Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಬೋಳು ತಲೆಯಲ್ಲಿ ಮರಳಿದ ಕೂದಲು..! ವಿಡಿಯೋ ನೋಡಿ ಜನರೇ ಶಾಕ್.!
ಇತ್ತೀಚಿಗೆ ಪುರುಷರು ತಲೆ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಉದುರುವುದರಿಂದ ಎಷ್ಟೋ ಯುವಕರು ಖಿನ್ನತೆ ಒತ್ತಡಕ್ಕೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಂತೂ ಈ ರೀತಿಯ ಸಮಸ್ಯೆಗೆ ಒಳಗಾಗುತ್ತಿರುವವ ಸಂಖ್ಯೆ ಹೆಚ್ಚುತ್ತಲೇ ಇದೆ.
ಪುರುಷರಿಗೆ ಆಗಿರಲಿ, ಮಹಿಳೆಯರಿಗೆ ಆಗಿರಲಿ ಸೊಂಪಾದ ಕೂದಲು ಮುಖದ ಅಂದವನ್ನು ಹೆಚ್ಚಿಸುತ್ತದೆ. ಅಲ್ಲದೆ ಕೂದಲು ಆತ್ಮವಿಶ್ವಾಸ ಕೂಡ ಹೆಚ್ಚಿಸುತ್ತದೆ. ತಲೆಯಲ್ಲಿ ಕೂದಲು ಕಡಿಮೆಯಾದಾಗ ಕೆಲವರಿಗಂತೂ ತುಂಬಾನೇ ಬೇಸರ ಆಗುತ್ತದೆ, ಆತ್ಮವಿಶ್ವಾಸ ಕಡಿಮೆಯಾಗುತ್ತದೆ.

ಹೀಗಾಗಿ ಮಾರುಕಟ್ಟೆಯಲ್ಲಿ ನೂರಾರು ಕಂಪನಿಗಳು ಸಾವಿರಾರು ಉತ್ಪನ್ನಗಳ ಹೊರತಂದಿವೆ. ಅದರಲ್ಲೂ ಕೂದಲು ಟ್ರಾನ್ಸ್‌ಪ್ಲಾಂಟ್ ಮಾಡಲು ಪ್ರತ್ಯೇಕ ಆಸ್ಪತ್ರೆಗಳು, ಕ್ಲೀನಿಕ್‌ಗಳು ಸಹ ಬಂದಿವೆ. ಆದ್ರೆ ಇಲ್ಲೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬನ ಕೂದಲು ಟ್ರಾನ್ಸ್‌ಪ್ಲಾಂಟ್ ಮಾಡಿರುವ ಪ್ರಕ್ರಿಯೆ ನೋಡಿ ಜನ ಅಚ್ಚರಿಗೆ ಒಳಗಾಗಿದ್ದಾರೆ.
ಬೋಳು ತಲೆಯಿದ್ದ ವ್ಯಕ್ತಿ ತಲೆಯಲ್ಲಿ ಕೂದಲು ಮೂಡಿದ್ದಲ್ಲದೆ ಆತ ವಯಸ್ಸಿನಲ್ಲೂ ಚಿಕ್ಕವನಂತೆ ಕಂಡುಬರುತ್ತಿದ್ದಾನೆ. ಈ ವಿಡಿಯೋ ನೋಡಿದ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಸ್ಕಾಟ್ ವೆಸ್ಟ್‌ವುಡ್ ಎಂಬ ವ್ಯಕ್ತಿ ತನ್ನ ನಂಬಲಾಗದ ಕೂದಲು ರೂಪಾಂತರ ಮಾಡಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಸ್ಕಾಟ್‌ಗೆ 10 ವರ್ಷದ ಹಿಂದೆ ಕೂದಲು ಉದುರಲು ಆರಂಭಸಿತ್ತಂತೆ. ಆದರೆ ಉದುರುತ್ತಿದ್ದ ಕೂದಲಿನ ಪ್ರಮಾಣ ಹೆಚ್ಚಾಗಿ ಬೋಳು ತಲೆಯಾಗಿದೆ. ಆದರೆ ಎಷ್ಟು ಉತ್ಪನ್ನಗಳ ಬಳಿಸಿದರು ಕೂದಲು ಮರಳಿ ಬರಲಿಲ್ಲವಂತೆ. ಕೂದಲು ಉದುರುವಿಕೆಯು ಅವನ ಸ್ವಾಭಿಮಾನ ಕುಸಿದಿತ್ತು.
ಕೊನೆಯದಾಗಿ ಅವರು ರಾಬ್ ವುಡ್ ಎಂಬ ಕೇಶ ವಿನ್ಯಾಸಕರನ ಸಂಪರ್ಕಿಸಲು ನಿರ್ಧರಿಸಿದರು. ಇದು ಆತನ ಕೂದಲು ಮತ್ತೆ ವಿನ್ಯಾಸಗೊಳಿಸಲು ಕಾರಣವಾಯಿತು. ಆತನ ಕೂದಲು ಮೊದಲಿಗಿಂತ ತುಂಬಾನೆ ಚೆನ್ನಾಗಿ ಮೂಡುವಂತೆ ಮಾಡಿದೆ. ಈ ವಿಡಿಯೋದಲ್ಲಿ ಆತ 10 ವರ್ಷ ಚಿಕ್ಕವಂತೆ ಕಂಡುಬರುತ್ತಾನೆ. ಆತನ ಹೊಸ ರೂಪಾಂತರ ನೋಡಿ ಆತನೇ ಶಾಕ್ ಆಗಿದ್ದಾನೆ. ಅಲ್ಲದೆ ಆತನ ಮುಖದಲ್ಲಿ ಖುಷಿ ಸಹ ನೋಡಬಹುದು.
ಸಾಮಾಜಿಕ ಜಾಲತಾಣ ಬಳಕೆದಾರರು ಕ್ಲಿಪ್ ಅನ್ನು ನೋಡಿ ಶಾಕ್ ಆಗಿದ್ದಾರೆ. ಜೊತೆಗೆ ಅವರಿಗೆ ಅಭಿನಂದನೆ ಸಹ ಹೇಳಿದ್ದಾರೆ. ಆತನ ಬೋಳು ತಲೆಯ ಕಾರಣದಿಂದಾಗಿ ಮದುವೆಯೂ ಆಗಿಲ್ಲವಂತೆ. ಇದರಿಂದ ಆತ ಖಿನ್ನತೆಗೆ ಒಳಗಾಗಿಬಿದ್ದನಂತೆ. ಆದರೆ ಅಂತಿಮವಾಗಿ ಆತ ಕೂದಲು ಕಸಿ ಮಾಡಿಸಿಕೊಂಡು ಹೀರೋವಂತೆ ಕಂಡುಬಂದಿದ್ದಾನೆ. ಈ ವಿಡಿಯೋ ನೋಡಿದ ಮಂದಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೂದಲು ಹೇಗೆ ವ್ಯಕ್ತಿಯೊಬ್ಬನಿಗೆ ಮರುಜೀವ ನೀಡಲಿದೆ ಎಂಬುದನ್ನು ಅವರು ನೋಡಿ ಅಚ್ಚರಿಗೆ ಒಳಗಾಗಿದ್ದಾರೆ.
ಆದರೆ ಈ ಕೂದಲು ಶಾಶ್ವತ ರೂಪಾಂತರವಲ್ಲ. 4ರಿಂದ 5 ತಿಂಗಳ ಕಾಲ ಉಳಿಯಬಹುದು. ಆದರೆ ಆತನಲ್ಲಿ ಮೂಡುವ ಖುಷಿ ಮಾತ್ರ ಜೀವನದ ಉದ್ದಕ್ಕೂ ಉಳಿಯಲಿದೆ. ಮತ್ತೆ ಇದೇ ರೀತಿ ರೂಪಾಂತರಕ್ಕೆ ಒಳಗಾಗಬಹುದು. ಈ ವಿಡಿಯೋ 5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಕಮೆಂಟ್‌ಗಳ ಮಾಡಿದ್ದಾರೆ.
ಜೊತೆಗೆ ಹಲವಾರು ಮಂದಿ ಈ ರೀತಿಯ ರೂಪಾಂತರ ನೋಡಿ ತಾವು ಸಹ ಈ ರೀತಿಯ ರೂಪಾಂತರಕ್ಕೆ ಒಳಗಾಗಬೇಕು ಎಂಬ ಬಯಕೆ ಮುಂದಿಟ್ಟಿದ್ದಾರೆ. ಏಕೆಂದರೆ ಈ ರೀತಿ ಕೂದಲು ಕಳೆದುಕೊಂಡವರ ಸಂಖ್ಯೆ ಹೆಚ್ಚಾಗಿದೆ. ಅಂತವರು ಈಗ ಕೂದಲು ರೂಪಾಂತರ ಮಾಡಿಸಿಕೊಳ್ಳುವ ತವಕ ಹೊರಹಾಕಿದ್ದಾರೆ.
ಆದ್ರೆ ಮತ್ತೆ ಕೆಲವರು ಇದು ನಕಲಿ ಎನ್ನುತ್ತಿದ್ದಾರೆ. ಏಕೆಂದರೆ ಈ ರೀತಿ ಕೂದಲು ಕಳೆದುಕೊಂಡ ವ್ಯಕ್ತಿಯ ಇಡಿ ರೂಪವೇ ಬದಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದೊಂದು ನಕಲಿ ಮಾರ್ಕೆಟಿಂಗ್ ಪ್ಲಾನ್ ಎನ್ನುತ್ತಿದ್ದಾರೆ. ಆದರೆ ಈ ವಿಡಿಯೋ ಮೇಲ್ನೋಟಕ್ಕೆ ಅಸಲಿಯಾಗಿ ಕಾಣುತ್ತಿದೆ.



Click it and Unblock the Notifications