Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
2025ರಲ್ಲಿ ಈ ದಿನ ಶುಭ ಕಾರ್ಯಗಳಿಗೆ ಅತ್ಯಂತ ಕೆಟ್ಟದಿನ: ಮದುವೆ, ಪೂಜೆಗೆ ಉತ್ತಮವಲ್ಲ..!!
2025ರಲ್ಲಿ ನಾವು ಹಲವು ರೀತಿಯ ಗ್ರಹಗಳ ಬದಾವಣೆ, ಯೋಗಗಳ ನೋಡಲಿದ್ದೇವೆ. ಹಾಗೆ ಒಂದಿಷ್ಟು ಶುಭ ಗಳಿಗೆಗಳು, ಶುಭ ದಿನಗಳು, ವಿಶೇಷ ದಿನಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಹಾಗೆ ನಾವು ಈ ವರ್ಷದ ಅತ್ಯಂತ ಶುಭ ದಿನಗಳ ಜೊತೆಗೆ ಒಂದಿಷ್ಟು ಅಶುಭ ದಿನಗಳನ್ನು ಕೂಡ ನೋಡಬಹುದು. ಅದರಲ್ಲೂ ಈ ವಿವಾಹಕ್ಕೆ ಶುಭ ದಿನ ನೋಡುವುದು ಕೂಡ ನಾವು ನೋಡಬಹುದು.
ಮದುವೆಯ ಕಾರ್ಯಕ್ಕೆ ಅತ್ಯಂತ ಶುಭ ಗಳಿಗೆಯನ್ನು ನೋಡಲಾಗುತ್ತದೆ. ಲಗ್ನ, ಗಳಿಗೆ, ಕರಣ, ದಿನ ಹೀಗೆ ರಾಹುಕಾಲ, ಗುಳಿಕಕಾಲ ಎಲ್ಲವನ್ನೂ ನೋಡಿ ಶುಭ ಗಳಿಗೆಯನ್ನು ನಿರ್ಧರಿಸಲಾಗುತ್ತದೆ. ಅದೇ ಮುಹೂರ್ತದಲ್ಲಿ ಮದುವೆಯೂ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ. ಆದ್ರೆ ಕೆಲವೊಂದು ಸಮಯದಲ್ಲಿ, ಮದುವೆ ಮಾಡುವುದು ಇರಲಿ ಆ ಕುರಿತ ಮಾತುಕತೆ ಕೂಡ ನಡೆಸುವುದಿಲ್ಲ.

ನಾವಿಂದು 2025ರಲ್ಲಿ ಮದುವೆಗೆ ಹಾಗೂ ಶುಭ ಕಾರ್ಯಗಳಿಗೆ ಅತ್ಯಂತ ಕೆಟ್ಟ ದಿನಗಳು ಯಾವುದು? ಯಾವ ದಿನಗಳಲ್ಲಿ ಶುಭ ಕಾರ್ಯ ಮಾಡಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾರ್ಚ್ 1ರಿಂದ ಏಪ್ರಿಲ್ 12
ಮಾರ್ಚ್ 1ರಿಂದ ಏಪ್ರಿಲ್ 12ರ ವರೆಗೆ ಮದುವೆ ಕಾರ್ಯಕ್ಕೆ ಒಳ್ಳೆಯ ಕಾಲವಲ್ಲ ಏಕೆಂದರೆ ಈ ಸಮಯದಲ್ಲಿ ಶುಕ್ರನ ಹಿಮ್ಮುಖ ಚಲನೆ ಇರಲಿದೆ. ಶುಕ್ರ ಪ್ರೀತಿ, ಸಂಬಂಧ, ಸೌಂದರ್ಯ, ಪ್ರಣಯದ ಸಂಕೇತವಾಗಿದ್ದಾನೆ. ಈ ಗ್ರಹದ ಹಿಮ್ಮುಖ ಚಲನೆಯು ಈ ಅಂಶಗಳ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತದೆ. ಇದರಿಂದ ಈ ಸಮಯದಲ್ಲಿ ಮದುವೆ ಕಾರ್ಯಗಳಿಗೆ ಹಾಗೆ ಶುಭ ಕಾರ್ಯಕ್ಕೂ ಒಳ್ಳೆಯ ದಿನವಾಗಿರುವುದಿಲ್ಲ. ಒಂದು ವೇಳೆ ಮದುವೆ ಕಾರ್ಯಗಳು ನಡೆದರೂ ಆ ಸಂಬಂಧದಲ್ಲಿ ಭಾವನಾತ್ಮಕ ಗಟ್ಟಿತನ, ಅಥವಾ ಸಂಬಂಧದಲ್ಲಿ ಏರುಪೇರು ಕಂಡುಬರಬಹುದು.
ಮಾರ್ಚ್ 15ರಿಂದ ಏಪ್ರಿಲ್ 7, ಜುಲೈ 18ರಿಂದ- ಆಗಸ್ಟ್ 11, ನವೆಂಬರ್ 9ರಿಂದ- ನವೆಂಬರ್ 29
ಈ ಮೇಲಿನ ಎಲ್ಲಾ ದಿನಗಳಲ್ಲಿ ಬುಧ ಗ್ರಹವು ಹಿಮ್ಮುಖ ಚಲನೆಯಲ್ಲಿರಲಿದೆ. ಇದು ಹಲವು ರೀತಿಯ ಸಮಸ್ಯೆಗೆ ಕಾರಣವಾಗಬಹುದು, ಹೀಗಾಗಿ ಈ ದಿನಗಳಲ್ಲಿ ಮದುವೆಯಂತಹ ಶುಭ ಕಾರ್ಯಕ್ಕೆ ಮಾಡುವುದಿಲ್ಲ. ಬುಧನು ಅನುಬಂಧ, ಸಾಮರಸ್ಯ, ಶಾಂತಿಗೆ ಹೆಸರಾದ ಗ್ರಹವಾಗಿದೆ. ಆದ್ರೆ ಈ ಹಿಮ್ಮುಖ ಚಲನೆಯಲ್ಲಿ ಶುಭ ಕಾರ್ಯಕ್ಕೆ ಮುಂದಾದರೆ ಸಂಬಂಧಗಳು ಉತ್ತಮವಾಗಿರುವುದಿಲ್ಲ. ಸಂಭಾವ್ಯ ಸಮಸ್ಯೆಗಳ ತಡೆಯುವ ದೃಷ್ಟಿಯಿಂದ ಈ ದಿನಾಂಕಗಳಲ್ಲಿ ಮದುವೆ, ಶುಭ ಕಾರ್ಯ ಮಾಡದಿರುವುದೇ ಉತ್ತಮವಂತೆ.
ಮಾರ್ಚ್ 14, ಮಾರ್ಚ್ 29, ಸೆಪ್ಟೆಂಬರ್ 7 ಮತ್ತು ಸೆಪ್ಟೆಂಬರ್ 21
ಈ ನಾಲ್ಕು ದಿನಗಳಲ್ಲಿ ಯಾವುದೇ ಯಾವುದೇ ಗ್ರಹಗಳ ಹಿಮ್ಮುಖ ಚಲನೆ ಇಲ್ಲ. ಆದ್ರೆ ಈ ನಾಲ್ಕು ದಿನಗಳಲ್ಲಿ ಎರಡು ದಿನ ಸೂರ್ಯಗ್ರಹಣ ಹಾಗೆ ಇನ್ನೆರಡು ದಿನ ಚಂದ್ರಗ್ರಹಣ ನಡೆಯುತ್ತಿದೆ. ಹೀಗಾಗಿ ಈ ನಾಲ್ಕು ದಿನಗಳಲ್ಲಿ ಮದುವೆ, ಶುಭ ಕಾರ್ಯ ಮಾಡುವುದು ಸಮಂಜಸವಲ್ಲ. ಗ್ರಹಣಗಳ ದಿನದಂದು ಯಾವುದೇ ಶುಭ ಕಾರ್ಯ ಮಾಡದೇ ಇರುವುದು ಉತ್ತಮ. ಅದರಲ್ಲೂ ಈ ದಿನಗಳಲ್ಲಿ ಬೆಳಕಿಗೆ ಒಡ್ಡಿಕೊಳ್ಳುವುದು ಕೂಡ ಸಮಸ್ಯೆಗೆ ಗುರಿಯನ್ನಾಗಿ ಮಾಡುತ್ತದೆ, ಹೀಗಾಗಿ ಗ್ರಹಣ ಸಮಯದಲ್ಲಿ ಯಾರು ಮನೆಯಿಂದ ಕೂಡ ಹೊರಬರುವುದಿಲ್ಲ.
ಇನ್ನು ಹಿಂದೂ ಧರ್ಮದಲ್ಲಿ ಗ್ರಹಣಗಳಿಗೆ ಮಹತ್ವವಿದೆ. ಗ್ರಹಣದಲ್ಲಿ ಹಲವು ರೀತಿ ಆಚರಣೆ ನಾವು ನೋಡಬಹುದು. ಹೀಗಾಗಿ ಈ ದಿನವನ್ನು ಅಶುಭ ಎಂದು ಪರಿಗಣಿಸಲಾಗಿದೆ. ಗ್ರಹಣ ಸಮಯ ಅಶುಭದ ಸಂಕೇತವಾಗಿದೆ. ಹೀಗಾಗಿ ಯಾವದೇ ಶುಭ ಕಾರ್ಯ ಈ ದಿನ ನಡೆಯುವುದಿಲ್ಲ. 2025ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸುತ್ತಿದೆ. ಭಾರತದಲ್ಲಿ ಒಂದು ಗ್ರಹಣ ಮಾತ್ರ ಗೋಚರವಾಗುತ್ತಿದೆ.



Click it and Unblock the Notifications