Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
2025ರ ಕುರಿತು ಬಾಬಾ ವಂಗಾ-ನಾಸ್ಟ್ರಾಡಾಮಸ್ ಇಬ್ಬರ ಭವಿಷ್ಯ ಒಂದೇ..! ಇಬ್ಬರು ಹೇಳಿದ್ದೇನು?
ಜಗತ್ತಿನ ಆಗು ಹೋಗುಗಳ ಕುರಿತು ದುರಂತಗಳ ಕುರಿತು ಯಾರಾದ್ರು ನಿಖರವಾಗಿ ಹೇಳಿರುವವರು ಇದ್ದರೆ ಅದು ನಾಸ್ಟ್ರಾಡಾಮಸ್. ಆತ ಹೇಳಿದ್ದ ಬಹುತೇಕ ಘಟನೆಗಳು ನಿಜವಾಗಿವೆ. 16ನೇ ಶತಮಾನದಲ್ಲಿ ಬದುಕಿದ್ದ ಆತ ಸಾವಿರಾರು ವರ್ಷದಲ್ಲಿ ಭೂಮಿ ಮೇಲೆ ಜರುಗಬಹುದಾದ ಘಟನೆಗಳನ್ನು ಮೊದಲೇ ಭವಿಷ್ಯ ನುಡಿದಿದ್ದಾನೆ. ಈಗಲೂ ಈತನ ಭವಿಷ್ಯಗಳು ನಿಜವಾಗುತ್ತಲೇ ಇವೆ.
ಇದಕ್ಕೆ ಹಲವು ಉದಾಹರಣೆಯನ್ನೂ ಕೂಡ ನಾವು ನೀಡಬಹುದು. 2024ರಲ್ಲಿ ಭೂಕಂಪನ ಸುನಾಮಿ ಕುರಿತು ಅವರು ಭವಿಷ್ಯ ನುಡಿದ್ದರು. ಇದು ಜಪಾನ್‌ನಲ್ಲಿ ಉಂಟಾದ ಭೂಕಂಪ ಹಾಗೂ ಸುನಾಮಿ ಕುರಿತು ಹೇಳಿದ್ದ ಭವಿಷ್ಯವಾಗಿತ್ತು. ಹೀಗೆ ಹಲವು ಭವಿಷ್ಯಗಳು ನಿಜವಾಗಿವೆ. ಹಾಗೆ ನಾಸ್ಟ್ರಾಡಾಮಸ್ ಬಳಿಕ ಮತ್ತೊಬ್ಬರ ಭವಿಷ್ಯಗಳು ನಿಜವಾಗುತ್ತಿರುವುದು ಅದು ಬಾಬಾ ವಂಗಾ.

ಬಾಬಾ ವಂಗಾಳನ್ನು ನಾಸ್ಟ್ರಾಡಾಮಸ್‌ಗೆ ಹೋಲಿಸಲಾಗುತ್ತದೆ. ಆಕೆ ನುಡಿದ ಭವಿಷ್ಯಗಳು ಕೂಡ ನಿಜವಾಗುತ್ತಿವೆ. ದೃಷ್ಟಿ ಹೀನ ಮಹಿಳೆ ಹೇಳುವ ಒಂದೊಂದೇ ವಿಚಾರಗಳು ನಿಜವಾಗುತ್ತಿದ್ದವು ಹಾಗಾಗಿ ಆಕೆಯನ್ನು ಅತೀಂದ್ರಿಯ ಶಕ್ತಿ ಹೊಂದಿದ್ದ ಮಹಿಳೆ ಎಂದು ಪರಿಗಣಿಸಲಾಗಿತ್ತು. ಆಕೆ ಹೇಳುತ್ತಿದ್ದ ವಿಚಾರಗಳು ನಿಜವಾಗುತ್ತಿದ್ದವು. ಆದ್ರೆ ಈಗ ನಾಸ್ಟ್ರಾಡಾಮಸ್ ಹಾಗೂ ಬಾಬಾ ವಂಗಾ ಇಬ್ಬರೂ ಒಂದೇ ರೀತಿಯ ಭವಿಷ್ಯ ನುಡಿದಿದ್ದಾರೆ.
ಹೌದು 2025ರ ಕುರಿತಂತೆ ಇಬ್ಬರೂ ಕೂಡ ಒಂದೇ ರೀತಿಯ ಭವಿಷ್ಯ ನುಡಿದಿದ್ದಾರೆ. ಆದ್ರೆ ಇದು ಒಳ್ಳೆಯ ವಿಚಾರವಾಗಿ ಈಗ ಸುದ್ದಿಯಾಗುತ್ತಿಲ್ಲ ಬದಲಿಗೆ ಇದೊಂದು ವಿಲಕ್ಷಣ ಹಾಗೂ ದುರಂತ ಸೂಚಕ ಭವಿಷ್ಯವಾಣಿಯಾಗಿದೆ. 1996 ರಲ್ಲಿ ನಿಧನರಾದ ಬ್ಲೈಂಡ್ ಬಲ್ಗೇರಿಯನ್ ಬಾಬಾ ವಂಗಾ ಕೂಡ ಇದೇ ರೀತಿ 2025ರ ದುರಂತಗಳ ಪಟ್ಟಿಯ ಹೇಳಿದ್ದಾರೆ.
ಬಾಬಾ ವಂಗಾ 2025 ರಲ್ಲಿ ಯುರೋಪ್‌ನಲ್ಲಿ ಹಲವು ರೀತಿಯ ದುರಂತಗಳು ಸಂಭವಿಸಿಲಿದೆ ಎಂದಿದ್ದಾರೆ. ಅದರಲ್ಲೂ ಮುಖ್ಯವಾಗಿ ಉಕ್ರೇನ್-ರಷ್ಯಾ ನಡುವಿನ ಯುದ್ಧದ ನಡುವೆ ಎರಡು ಹೊಸ ರಾಷ್ಟ್ರಗಳ ನಡುವೆ ಮತ್ತೊಂದು ಹೊಸ ಯುದ್ಧದ ಆರಂಭ ನೋಡಲಾಗುತ್ತದೆ ಎಂದಿದ್ದಾರೆ. ಏಲಿಯನ್ ಅಥವಾ ಅನ್ಯಗ್ರಹ ಜೀವಿಗಳ ಕುರಿತ ಬಹುದೊಡ್ಡ ಪ್ರಗತಿ ಕಾಣಲಿದ್ದೇವೆ ಎಂದಿದ್ದಾರೆ.
ಹಾಗೆ ನಾಸ್ಟ್ರಾಡಾಮಸ್ ಕೂಡ ಇದೇ ರೀತಿಯಲ್ಲಿ 2025ರ ವರ್ಷವನ್ನು ಸಂಘರ್ಷಗಳ ವರ್ಷ ಅಂತಲೇ ಪರಿಗಣಿಸಿದ್ದಾರೆ. ಅವರ ಪ್ರಕಾರ, ಯೂರೋಪ್‌ನಲ್ಲಿ ಅತೀ ಹೆಚ್ಚು ಜನಸಂಖ್ಯೆ ಕುಸಿತ ಕಾಣಲಿದೆಯಂತೆ. ಕ್ರೂರ ಯುದ್ಧದಗಳ ಖಂಡವಾಗಿ ಯುರೋಪ್ ಬದಲಾಗಲಿದೆ ಎಂದಿದ್ದಾರೆ. ಪ್ಲೇಗ್ ರೀತಿಯಲ್ಲಿ ದುರಂತಗಳು ಸಂಭವಿಸಲಿದೆ ಎಂದಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧವು ಫಲಿತಾಂಶವಿಲ್ಲದೆ ನಷ್ಟದಿಂದ ಮುಕ್ತಾಯವಾಗಲಿದೆ ಎಂದಿದ್ದಾರೆ. ಎರಡೂ ಕಡೆ ಸಂಪನ್ಮೂಲಗಳ ನಷ್ಟ ಹಾಗೂ ಇಚ್ಛಾಶಕ್ತಿಯ ಅವನತಿಯಿಂದಾಗಿ ಯುದ್ಧ ಕೊನೆಯಾಗಲಿದೆಯಂತೆ. ಬ್ರೆಜಿಲ್‌ನಲ್ಲಿ ಜ್ವಾಲಾಮುಖಿ ಸ್ಪೋಟ, ತೀವ್ರ ಸ್ವರೂಪದ ಪ್ರವಾಹ, ವಿನಾಶಕಾರಿ ನೈಸರ್ಗಿಕ ವಿಕೋಪಗಳು ಉಂಟಾಗಲಿದೆ ಎಂದಿದ್ದಾರೆ.
ಬಾಬಾ ವಂಗಾ ಅವರು ಈ ಮೊದಲು 9/11 ಭಯೋತ್ಪಾದಕ ದಾಳಿಗಳು, ಕ್ವೀನ್ ಡಯಾನಾ ಸಾವು, ಚೋರ್ನೋಬಿಲ್ ದುರಂತ ಮತ್ತು ಬ್ರೆಕ್ಸಿಟ್, ಕೊರೊನದಂತಹ ಹಲವು ವಿದ್ಯಮಾನಗಳ ಕುರಿತಂತೆ ಭವಿಷ್ಯ ನುಡಿದ್ದಿದರು. ಹೀಗಾಗಿ ಬಾಬಾ ವಂಗಾ ಬಹುಬೇಗ ಫೇಮಸ್ ಆಗಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆ, ಇಂಗ್ಲೆಂಡ್ ರಾಣಿ ಕುರಿತಂತೆಯೂ ಅವರು ಭವಿಷ್ಯ ನುಡಿದಿದ್ದಾರೆ.
ಆದರೆ ಈಗ ಇಬ್ಬರು 2025ರ ಕುರಿತು ನುಡಿದಿರುವ ಭವಿಷ್ಯ ಒಂದೇ ರೀತಿಯಾಗಿದ್ದು ಈ ಭವಿಷ್ಯಗಳು ನಿಜವಾಗಲಿದ್ಯಾ ಎಂಬ ಕುತೂಹಲವಂತು ಮೂಡಿದೆ. ಸದ್ಯ ಇಬ್ಬರು ಹೇಳಿದ ಭವಿಷ್ಯದಲ್ಲಿ ಯಾವ ಭವಿಷ್ಯಗಳು ಎಷ್ಟು ಪ್ರಮಾಣದಲ್ಲಿ ನಿಜವಾಗುತ್ತೆ ಅನ್ನೋದನ್ನು ಕಾಲವೇ ನಿರ್ಧರಿಸಲಿದೆ. ಆದ್ರೆ ಈ ಭವಿಷ್ಯಗಳು ನಿಜವಾದರೆ ದುರಂತಗಳಿಂದಲೇ 2025 ಸುದ್ದಿಯಾಗಲಿದೆ. ಹಾಗೆ ಇತಿಹಾಸದ ಪುಟದಲ್ಲಿ ಸೇರಿಕೊಳ್ಳಲಿದೆ.



Click it and Unblock the Notifications