Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಾಲೇಜು ಶೌಚಾಲಯದಲ್ಲಿ ಹಾವಿನ ಮರಿಗಳು.!! ಭಯ ಹುಟ್ಟಿಸುತ್ತೆ ಈ ವಿಡಿಯೋ
ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಹಾವುಗಳು ಕಾಣಸಿಗುತ್ತವೆ. ಎಷ್ಟೇ ಎಚ್ಚರಿಕೆ ವಹಿಸಿದರು ನಮಗೆ ಹಾವುಗಳು ಕಾಣಲು ಸಿಗುತ್ತವೆ. ಅದರಲ್ಲೂ ಬೆಡ್‌ರೂಮ್, ಬಾತ್‌ರೂಮ್ ಎಲ್ಲ ಕಡೆಯು ಹಾವು ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ಬೆಚ್ಚಗಿನ ಸ್ಥಳ ಹುಡುಕುತ್ತಾ ಹಾವುಗಳು ಅಲೆದಾಡುವುದು ನೋಡಬಹುದು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹತ್ತಾರು ಹಾವಿನ ವಿಡಿಯೋಗಳ ನೋಡಬಹುದು.
ಈಗ ಚೆನ್ನೈನಲ್ಲಿ ಶೌಚಾಲಯದ ಕಮೋಡ್‌ನಲ್ಲಿ ಹಾವುಗಳು ಕಾಣಿಸಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಾವಿನ ಮರಿಗಳು ಕಮೋಡ್‌ನಿಂದ ಹೊರಬರುತ್ತಿರುವುದು ನೋಡಬಹುದು. ಆದ್ರೆ ಈ ವಿಡಿಯೋದಲ್ಲಿ ಹತ್ತಕ್ಕೂ ಹೆಚ್ಚು ಹಾವಿನ ಮರಿಗಳಿರುವುದು ಗೋಚರವಾಗುತ್ತಿದ್ದು ನೋಡುಗರು ಶಾಕ್ ಆಗಿದ್ದಾರೆ.

ತಮಿಳುನಾಡಿನ ಅರಿಗ್ನರ್ ಅಣ್ಣಾ ಕಾಲೇಜಿನ ಮಹಿಳಾ ಶೌಚಾಲಯದ ಕಮೋಡ್‌ನಲ್ಲಿ ಈ ಹಾವುಗಳ ವಿಡಿಯೋ ಸೆರೆಯಾಗಿದೆ. ಹಾವು ಇದೇ ಕಮೋಡ್‌ನಲ್ಲಿ ಮೊಟ್ಟೆ ಇಟ್ಟು ಮರಿಗಳ ಮಾಡಿದೆ. ಇದು ಶೌಚಾಲಯದ ಸ್ವಚ್ಛತೆ, ನಿರ್ವಹಣೆಯ ಕುರಿತ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ. ಹಾಗೆ ಅಲ್ಲಿರುವ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ದೊಡ್ಡ ಪ್ರಶ್ನೆ ಎದ್ದಿದೆ.
ಚೆನ್ನೈನಿಂದ 196 ಕಿಮೀ ದೂರದಲ್ಲಿರುವ ತಿರುವಣ್ಣಾಮಲೈ ಜಿಲ್ಲೆಯ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ, ಈ ಕಾಲೇಜಿನಲ್ಲಿ ಸುಮಾರು 8,000 ವಿದ್ಯಾರ್ಥಿಗಳಿದ್ದಯ, ಈ ಕಾಲೇಜಿನ ದುಸ್ಥಿತಿಗೆ ಈ ವಿಡಿಯೋ ಕನ್ನಡಿ ಹಿಡಿಯುವಂತಿದೆ.
ವಾಶ್‌ರೂಮ್‌ನ ಸ್ಥಿತಿಯು ಅತ್ಯಂತ ಅನೈರ್ಮಲ್ಯ ಮತ್ತು ಬಳಕೆಗೆ ಯೋಗ್ಯವಾಗಿಲ್ಲ ಎಂದು ವಿವರಿಸಲಾಗಿದೆ, ಇದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಕಳವಳವನ್ನು ಹೆಚ್ಚಿಸಿದೆ. ಈ ಘಟನೆಯು ಆಕ್ರೋಶವನ್ನು ಹುಟ್ಟುಹಾಕಿದೆ, ನೈರ್ಮಲ್ಯ ಗುಣಮಟ್ಟವನ್ನು ಸುಧಾರಿಸಲು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮದ ಅಗತ್ಯತೆಯ ಬಗ್ಗೆ ಗಮನ ಸೆಳೆದಿದೆ.
ಈ ಶೌಚಾಲಯದಲ್ಲಿ ಹಾವು ಸೇರಿಕೊಂಡು ಇಷ್ಟೊಂದು ಮರಿ ಮಾಡುವವರೆಗೂ ಯಾರೊಬ್ಬರಿಗೂ ತಿಳಿಯಲಿಲ್ಲವೇ ಎಂಬ ಅನುಮಾನವೂ ಮೂಡಿದೆ. ಹಾಗೆ ಕಾಲೇಜಿನ ಆಡಳಿತ ಕುರಿತು ಪ್ರಶ್ನೆಗಳ ಹುಟ್ಟುಹಾಕಿದೆ. ಮಳೆಗಾಲದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇದ್ದು, ಈಗ ಈ ಹಾವುಗಳು ಕಾಣಿಸಿಕೊಂಡಿದ್ದಕ್ಕೆ ಕಾಲೇಜಿನ ವಿರುದ್ಧ ಭಾರೀ ಟೀಕೆಗಳು ಕೇಳಿಬಂದಿದೆ.
ಈ ವಿಡಿಯೋವನ್ನ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ರೆಕಾರ್ಡ್ ಮಾಡಿದ್ದಾಳೆ ಎಂದು ವರದಿಯಾಗಿದೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದವರು ಅಕ್ಷರಶಃ ಆಘಾತಕ್ಕೆ ಒಳಗಾಗಿದ್ದಾರೆ. ಒಂದು ವೇಳೆ ಈ ಶೌಚಾಲಯ ಬಳಸಲು ಯಾರಾದರು ಮುಂದಾಗಿದ್ದರೆ ಅವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಈಷ ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಸಿಬ್ಬಂದಿ ಇದಕ್ಕೆ ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಇಂತವರಿಂದಲ ವಿದ್ಯಾರ್ಥಿಗಳ ಜೀವದ ಜೊತೆ ಅವರು ಆಟವಾಡುತ್ತಿದ್ದಾರೆ. ಒಂದು ವೇಳೆ ಹಾವುಗಳು ಯಾರಿಗಾದರು ಅಪಾಯ ತಂದಿದ್ದರೆ ಏನು ಮಾಡುತ್ತಿದ್ದರು ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.



Click it and Unblock the Notifications
