Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಈ ಬೆಟ್ಟದ ಕಲ್ಲನ್ನು ದಿಂಬಿನ ಕೆಳಗಿಟ್ಟು ಮಲಗಿದರೆ ಮಕ್ಕಳಾಗುತ್ತಾ.!! ಸರ್ಕಾರ ಕಲ್ಲಿನ ಮಾರಾಟವನ್ನೆ ಬ್ಯಾನ್ ಮಾಡಿದೆ!
ಪ್ರತಿಯೊಂದು ಹೆಣ್ಣು ಮದುವೆ ಬಳಿಕ ಮಕ್ಕಳ ಹೆರುವುದು ತಾಯ್ತನ ಅನುಭವಿಸುವುದನ್ನು ಅದ್ಭುತ ಕ್ಷಣವೆಂದು ಭಾವಿಸುತ್ತಾರೆ. ಹಾಗೆ ಮಕ್ಕಳನ್ನು ಹೆರುವುದು ಮಹಿಳೆಯೊಬ್ಬರ ಜೀವನದ ಬಹುಮುಖ್ಯ ಭಾಗವಾಗುತ್ತದೆ. ಆದ್ರೆ ಎಲ್ಲರಲ್ಲೂ ಈ ಸಂತೋಷದ ಕ್ಷಣಗಳನ್ನು ಅನುಭವಿಸಲು ಆಗುವುದಿಲ್ಲ. ಕೆಲವರಿಗೆ ಮಕ್ಕಳಾಗದೆ ಇರುವುದು, ಬಂಜೆತನದ ಸಮಸ್ಯೆಗಳು ಎದುರಾಗುವುದು ನಾವು ನೋಡಬಹುದು.
ಹಾಗೆ ಮತ್ತೆ ಕೆಲವರು ಮಕ್ಕಳಾಗಲಿ ಎಂದು ವಿಜ್ಞಾನದ ಮೊರೆ ಹೋಗುತ್ತಾರೆ, ಅದರ ಜೊತೆ ಜೊತೆಗೆ ಕೆಲವು ನಂಬಿಕೆಗಳು, ಸಂಪ್ರದಾಯಗಳ ಆಚರಣೆಗೂ ಮುಂದಾಗುತ್ತಾರೆ. ಕೆಲವೊಂದು ಮೂಢನಂಬಿಕೆ ಕಾರಣದಿಂದಾಗಿ ಪ್ರಾಣಕ್ಕೆ ಸಂಚಕಾರ ಬರುವುದು ಸಹ ನಾವು ನೋಡಬಹುದು. ಹಾಗೆ ದೇವರು, ಹರಕೆ ಇಂತಹ ಹತ್ತಾರು ಘಟನೆಗಳ ನಾವು ನೆನಪಿಸಿಕೊಳ್ಳಬಹುದು.

ಒಟ್ಟಿನಲ್ಲಿ ಅವರ ಉದ್ದೇಶ ಮಕ್ಕಳನ್ನು ಹೆರುವುದು ಆಗಿರುತ್ತೆ. ಈಗ ವಿಜ್ಞಾನ ಮುಂದುವರೆದಿದ್ದು, ಯಾರು ಶಾಶ್ವಾತವಾಗಿ ಗರ್ಭ ಧರಿಸಲು ಸಾಧ್ಯವಿಲ್ಲ ಎಂಬುದನ್ನು ಮೊದಲೇ ಹೇಳುತ್ತಾರೆ. ಆದ್ರೆ ಕೆಲವೊಂದು ನಂಬಿಕೆಗಳಲ್ಲಿ ಇದು ಸುಳ್ಳಾಗುವುದು ನೋಡಬಹುದು. ಹಾಗೆ ವಿಜ್ಞಾನಕ್ಕೆ ಸವಾಲು ಹಾಕುವಂತಹ ಘಟನೆಗಳು ನಡೆಯುವುದು ಕೂಡ ನೋಡಿರುತ್ತೇವೆ.
ಅದೇ ರೀತಿ ಇಲ್ಲೊಂದು ಕಡೆ ಮಕ್ಕಳಾಗದೆ ಇರುವ ಮಹಿಳೆ ಇಲ್ಲಿ ಸಿಗುವ ಕಲ್ಲನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಮಕ್ಕಳಾಗುತ್ತೆ ಎಂದು ನಂಬಲಾಗಿದೆ. ಹೀಗಾಗಿ ಈ ಪರ್ವತದ ಕಲ್ಲುಗಳಿಗೆ ಈಗ ಭಾರೀ ಬೇಡಿಗೆ ಬಂದಿದೆ. ಹಾಗೆ ಸರ್ಕಾರ ಮಧ್ಯ ಪ್ರವೇಶ ಮಾಡಿ ಈ ಪರ್ವತ ಹಲ್ಲುಗಳನ್ನು ಮಾರಾಟ ಮಾಡುವುದು ನಿಷೇಧ ಮಾಡಿ. ಹಾಗಾದ್ರೆ ಏನಿದು ಪರ್ವತ ಕಲ್ಲಿನ ಕಥೆ ಎಂಬುದನ್ನು ತಿಳಿಯೋಣ.
ಪೋರ್ಚುಗಲ್‌ನಲ್ಲಿದೆ ಬರ್ತಿಂಗ್ ಸ್ಟೋನ್
ಪೋರ್ಚುಗಲ್‌ನಲ್ಲಿರುವ ಪೆಡ್ರಾಸ್ ಪರಿಡೈರಾಸ್ ಎಂದು ಕರೆಯುವ ಒಂದು ಪರ್ವತದಲ್ಲಿ ಸಿಗುವ ಕಲ್ಲುಗಳು ಈ ರೀತಿಯ ನಂಬಿಕೆಗೆ ಕಾರಣವಾಗಿವೆ. ಈ ವಿಚಿತ್ರ ವಿದ್ಯಮಾನವು ವರ್ಷಗಳಿಂದಲೂ ವಿಜ್ಞಾನಿಗಳಿಗೆ ಅಚ್ಚರಿಗೊಳಿಸುತ್ತಲೇ ಇದೆ. ಇಲ್ಲಿಗೆ ವಿಶ್ವದ ಮೂಲೆ ಮೂಲೆಯಿಂದ ಜನರು ಬಂದು ಈ ಕಲ್ಲುಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಈ ಪರ್ವತದಲ್ಲಿ ಮದರ್-ರಾಕ್ ಎಂಬ ನಿಗೂಢ ಬಂಡೆಯಿದೆ ಮತ್ತು ಅದರ ಸುತ್ತಲು ಸಣ್ಣ ಸಣ್ಣ ಕಲ್ಲುಗಳಿರುತ್ತವೆ. ಈ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ದಿಂಬಿನ ಕೆಳಗಿಟ್ಟು ಮಲಗಿದರೆ ಮಗು ಪ್ರಾಪ್ತಿಯಾಗುತ್ತೆ ಎಂದು ನಂಬಲಾಗಿದೆ. ಆದ್ರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ, ವಿಜ್ಞಾನಿಗಳು ಕೂಡ ಇದನ್ನು ನಂಬುವುದಿಲ್ಲ.
ಅಚ್ಚರಿ ಅಂದರೆ ಈ ಪರ್ವತದಿಂದ ಎಷ್ಟೇ ಕಲ್ಲುಗಳನ್ನು ತೆಗೆದರು ಮತ್ತೆ ಮತ್ತೆ ಸಣ್ಣ ಕಲ್ಲುಗಳು ಉದ್ಭವವಾಗುತ್ತದೆ. ಇದನ್ನೇ ಅಲ್ಲಿನ ಸ್ಥಳೀಯರು ಮದರ್ ರಾಕ್‌ನ ಮಗು ಎಂದು ಭಾವಿಸುತ್ತಾರೆ. ಹಾಗೆ ಈ ಕಲ್ಲುಗಳನ್ನು ಮಾರಾಟ ಕೂಡ ಮಾಡುತ್ತಾರೆ. 1 ಕಿ.ಮೀಟರ್ ಉದ್ದ 600 ಮೀಟರ್ ಅಗಲವಾಗಿರುವ ಈ ಪವರ್ತ ಅಚ್ಚರಿ ತನ್ನಲ್ಲಿಟ್ಟುಕೊಂಡಿದೆ.
ಇದರ ಹಿಂದಿದೆ ಒಂದು ಸತ್ಯ
ಆದ್ರೆ ಈ ಪರ್ವತದಲ್ಲಿ ಚಿಕ್ಕ ಚಿಕ್ಕ ಕಲ್ಲುಗಳು ಮೂಡುತ್ತಿರುವ ಹಿಂದೆ ಒಂದು ಸತ್ಯವಿದೆ. ಈ ಚಿಕ್ಕ ಕಲ್ಲುಗಳು 2 ರಿಂದ 12 ಸೆಂಟಿಮೀಟರ್‌ಗಳಷ್ಟು ದೊಡ್ಡದಾಗಿವೆ. ಹಾಗೆ ಮೇಲ್ಪದರದಲ್ಲಿ ಬಯೋಟೈಟ್ ಅಂಶ ಪತ್ತೆಯಾಗಿದೆ. ಇಡೀ ಪರ್ವತವು ಗ್ರಾನೈಟ್ ಕಲ್ಲುಗಳಿಂದ ಕೂಡಿದೆ. ಇಬ್ಬನಿ ಹಾಗೂ ಮಳೆಯ ನೀರು ಇದರ ಮೇಲೆ ಬಿದ್ದಾಗ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ಇದರಿಂದಾಗಿ ಬಂಡೆಗಳ ಮೇಲೆ ಸಣ್ಣ ಕಲ್ಲುಗಳು ರೂಪುಗೊಳ್ಳುತ್ತವೆ. ಆದ್ರೆ ದೊಡ್ಡ ಬಂಡೆಯ ಒಳಗಿಂದ ಈ ಚಿಕ್ಕ ಕಲ್ಲುಗಳು ಹೇಗೆ ಹೊರಬರುತ್ತವೆ. ಎಷ್ಟು ದಿನದ ಪ್ರಕ್ರಿಯೆಗೆ ಇದು ಕಾರಣವಾಗುತ್ತಿದೆ ಎಂಬುದು ಮಾತ್ರ ವಿಜ್ಞಾನಿಗಳಿಗೂ ಈವರೆಗೆ ಉತ್ತರ ಸಿಕ್ಕಿಲ್ಲ.
ಆದ್ರೆ ಸ್ಥಳೀಯರು ಮಾತ್ರ ಇದೊಂದು ಮಾಯಾವಿ ಬಂಡೆ ಇದು ಶಿಶು ಕಲ್ಲುಗಳಿಗೆ ಜನ್ಮ ನೀಡುತ್ತದೆ ಎಂದು ನಂಬಿದ್ದಾರೆ. ಹೀಗಾಗಿ ಅವರು ಪರ್ವತ ಏರಿ ಈ ಚಿಕ್ಕ ಕಲ್ಲುಗಳನ್ನು ತಂದು ಪ್ರವಾಸಿಗರಿಗೆ ಮಾರಾಟ ಮಾಡುತ್ತಾರೆ. ಈ ರೀತಿ ಮಾಡುತ್ತಿರುವುದು ಅಲ್ಲಿನ ನೈಸರ್ಗಿಕ ಸಂಪತ್ತಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಇದರಿಂದ ಅಲ್ಲಿನ ಸರ್ಕಾರ ಈ ಕಲ್ಲುಗಳ ಮಾರಾಟ ಮಾಡುವುದನ್ನೇ ನಿಷೇಧಿಸಿದೆ. ಆದ್ರೆ ಪರ್ವತ ಏರುವ ಪ್ರವಾಸಿಗರು ಆ ಕಲ್ಲುಗಳನ್ನು ತರಬಹುದು. ಇತ್ತೀಚಿಗೆ ಪರ್ವತ ಪ್ರದೇಶದಲ್ಲಿ ಈ ಕಲ್ಲುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.



Click it and Unblock the Notifications