Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನಿಜವಾಯ್ತು 2024ರ ಕುರಿತು ಬಾಬಾ ವಂಗಾ ನುಡಿದ ಭವಿಷ್ಯ..! ಏನದು ಗೊತ್ತಾ?
ನೀವು ಬಾಬಾ ವಂಗಾ ಹೆಸರು ಕೇಳಿರಬಹುದು, ಆಕೆ ನುಡಿದಿರುವ ಭವಿಷ್ಯಗಳು ನಿಜವಾಗುತ್ತಿರುವುದನ್ನು ಸಹ ನೀವು ಗಮನಿಸಿರಬಹುದು. ಈಗ ಮತ್ತೊಂದು ಆಜೆಯ ಭವಿಷ್ಯ ನಿಜವಾಗಿದೆ. ಆಕೆ ಹತ್ತಾರು ವರ್ಷಗಳ ಹಿಂದೆ ನುಡಿದಿರುವ ಭವಿಷ್ಯಗಳು ಈಗ ನಿಜವಾಗುತ್ತಿವೆ.
ಇನ್ನು ಬಾಬಾ ವಂಗಾ 2024ರ ಕುರಿತು ನುಡಿದಿದ್ದ ಭವಿಷ್ಯವೊಂದು ನಿಜವಾಗಿದೆ. ಆಕೆ 2024ರಲ್ಲಿ ಎರಡು ಮಾರಕ ಕಾಯಿಲೆಗಳಿಗೆ ಚುಚ್ಚುಮದ್ದು ಕಂಡುಹಿಡಿಯಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಈಗ ರಷ್ಯಾ ಮಾರಕ ಕ್ಯಾನ್ಸರ್‌ಗೆ ಚುಚ್ಚುಮದ್ದು ಕಂಡು ಹಿಡಿದಿರುವುದಾಗಿ ತಿಳಿಸಿದೆ.

ಹೌದು ರಷ್ಯಾವು ಕ್ಯಾನ್ಸರ್‌ಗೆ ಚುಚ್ಚುಮದ್ದು ಕಂಡು ಹಿಡಿದಿದೆಯಂತೆ. ಈ ಕುರಿತು ಖುದ್ದು ಪ್ರಧಾನಿ ವ್ಲಾದಿಮರ್ ಪುಟೀನ್ ಮಾಹಿತಿ ಹಂಚಿಕೊಂಡಿದ್ದಾರೆ. 2024ರಲ್ಲಿ ಕ್ಯಾನ್ಸರ್ ಮತ್ತು ಆಲ್ಝೈಮರ್ ಕಾಯಿಲೆಗೆ ಪರಿಹಾರಗಳನ್ನು ಕಂಡುಹಿಡಿಯಲಾಗುವುದು ಎಂದು ಬಾಬಾ ವಂಗಾ ಹೇಳಿದ್ದರು. ಇದರಲ್ಲಿ ಕ್ಯಾನ್ಸರ್ ಭವಿಷ್ಯ ನಿಜವಾಗಿದೆ.
ಕ್ಯಾನ್ಸರ್ ಲಸಿಕೆಗಳು ಶೀಘ್ರದಲ್ಲೇ ಹೊರ ಬರಲಿದೆ?
ರಷ್ಯಾದ ಅಧ್ಯಕ್ಷ ಪುಟಿನ್ ಅವರು ಫೆಬ್ರವರಿ 14 ರಂದು ದೊಡ್ಡ ಘೋಷಣೆ ಮಾಡಿದ್ದಾರೆ. ಅವರು ರಷ್ಯಾದ ವಿಜ್ಞಾನಿಗಳು ಕ್ಯಾನ್ಸರ್ ಲಸಿಕೆಗಳನ್ನು ತಯಾರಿಸಲು ಹತ್ತಿರವಾಗಿದ್ದಾರೆ ಎಂದು ಹೇಳಿದರು. ಈ ಲಸಿಕೆಗಳು ಶೀಘ್ರದಲ್ಲೇ ರೋಗಿಗಳಿಗೆ ಸಿದ್ಧವಾಗಬಹುದು. ಪ್ರತಿರಕ್ಷಣಾ ವ್ಯವಸ್ಥೆಗೆ ಸಹಾಯ ಮಾಡಲು ಕ್ಯಾನ್ಸರ್ ಲಸಿಕೆಗಳು ಮತ್ತು ಹೊಸ ಔಷಧಿಗಳೊಂದಿಗೆ ಪರಿಚಯಿಸುವ ಹಂತದಲ್ಲಿ ರಷ್ಯಾ ಬಂದಿದೆ ಎಂದು ಪುಟಿನ್ ಘೋಷಿಸಿದ್ದರು.
ಭವಿಷ್ಯದ ತಂತ್ರಜ್ಞಾನ ಕುರಿತು ಮಾಸ್ಕೋದಲ್ಲಿ ನಡೆದ ಸಭೆಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ಆದರೆ, ಲಸಿಕೆಗಳು ಯಾವ ಮಾದರಿಯ ಕ್ಯಾನ್ಸರ್‌ಗೆ ಚಿಕಿತ್ಸೆಯಾಗಿರಲಿದೆ ಎಂಬುದನ್ನು ಅವರು ದೃಢಪಡಿಸಿಲ್ಲ.
2024ರಲ್ಲಿ ಕ್ಯಾನ್ಸರ್ ಗುಣಪಡಿಸುವಿಕೆಯ ಆವಿಷ್ಕಾರದ ಕುರಿತು ಬಾಬಾ ವಂಗಾ ಭವಿಷ್ಯ
2023ರಲ್ಲಿ ಸೌರ ಬಿರುಗಾಳಿಗಳು ಮತ್ತು ಕೃತಕ ಬುದ್ಧಿಮತ್ತೆಯ ಏರಿಕೆ ಸೇರಿದಂತೆ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. 2024 ರಂದು ಹಲವು ಘಟನೆಗಳು ನಡೆಯಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಅದರಲ್ಲಿ ಈ ಕ್ಯಾನ್ಸರ್ ಚುಚ್ಚುಮದ್ದು ಸಹ ಸೇರಿದೆ.
ಕ್ಯಾನ್ಸರ್ ಲಸಿಕೆಗಳ ಬಗ್ಗೆ ರಷ್ಯಾ ಮಾತನಾಡುತ್ತಿರುವುದರಿಂದ, ಬಾಬಾ ವಂಗಾ ಅವರ ಭವಿಷ್ಯ ನಿಜವಾಗುತ್ತಿದೆಯೇ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.
2024ರ ಕುರಿತು ಬಾಬಾ ವಂಗಾ ಹೇಳಿದ್ದೇನು?
ಕ್ಯಾನ್ಸರ್ ಮತ್ತು ಆಲ್ಝೈಮರ್ನ ಚಿಕಿತ್ಸೆಗಳ ಹೊರತಾಗಿ, ಬಾಬಾ ವಂಗಾ 2024ರ ಕುರಿತು ಹಲವು ಭವಿಷ್ಯ ನುಡಿದಿದ್ದಾರೆ. 2024ರ ಇತರ ಬಾಬಾ ವಂಗಾ ಭವಿಷ್ಯವಾಣಿಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹತ್ಯೆ, ಯುರೋಪ್‌ನಲ್ಲಿ ಹೆಚ್ಚಿದ ಭಯೋತ್ಪಾದನೆ, ಹವಾಮಾನ ವಿಪತ್ತುಗಳು, ಆರ್ಥಿಕ ಬಿಕ್ಕಟ್ಟು, ಸೈಬರ್ ದಾಳಿಗಳು, ತಾಂತ್ರಿಕತೆಯ ಜೊತೆಗೆ ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು AI ನಲ್ಲಿನ ಪ್ರಗತಿಗಳು. ಹೀಗೆ ಹತ್ತಾರು ಭವಿಷ್ಯ ನುಡಿದಿದ್ದಾರೆ. ಇದರಲ್ಲಿ ಕ್ಯಾನ್ಸರ್ ಚಿಕಿತ್ಸೆಯೊಂದು ನಿಜವಾಗುತ್ತಿದೆ. ಇದರ ಜೊತೆ ಇನ್ನುಳಿದ ಭವಿಷ್ಯಗಳ ಮೇಲೆ ಜನರ ದೃಷ್ಟಿ ನೆಟ್ಟಿದೆ.
ಬಾಬಾ ವಂಗಾ ಯಾರು?
ಬಾಬಾ ವಂಗಾ ಬಲ್ಗೇರಿಯಾದ ಪ್ರಸಿದ್ದ ಮತ್ತು ವಿಚಿತ್ರ ಮಹಿಳೆಯಾಗಿದ್ದರು. ಆಕೆಗೆ ಕಣ್ಣು ಕಾಣಿಸದಿದ್ದರೂ ಆಕೆಯ ಭವಿಷ್ಯವಾಣಿಯು ಸದ್ದು ಮಾಡುತ್ತಿತ್ತು. ಆಕೆ 12 ವರ್ಷದವಲಾಗಿದ್ದಾಗ ಉಂಟಾದ ಭೀಕರ ಚಂಡಮಾರುತದಿಂದ ಆಕೆಯ ದೃಷ್ಟಿ ಕಳೆದಕೊಂಡಿದ್ದಳು. ಅಂದಿನಿಂದ ಆಕೆಯಲ್ಲಿ ಅತೀಂದ್ರಿಯ ಶಕ್ತಿ ನೆಲೆಸಿತು ಎಂದು ನಂಬಲಾಗಿದೆ. ಜನರು ಅವಳನ್ನು 'ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್' ಎಂದು ಕರೆಯುತ್ತಾರೆ ಏಕೆಂದರೆ ಆಕೆಗೆ ಹಲವಾರು ಭವಿಷ್ಯವಾಣಿಗಳು ನಿಜವಾಗಿವೆ.
ಅವಳು 9/11, ಚೆರ್ನೋಬಿಲ್ ದುರಂತ, ಕೋವಿಡ್, ಉತ್ತರ ಕೊರಿಯಾದ ಉದ್ವಿಗ್ನತೆ, ಬ್ರೆಕ್ಸಿಟ್, ಒಬಾಮಾ ಅಧ್ಯಕ್ಷತೆ, ರಾಜಕುಮಾರಿ ಡಯಾನಾ ಸಾವು, ರಷ್ಯಾ-ಉಕ್ರೇನ್ ಯುದ್ಧದಂತಹ ಘಟನೆಗಳನ್ನು ಭವಿಷ್ಯ ನುಡಿದಿದ್ದರು ಮತ್ತು 5079ರಲ್ಲಿ ಪ್ರಪಂಚ ಅಂತ್ಯವಾಗಲಿದೆ ಎಂದೂ ಸಹ ಆಕೆ ಹೇಳಿದ್ದಾರೆ.



Click it and Unblock the Notifications
