ಇಡೀ ವಿಶ್ವವನ್ನಾಳಲಿದೆ ಕಮ್ಯುನಿಸಂ..! ಚರ್ಚೆಯಾಗುತ್ತಿದೆ ಬಾಬಾ ವಂಗಾ ಹೇಳಿದ ಭವಿಷ್ಯ!!

ಬಾಬಾ ವಂಗಾ ಕುರಿತು ಆಕೆಯ ಹೆಸರನ್ನು ಸಹ ಕೇಳಿರಬಹುದು. ಭೂಮಿ ಮೇಲೆ ನಡೆಯುವ ಹಲವು ವಿಚಾರಗಳನ್ನು, ಘಟನೆಗಳನ್ನು ಮೊದಲೇ ಭವಿಷ್ಯ ನುಡಿದಿರುವ ಆಕೆ ಎಲ್ಲರ ಅಚ್ಚರಿಗೂ ಕಾರಣವಾಗುತ್ತಾಳೆ. ಆಕೆಯ ಹಲವು ಭವಿಷ್ಯವಾಣಿಗಳು ನಿಜವಾಗಿರುವುದು ಕೂಡ ನಾವು ನೋಡಬಹುದು. ಕೆಲವೊಂದು ವಿಚಾರದಲ್ಲಿ ಆಕೆ ನುಡಿದ ಭವಿಷ್ಯಗಳು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತವೆ. ಹೀಗಾಗಿ ಆಕೆಯನ್ನು ದುರಂತ ಭವಿಷ್ಯ ನುಡಿಯುವ ನಾಯಕಿ ಎಂದೇ ಕರೆಯುತ್ತಾರೆ.

ಆಕೆ ಹೇಳಿದ್ದ ಭವಿಷ್ಯಗಳಲ್ಲಿ ಅತ್ಯಂತ ಭೀಕರತೆ ಸೃಷ್ಟಿಸಿದ್ದು ಚೆರ್ನೋಬಿಲ್ ಪರಮಾಣು ದುರಂತ. ಈ ಕುರಿತು ಆಕೆ ಮೊದಲೇ ಹೇಳಿದ್ದಳು, ಅದು ನಿಜವಾಗಿರುವ ಜೊತೆಗೆ ಅತ್ಯಂತ ಭೀಕರ ಘಟನೆ ಎಂಬುದು ಇಂದಿಗೂ ಚೆರ್ನೋಬಿಲ್ ದುರಂತ ಸ್ಥಳವಾಗಿ ಮಾರ್ಪಡಿಸಿದೆ. ಆಕೆಯ ಭವಿಷ್ಯವಾಣಿಗಳು ಈಗ ದುರಂತಗಳ ಸರ ಮಾಲೆಯನ್ನೇ ಹೇಳುತ್ತಿವೆ.

Baba Vanga Prediction

ಹಾಗೆ ಆಕೆ ಮುಂದೆ ಭೂಮಿ ಮೇಲೆ ನಡೆಯುವ ಹಲವು ಘಟನೆಗಳ ವಿವರಿಸಿದ್ದಾಳೆ. ಅದರಲ್ಲಿಯೂ ಕೆಲವೊಂದು ನೆನೆದರೆ ಭಯ ಪಡುವಂತಾಗುತ್ತದೆ. ಭೂಮಿ ಮೇಲೆ 3ನೇ ಮಹಾ ಯುದ್ಧ, ಏಲಿಯನ್‌, ಸಿವಿಲ್ ವಾರ್, ಕ್ಷುದ್ರಗ್ರಹ ಅಪ್ಪಳಿಸುವುದು ಹೀಗೆ ಹತ್ತು ಹಲವು ಘಟನೆಗಳ ಕುರಿತಂತೆ ಆಕೆ ಮೊದಲೇ ಭವಿಷ್ಯ ನುಡಿದಿದ್ದಾಳೆ.

ಹಾಗೆ ಆಕೆಯ ಭವಿಷ್ಯವಾಣಿಯಲ್ಲಿ ಬಹಳಷ್ಟು ಚರ್ಚೆಯಾಗುತ್ತಿರುವುದು 2076 ರ ವೇಳೆ ಇಡೀ ವಿಶ್ವದಲ್ಲಿ ಮತ್ತೆ ಕಮ್ಯೂನಿಸಂ ಹರಡಿಲಿದೆ ಎಂಬುದು. ಇಡೀ ಭೂಮಿ ಕಮ್ಯುನಿಸ್ಟ್ ಆಳ್ವಿಕೆಗೆ ಒಳಪಡಲಿದೆ ಎಂದು ಆಕೆ ಹೇಳಿದ್ದಾಳೆ. ಹಾಗೆ 5079ರಲ್ಲಿ ಈ ಭೂಮಿ ನೈಸರ್ಗಿಕ ಕಾರಣದಿಂದಾಗಿ ಅಂತ್ಯವಾಗಲಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

2076 ರ ವೇಳೆಗೆ ಜಾಗತಿಕ ರಾಜಕೀಯದಲ್ಲಿ ಪ್ರಮುಖ ಬದಲಾವಣೆ ಕಂಡುಬರುತ್ತದೆ ಮತ್ತು ಇಡೀ ಪ್ರಪಂಚದಾದ್ಯಂತ ಸಮಾಜವಾದ ಮತ್ತು ಕಮ್ಯುನಿಸಂನ ಪ್ರಭಾವ ಹೆಚ್ಚಾಗುತ್ತದೆ. ಬಲಾಢ್ಯ ದೇಶಗಳಲ್ಲಿ ಕಮ್ಯುನಿಸಂ ಆಳವಾಗಿ ಬೇರೂರಲಿದೆ ಎಂದು ಆಕೆ ಭವಿಷ್ಯ ನುಡಿದಿದ್ದಾಳೆ. ಹೌದು ಇದು ಭೂಮಿ ಮೇಲಿನ ಬಂಡವಾಳಶಾಹಿ ಮತ್ತು ಆರ್ಥಿಕ ಅಸಮಾನತೆ ಸರಿದೂಗಿಸಲು ಕಾರಣವಾಗಲಿದೆಯಂತೆ. ಸಮಾಜದಲ್ಲಿ ಆರ್ಥಿಕ ಸಮಾನತೆಯನ್ನು ಉತ್ತೇಜಿಸಲಾಗುತ್ತದೆ ಮತ್ತು ಖಾಸಗಿ ಆಸ್ತಿಯ ಪರಿಕಲ್ಪನೆಯು ದುರ್ಬಲಗೊಳ್ಳುತ್ತದೆ. ಜಾಗತಿಕ ಅಧಿಕಾರದ ಸಮತೋಲನವು ಬದಲಾಗುತ್ತದೆ, ಇದು ಹೊಸ ನಾಯಕತ್ವ ಮತ್ತು ರಾಜಕೀಯ ವ್ಯವಸ್ಥೆಗಳ ಹೊರಹೊಮ್ಮುವಿಕೆಗೆ ಕಾರಣವಾಗುತ್ತದೆ.

ಹೆಚ್ಚುತ್ತಿರುವ ಅಸಮಾನತೆ ಹಾಗೂ ಬಂಡವಾಳಶಾಹಿಯ ದೋರಣೆಗಳ ವಿರುದ್ಧವಾಗಿ ಈ ಕಮ್ಯುನಿಸಂ ಧ್ವನಿ ಎತ್ತಲಿದೆ. ಚೀನಾ, ಕ್ಯೂಬಾ ಮತ್ತು ಉತ್ತರ ಕೊರಿಯಾದಂತಹ ದೇಶಗಳು ಇನ್ನೂ ಕಮ್ಯುನಿಸ್ಟ್ ಸರ್ಕಾರಗಳನ್ನು ಹೊಂದಿವೆ. ಹಾಗೆ ಯೂರೋಪಿಯನ್ ದೇಶಗಲ್ಲೂ ಈ ಚಿಂತೆಗಳು ಬಹುಬೇಗ ವ್ಯಾಪಿಸುತ್ತಿದೆ. ಹೀಗಾಗಿ ಬಾಬಾ ವಂಗಾ ಹೇಳಿದಂತೆ ಮುಂದೆ ಇಡೀ ದೇಶದಲ್ಲಿ ಕಮ್ಯುನಿಸಂ ಹರಡಲಿದೆ ಎಂದು ಹೇಳಲಾಗಿದೆ. ಈ ಕುರಿತ ಚರ್ಚೆಗಳು ನಡೆಯುತ್ತಲೇ ಇದೆ. ಹಾಗೆ ಆಕೆ ಹೇಳಿರುವ ಈ ಭವಿಷ್ಯ ನಿಜವಾಗಲಿದೆ ಎಂದೇ ಹೇಳಲಾಗುತ್ತಿದೆ.

ಕಮ್ಯುನಿಸಂ ಇತಿಹಾಸ ನಿಮಗೆ ಗೊತ್ತಾ?

1917ರ ರಷ್ಯಾದ ಕ್ರಾಂತಿಯ ವ್ಲಾಡಿಮಿರ್ ಲೆನಿನ್ ನೇತೃತ್ವದಲ್ಲಿ ಮೊದಲ ಬಾರಿಗೆ ಸೋವಿಯತ್ ಒಕ್ಕೂಟದಲ್ಲಿ ಕಮ್ಯುನಿಸ್ಟ್ ಆಡಳಿತ ಸ್ಥಾಪನೆಗೊಂಡಿತ್ತು. ಈಗಿನ ರಷ್ಯಾ ಈ ಕಮ್ಯುನಿಸ್ಟ್ ಆಡಳಿತದ ತವರೂರು ಎನ್ನಬಹುದು. ಬಳಿಕ ಎರಡನೇ ಮಹಾಯುದ್ಧದ ಬಳಿಕ ಚೀನಾ, ಕ್ಯೂಬಾ, ಪೂರ್ವ ಯುರೋಪ್ ಮತ್ತು ಇತರ ಹಲವು ದೇಶಗಳಲ್ಲಿ ಕಮ್ಯುನಿಸ್ಟ್ ಸರ್ಕಾರಗಳು ಅಧಿಕಾರಕ್ಕೆ ಬಂದವು.

ಹಾಗೆ ಭಾರತದಲ್ಲೂ ಕೂಡ ಕಮ್ಯುನಿಸ್ಟ್ ಪಕ್ಷಗಳು ಹುಟ್ಟಿಕೊಂಡಿದ್ದವು. ಆದ್ರೆ 1991ರಲ್ಲಿ ಸೋವಿಯತ್ ಒಕ್ಕೂಟ ವಿಭಜನೆಯಾದಾಗ ಈ ಕಮ್ಯುನಿಸಂ ಕೂಡ ದುರ್ಬಲವಾಗುತ್ತಾ ಸಾಗಿತ್ತು, ವಿಶ್ವದಾದ್ಯಂತ ಹರಡುತ್ತಿದ್ದ ಕಮ್ಯುನಿಸಂ ವೇಗ ತಗ್ಗಿತ್ತು. ಭಾರತದಲ್ಲಿಯೂ ಕೂಡ ಒಡಕುಗಳು ಮೂಡಿದ್ದವು. ಇದಾದ ಬಳಿಕ ಮತ್ತೆ ಹಲವು ದೇಶಗಳು ಈಗ ಕಮ್ಯುನಿಸಂ ನಿಯಮಗಳ ಒಪ್ಪಿಕೊಳ್ಳುತ್ತಿವೆ. ಹಾಗೆ ನೋಡಿದರೆ ಬಾಬಾ ವಂಗಾ ನುಡಿದಿರುವ ಭವಿಷ್ಯವೂ 2076ರ ವೇಳೆಗೆ ನಿಜವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಬಾಬಾ ವಂಗಾ 2025 ರಲ್ಲಿ ಯುರೋಪ್‌ನಲ್ಲಿ ಹಲವು ರೀತಿಯ ದುರಂತಗಳು ಸಂಭವಿಸಿಲಿದೆ ಎಂದಿರುವುದು ಆತಂಕ ಹೆಚ್ಚಲು ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಉಕ್ರೇನ್-ರಷ್ಯಾ ನಡುವಿನ ಯುದ್ಧದ ನಡುವೆ ಎರಡು ಹೊಸ ರಾಷ್ಟ್ರಗಳ ನಡುವೆ ಮತ್ತೊಂದು ಯುದ್ಧದ ಆರಂಭವಾಗಲಿದೆ ಎಂದಿದ್ದಾರೆ. ಹಾಗೆ 2025ರಲ್ಲಿ ವಿಶ್ವದ ಹಲವು ಕಡೆಯಲ್ಲಿ ಭೂಕಂಪನಗಳು ಸಂಭವಿಸಲಿದೆ ಎಂದಿದ್ದಾರೆ. ಈಗಾಗಲೇ ಹಲವು ಕಡೆಗಳಲ್ಲಿ ಭೂಕಂಪನದ ವರದಿಯಾಗುತ್ತಿದೆ. ಭಾರತದಲ್ಲೂ ಹಿಂದೆಂದಿಗಿಂತಲೂ ಪ್ರಬಲವಾದ ಹಾಗೆ ನಿರಂತರ ಭೂಕಂಪನಗಳು ಸಂಭವಿಸುತ್ತಿವೆ. ಹಾಗೆ ಅಮೆರಿಕದಲ್ಲಿ ಮಹಾ ದುರಂತಗಳು ಸಂಭವಿಸುತ್ತಿದೆ. ಕಾಡ್ಗಿಚ್ಚು ದುರಂತ ಈಗಾಗಲೇ ಅಲ್ಲಿನ ನೂರಾರು ಎಕರೆ ಅರಣ್ಯ ನಾಶಕ್ಕೆ ಕಾರಣವಾಗಿದೆ. ಹಾಗೆ ಅಲ್ಲಿನ ಪ್ರಾಣಿ ಸಂಕುಲವೂ ಸೇರಿ ಸಾವಿರಾರು ಮಂದಿ ಮನೆ, ಆಸ್ತಿ ಕಳೆದುಕೊಂಡಿದ್ದಾರೆ.

ಬಾಬಾ ವಂಗಾ ನುಡಿದಿರುವ ಯಾವ ಭವಿಷ್ಯ ನಿಜವಾಗಿವೆ?

ಬಾಬಾ ವಂಗಾ ಹೇಳಿರುವ ವಿಚಾರಗಳು ಇಂದಿಗೂ ಚರ್ಚೆ ಹಾಗೂ ವಿಶ್ಲೇಷಣೆಗೆ ಒಳಪಡುತ್ತಲೇ ಇದೆ. ಹಾಗೆ ಆಕೆ ನುಡಿದ ಹಲವು ಭವಿಷ್ಯಗಳು ನಿಜವಾಗಿರುವುದನ್ನು ಕೂಡ ಈಗ ವಿಶ್ಲೇಷಿಸಲಾಗುತ್ತಿದೆ. 9/11 ದಾಳಿಗಳು ಮತ್ತು 2004 ರ ಸುನಾಮಿಯಂತಹ ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಹೇಳಲಾಗುತ್ತದೆ. ಹಾಗೆ ಚೆರ್ನೋಬಿಲ್ ದುರಂತ, ರಷ್ಯಾ-ಉಕ್ರೇನ್, ಕೊರೊನಾ, ಬ್ರೆಕ್ಸಿಟ್ ಸೇರಿ ಹಲವು ನಿಜವಾಗಿವೆ ಅಂತಲೂ ವಿಶ್ಲೇಷಿಸಲಾಗಿದೆ.

ಯಾರು ಈ ಬಾಬಾ ವಂಗಾ?

ಬಾಬಾ ವಂಗಾ ಬಲ್ಗೇರಿಯಾದಲ್ಲಿ ವಾಸಿಸಿದ್ದ ಓರ್ವ ವಿಶೇಷ ಚೇತನ ಮಹಿಳೆ. ಆಕೆಯ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವ್ ಎಂಬುದಾಗಿತ್ತು. ಆಕೆ 1911ರಲ್ಲಿ ಜನಿಸಿದರು, ಆದರೆ ತನ್ನ 11ನೇ ವಯಸ್ಸಿನಲ್ಲಿ ಚಂಡಮಾರುತದಿಂದ ಉಂಟಾದ ಧೂಳಿನಿಂದ ಶಾಶ್ವತವಾಗಿ ತಮ್ಮ ದೃಷ್ಟಿ ಕಳೆದುಕೊಂಡರು. ಇದಾದ ಬಳಿಕ ಅವರು ಭೂಮಿ ಮೇಲೆ ನಡೆಯಲಿರುವ ಘಟನೆಗಳ ಕುರಿತು ಭವಿಷ್ಯ ನುಡಿಯಲು ಮುಂದಾದರು. ಹೀಗಾಗಿ ವಿಶ್ವದಾದ್ಯಂತ ಆಕೆಯ ಹೆಸರು ಮುನ್ನಲೆಗೆ ಬಂದಿತ್ತು. ಅವರು ಆಗಸ್ಟ್ 11, 1996 ರಂದು ಬಲ್ಗೇರಿಯಾದಲ್ಲಿ ನಿಧನರಾದರು. ಆಕೆ ನಿಧನದ ಬಳಿಕ ಭವಿಷ್ಯಗಳ ವಿಶ್ಲೇಷಿಸಲಾಗಿತ್ತು. ಅಮೆರಿಕದ ವಿಶ್ವ ವಾಣಿಜ್ಯ ಮಳಿಗೆ ಮೇಲಿನ ದಾಳಿಯನ್ನು ಆಕೆ ಮೊದಲೇ ಊಹಿಸಿದ್ದಳು. ಆದ್ರೆ ಆ ಸಮಯದಲ್ಲಿ ಅದನ್ನು ವಿಶ್ಲೇಷಿಸುವಲ್ಲಿ ವಿಫಲವಾಗಲಾಗಿತ್ತು ಎಂಬ ವಾದವೂ ಇದೆ.

English summary

Baba Vanga Prediction: Communism Will Rule The Entire World..!

By 2076, there will be a major shift in global politics and the influence of socialism and communism will increase throughout the world. She predicts that communism will become deeply rooted in powerful countries.
Story first published: Friday, March 7, 2025, 12:55 [IST]
X
Desktop Bottom Promotion