Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹುಟ್ಟುವಾಗಲೇ 32 ಹಲ್ಲುಗಳ ಹೊಂದಿದ ಮಗು..!! ಹೀಗೆ ಆಗೋದ್ಯಾಕೆ?
ಮೆಡಿಕಲ್ ಮಿರಾಕಲ್ ನಡೆಯೋದನ್ನು ನಾವೂ ಕೇಳಿರುತ್ತೇವೆ, ಅಷ್ಟೇ ಏಕೆ ಕೆಲವೊಂದು ಪ್ರಕರಣವನ್ನು ನಾವು ಸಹ ನೋಡಿರುತ್ತೇವೆ. ಅಂದ್ರೆ ಇವು ಇಡೀ ವೈದ್ಯಕೀಯ ಕ್ಷೇತ್ರಕ್ಕೆ ಸವಾಲು ಹಾಕುವಂತಹ ಅಚ್ಚರಿ ಹುಟ್ಟಿಸುವಂತಹ ಪ್ರಕರಣಗಳಾಗಿರುತ್ತವೆ. ಅದ್ರಲ್ಲೂ ಕೆಲವು ಮಕ್ಕಳು ಹುಟ್ಟುವಾಗಲೇ ವೈದ್ಯರಿಗೆ ಅಚ್ಚರಿ ಮೂಡಿಸುತ್ತವೆ.
ಅಂದರೆ ಮಕ್ಕಳು ಹುಟ್ಟುವಾಗ ಜೆನಟಿಕ್ ಸಮಸ್ಯೆಯಿಂದಾಗಿ ವಿಚಿತ್ರ ಕಾಯಿಲೆಯಿಂದ ಬಳಲಬಹುದು. ಇಲ್ಲವೆ ವಿಚಿತ್ರ ಅಂಗ ಬೆಳೆಯುವುದು, ಅವಳಿಗಳು, ಬಾಲದೊಂದಿಗೆ ಜನಿಸುವುದು, ಮೂರು ಕಾಲು, 4 ಕೈಗಳೊಂದಿಗೆ ಜನಿಸುವುದು ಹೀಗೆ ಚಿತ್ರ ವಿಚಿತ್ರ ಘಟನೆಗಳ ನೋಡಿರುತ್ತೀರಿ. ಇದೆಲ್ಲದರ ಹಿಂದೆ ಒಂದೊಂದು ವೈದ್ಯಕೀಯ ಪ್ರಕರಣವಾಗಿರುತ್ತದೆ.

ಈಗ ಇಲ್ಲೊಂದು ಇಂತಹದ್ದೆ ಪ್ರಕರಣವೊಂದು ಜನರಲ್ಲಿ ಅಚ್ಚರಿ ಮೂಡಿಸಿದೆ. ಆಗ ತಾನೆ ಹುಟ್ಟಿದ ಮಗುವಿಗೂ ಸಂಪೂರ್ಣ ಹಲ್ಲುಗಳು ಬೆಳೆದಿವೆ. ಹುಟ್ಟುವಾಗ ಹಲ್ಲುಗಳೊಂದಿಗೆ ಈ ಮಗು ಜನಿಸಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಮಗೆ ತಿಳಿದಿರುವಂತೆ, ಮಗು ಹುಟ್ಟಿದ 1 ವರ್ಷದ ಒಳಗೆ ಹಲ್ಲು ಹುಟ್ಟುತ್ತವೆ. ಒಂದು ವರ್ಷದ ನಂತರವೂ ಹಲ್ಲು ಬರದಿದ್ದರೆ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.
ಆದರೆ ಈ ಮಗುವಿಗೆ ಹುಟ್ಟಿದಾಗಲೇ ಸಂಪೂರ್ಣ ಹಲ್ಲುಗಳ ಹೊಂದಿದೆ. ಬರೋಬ್ಬರಿ 32 ಹಲ್ಲುಗಳೊಂದಿಗೆ ಈ ಮಗು ಜನಿಸಿದೆ, ಈ ಕುರಿತು ಮಗುವಿನ ತಾಯಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ನೋಡಿದ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಒಬ್ಬ ಮಾನವನಿಗೆ 32 ಹಲ್ಲುಗಳು ಬೆಳೆಯಬೇಕಾದರೆ 21 ವಯಸ್ಸು ಪೂರ್ನವಾಗಬೇಕಾಗುತ್ತದೆ. ಇದಕ್ಕೂ ಮೊದಲೇ ಎಲ್ಲಾ ಹಲ್ಲುಗಳು ಬೆಳವಣಿಗೆಯಾಗುತ್ತದೆ.
ಆದರೆ ಈ ಮಗುವಿಗೆ ಹುಟ್ಟುವಾಗಲೇ 32 ಹಲ್ಲುಗಳಿವೆ. ಇದೊಂದು ಅಪರೂಪದ ಕಾಯಿಲೆ ಎಂದು ತಿಳಿದುಬಂದಿದೆ. ಆದರೆ ಈ ಕಾಯಿಲೆ ಕುರಿತು ಅರಿವು ಮೂಡಿಸಲು ಈ ವಿಡಿಯೋ ಹಂಚಿಕೊಳ್ಳಲಾಗಿದೆ ಎಂದು ವಿಡಿಯೋ ಮಾಡಿದ ಮಗುವಿನ ತಾಯಿ ಹೇಳಿಕೊಂಡಿದ್ದಾರೆ. ಈ ಸ್ಥಿತಿಯನ್ನು ಸಾಮಾನ್ಯವಾಗಿ 'ನಟಾಲ್ ಟೀತ್' ಎಂದು ಕರೆಯಲಾಗುತ್ತದೆ.
ಈ ರೀತಿಯ ಮಕ್ಕಳು ಹುಟ್ಟುವುದು ಸಮಸ್ಯೆ ತರುವುದಿಲ್ಲ. ಮಕ್ಕಳ ಆರೋಗ್ಯಕ್ಕೂ ಇದು ಹಾನಿಕಾರಕವಲ್ಲ, ಆದರೆ ಇದು ಮಗುವಿನ ತಾಯಿಗೆ ಸಮಸ್ಯೆಯಾಗಬಹುದು. ತಾಯಿ ಹಾಲು ಕುಡಿಸುವಾಗ ಸಮಸ್ಯೆ ಎದುರಿಸಬಹುದು. ಇಲ್ಲವೆ ಆಹಾರ ನೀಡುವಾಗ ಹಲ್ಲು ಸಮಸ್ಯೆ ನೀಡಬಹುದು. ಅಲ್ಲದೆ ಹಲ್ಲು ಮುರಿದರೆ ಮಗು ಅದನ್ನು ನುಂಗಬಹುದು, ಇದಿಷ್ಟು ಬಿಟ್ಟರೆ ಮಗುವಿನ ಬೆಳೆವಣಿಗೆಗೆ ಇದರಿಂದ ಯಾವುದೇ ಹಾನಿಯಿಲ್ಲ.
ಆದ್ರೆ ಈ ವಿಡಿಯೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬರೋಬ್ಬರಿ 30 ಮಿಲಿಯನ್ ವೀಕ್ಷಣೆ ಪಡೆದಿದ್ದು ಹಲವರ ಅಚ್ಚರಿಗೂ ಕಾರಣವಾಗಿದೆ. ಕೆಲವರು ಈ ವಿಡಿಯೋ ನೋಡಿ ಶಾಕ್‌ಗೆ ಒಳಗಾಗಿದ್ದಾರೆ, ಮತ್ತೆ ಕೆಲವರು ಮಗುವಿನ ಆರೋಗ್ಯ ಕುರಿತು ಕುತೂಹಲಕಾರಿಯಾಗಿ ಪ್ರಶ್ನೆಗಳ ಕೇಳಿದ್ದಾರೆ.
ಮಗು ಹುಟ್ಟುವಾಗಲೇ ಹಲ್ಲುಗಳ ಹೊಂದಿದ್ದರೆ ಬಹುಬೇಗ ಹಲ್ಲುಗಳು ಉದುರಿ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಮಗುವಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಒಬ್ಬರು ಕಮೆಂಟ್‌ನಲ್ಲಿ ಸಲಹೆ ನೀಡಿದ್ದಾರೆ. ಅವರ ಸಲಹೆ ಸತ್ಯವೂ ಆಗಿದೆ. ಪ್ರತಿಯೊಂದು ಹಲ್ಲುಗಳಿಗೂ ಆಯಸ್ಸು ಇದೆ. ವರ್ಷಗಳು ಉರುಳಿದಂತೆ ಹಲ್ಲಿನ ನರಗಳು ಶಕ್ತಿ ಕಳೆದುಕೊಂಡು ಆ ಹಲ್ಲು ಉದುರುತ್ತದೆ. 60 ವರ್ಷದ ಬಳಿಕ ಸಾಮಾನ್ಯವಾಗಿ ಹಲ್ಲುಗಳು ಹೋಗುತ್ತವೆ.
ಮತ್ತೊಬ್ಬರು ಈ ಮಗುವನ್ನು ನೋಡಿದರೆ ಭಯವಾಗುತ್ತದೆ. ಆದರೆ ಮಗು ಆರೋಗ್ಯವಾಗಿದೆ ಎಂಬುದು ಸಮಾಧಾನ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಮಗು ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ. ಮಗು ಬೆಳೆಯುವಾಗ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದ್ದೀರಾ? ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.



Click it and Unblock the Notifications
