Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರ ಕುರಿತಾದ ಬಾಬಾ ವಂಗಾ ಭವಿಷ್ಯವಾಣಿ: ಭಯ ಹುಟ್ಟಿಸುತ್ತೆ ಈ 6 ಘಟನೆ!
ವಿಶ್ವದಲ್ಲಿ ಮುಂಬರುವ ಘಟನೆಗಳ ಕುರಿತು ಭವಿಷ್ಯ ನುಡಿಯುವ ಹಲವು ಮಂದಿಯ ಹೆಸರನ್ನು ಕೇಳಿರುತ್ತೀರಿ, ಅದ್ರಲ್ಲೂ ನಾಸ್ಟ್ರಾಡಾಮಸ್ ಹೆಸರು ಸಹ ಕೇಳಿರಬಹುದು. ಹಾಗೆ ಇತ್ತೀಚಿನ ದಶಕಗಳಲ್ಲಿ ಕೇಳುವ ಹೆಸರು ಬಾಬಾ ವಂಗಾ ಅವರದ್ದು. ಬಹಳ ವರ್ಷದಿಂದ ಅವರು ಹೇಳಿರುವ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಹಾಗೆ ಹಲವು ಭವಿಷ್ಯವಾಣಿಗಳು ನಿಜವಾಗುತ್ತಲಿವೆ.
ಬಾಬಾ ಮುಂದಿನ ನೂರಾರು ವರ್ಷಗಳಲ್ಲಿ ಭೂಮಿ ಮೇಲೆ ಯಾವೆಲ್ಲಾ ಪ್ರಮುಖ ಘಟನೆಗಳು ನಡೆಯಲಿವೆ ಎಂಬುದನ್ನು ವಿವರಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಕಣ್ಣು ಕಳೆದುಕೊಂಡ ಆಕೆ, ತನ್ನ ಕೊನೆಯ ಉಸಿರು ಇರುವವರೆಗೂ ಇಂತಹ ಭವಿಷ್ಯಗಳ ಹೇಳುವ ಕೆಲಸ ಮಾಡುತ್ತಿದ್ದಳಂತೆ. ಅದೇ ರೀತಿ 2026ರಲ್ಲಿ ಭೂಮಿ ಮೇಲೆ ಯಾವೆಲ್ಲಾ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.

ಇನ್ನು 2026ರಲ್ಲಿ ನಡೆಯುವ ಪ್ರಮುಖ 10 ಘಟನೆಗಳನ್ನು ಆಕೆ ವಿವರಿಸಿದ್ದಾರೆ. ಹಾಗಾದ್ರೆ ಈ ವರ್ಷದಲ್ಲಿ ಏನೆಲ್ಲಾ ನಡೆಯಲಿವೆ. ಯಾವೆಲ್ಲಾ ಘಟನೆಗಳಿಗೆ ನಾವು ಸಾಕ್ಷಿಯಾಗಲಿದ್ದೇವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇರಬಹುದು. ಇನ್ನು ಬಾಬಾ ವಂಗಾ ಹೇಳುತ್ತಿರುವ ಬಹುತೇಕ ಘಟನೆಗಳು ಘಟಿಸಿವೆ. ಹಾಗೆ ಹಲವು ಘಟನೆಗಳು ನಡೆದಿರುವುದಕ್ಕೆ ಕೋಟ್ಯಂತರ ಜನಸಂಖ್ಯೆ ಸಾಕ್ಷಿಯಾಗಿದೆ.
ಜಾಗತಿಕ ಸಂಘರ್ಷ ಹೆಚ್ಚಳ
ಸದ್ಯ ಈಗ ದೇಶ ದೇಶಗಳ ನಡುವೆ ನಡೆಯುತ್ತಿರುವ ಜಾಗತಿಕ ಯುದ್ಧದ ಪರಿಸ್ಥಿತಿಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಜಾಗತೀಕ ರಾಜಕೀಯ ಏರಿಳಿತಗಳು ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದು ಆಕೆ ವಿವರಿಸಿದ್ದಾರೆ. ಹಾಗೆ ದೊಡ್ಡ ರಾಜಕೀಯ ಬದಲಾವಣೆಗಳು, ನಾಯಕತ್ವ ಬದಲಾವಣೆ ಸೇರಿದಂತೆ ಅಂತರ್ಯುದ್ಧಗಳು ಸಹ ಹೆಚ್ಚಾಗುವ ಸಂಭವವಗಳಿವೆ ಎಂದಿದ್ದಾರೆ.
ನೈಸರ್ಗಿಕ ವಿಕೋಪಗಳು
ಇನ್ನು ಹಲವು ದೇಶಗಳು ನೈಸರ್ಗಿಕ ವಿಕೋಪಗಳು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ. 2026ರಲ್ಲಿ ಭೂಕಂಪನಗಳು, ಜ್ವಾಲಾಮುಖಿ ಸ್ಪೋಟ, ಹವಾಮಾನ ಬದಲಾವಣೆಗಳು, ಪ್ರವಾಹದಂತಹ ಘಟನೆಗಳು ಹೆಚ್ಚಾಗಲಿದೆ ಎಂದಿದ್ದಾರೆ. ಹಾಗೆ ಈ ಘಟನೆಗಳು ಭೂಮಿಯ ಭಾಗದ ಸುಮಾರು 7ರಿಂದ 8 ರಷ್ಟರ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಹಾಗೆ ಇದು ಹಲವು ದೇಶಗಳಿಗೆ ಮುನ್ಸೂಚನೆಯೂ ಆಗಿದೆ. 2025ರಲ್ಲಿ ಕೂಡ ನಾವು ಹಲವು ಕಡೆಗಳಲ್ಲಿ ನೈಸರ್ಗಿಕ ವಿಕೋಪಗಳು ನಡೆದಿರುವುದು ನೋಡಬಹುದು.
ಎಐ ಪ್ರಾಬಲ್ಯ
ಇತ್ತೀಚಿಗೆ ಎಲ್ಲಾ ಕಡೆಗಳಲ್ಲಿ ಎಐ ಬಳಕೆ ಹೆಚ್ಚಾಗುತ್ತಿದೆ. 2026ರಲ್ಲಿ ಎಐ ಪ್ರಮುಖ ನಿರ್ಧಾರಗಳ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆಯಲಿದೆಯಂತೆ. ಅವು ಮಾನವ ಜೀವನದ ಮೇಲೆ ಪ್ರಾಬಲ್ಯ ಸಾಧಿಸಬಹುದು ಎಂದಿದ್ದಾರೆ. ಇತ್ತೀಚಿಗೆ ಯೂಟ್ಯೂಬರ್ ಒಬ್ಬನ ಮೇಲೆ ಆತನೇ ನಿರ್ಮಿಸಿದ್ದ ಎಐ ರೊಬೋಟ್ ಒಂದು ಬಂದೂಕಿನಿಂದ ಗುಂಡು ಹಾರಿಸಿತ್ತು. ಈ ಘಟನೆ ವ್ಯಾಪಕ ಚರ್ಚೆ ಹಾಗೂ ಆತಂಕಕ್ಕೂ ಕಾರಣವಾಗಿತ್ತು.
ಏಲಿಯನ್ ಸಂಪರ್ಕ
ಹಲವು ದಶಕಗಳಿಂದಲೂ ಏಲಿಯನ್ ಕುರಿತಾದ ಹೊಸ ಹೊಸ ಚರ್ಚೆಗಳು ಬರುತ್ತಲೇ ಇದೆ. ಅದ್ರಲ್ಲೂ ಈ ಏಲಿಯನ್ ಕುರಿತಾಗಿ ದೊಡ್ಡ ಸುದ್ದಿ ಹೊರಬಿದ್ದಿದೆ. 2026ರಲ್ಲಿ ಮಾನವರು ಮೊದಲ ಬಾರಿಗೆ ಏಲಿಯನ್ ಲೋಕದ ಸಂಪರ್ಕ ಅಥವಾ ಅವುಗಳ ಇರುವಿಕೆ ಕುರಿತಾದ ದೊಡ್ಡ ಸಾಕ್ಷಿ ಪಡೆಯಬಹುದು ಎಂದು ವಿವರಿಸಲಾಗಿದೆ.
ಜಾಗತಿಕ ಆರ್ಥಿಕ ಬಿಕ್ಕಟ್ಟು
ಜಾಗತಿಕವಾಗಿ ಹಲವು ದೇಶಗಳು 2026ರಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸಲಿವೆಯಂತೆ. 2026ರಲ್ಲಿ ವಿತ್ತೀಯ ಕೊರತೆ ಎದುರಿಸುವುದು ಅಥವಾ ಹಣಕಾಸು ವಿಚಾರದಲ್ಲಿ ದೇಶಗಳು ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪ್ರಮುಖ ಹವಾಮಾನ ಬದಲಾವಣೆ
ನೈಸರ್ಗಿಕ ವಿಕೋಪಗಳನ್ನು ಮೀರಿ ಹವಾಮಾನ ಬದಲಾವಣೆ ಮತ್ತು ಪರಿಸರ ವಿಕೋಪಗಳಲ್ಲಿ ಒಂದು ಮಹತ್ವದ ತಿರುವು ನೀಡಬಹುದು ಎಂದು ವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗಿದೆ. ಪ್ರವಾಹಗಳು, ಬರಗಳು, ತೀವ್ರ ಹವಾಮಾನ ಘಟನೆಗಳು ನಡೆಯಬಹುದಂತೆ. ನಾವೀಗ ದೇಹಲಿಯ ವಿಷಗಾಳಿ ಕುರಿತಾಗಿ ನಿತ್ಯ ಒಂದಲ್ಲಾ ಒಂದು ಆತಂಕಕಾರಿ ಮಾಹಿತಿ ಪಡೆಯುತ್ತಿದ್ದೇವೆ.



Click it and Unblock the Notifications