Latest Updates
-
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ
2025ರಲ್ಲಿ ಸಂಭವಿಸಲಿದೆ ಈ ಮಹಾ ದುರಂತ: ಬಾಬಾ ವಂಗಾ ಭವಿಷ್ಯ ಏನು ಗೊತ್ತಾ?
ನೀವು ಬಾಬಾ ವಂಗಾ ಹೆಸರು ಕೇಳಿರಬಹುದು, ಆಕೆ ನುಡಿದಿರುವ ಭವಿಷ್ಯಗಳು ನಿಜವಾಗುತ್ತಿರುವುದನ್ನು ಸಹ ನೀವು ಗಮನಿಸಿರಬಹುದು. ಆಕೆ ಭೂಮಿ ಮೇಲೆ ಸಂಭವಿಸಬಹುದಾದ ಘಟನೆಗಳ ಕುರಿತು ಭವಿಷ್ಯ ನುಡಿದಿರುವ ಮಹಿಳೆ. ಆಕೆ ವರ್ಷಗಳ ಹಿಂದೆ ನುಡಿದಿರುವ ಭವಿಷ್ಯಗಳೂ ನಿಜವಾಗುತ್ತಿರುವುದು ಕೂಡ ನಾವು ನೋಡಬಹುದು.
ಆಕೆ ಭವಿಷ್ಯ ನುಡಿಯುವುದರಿಂದಲೇ ವಿಶ್ವದಾದ್ಯಂತ ಹೆಸರಾದವಳು. ಅವರು ಆಗಸ್ಟ್ 11, 1996 ರಂದು ಬಲ್ಗೇರಿಯಾದಲ್ಲಿ ನಿಧನರಾದರು ಕೂಡ ಆಕೆ ಮುಂದಿನ 100 ವರ್ಷಗಳಲ್ಲಿ ಸಂಭವಿಸಬಹುದಾದ ಘಟನೆಗಳನ್ನು ಮೊದಲೇ ಭವಿಷ್ಯ ನುಡಿದಿದ್ದಾಳೆ. ಹಾಗೆ ಈವರೆಗೆ ನುಡಿದ ಕೆಲವೊಂದು ಭವಿಷ್ಯಗಳು ನಿಜವೂ ಆಗಿವೆ.

ಸದ್ಯ ಆಕೆ 2015ರ ಕುರಿತು ನುಡಿದಿರುವ ಭವಿಷ್ಯಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಕೆಲವೊಂದು ಭಯ ಹುಟ್ಟಿಸುವಂತಿದೆ, ಹಾಗಾದ್ರೆ ಆಕೆ 2025ರ ಕುರಿತಂತೆ ನುಡಿದಿರುವ ಭವಿಷ್ಯವೇನು? ಎಂಬುದನ್ನು ಹೇಳುತ್ತೇವೆ ನೋಡಿ.
2025ರಿಂದ ಅಂತ್ಯ ಆರಂಭ!
ಬಾಬಾ ವಂಗಾ ಪ್ರಕಾರ ಈ ಭೂಮಿಯ ಅಂತ್ಯ 2025ರಿಂದ ಆರಂಭವಾಗುತ್ತದೆಯಂತೆ. ಮಾನವೀಯತೆ ಕೊನೆಯಾಗುತ್ತದೆ, ವಿಶ್ವದಾದ್ಯಂತ ಜನರ ಅವನತಿ, ಸಾವು, ಯುದ್ಧ ಆರಂಭವಾಗುತ್ತದೆ. ಸರಣಿ ದುರಂತಗಳು ಸಂಭವಿಸುತ್ತವೆ. ಅದರಲ್ಲೂ ಯೂರೋಪ್‌ನಲ್ಲಿ ವಿನಾಶಕಾರಿ ದುರಂತಗಳು ಸಂಭವಿಸಿದೆ ಎಂದಿದ್ದಾಳೆ.
ಈ ರೀತಿ ವಿನಾಶ ಆರಂಭಗೊಂಡ ಮೂರು ವರ್ಷದ ಬಳಿಕ ಅಂದರೆ 2028ರಲ್ಲಿ ಸಂಪನ್ಮೂಲಗಳಿಗಾಗಿ ನಾವು ಶುಕ್ರ ಗ್ರಹದತ್ತ ಮುಖ ಮಾಡಬೇಕಾಗುತ್ತದೆಯಂತೆ. ಹಾಗೆ 2033ರಲ್ಲಿ ಹವಾಮಾನ ಬದಲಾವಣೆಯ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ. ಮಂಜುಗಡ್ಡೆ ಕರಗುವಿಕೆ ಹೆಚ್ಚಾಗಿ ಸಮುದ್ರ ಮಟ್ಟದಲ್ಲಿ ದಿಢೀರ್ ಏರಿಕೆಯು ಉಂಟಾಗುತ್ತದೆ ಎಂದಿದ್ದಾಳೆ.
2076ರ ಹೊತ್ತಿಗೆ ಜಗತ್ತಿನಾದ್ಯಂತ ಕಮ್ಯುನಿಸಂ ಹರಡುತ್ತದೆ. ಜಾಗತಿಕ ನಾಯಕರು ಮರೆಯಾಗುತ್ತಾರೆ. ಶೋಷಣೆಗಳು ಅಂತ್ಯವಾಗುತ್ತದೆ ಎಂದಿದ್ದಾಳೆ. ಹಾಗೆ 2130ರಲ್ಲಿ ಮೊಟ್ಟ ಮೊದಲ ಬಾರಿಗೆ ಅನ್ಯಗ್ರಹ ಜೀವಿಗಳ ಜೊತೆಗೆ ಮಾನವ ಸಂಪರ್ಕ ಏರ್ಪಡಲಿದೆಯಂತೆ. ಹಾಗೆ 2170 ರಲ್ಲಿ ಭೂಮಿಯ ಮೇಲೆ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಜಾಗತಿಕ ಬರ ನೋಡಬಹುದಂತೆ, ಈ ವೇಳೆ ಆಹಾರ ಕೊರತೆ, ಯುದ್ಧಗಳು ನಡೆಯಲಿವೆ ಎಂದಿದ್ದಾರೆ.
ಸುಮಾರು 3000ದ ಹೊತ್ತಿಗೆ ಮಾನವ ಬೇರೆ ಗ್ರಹದಲ್ಲಿ ನೆಲೆಸಲು ಮುಂದಾಗುತ್ತಾನೆ. ಆದ್ರೆ ಈ 3005ರಿಂದ ಯುದ್ಧಗಳು ಭೀಕರತೆ ಪಡೆದುಕೊಳ್ಳಲಿದೆ.
3797 ರ ಹೊತ್ತಿಗೆ, ಭೂಮಿಯು ವಾಸಯೋಗ್ಯವಾಗಿ ಉಳಿದಿರುವುದಿಲ್ಲ. ಅಂತಿಮವಾಗಿ, 5079 ರಲ್ಲಿ ಇಡೀ ಭೂಮಿ ಅಂತ್ಯವಾಗಲಿದೆ ಎಂದಿದ್ದಾರೆ.
ನಿಜವಾಗಿತ್ತು ಬಾಬಾ ವಂಗಾ ಭವಿಷ್ಯಗಳು
ಬಾಬಾ ವಂಗಾ ನುಡಿದ ಹಲವು ಭವಿಷ್ಯಗಳು ನಿಜವಾಗಿವೆ ಅದರಲ್ಲಿ ಇತ್ತೀಚಿನ ಘಟನೆಯೊಂದು ನೆನಪಿಸಬಹುದು. ಆಕೆ 2024ರಲ್ಲಿ ಮಾರಕ ಕಾಯಿಲೆಗೆ ಚುಚ್ಚು ಮದ್ದು ಬರಲಿದೆ ಎಂದಿದ್ದಳು, ಅದರಂತೆ ಕ್ಯಾನ್ಸರ್‌ಗೆ ಚುಚ್ಚು ಮದ್ದು ಕಂಡು ಹಿಡಿದಿರುವುದಾಗಿ ರಷ್ಯಾ ತಿಳಿಸಿತ್ತು. ಈ ಕುರಿತು ಖುದ್ದು ಪ್ರಧಾನಿ ವ್ಲಾದಿಮರ್ ಪುಟೀನ್ ಮಾಹಿತಿ ಹಂಚಿಕೊಂಡಿದ್ದರು.
ಇದಕ್ಕೂ ಮೊದಲು ಆಕೆ ಕೊರೊನಾ ಸಂಬಂಧಿಸಿದಂತೆಯೂ ಭವಿಷ್ಯ ನುದಿದ್ದಳು, ಹಾಗೆ ಅಮೆರಿಕದ ಮೇಲಾದ 9/11ರ ಭಯೋತ್ಪಾದಕ ದಾಳಿ ಕುರಿತಂತೆಯೂ ಆಕೆಯ ಭವಿಷ್ಯದಲ್ಲಿ ನಿಗೂಢತೆ ಅಡಗಿತ್ತು.
ಬಾಬಾ ವಂಗಾ ಯಾರು?
ಜನವರಿ 31, 1911 ರಂದು ಒಟ್ಟೋಮನ್ ಸಾಮ್ರಾಜ್ಯದಲ್ಲಿ (ಈಗಿನ ಆಧುನಿಕ ಮ್ಯಾಸಿಡೋನಿಯಾ) ಜನಿಸಿದರು. ಅವಳು ಮಗುವಾಗಿದ್ದಾಗ ಚಂಡಮಾರುತದ ಸಮಯದಲ್ಲಿ ಅವಳು ದೃಷ್ಟಿ ಕಳೆದುಕೊಂಡಿದ್ದಳಂತೆ, ಆದರೆ ಅವಳ ಬೆಂಬಲಿಗರ ಪ್ರಕಾರ, ಈ ಘಟನೆಯು ಅವಳ ಅತೀಂದ್ರಿಯ ಸಾಮರ್ಥ್ಯಗಳನ್ನು ಹೆಚ್ಚಿಸಿತು. ಆಗಿನಿಂದ ಆಕೆ ಭವಿಷ್ಯದಲ್ಲಿ ಸಂಭವಿಸಲಿರುವ ಘಟನೆಗಳ ಕುರಿತು ವಿವರಿಸಲು ಮುಂದಾದವು ಅವು ನಿಜವಾಗುತ್ತಿದ್ದವು. ಹೀಗಾಗಿ ಆಕೆಯನ್ನು ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಕರೆಯಲಾಗುತ್ತದೆ.



Click it and Unblock the Notifications











