Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
70 ವರ್ಷ ಮೇಲ್ಪಟ್ಟ ಹಿರಿಯರಿಗೆ 5 ಲಕ್ಷ ಆರೋಗ್ಯ ವಿಮೆ: ಸುಮಾರು 4.5 ಕೋಟಿ ಕುಟುಂಬಕ್ಕೆ ನೆರವಾಗಲಿದೆ ಈ ಯೋಜನೆ
70 ವರ್ಷ ಮೇಲ್ಪಟ್ಟ ಹಿರಿಯ ಜೀವಗಳ ಬದುಕಿನಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಹೊಸ ಬೆಳಕು ಮೂಡಿಸಿದೆ. ಆಯುಷ್ಮಾನ್ ಯೋಜನೆಯ ಕುರಿತು ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು ಅದರಡಿಯಲ್ಲಿ 5 ಲಕ್ಷದವರೆಗೆ ಆರೋಗ್ಯ ವಿಮೆ ಪಡೆಯಬಹುದಾಗಿದೆ. ಇದು ನಿಜಕ್ಕೂ ಮಹತ್ವದ ಹೆಜ್ಜೆಯಾಗಿದ್ದು ಆಸ್ಪತ್ರೆಯ ವೆಚ್ಚ ಭರಿಸಲು ಸಾಧ್ಯವಾಗದ ಕುಟುಂಬಗಳಿಗೆ, ಹಿರಿಯರಿಗೆ ಮನೋಸ್ಥೈರ್ಯ ಮೂಡಿಸುವುದು.

ಮೊದಲು ಈ ಯೋಜನೆಯಲ್ಲಿ ಎಲ್ಲಾ ವರ್ಗದವರು ಇರಲಿಲ್ಲ
ಆದರೆ ಈಗ 70 ವರ್ಷ ಮೇಲ್ಪಟ್ಟ ಎಲ್ಲಾ ವೃದ್ಧ-ವೃದ್ಧೆಯರನ್ನು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ ಸೇರಿಸಲಾಗಿದೆ.
4.5 ಕೋಟಿ ಕುಟುಂಬಕ್ಕೆ ನೆರವಾಲಿದೆ ಈ ಯೋಜನೆ
ಈ ಯೋಜನೆ ಕೋಟ್ಯಾಂತರ ಕುಟುಂಬಕ್ಕೆ ನೆರವಾಗಲಿದೆ, ಒಂದು ಲೆಕ್ಕಾಚಾರದ ಪ್ರಕಾರ ಈ ಯೋಜನೆಯಿಂದ ಭಾರತದಲ್ಲಿ 4.5 ಕೋಟಿ ಕುಟುಂಬಕ್ಕೆ ಅನುಕೂಲಕರವಾಗಿದೆ. ಭಾರತದ ಪ್ರತಿಯೊಬ್ಬ ನಾಗರಿಕನೂ ಈ ಯೋಜನೆಯನ್ನು ಪಡೆಯಬಹುದಾಗಿದ್ದು ಎಲ್ಲಾ ನಾಗರಿಕರಿಗೂ ಅತ್ಯುತ್ತಮ ವೈದ್ಯಕೀಯ ಸವಲತ್ತು ಪಡೆಯಲು ನಿದರಿಂದ ಸಾಧ್ಯವಾಗಲಿದೆ.
ಯಾರೆಲ್ಲಾ ಫಲಾನುಭವಿಗಳು
70 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಾದವರು: 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ಇದರ ಪ್ರಯೋಜನ ಪಡೆಯಲಿದ್ದಾರೆ.
ಅಲ್ಲದೆ ಈಗಾಗಲೇ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ ಇರುವ 70 ವರ್ಷ ಮೇಲ್ಪಟ್ಟವರು ಇನ್ನೂ ಐದು ಲಕ್ಷದ ಆರೋಗ್ಯ ವಿಮೆ ಪಡೆಯಲಿದ್ದಾರೆ.
ಇನ್ನೂ ಖಾಸಗಿ ಹೆಲ್ತ್ ಇನ್ಸೂರೆನ್ಸ್ ಇರುವವರು ಕೂಡ ಇದರ ಪ್ರಧಾನ ಪ್ರಯೋಜನ ಪಡೆಯಲಿದ್ದಾರೆ.
ಈ ಯೋಜನೆಗೆ ಒಳಪಡುವ ಎಲ್ಲಾ ಅರ್ಹರಿಗೂ ಪ್ರತ್ಯೇಕ ಕಾರ್ಡ್ ನಿಡಲಾಗುವುದು.
Government Health Scheme (CGHS),
Ex-Servicemen Contributory Health Scheme (ECHS) and Ayushman
Central Armed Police Force (CAPF
ಈ ಕಾರ್ಡ್‌ಗಳನ್ನು ಹೊಂದಿರುವವರು ಈ ಸ್ಕೀಮ್ ಅಥವಾ ಆಯುಷ್ಮಾನ್ ಭಾರತ್ ಸ್ಕೀಮ್ ಇವುಗಳ ನಡುವೆ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ.
ಬಡವರಿಗೆ, ಮಧ್ಯಮ ವರ್ಗದವರಿಗೆ ವರದಾನವಾಗಿದೆ
ಎಷ್ಟೋ ಕುಟುಂಬಗಳಲ್ಲಿ ಹಿರಿಯ ಜೀವಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ದೊರೆಯಲ್ಲ ಆರ್ಥಿಕ ಕಾರಣದಿಂದಲೂ ಅಥವಾ ಮಕ್ಕಳು ಸರಿಯಾಗಿ ನೋಡಿಕೊಳ್ಳದೆ, ಅಸ್ಪತ್ರೆ ಖರ್ಚು ಭರಿಸಲಾಗದೆ ತುಂಬಾನೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಸರಿಯಾಗಿ ಆಸ್ಪತ್ರೆ ಸೌಲಭ್ಯ ಪಡೆಯಲು ಸಾಧ್ಯವಾಗದೆ ಬೇಗನೆ
ಮರಣವನ್ನಪ್ಪುವವರ ಸಂಖ್ಯೆ ಹೆಚ್ಚಾಗಿ ಇದೆ. ಹಾಗಾಗಿ ಈ ಸ್ಕೀಮ್ ತುಂಬಾನೇ ಪ್ರಯೋಜನಕಾರಿಯಾಗಿದೆ.
ಹಿರಿಯರು ಗೌರವದ ಜೀವನ ನಡೆಸುವಂತಾಗುವುದು
ಈ ಸ್ಕೀಮ್ ಬಂದಿರುವುದರಿಂದ ಹಿರಿಯರು ಗೌರವದ ಜೀವನದ ನಡೆಸುವಂತಾಗುವುದು. ಹಾಗಾಗಿ ಹಿರಿಯರಿಗೆ ತುಂಬಾ ಅನುಕೂಲಕರವಾಗಿದೆ.
ವೃದ್ಧಾಶ್ರಮದಲ್ಲಿ ಇರುವವರಿಗೆ ಅನುಕೂಲಕರವಾಗುತ್ತದೆ
ವೃದ್ಧಾಶ್ರಮದಲ್ಲಿ ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ದೊರೆಯುತ್ತದೆ, ಅದರೆ ಲಕ್ಷ ಲಕ್ಷಗಟ್ಟಲೆ ವೈದ್ಯಕೀಯ ವೆಚ್ಚ ಭರಿಸುವುದು ಆ ಆಶ್ರಮ ನಡೆಸುತ್ತಿರುವವರಿಗೂ ಅಸಾಧ್ಯವಾಗುವುದು. ಆದ್ದರಿಂದ ಈ ಯೋಜನೆ ಅಂಥವರಿಗೆ ತುಂಬಾನೇ ಅನುಕೂಲಕರವಾಗಿದೆ. ವೃದ್ಧಾಶ್ರಮ ನಡೆಸುವವರಿಗೂ ಈ ಯೋಜನೆ ತುಂಬಾನೇ ಪ್ರಯೋಜನಕಾರಿಯಾಗಿದೆ.
ಕ್ಯಾನ್ಸರ್‌ನಿಂದ ಅನೇಕ ದೊಡ್ಡ ಕಾಯಿಲೆಗಳಿಗೆ ಈ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಪಡೆಯಬಹುದು
ಇತ್ತೀಚೆಗೆ ಕ್ಯಾನ್ಸರ್ ಎಂಬುವುದು ಸರ್ವೇಸಾಮಾನ್ಯ ಎಂಬಂತಾಗಿದೆ, ಕ್ಯಾನ್ಸರ್ ಹಾಗೂ ಮತ್ತಿತರ ಕಾಯಿಲೆಗಳಿಗೆ ದುಬಾರಿ ವೆಚ್ಚವಾಗುವುದು, ಈ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಪಡೆಯಬಹುದಾದರಿಂದ ಹಣವಿಲ್ಲದಿದ್ದರೂ ಉತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಹೀಗೆ ಕೇಂದ್ರ ಸರ್ಕಾರದ ಈ ಯೋಜನೆ ಹಿರಿಯ ಜೀವನಗಳಿಗೆ ದೊಡ್ಡ ವರದಾನವಾಗಿದೆ ಎಂಬ ವಿಷಯದಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.



Click it and Unblock the Notifications











