Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನೀವು ಕೇರಳ ಚಿಪ್ಸ್ ಪ್ರಿಯರಾಗಿದ್ರೆ ಈ ಸುದ್ದಿ ಆಘಾತ ತರಲಿದೆ.! ಈ ವಿಡಿಯೋ ನೋಡಿ!
ನೀವು ಕುರುಕಲು ತಿಂಡಿ ಸವಿಯಲು ಇಷ್ಟಪಡುವಂತಹ ಮಂದಿ ಆಗಿರಬಹುದು. ಅದರಲ್ಲೂ ಸಂಜೆ ಸಮಯದಲ್ಲಿ ಟೀ- ಕಾಫಿಯ ಜೊತೆಗೆ ಯಾವುದಾದರು ತಿಂಡಿ ಇದ್ದರೇನೆ ನಿಮಗೆ ಸಮಾಧಾನ ಆಗುತ್ತಿರಬಹುದು. ಹಾಗೆ ರಸ್ತೆ ಬದಿ ಸಿಗುವ ತಿಂಡಿಗಳನ್ನು ಹಾಗೆ ಸ್ನ್ಯಾಕ್ಸ್‌ಗಳನ್ನು ಕೂಡ ನೀವು ಸವಿದಿರಬಹುದು. ಅದರಲ್ಲೂ ಕೇರಳ ಬಾಳೆಕಾಯಿ ಚಿಪ್ಸ್ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ.
ಕೇರಳ ಚಿಪ್ಸ್ ವಿದೇಶದಲ್ಲೂ ಫೇಮಸ್, ಹಾಗೆ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಈ ಚಿಪ್ಸ್ ಸವಿಯಲು ಇಷ್ಟಪಡುತ್ತಾರೆ. ಖಾರ ಹಾಗೂ ಖಾರ ರಹಿತವಾದ ವಿಭಿನ್ನ ರುಚಿ ನೀಡುವ ಈ ಚಿಪ್ಸ್ ಅನ್ನು ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ಅಂಗಡಿಗಳಲ್ಲಿ ಈ ಕೇರಳ ಚಿಪ್ಸ್ ಅತ್ಯಂತ ಬೇಡಿಕೆಯ ತಿಂಡಿ ಎನ್ನಬಹುದು. ಮತ್ತೆ ಕೆಲವರು ಮನೆಯಲ್ಲೇ ಮಾಡಿ ಸವಿಯುವುದು ಸಹ ನೋಡಬಹುದು.

ಆದ್ರೆ ಈ ಚಿಪ್ಸ್ ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ಅದರಲ್ಲೂ ಚಿಪ್ಸ್ ತಯಾರಿಕೆಯಲ್ಲಿ ಎಷ್ಟು ಪ್ರಮಾಣದಲ್ಲಿ ಎಣ್ಣೆಯನ್ನು ಬಳಸಲಾಗುತ್ತಿದೆ ಎಂಬುದನ್ನು ವಿವರಿಸುವ ವಿಡಿಯೋ ಇದಾಗಿದ್ದು, ನೋಡಿದವರು ಅಚ್ಚರಿಯ ಜೊತೆಗೆ ಆಘಾತಕ್ಕೂ ಒಳಗಾಗಿದ್ದಾರೆ.
ಬಾಳೆಹಣ್ಣಿನ ಚಿಪ್ಸ್‌ನಲ್ಲಿ ಎಷ್ಟು ಎಣ್ಣೆ ಇದೆ ಎಂಬುದನ್ನು ವಿವರಿಸಲು ವ್ಯಕ್ತಿಯೋರ್ವ ಮಾಡಿರುವ ಪ್ರಯೋಗ ನೋಡಿದ ಮಂದಿ ಅಕ್ಷರಶಃ ಶಾಕ್ ಆಗಿದ್ದಾರೆ. ಏಕೆಂದರೆ ನಾವು ಯಾರು ಕೂಡ ಊಹಿಸದಷ್ಟು ಎಣ್ಣೆ ಬಳಸಿರುವುದು ಕಂಡುಬರುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
Doc.eswar ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮುಂದೆ ಕುಳಿತಿರುವ ಹಲರನ್ನು ಉದ್ದೇಶಿಸಿ ಚಿಪ್ಸ್ ಸವಿಯುವುದರಿಂದಾಗುವ ಅನಾರೋಗ್ಯಕ್ಕೆ ಹೇಗೆ ತುತ್ತಾಗಬಹುದು ಎಂದು ಹೇಳುತ್ತಿದ್ದಾರೆ. ಮೊದಲು ಹಳದಿ ಬಣ್ಣದ ಎರಡು ಚಿಪ್ಸ್ ಅನ್ನು ಇಕ್ಕಳದಲ್ಲಿ ಹಿಡಿದು ಬಳಿಕ ಅದನ್ನು ಬೆಂಕಿಯಲ್ಲಿ ಸುಡಲಾಗುತ್ತಿದೆ.
ಈ ರೀತಿ ಸುಡುವ ಪ್ರಕ್ರಿಯೆಯಲ್ಲಿ ಅದರಿಂದ ಎಣ್ಣೆಯ ಹನಿಗಳು ಕೆಳಗಿರುವ ಪೇಪರ್‌ನ ಮೇಲೆ ಬೀಳುವುದು ಸಹ ನೋಡಬಹುದು. 20ಕ್ಕಿಂತ ಅಧಿಕ ಎಣ್ಣೆಯ ಹನಿಗಳು ಈ ಪೇಪರ್ ಮೇಲೆ ಬೀಳುತ್ತಿದೆ. ಹೀಗಾಗಿ ಈ ಚಿಪ್ಸ್ ತಯಾರಿಕೆಗೆ ಬಹಳಷ್ಟು ಎಣ್ಣೆ ಬಳಸುತ್ತಾರೆ ಎಂಬುದನ್ನು ಖಚಿತವಾಗುತ್ತದೆ. ಹಾಗೆ ಇಷ್ಟೊಂದು ಪ್ರಮಾಣದಲ್ಲಿ ಎಣ್ಣೆ ನಮ್ಮ ದೇಹ ಸೇರಿದರೆ ಅದರಿಂದ ಬಹಳಷ್ಟು ಹಾನಿಗೆ ನಾವು ಒಳಗಾಗಬೇಕಾಗುತ್ತದೆ.
ಈ ವಿಡಿಯೋ ನೋಡಿದ ಮಂದಿ ನಿಜಕ್ಕೂ ಶಾಕ್‌ಗೆ ಒಳಗಾಗಿದ್ದಾರೆ. ಇಷ್ಟು ಪ್ರಮಾಣದಲ್ಲಿ ಎಣ್ಣೆ ನಮ್ಮ ದೇಹಕ್ಕೆ ಸೇರಿದರೆ ಖಂಡಿತ ಬಹುಅಂಗಾಂಗಗಳ ಸಮಸ್ಯೆಗಳಿಗೆ ನಾಸವು ತುತ್ತಾಗಬಹುದು. ಅದರಲ್ಲೂ ಕೇವಲ 2 ಚಿಪ್ಸ್‌ನಲ್ಲಿ ಇಷ್ಟೊಂದು ಎಣ್ಣೆ ಇದ್ದರೆ ಇನ್ನು 100 ಗ್ರಾಮ್ ಚಿಪ್ಸ್‌ನಲ್ಲಿ ಅದೆಷ್ಟು ಪ್ರಮಾಣದ ಎಣ್ಣೆ ನಮ್ಮ ದೇಹ ಸೇರಬಹುದು ಎಂಬ ಆಘಾತಕಾರಿ ಲೆಕ್ಕಾಚಾರದಲ್ಲಿ ಜನರು ಮುಳುಗಿದ್ದಾರೆ.
ಆದ್ರೆ ಈ ವಿಡಿಯೋದಲ್ಲಿ ತೋರಿಸಲಾದ ವಿಚಾರ ಎಷ್ಟು ಸತ್ಯ ಎಂಬುದು ಮಾತ್ರ ದೃಢಪಟ್ಟಿಲ್ಲ. ಏಕೆಂದರೆ ಈ ಚಿಪ್ಸ್ ಎಲ್ಲಿಂದ ತರಲಾಗಿದೆ? ಈ ಪ್ರಯೋಗಕ್ಕೂ ಮುನ್ನ ಚಿಪ್ಸ್ ಅನ್ನು ಎಲ್ಲಿ ಶೇಖರಿಸಲಾಗಿದೆ? ಅದರ ಸತ್ಯಾಸತ್ಯತೆ ಏನು ಎಂಬುದು ತಿಳಿದುಬಂದಿಲ್ಲ. ಆದ್ರೆ ಈ ರೀತಿ ಚಿಪ್ಸ್‌ನಿಂದ ಹೊರಬರುವುದು ಬಾಳೆಹಣ್ಣಿನ ನೈಸರ್ಗಿಕ ಎಣ್ಣೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ಮಂದಿ ಚಿಪ್ಸ್ ತಿನ್ನಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿರುವುದಂತು ಸತ್ಯ.



Click it and Unblock the Notifications
