Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
2025ರಲ್ಲಿ ಎಲ್ಲೆಲ್ಲೂ ಭೂಕಂಪನ: ನಿಜವಾಗಿದೆ ಬಾಬಾ ವಂಗಾ ಭವಿಷ್ಯ..!!
ಭವಿಷ್ಯದಲ್ಲಿ ಏನು ನಡೆಯಲಿದೆ ಎಂಬುದನ್ನು ಊಹಿಸುವ ಅಥವಾ ಮೊದಲೇ ಭವಿಷ್ಯ ನುಡಿಯುವ ಕೆಲವರ ಕುರಿತು ನೀವು ಕೂಡ ಕೇಳಿರಬಹುದು. ಅದರಲ್ಲೂ ಈ ಬಾಬಾ ವಂಗಾ ಕೂಡ ಒಬ್ಬರು. ಆಕೆ ದಶಕಗಳ ಹಿಂದೆಯೆ ಮುಂದೆ ನಡೆಯಬಹುದಾದ ಹಲವು ಘಟನಾವಳಿಗಳ ಕುರಿತು ಭವಿಷ್ಯ ನುಡಿದ್ದಾಳೆ. ಅಂತಹ ಕೆಲವು ಭವಿಷ್ಯಗಳು ಎಲ್ಲರಲ್ಲೂ ಅಚ್ಚರಿಯ ಜೊತೆಗೆ ಆತಂಕಕ್ಕೂ ಕಾರಣವಾಗುತ್ತಿದೆ.
ಅದರಲ್ಲೂ ಆಕೆ 2025ರ ಕುರಿತು ನುಡಿದಿರುವ ಕೆಲವು ಭವಿಷ್ಯವಾಣಿಗಳು ನಿಜವಾಗಿರುವುದು ಅಚ್ಚರಿ ಹುಟ್ಟಿಸಿದೆ. 2025 ಆರಂಭಗೊಂಡು ಇನ್ನೂ 3 ತಿಂಗಳು ಮುಗಿದಿದೆ. ಆದರೆ ಈ ನಡುವೆ ಆಕೆ ನುಡಿದ ಕೆಲವು ಭವಿಷ್ಯ ನಿಜವಾಗಿದೆ. ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ, ಇಂತಹ ಹಲವು ದುರಂತಗಳ ಭವಿಷ್ಯವಾಣಿಗಳಿಂದಲೇ ಹೆಸರುವಾಸಿಯಾಗಿದ್ದಾರೆ.

1996ರಲ್ಲಿ ಅವರು ಮರಣ ಹೊಂದುವ ಮೊದಲು ಹಲವು ಭವಿಷ್ಯವಾಣಿಗಳ ಹೇಳಿದ್ದರು. ಅದರಲ್ಲೂ 9/11ರ ದಾಳಿ ಕುರಿತ ಅವರ ಭವಿಷ್ಯವಾಣಿಯು ನಿಜವಾಗಿತ್ತು. ಹಾಗೆ ಕೊರೊನಾ, ಜಪಾನ್ ಸುನಾಮಿ, ಇಂಗ್ಲೆಂಡ್ ರಾಜಕುಮಾರಿಯ ಸಾವು, ಪವರ್ ಫುಲ್ ದೇಶವಾಗುವ ಚೀನಾ ಕುರಿತು ಅವರು ಹೇಳಿದ್ದ ಭವಿಷ್ಯವಾಣಿಗಳು ನಿಜವಾದವು.
ಆದ್ರೆ 2025ರಲ್ಲಿ ಅವರು ಭಯಾನಕ ಭೂಕಂಪನಗಳ ಕುರಿತಂತೆ ಭವಿಷ್ಯ ನುಡಿದ್ದರು, ಅದೀಗ ನಿಜವಾಗಿರುವುದು ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಇತ್ತೀಚಿಗೆ ಮ್ಯಾನ್ಮಾರ್‌ನಲ್ಲಿ ಉಂಟಾದ ತೀವ್ರ ಭೂಕಂಪನವು 1,700 ಹೆಚ್ಚು ಮಂದಿಯ ಸಾವು ಹಾಗೂ ಲಕ್ಷಾಂತರ ಜನರು ಆಸ್ತಿ, ಮನೆ ಕಳೆದುಕೊಂಡಿರುವುದು ನೋಡಬಹುದು. ಹಾಗೆ ಅವರು ಈ ಭೂಕಂಪನ ಕುರಿತು ಅವರು ಮೊಲದೇ ಹೇಳಿದ್ದರು.
2025ರಲ್ಲಿ ಅತ್ಯಂತ ಪ್ರಬಲ ಭೂಕಂಪನ ಹಾಗೆ ಯುದ್ಧಗಳ ನಡೆಯಲಿವೆ ಎಂದು ಅವರು ಹೇಳಿದ್ದರು. ಆ ಮಾತಿನಂತೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪವು ಹಲವು ವರ್ಷದಿಂದ ಸಂಭವಿಸದೆ ಇರುವಷ್ಟು ಹಾನಿಗೆ ಕಾರಣವಾಗಿದೆ. ಅವರ ಭವಿಷ್ಯವಾಣಿಯ ಪ್ರಕಾರ ಇಡೀ ವಿಶ್ವದಲ್ಲಿ ಮಾನವೀಯ ಮೌಲ್ಯಗಳು 2025ರಿಂದ ಕುಸಿಯಲು ಆರಂಭಿಸಲಿದೆಯಂತೆ, ಹಾಗೆ ಯೂರೋಪ್‌ನಲ್ಲಿ ಯುದ್ಧದ ಆತಂಕ ಹೆಚ್ಚಾಗಲಿದೆ ಎಂದಿದ್ದಾರೆ.
ಈಗ ಯುರೋಪ್‌ನ ಹಲವು ದೇಶಗಳ ನಡುವೆ ರಾಜತಾಂತ್ರಿಕ ಸಮಸ್ಯೆಗಳು, ಯುದ್ಧದ ಆರಂಭದ ಮುನ್ಸೂಚನೆ ನೀಡುತ್ತಿರುವುದು ಕೂಡ ನಾವು ಈ ವೇಳೆ ನೆನೆಯಬಹುದು. ದಿ ನ್ಯೂಯಾರ್ಕ್ ಪೋಸ್ಟ್ ಪ್ರಕಾರ 2025 ರ ಇತರ ವಂಗಾ ಭವಿಷ್ಯವಾಣಿಗಳಲ್ಲಿ ಯುರೋಪಿನಲ್ಲಿ ಯುದ್ಧ ಭುಗಿಲೆದ್ದಿರುವುದು ಮತ್ತು ವಿಶ್ವಾದ್ಯಂತ ಆರ್ಥಿಕ ವಿಪತ್ತು ಎದುರಾಗುವುದು ಕೂಡ ಸೇರಿವೆ. ಹಾಗೆ 5079 ರಲ್ಲಿ ಜಗತ್ತು ಅಧಿಕೃತವಾಗಿ ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಬಾಬಾ ವಂಗಾ ನುಡಿದಿರುವ ಅತ್ಯಂತ ಭಯಾನಕ ಭವಿಷ್ಯವಾಣಿಗಳಿವು
ಯುರೋಪಿನಲ್ಲಿ ಒಂದು ಪ್ರಮುಖ ಸಂಘರ್ಷವು ಖಂಡದ ಜನಸಂಖ್ಯೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಇದು 2025ರಲ್ಲಿ ಸಂಭವಿಸಲಿದೆ ಎಂದಿದ್ದಾರೆ. ಬಹುತೇಕರು ಇದು ಯುದ್ಧ ಅಥವಾ ಸಾಂಕ್ರಾಮಿಕದ ಮುನ್ಸೂಚನೆ ಎಂದು ವಿವರಿಸಿದ್ದಾರೆ.
ಮಾನವ ಮೊದಲ ಬಾರಿಗೆ ಶುಕ್ರ ಗ್ರಹದ ಸಂಪನ್ಮೂಲಗಳ ಅನ್ವೇಷಿಸಲು 2028ರಲ್ಲಿ ಮುಂದಾಗುತ್ತಾನೆ ಎಂದಿದ್ದಾರೆ. ಹಾಗೆ 2033ರಲ್ಲಿ ಜಾಗತಿಕ ಸಮುದ್ರ ಮಟ್ಟದಲ್ಲಿ ಏರಿಕೆಯಾಗುವುದರಿಂದ ಸಮುದ್ರ ತೀರದ ನಗರಗಳು ಅಪಾಯಕ್ಕೆ ಸಿಲುಕಬಹುದು. 2076ರಲ್ಲಿ ಇಡೀ ವಿಶ್ವದಾದ್ಯಂತ ಕಮ್ಯುನಿಸಂ ಮತ್ತೆ ಹರಡಲಿದೆ. ಪ್ರತಿಯೊಂದು ದೇಶದಲ್ಲೂ ಕಮ್ಯುನಿಸಂ ಆಳ್ವಿಕೆ ಇರಲಿದೆ. 2130ರಲ್ಲಿ ಮೊದಲ ಬಾರಿಗೆ ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಏರ್ಪಡಲಿದೆಯಂತೆ.
2170ರಲ್ಲಿ ಜಾಗತಿಕ ಬರ ಮಾನವರನ್ನು ಕಾಡಲಿದೆಯಂತೆ. 3797ರಲ್ಲಿ ಭೂಮಿ ಮಾನವರಿಗೆ ವಾಸಯೋಗ್ಯವಾಗಿ ಉಳಿದಿರುವುದಿಲ್ಲವಂತೆ. ಹಾಗೆ 5079 ರಲ್ಲಿ ಜಗತ್ತು ನಾಶವಾಗಲಿದೆ ಎಂದು ಅವರು ಹೇಳಿದ್ದಾರೆ.



Click it and Unblock the Notifications