Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಟೋಬರ್‌ನಲ್ಲಿ ಶುಭ ಕಾರ್ಯಕ್ಕೆ ಈ ದಿನಾಂಕಗಳು ತುಂಬಾನೇ ಶುಭವಾಗಿದೆ
ಯಾವುದೇ ಶುಭ ಕೆಲಸ ಮಾಡಬೇಕಾದರೆ ಒಳ್ಳೆಯ ದಿನ ಮತ್ತು ಸಮಯ ನೋಡುವುದು ವಾಡಿಕೆ. ಇದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೂ ವೈಜ್ಞಾನಿಕವಾಗಿಯೂ ಸತ್ಯ ಎಂದೇ ಹೇಳಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡುವುದಾದರೆ ಆ ದಿನದ ಆ ಸಮಯದಲ್ಲಿ ಗ್ರಹಗಳ ಚಲನೆಯನ್ನು ನೋಡಿ ಒಳ್ಳೆಯ ಸಮಯ ಎಂದು ನಿರ್ಧರಿಸಲಾಗುತ್ತದೆ. ಅದೇ ರೀತಿ ವೈಜ್ಞಾನಿಕವಾಗಿ ನೋಡಿದಾಗ ಅದೇ ಸಮಯದಲ್ಲಿ ಪಾಸಿಟಿವ್ ವೈಬ್ಸ್ ಇರುತ್ತದೆ ಎಂದು ನಂಬಲಾಗಿದೆ.

ಜ್ಯೋತಿಷ್ಯ ಶಾಸ್ತ್ರವನ್ನು ಎಷ್ಟು ನಂಬುತ್ತೇವೋ ಬಿಡುತ್ತೇವೋ ಆದರೆ ಒಳ್ಳೆಯ ಕೆಲಸ ಮಾಡಬೇಕಾದಾಗ ಒಳ್ಳೆಯ ಸಮಯದಲ್ಲೇ ಮಾಡಿದರೆ ಒಳ್ಳೆಯದು ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಈಗ ನಾವು ತೆಗೆದುಕೊಳ್ಳುವ ನಿರ್ಧಾರ ಮುಂದೊಂದು ದಿನ ನಮಗೆ ನಷ್ಟ ಮಾಡಿಬಿಟ್ಟರೆ ಎಂಬ ಹೆದರಿಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಯಾವುದ್ ಶುಭ ಕಾರ್ಯಕ್ರಮ ಇರಲಿ ಅದು ಮದುವೆ, ಮುಂಜಿ, ಗೃಹಪ್ರವೇಶ ದಂತಹ ವೈಯಕ್ತಿಕ ಕಾರ್ಯಕ್ರಮವೇ ಇರಲಿ ಅಥವಾ ಕಂಪನಿಯ ಆರಂಭ, ಕಟ್ಟಡದ ಗುದ್ದಲಿ ಪೂಜೆಯೇ ಇರಲಿ ಒಳ್ಳೆಯ ಸಮಯ ನೋಡಿಯೇ ಆರಂಭಿಸುತ್ತಾರೆ.
ಅಕ್ಟೋಬರ್ ತಿಂಗಳು ದಸರಾ ಅಥವಾ ನವರಾತ್ರಿಯ ತಿಂಗಳು. ಭಾರತದ ಬೇರೆ ಬೇರೆ ಕಡೆ ಇದನ್ನು ಅಲ್ಲಿನ ಸಂಸ್ಕೃತಿಗೆ ಅನುಗುಣವಾಗಿ ಆಚರಿಸುತ್ತಾರೆ. ಕರ್ನಾಟಕದಲ್ಲಂತೂ ದಸರಾ ನಾಡಹಬ್ಬ. ಮೈಸೂರಿನಲ್ಲಿ ಆಗುವ ದಸರಾ ಉತ್ಸವಕ್ಕೆ ಮುಖ್ಯವಾಗಿ ಜಂಬೂ ಸವಾರಿ ನೋಡಲು ಬಹಳ ಕಡೆಗಳಿಂದ ಜನ ಆಗಮಿಸುತ್ತಾರೆ.
ನವರಾತ್ರಿಯ ದಿನಗಳಂತೂ ಶುಭ ದಿನಗಳೇ ಆದರೆ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆಯಾಗಿ ಯಾವೆಲ್ಲಾ ದಿನಗಳು ಶುಭದಿನಗಳು ಮತ್ತು ಯಾವ ಸಮಯದಲ್ಲಿ ನೀವು ಕಾರ್ಯಕ್ರಮಗಳನ್ನು ಮಾಡಬಹುದು ಎನ್ನುವುದಕ್ಕಾಗಿ ಮಾಹಿತಿ ಇಲ್ಲಿದೆ.
ಅಕ್ಟೋಬರ್ ತಿಂಗಳ ಶುಭದಿನಗಳು ಮತ್ತು ಸಮಯ :
ಅಕ್ಟೋಬರ್ 1 - ಶುಭದಿನ - ರಾತ್ರೆ 8.34 ರ ತನಕದ ಅವಧಿ ಶುಭವಾಗಿದೆ.
ಅಕ್ಟೋಬರ್ 3 -ಶುಭದಿನ - ಸಂಜೆ 6.03 ರ ನಂತರ ಅವಧಿ ಸೂಕ್ತವಾಗಿದೆ.
ಅಕ್ಟೋಬರ್ 4 - ಶುಭದಿನ - ರಾತ್ರೆ 6.42 ರ ತನಕದ ಅವಧಿ ಶುಭವಾಗಿದೆ.
ಅಕ್ಟೋಬರ್ 7 - ಶುಭದಿನ
ಅಕ್ಟೋಬರ್ 8 - ಶುಭದಿನ
ಅಕ್ಟೋಬರ್ 15 -ಶುಭದಿನ - ಬೆಳಗ್ಗೆ 10.23 ರ ನಂತರ ಅವಧಿ ಶುಭವಾಗಿದೆ.
ಅಕ್ಟೋಬರ್ 16 - ಶುಭದಿನ - ಸಂಜೆ 7.34 ರ ತನಕ
ಅಕ್ಟೋಬರ್ 17 - ಶುಭದಿನ - 8.30 ರ ನಂತರದ ಅವಧಿ ಯೋಗ್ಯವಾಗಿದೆ.
ಅಕ್ಟೋಬರ್ 18 - ಶುಭದಿನ - ಮಧ್ಯಾಹ್ನ 1.22 ರ ತನಕದ ಅವಧಿ ಶುಭ ಸಮಯ
ಅಕ್ಟೋಬರ್ 22 - ಶುಭದಿನ - ಬೆಳಗ್ಗೆ 8.58 ರ ನ ನಂತರದ ಅವಧಿ ಶುಭವಾಗಿದೆ.
ಅಕ್ಟೋಬರ್ 23 - ಶುಭದಿನ
ಅಕ್ಟೋಬರ್ 24 - ಶುಭದಿನ
ಅಕ್ಟೋಬರ್ 25 - ಶುಭದಿನ - ಮಧ್ಯಾಹ್ನ 12.32 ರ ನಂತರದ ಅವಧಿ ಶುಭವಾಗಿದೆ.
ಅಕ್ಟೋಬರ್ 31 - ಶುಭದಿನ ಬೆಳಗ್ಗೆ 9.51 ರ ತನಕದ ಅವಧಿ
ವ್ಯಾವಹಾರಿಕವಾಗಿ, ನೀವು ಯಾವುದೇ ಹೊಸ ವಹಿವಾಟನ್ನು ಆರಂಭಿಸುವುದಾದರೇ ಅಕ್ಟೋಬರ್ 21 (ಬೆಳಗ್ಗೆ 7.00 ರಿಂದ ಮಧ್ಯಾಹ್ನ 1.00) ಮತ್ತು 31 (ಬೆಳಗ್ಗೆ 7.15 ರಿಂದ 9.51) ನ್ನು ಆರಿಸಿಕೊಳ್ಳಬಹುದು.
ಹೊಸ ಜಾಗ ಖರೀದಿ ಅಥವಾ ಕಟ್ಟಡ ಖರೀದಿಗಾಗಿ ಅಕ್ಟೋಬರ್ ನ ಈ ದಿನ ಮತ್ತು ಸಮಯವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ:
ಅಕ್ಟೋಬರ್ 5 - ಬೆಳಗ್ಗೆ 6.32 ರಿಂದ ಸಂಜೆ 7.40 ರ ತನಕದ ಅವಧಿ ಮಂಗಳಕರವಾಗಿದೆ.
ಅಕ್ಟೋಬರ್ 6 - ರಾತ್ರೆ - 9.32 ರಿಂದ ಮರುದಿನ (ಅಕ್ಟೋಬರ್ 7) ಬೆಳಗ್ಗೆ 6.33 ರ ತನಕದ ಅವಧಿ ಶುಭಕರವಾಗಿದೆ.
ಅಕ್ಟೋಬರ್ 12 - ಬೆಳಗ್ಗೆ 6.35 - 11.36 ಶುಭಕರವಾಗಿದೆ.
ಅಕ್ಟೋಬರ್ 19 - ರಾತ್ರೆ 9.40 ರಿಂದ ಮರುದಿನ (ಅಕ್ಟೋಬರ್ 20) ಬೆಳಗ್ಗೆ 6.38 ರ ತನಕದ ಅವಧಿ ಚೆನ್ನಾಗಿದೆ.
ಅಕ್ಟೋಬರ್ 20 - ಬೆಳಗ್ಗೆ 6.38 ರಿಂದ ಮರುದಿನ (ಅಕ್ಟೋಬರ್ 21) ಬೆಳಗ್ಗೆ 6.39 ರ ತನಕದ ಅವಧಿ ಶುಭವಾಗಿದೆ.
ಅಕ್ಟೋಬರ್ 26 - ಬೆಳಗ್ಗೆ 6.41 - 11.27 ರ ಸಮಯ ಯೋಗ್ಯವಾಗಿದೆ.
ಅಕ್ಟೋಬರ್ 27 - ಬೆಳಗ್ಗೆ9.25 ರಿಂದ ಮರುದಿನ (ಅಕ್ಟೋಬರ್ 28) ಬೆಳಗ್ಗೆ 4.17 ರ ತನಕದ ಅವಧಿ ಶುಭವಾಗಿದೆ.
ವಾಹನ ಖರೀದಿಯ ಯೋಚನೆ ಇದ್ದಲ್ಲಿ ಈ ತಿಂಗಳಿನ ಎರಡು ದಿನಗಳು ಉತ್ತಮವಾಗಿವೆ.
ಅಕ್ಟೋಬರ್ 23 - ಸಂಜೆ 5.44 ರಿಂದ ಮರುದಿನ (ಅಕ್ಟೋಬರ್ 24) ಬೆಳಗ್ಗೆ 6.40 ರ ಸಮಯ ಬಹಳ ಉತ್ತಮವಾಗಿದೆ.
ಅಕ್ಟೋಬರ್ 25 - ಬೆಳಗ್ಗೆ 6.40 ರಿಂದ ಮಧ್ಯಾಹ್ನ 12.32 ರ ತನಕದ ಸಮಯ ಶುಭವಾಗಿದೆ.



Click it and Unblock the Notifications