Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮೇ ತಿಂಗಳಿನಲ್ಲಿ ಶುಭ ಕಾರ್ಯ ಮಾಡುವುದಾದರೆ ಈ ದಿನಾಂಕಗಳು ಶ್ರೇಷ್ಠವಾಗಿದೆ
ಯಾವುದೇ ಶುಭ ಕಾರ್ಯ ಮಾಡುವಾಗ ಅದನ್ನು ಒಳ್ಳೆಯ ದಿನ ನೋಡಿ ಮಾಡಬೇಕೆಂಬ ನಂಬಿಕೆ. ಒಳ್ಳೆಯ ಸಮಯದಲ್ಲಿ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ. ವಿಜ್ಞಾನ ಕೂಡ ಇದಕ್ಕೆ ಹೊರತಲ್ಲ, ರಾಕೆಡ್ ಉಡ್ಡಾಯನ ಮಾಡುವಾಗಲೂ ಒಳ್ಳೆಯ ಸಮಯ ನೋಡಿ ಮಾಡಲಾಗುವುದು.
ಬದುಕಿನಲ್ಲಿ ಏನಾದರೂ ಹೊಸ ಕಾರ್ಯ ಮಾಡುವಾಗ ಎಲ್ಲವೂ ಒಳಿತಾಗಲಿ ಎಂದು ಬಯಸಿ ಪ್ರಾರಂಭಿಸುತ್ತೇವೆ. ಅದು ಹೊಸ ಕೆಲಸವಾಗಿರಲಿ, ಹೊಸದಾದ ಉದ್ಯಮ,ವ್ಯವಹಾರವಾಗಿರಲಿ ಎಲ್ಲವೂ ಒಳಿತಾಗಲಿ ಎಂದು ಬಯಸುತ್ತೇವೆ.

ಇನ್ನು ಮಗುವಿನ ನಾಮಕರಣ, ಮದವೆ ಗೃಹ ಪ್ರವೇಶಕ್ಕೂ ಒಳ್ಳೆಯ ದಿನ ನೋಡಲಾಗುವುದು, ಬನ್ನಿ ಈ ತಿಂಗಳಿನಲ್ಲಿ ಯಾವೆಲ್ಲಾ ದಿನಗಳು ಶುಭಕಾರ್ಯ ಮಾಡಲು ಸೂಕ್ತವಾಗಿದೆ ಎಂದು ನೋಡೋಣ:
ಈ ತಿಂಗಳಿನಲ್ಲಿ ಹೊಸ ವ್ಯವಹಾರ ಪ್ರಾರಂಭಿಸಲು ಯಾವ ದಿನ ಶುಭವಾಗಿದೆ, ಮಗುವಿನ ನಾಮಕರಣ, ಅನ್ನ ಪ್ರಾಶನಕ್ಕೆ ಯಾವ ದಿನವಿದೆ? ಮದುವೆಗೆ ಶುಭ ದಿನಾಂಕಗಳು ಇದೆಯೇ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
9 ದಿನಗಳಲ್ಲಿ ಇದೆ ಸರ್ವಾರ್ಥ ಸಿದ್ಧಿ ಯೋಗ
ಜ್ಯೋತಿಷ್ಯದಲ್ಲಿ ಸರ್ವಾರ್ಥ ಸಿದ್ಧಿ ಯೋಗವನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗುವುದು. ಈ ಯೋಗದ ಸಮಯದಲ್ಲಿ ಏನಾದರೂ ಮಾಡಿದರೆ ಒಳಿತಾಗುವುದು ಎಂಬ ನಂಬಿಕೆ. ಈ ತಿಂಗಳಿನಲ್ಲಿ ಶುಭ ಕಾರ್ಯಕ್ಕೆ ಮೇ 05, 07, 08, 13, 14, 19, 23, 24 ಮತ್ತು 26 ಶುಭ ದಿನಾಂಕಗಳಾಗಿವೆ, ಏಕೆಂದರೆ ಈ ದಿನಗಳಲ್ಲಿ ಸರ್ವಾರ್ಥ ಸಿದ್ಧಿ ಯೋಗ ಉಂಟಾಗಲಿದೆ.
ಅಮೃತ ಸಿದ್ಧಿ ಯೋಗ (ಅಮೃತ ಸಿದ್ಧಿ ಯೋಗ 2024)
ಹೊಸ ವ್ಯವಹಾರ, ಕಾರ್ಯಕ್ಕೆ ಅಮೃತ ಸಿದ್ಧಿ ಯೋಗ ತುಂಬಾ ಒಳ್ಳೆಯದು. ಮೇ ತಿಂಗಳಿನಲ್ಲಿ ಮೇ 7 ಮತ್ತು 19ರಂದು ಅಮೃತ ಸಿದ್ಧಿ ಯೋಗ ರಚನೆಯಾಗಲಿದೆ. ಈ ಯೋಗ ಹೊಸ ಕಾರ್ಯ ಪ್ರಾರಂಭಿಸಲು ತುಂಬಾನೇ ಶುಭ ಎಂದು ಹೇಳಲಾಗುವುದು.
ಇನ್ನು ನೀವು ಮೇ ತಿಂಗಳಿನಲ್ಲಿ ವಾಹನ ಖರೀದಿಸಲು ಬಯಸುವುದಾದರೆ
ಮೇ01
ಮೇ 03
ಮೇ 05
ಮೇ 06
ಮೇ 10
ಮೇ 12
ಮೇ 13
ಮೇ 19
ಮೇ 20
ಮೇ 23
ಮೇ 24
ಮೇ 29
ಮೇ 30
ಈ ದಿನಾಂಕಗಳೆಂದು ಶುಭ ಸಮಯ ನೋಡಿ ವಾಹನ ಖರೀದಿಸಿ.
ಆಸ್ತಿ ಅಥವಾ ಮನೆ ಖರೀದಿಸಲು, ಮಾರಾಟ ಮಾಡಲು
ಮೇ 03
ಮೇ 4
ಮೇ 12
ಮೇ 13
ಮೇ 17
ಮೇ22
ಮೇ 23
ಮೇ 24 ಮಂಗಳಕರ, ಈ ದಿನಗಳಂದು ಮಾಡಿದರೆ ಪ್ರಯೋಜನ ಪಡೆಯುತ್ತೀರಿ.
ಮದುವೆ ಇತ್ಯಾದಿಗಳಿಗೆ ಶುಭ ಸಮಯ.
ಮದುವೆ ಮೇ ತಿಂಗಳಲ್ಲಿ ಯಾವುದೇ ಶುಭ ಸಮಯವಿಲ್ಲ
ಇನ್ನು ಮನೆಯ ಗೃಹ ಪ್ರವೇಶಕ್ಕೂ ದಿನಾಂಕಗಳಿಲ್ಲ
ನಾಮಕರಣಕ್ಕೆ ಶುಭ ಸಮಯ
ಮಗುವಿನ ನಾಮಕರಣಕ್ಕೆ ಮೇ 01, 03, 05, 09, 10, 13, 19, 20, 23, 24, 27 ಮತ್ತು ಮೇ 30 ದಿನಾಂಕಗಳು ಶುಭವಾಗಿದೆ ನೋಡಿ, ಈ ದಿನಾಂಕಗಳೆಂದು ಒಳ್ಳೆಯ ಸಮಯ ನೋಡಿ ಹೆಸರು ಹಾಕಿ.
ಮಗುವಿಗೆ ಅನ್ನಪ್ರಾಶನಕ್ಕೆ ಮುಹೂರ್ತ - ಮೇ 03, 09, 10, 20, 23, 27 ಮತ್ತು ಮೇ 30 ಶುಭ ದಿನಾಂಕಗಳಾಗಿವೆ
ಮಗುವಿನ ಅಧ್ಯಯನ ಪ್ರಾರಂಭಿಸಲು ಕೂಡ ಶುಭ ದಿನಾಂಕಗಳಿಲ್ಲ
ಉಪನಯನಕ್ಕೆ
ಮೇ ತಿಂಗಳಲ್ಲಿ 09, 10, 12, 17, 18, 19, 20, 24 ಮತ್ತು 25 ಉಪಯನಕ್ಕೆ ಶುಭವಾಗಿದೆ
ಕೇಶ ಮುಂಡನ ಮುಹೂರ್ತ - 03, 10, 24, 29 ಮತ್ತು ಮೇ 30ಕ್ಕೆ ದಿನಾಂಕಗಳು ಶುಭವಾಗಿದೆ.



Click it and Unblock the Notifications
