Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುಂದಿನ 6 ತಿಂಗಳು ಚಿನ್ನ-ಬೆಳ್ಳಿ ದರ ಏನಾಗಲಿದೆ? ಬಾಬಾ ವಂಗಾ ಹೇಳಿರುವ ಈ ಭವಿಷ್ಯ ನಿಜವಾಗುತ್ತಾ?
ಬಲ್ಗೇರಿಯಾ ಮೂಲದ ಬಾಬಾ ವಂಗಾ ಕುರಿತು ನೀವೆಲ್ಲಾ ಕೇಳಿರುತ್ತೀರಿ. ಅತೀಂದ್ರಿಯ ಶಕ್ತಿ ಹೊಂದಿರುವ ಆಕೆ ಜಗತ್ತಿನಲ್ಲಿ ಸಂಭವಿಸಬಹುದಾದ ಘಟನೆಗಳ ಕುರಿತಾಗಿ ಮೊದಲೇ ಭವಿಷ್ಯ ನುಡಿದಿದ್ದಾರೆ. ಅದ್ರಲ್ಲಿ ಬಹುತೇಕ ಘಟನೆಗು ನಿಜವಾಗಿವೆ. ಹಾಗೆ ಜಗತ್ತಿನ ದುರಂತಗಳ ಊಹಿಸುವ ಆಕೆಯನ್ನು ಆಧುನಿಕ ನಾಸ್ಟ್ರಾಡಾಮಸ್ ಎಂದೇ ಕರೆಯಲಾಗಿದೆ. ಸದ್ಯ ಆಕೆ ನುಡಿದಿರುವ ಹಲವು ಭವಿಷ್ಯಗಳ ಪೈಕಿ ಚಿನ್ನ ಹಾಗೂ ಬೆಳ್ಳಿ ಸೇರಿದಂತೆ ಜಗತ್ತಿನ ಆರ್ಥಿಕ ಸ್ಥಿತಿಯ ಕುರಿತಾಗಿ ಹೇಳಿರುವ ಭವಿಷ್ಯವಾಣಿಯು ಎಲ್ಲರಲ್ಲೂ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಜಗತ್ತು ಈಗ ಅನಿಶ್ಚಿತತ ಆರ್ಥಿಕತೆಯಲ್ಲಿ ಸಾಗುತ್ತಿದೆ. ಪ್ರತಿಯೊಂದು ದೇಶವು ಅನೇಕ ಬಗೆಯಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಡಾಲರ್ ಕೂಡ ಈಗ ಅಪಮೌಲ್ಯವಾಗುತ್ತಿರುವುದು ಅದರ ಶಕ್ತಿ ಕಳೆದುಕೊಳ್ಳುತ್ತಿದೆ. ಹಾಗೆ ರೂಪಾಯಿ ಮೌಲ್ಯ ಕುಸಿತ, ಜಾಗತಿಕ ತೈಲ ಸರಬರಾಜಿನಲ್ಲಿ ವ್ಯತ್ಯಾಸ, ಆಂತರಿಕ ಯುದ್ಧ, ವ್ಯಾಪಾರ ಯುದ್ಧ ಸೇರಿದಂತೆ ಹಲವು ವಿಚಾರಗಳಲ್ಲಿ ಈಗ ಇಡೀ ಜಗತ್ತು ಮುಳುಗಿದೆ.

ಇದರ ನಡುವೆ ಚಿನ್ನ ಬೆಳ್ಳಿ ದರ ಕೂಡ ಏರುಗತಿಯಲ್ಲಿರುವುದು ಸಹ ಈಗ ಹೂಡಿಕೆದಾರರ ಸೆಳೆಯುತ್ತಿದೆ. ಡಾಲರ್ ಬಿಟ್ಟು ಚಿನ್ನ ಬೆಳ್ಳಿಯ ಕಡೆಗೆ ಹೂಡಿಕೆದಾರರು ಆಸಕ್ತಿ ವಹಿಸಿದ್ದಾರೆ. ಆದ್ರೆ ಈ ಮುಂದಿನ 6 ತಿಂಗಳ ಕಾಲ ಚಿನ್ನ ಬೆಳ್ಳಿ ದರದಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ? ಈ ದರ ಮತ್ತಷ್ಟು ಏರಿಕೆಯಾಗಲಿದ್ಯಾ? ಅಥವಾ ಪಾತಾಳಕ್ಕೆ ಕುಸಿಯಲಿದ್ಯಾ ಎಂಬುದನ್ನು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ, ಕಾಗದದ ಕರೆನ್ಸಿ ಮೌಲ್ಯವು ನಿಧಾನವಾಗಿ ಕಡಿಮೆಯಾಗಲಿದೆ. ಇದರ ಪರಿಣಾಮವಾಗಿ ಜಾಗತಿಕ ಜೀವನೋಪಾಯದಲ್ಲಿ ಜೀವನ ನಡೆಸಲು ಉಳಿಯುವ ಸಾಧನಗಳಲ್ಲಿ ಚಿನ್ನ ಬೆಳ್ಳಿಗಳು ಮೊದಲ ಆಧ್ಯತೆ ಆಗಿರಲಿದೆಯಂತೆ. ನಗದು ದ್ರವ್ಯತೆ ಕುಸಿಯುವ ಕಾರಣದಿಂದ ಜನರು ಹೆಚ್ಚು ಚಿನ್ನ ಹಾಗೂ ಬೆಳ್ಳಿಯ ಮೇಲೆ ಖರ್ಚು, ಹೂಡಿಕೆ ಮಾಡುತ್ತಾರೆ. ಜಗತ್ತು ಡಾಲರ್‌ನಲ್ಲಿ ನಂಬಿಕೆಯನ್ನು ಕಳೆದುಕೊಂಡಾಗ ಅದು ಮಣ್ಣಿಗೆ ಮರಳುತ್ತದೆ. ಮತ್ತು ಈಗ ಈ ವರ್ಷದ ಅಂತ್ಯದ ವೇಳೆಗೆ ಚಿನ್ನ ಮತ್ತು ಬೆಳ್ಳಿ ಗಮನಾರ್ಹವಾಗಿ ಬೆಲೆಯಲ್ಲಿ ಏರಿಕೆ ಕಾಣಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಅಂದರೆ ಮುಂದಿನ ಕೆಲ ದಿನಗಳು ನೀವು ದರದಲ್ಲಿ ಇಳಿಕೆ ನೋಡಿದರೂ ಕೂಡ ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಏರಿಕೆಯನ್ನು ಗಮನಿಸಬಹುದು. ಈ ಕುರಿತು ಬಾಬಾ ವಂಗಾ ಹೇಳಿರುವಂತೆ ಕೆಲ ದಿನದಿಂದ ಇಳಿಕೆಯಾದ ದರದಲ್ಲಿ ಮತ್ತೆ ಏರಿಕೆ ನೋಡುವುದು ಖಚಿತವಾಗಿದೆ. ಇದು ಹೂಡಿಕೆದಾರರ ಗಮನ ಸೆಳೆಯುತ್ತಿದೆ.
ಬಾಬಾ ವಂಗಾ ಹೇಳಿರುವ ಉಳಿದ ಭವಿಷ್ಯವಾಣಿಗಳು
2026ರಲ್ಲಿ ಭೂಮಿ ಮೇಲೆ ಸಂಭವಿಸುವ ದೊಡ್ಡ ದುರಂತಗಳ ಕುರಿತಾಗಿಯೂ ಅವರು ಭವಿಷ್ಯ ನುಡಿದ್ದಾರೆ. 2026ನೇ ವರ್ಷವು ನೈಸರ್ಗಿಕ ವಿಕೋಪಗಳಿಂದ ತುಂಬಿದ ವರ್ಷ ಎಂದು ಅವರು ಹೇಳಿದ್ದಾರೆ. ಹಲವು ಭಾಗದಲ್ಲಿ ಭೀಕರ ಭೂಕಂಪನಗಳು, ಜ್ವಾಲಾಮುಖಿ ಸ್ಪೋಟ, ತೀವ್ರ ಹವಾಮಾನ ವೈಪರಿತ್ಯದ ಘಟನೆಗಳು ನಡೆಯಲಿವೆ ಎಂದಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಹಲವು ಕಡೆಗಳಲ್ಲಿ ಈ ಘಟನೆಗಳು ಸಹ ನಡೆಯುತ್ತಿವೆ. ಮುಂದಿನ ತಿಂಗಳುಗಳಲ್ಲಿ ಈ ವಿದ್ಯಮಾನಗಳು ಸಂಭವಿಸಲಿದೆ ಎಂದು ಊಹಿಸಲಾಗಿದೆ.
ಜಗತ್ತಿನ ಹಲವು ದೇಶಗಳು ಈಗ ಆರ್ಥಿಕ ಯುದ್ಧ ಅಥವಾ ಮೂರನೇ ಮಹಾಯುದ್ಧದ ಮುನ್ಸೂಚನೆ ನೀಡಿವೆ. ಭೌಗೋಳಿಕ ಪ್ರದೇಶ, ವ್ಯಾಪಾರ ಸಂಬಂಧಿತ ವಿಚಾರವಾಗಿ ಕಲಹಗಳು ಏರ್ಪಟ್ಟಿವೆ. ತೈವಾನ್ ಅನ್ನು ಚೀನಾ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಮತ್ತು ರಷ್ಯಾ ಮತ್ತು ಯುಎಸ್ಎ ನಡುವಿನ ನೇರ ಮುಖಾಮುಖಿ, ಗ್ರೀನ್‌ಲ್ಯಾಂಡ್ ಬಿಕ್ಕಟ್ಟು ಮುಂಬರುವ ವರ್ಷದ ಕೆಲವು ಭವಿಷ್ಯವಾಗಿವೆ.



Click it and Unblock the Notifications