂಗಳೂರಿನ ದೇವಾಲಯವೊಂದು ಈ ರೀತಿಯ ಅಚ್ಚರಿ ನಿರ್ಧಾರ ತೆಗೆದುಕೊಂಡಿದೆ.

ಈ ದೇವಾಲಯವು ಬೆಂಗಳೂರಿನ ಹಲಸೂರು ಬಳಿ ಇರುವ ಅತ್ಯಂತ ಹಳೆಯ ದೇವಾಲಯವಾಗಿದೆ. ಹಲಸೂರಿನ ಸೋಮೇಶ್ವರಸ್ವಾಮಿ ದೇವಾಲವು ಈ ನಿರ್ಧಾರ ತೆಗೆದುಕೊಂಡಿರುವುದು ಈಗ ಅಚ್ಚರಿ ಮೂಡಿಸಿದೆ. ಈ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯ ವಿವಾಹ ಮಹೋತ್ಸವಗಳಿಗೆ ಬಹಳ ಹೆಸರುವಾಸಿಯಾಗಿತ್ತು, ಆದ್ರೆ ಈಗ ದೇವಾಲಯವು ವಿವಾಹ ಮಹೋತ್ಸವಕ್ಕೆ ಬ್ರೇಕ್ ಹಾಕಿದೆ.
ವಿವಾಹ ನಿಷೇಧವೇಕೆ?
ದೇವಾಲಯದಲ್ಲಿ ವಿವಾಹವಾಗುತ್ತಿರುವ ಜೋಡಿ ಮುಂದೆ ಹೊಂದಾಣಿಕೆ ಇಲ್ಲದೆ ವಿಚ್ಛೇದನ ಪಡೆಯುತ್ತಿದ್ದಾರೆ. ಇದು ದೇವಾಲಯದ ಹೆಸರು ಕೆಡಿಸುತ್ತಿದೆ ಎಂಬುದು ಮೊದಲ ಕಾರಣವಾಗಿದೆ. ಅದ್ರಲ್ಲೂ ಈ ಇತ್ತೀಚಿಗೆ ವಿವಾಹಕ್ಕಿಂತ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಗೆ ಈ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದು, ದೇವಾಲಯದ ಹೆಸರು ಹಾಳಾಗುತ್ತಿದೆ ಎಂದು ಹೇಳಲಾಗಿದೆ.
ಕೋರ್ಟ್ ಮೆಟ್ಟಿಲೇರುವ ಅರ್ಚಕರು
ವಿಚ್ಛೇದನ ಸಂಬಂಧವಾಗಿ ದಂಪತಿ ಮಾತ್ರ ಕೋರ್ಟ್ ಮೆಟ್ಟಿಲೇರುತ್ತಿಲ್ಲ ಬದಲಾಗಿ ಮದುವೆ ಮಾಡಿಸಿರುವ ದೇವಾಲಯದ ಅರ್ಚಕರು ಕೂಡ ಕೋರ್ಟ್ ಮೆಟ್ಟಿಲೇರಬೇಕಾಗಿದೆ. ನ್ಯಾಯಾಲಯದಲ್ಲಿ ವಿವಾಹ ಮಾಡಿಸಿರುವ ಕುರಿತು ಅರ್ಚಕರು ಕೂಡ ಮೌಖಿಕ ಹೇಳಿಕೆ ನೀಡಬೇಕಾಗುತ್ತದೆ. ಇದು ಅರ್ಚಕರಿಗೆ ಸಮಸ್ಯೆಯ ಜೊತೆಗೆ ತಲೆನೋವಿಗೂ ಕಾರಣವಾಗಿದೆ.
ಹೀಗಾಗಿ ದೇವಾಲಯದಲ್ಲಿ ಅರ್ಚಕರು ಮದುವೆ ಮಾಡಿಸಲು ಹಿಂದು ಮುಂದು ನೋಡಬೇಕಾದ ಸ್ಥಿತಿ ಬಂದೊದಗಿದೆ. ಅಲ್ಲದೆ ದೇವಾಲಯದಲ್ಲಿ ಅರ್ಚಕರು ವಿವಾಹ ಮಾಡಿಸಲು ಮುಂದೆ ಬರುತ್ತಿರಲಿಲ್ಲ. ಕಳೆದೊಂದು ವರ್ಷದಿಂದ ದೇವಾಲಯದಲ್ಲಿ ವಿವಾಹ ನಡೆಸುವ ಕಾರ್ಯಕ್ಕೆ ಬ್ರೇಕ್ ಬಿದ್ದಿತ್ತು, ಇದು ಭಕ್ತರಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಆದ್ರೆ ಈಗ ದೇವಾಲಯ ಅಧಿಕೃತವಾಗಿ ಪ್ರಕಟಣೆಯ ಮೂಲಕ ವಿವಾಹ ಕಾರ್ಯಗಳನ್ನು ನಡೆಸುವುದಿಲ್ಲ ಎಂದು ತಿಳಿಸಿದೆ.
12 ನೇ ಶತಮಾನದಷ್ಟು ಹಿಂದಿನ ಮತ್ತು ಶಿವನಿಗೆ ಸಮರ್ಪಿತವಾದ ಹಲಸೂರು ಸೋಮೇಶ್ವರ ದೇವಾಲಯವು ನಗರದಲ್ಲಿ ಹಿಂದೂ ವಿವಾಹಗಳಿಗೆ ಪವಿತ್ರ ಸ್ಥಳವಾಗಿ ದೀರ್ಘಕಾಲ ಸೇವೆ ಸಲ್ಲಿಸಿದೆ. ವರ್ಷವೊಂದಕ್ಕೆ ನೂರಾರು ಜೋಡಿಗಳು ಇಲ್ಲಿ ವಿವಾಹವಾಗುತ್ತವೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚಾದಂತೆ ದೇವಾಲಯದ ಹೆಸರು ಹಾಳಾಗ ತೊಡಗಿತ್ತು.
ದೇವಾಲಯದ ಅಧಿಕಾರಿಗಳು ಕಳೆದ ಎರಡು ವರ್ಷಗಳಲ್ಲಿ 50 ಕ್ಕೂ ಹೆಚ್ಚು ವಿಚ್ಛೇದನ ಸಂಬಂಧಿತ ದೂರುಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು ಮನೆ ಬಿಟ್ಟು ಬಂದು ವಿವಾಹವಾಗಲು ಜೋಡಿ ನಕಲಿ ದಾಖಲೆಗಳನ್ನು ಸಹ ನೀಡಿ ವಿವಾಹವಾಗುತ್ತಿದ್ದ ಪ್ರಕರಣಗಳು ಸಹ ವರದಿಯಾಗಿದ್ದವು. ಇದು ದೇವಾಲಯದ ಆಡಳಿತ ಮಂಡಳಿಯನ್ನು ಸಮಸ್ಯೆಗಳಿಗೆ ತಳ್ಳಿತ್ತು. ನ್ಯಾಯಾಲಯದಲ್ಲಿ ಈ ಪ್ರಕರಣಗಳು ಬಂದಾಗ ದೇವಾಲಯದ ಸಿಬ್ಬಂದಿ ಉತ್ತರ ನೀಡಬೇಕಾದ ಇಕ್ಕಟ್ಟಿಗೆ ಸಿಲುಕುತ್ತಿದ್ದರು.
ಹೀಗಾಗಿ ವಿವಾಹ ಸಮಾರಂಭಗಳು ಇನ್ನು ಮುಂದೆ ನಡೆಸದೆ ಇರಲು ತೀರ್ಮಾನಿಸಿರುವುದಾಗಿ ದೇವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಇದು ಹಲವರಿಗೆ ಅಚ್ಚರಿ ಎನಿಸಿದರು. ಮತ್ತೆ ಕೆಲವರು ದೇವಾಲಯದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.



Click it and Unblock the Notifications











