Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಆಗಸ್ಟ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು, ವಿಶೇಷ ದಿನದ ಸಂಪೂರ್ಣ ಮಾಹಿತಿ
ಆಗಸ್ಟ್ ಎಂದರೆ ಏನೋ ಸಂಭ್ರಮ , ಏಕೆಂದರೆ ಆ ಮಾಸದಿಂದ ಅಲ್ವೇ ಹಬ್ಬಗಳು ಶುರುವಾಗುವುದು. ನಾಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ, ವರಲಕ್ಷ್ಮಿ ವ್ರತ ಹೀಗೆ ಸಾಲು ಸಾಲು ಹಬ್ಬಗಳ ಮಾಸವಿದು. ಇದರ ಜೊತೆಗೆ ವ್ರತಗಳು, ಶ್ರಾವಣ ಸೋಮವಾರ, ರಕ್ಷಾ ಬಂಧನ, ಸ್ನೇಹಿತರ ದಿನ ಹೀಗೆ ಹಲವು ಆಚರಣೆಗಳಿಂದಾಗಿ ಈ ಮಾಸ ತುಂಬಾನೇ ವಿಶೇಷವಾಗಿದೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆ, ಸ್ತನಪಾನ ವಾರ ಎಲ್ಲವೂ ಇದೇ ಮಾಸದಲ್ಲಿದೆ. ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

ನಾಗ ಪಂಚಮಿ : ಆಗಸ್ಟ್ 9ಕ್ಕೆ ಆಚರಿಸಲಾಗುವುದು
ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 15
ವರಲಕ್ಷ್ಮಿ ವ್ರತ ಅರಂಭ: ಆಗಸ್ಟ್ 16
ರಕ್ಷಾ ಬಂಧನ: ಆಗಸ್ಟ್ 19
ಕೃಷ್ಣ ಜನ್ಮಾಷ್ಟಮಿ: ಆಗಸ್ಟ್ 26
ನಾಗರ ಪಂಚಮಿ : ಎಲ್ಲಾ ಹಬ್ಬಗಳಿಗೆ ಮುನ್ನಡಿಯಾಗಿ ನಾಗರ ಪಂಚಮಿ ಹಬ್ಬ ಬರುತ್ತದೆ, ನಾಗರ ಪಂಚಮಿ ಹಬ್ಬವನ್ನು ಅಗಸ್ಟ್ 9ರಂದು ಆಚರಿಸಲಾಗುವುದು. ಈ ದಿನ ನಾಗನಿಗೆ ಪೂಜೆಸಿ ಹಬ್ಬವನ್ನು ಆಚರಿಸಲಾಗುವುದು, ಅದರಲ್ಲಿಯೂ ಹೆಣ್ಮಕ್ಕಳಿಗೆ ಸಡಗರದ ಹಬ್ಬವಾಗಿದೆ.
ಸ್ವಾತಂತ್ರ್ಯ ದಿನಾಚರಣೆ: ದೇಶದ ಪ್ರತಿಯೊಬ್ಬ ಪ್ರಜೆಗೂ ಸಡಗರದ ದಿನ. ನಾವಿಂದು ಭಾರತದಲ್ಲಿ ದೇಶದಲ್ಲಿ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರೆ ಈ ಸ್ವಾತಂತ್ರ್ಯ ತಂದುಕೊಡಲು ಸಾವಿರಾರು ಮಹಾನ್‌ಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿ ಗಳಿಸಿಕೊಟ್ಟಿರುವುದು. ನಮ್ಮ ದೇಶವನ್ನು ನಮ್ಮ ಉಸಿರು ಇರುವವರೆಗೆ ಪ್ರೀತಿಸುವುದು, ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ.
ವರಲಕ್ಷ್ಮಿ ವ್ರತ: ಮಹಿಳೆಯರು ಸಡಗರದ ಹಬ್ಬ, ಈ ದಿನ ಉಪವಾಸವಿದ್ದು ಮಹಿಳೆಯರು ಲಕ್ಷ್ಮಿಯನ್ನು ಆರಾಧನೆ ಮಾಡುತ್ತಾರೆ. ಈ ಲಕ್ಷ್ಮಿ ವ್ರತವನ್ನು ವಿವಾಹವಾಗಿ 5 ವರ್ಷದವರೆಗೆ ಆಚರಿಸುತ್ತಾರೆ.
ರಕ್ಷಾ ಬಂಧನ: ಸಹೋದರ-ಸಹೋದರಿಯ ಬಾಂಧವ್ಯದ ಮಹತ್ವ ಸಾರುವ ದಿನ, ಈ ದಿನ ಸಹೋದರಿ ಸಹೋದರನ ಕೈಗೆ ರಾಖಿ ಕಟ್ಟಿ ಸಹೋದರ ಆಯುಸ್ಸು, ಐಶ್ವರ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾನೆ.
ಕೃಷ್ಣ ಜನ್ಮಾಷ್ಟಮಿ: ಹಿಂದೂಗಳ ಪ್ರಮುಖ ಅಚರಣೆಯಾದ ಕೃಷ್ಣ ಜನ್ಮಾಷ್ಟಮಿಯಂದು ಶ್ರೀ ಕೃಷ್ಣನನ್ನು ಅರಾಧನೆ ಮಾಡಲಾಗುವುದು. ಈ ದಿನ ಮಕ್ಕಳಿಗೆ ಕೃಷ್ಣ-ರಾಧೆಯರ ವೇಷ ಹಾಕಿ ಅವರನ್ನು ನೋಡುವುದೇ ಚೆಂದ.
ಆಗಸ್ಟ್‌ನಲ್ಲಿ ಈ ಪ್ರಮುಖ ಹಬ್ಬಗಳ ಜೊತೆಗೆ ಈ ವ್ರತಗಳಿವೆ, ಈ ದಿನಗಳು ತುಂಬಾನೇ ವಿಶೇಷವಾಗಿದೆ:
ಆಗಸ್ಟ್ 1: ಪ್ರದೋಷ ವ್ರತ
ಆಗಸ್ಟ್ 4: ಆಷಾಢ ಅಮವಾಸ್ಯೆ
ಆಗಸ್ಟ್ 4: ಫ್ರೆಂಡ್‌ಶಿಪ್ ಡೇ (ಸ್ನೇಹಿತರ ದಿನ)
ಆಗಸ್ಟ್ 5: ಶ್ರಾವಣ ಸೋಮವಾರ
ಆಗಸ್ಟ್ 8: ವಿನಾಯಕ ಚತುರ್ಥಿ
ಆಗಸ್ಟ್ 12: ಶ್ರಾವಣ ಸೋಮವಾರ
ಆಗಸ್ಟ್ 16: ವರಲಕ್ಷ್ಮಿ ವ್ರತ
ಆಗಸ್ಟ್ 16: ಶ್ರಾವಣ ಪುತ್ರದಾ ಏಕಾದಶಿ
ಆಗಸ್ಟ್ 17: ಶನಿ ತ್ರಯೋದಶಿ
ಆಗಸ್ಟ್ 17: ಪ್ರದೋಷ ವ್ರತ
ಆಗಸ್ಟ್ 19: ರಾಖಿ ಹಬ್ಬ
ಆಗಸ್ಟ್ 19: ಶ್ರಾವಣ ಸೋಮವಾರ
ಆಗಸ್ಟ್ 19: ಯಜುರ್ವೆದ ಉಪಕರ್ಮ
ಆಗಸ್ಟ್ 19: ಹಯಗ್ರೀವ ಜಯಂತಿ
ಆಗಸ್ಟ್ 24: ಬಾಲರಾಮ ಜಯಂತಿ
ಆಗಸ್ಟ್ 27: ಮೊಸರು ಕುಡಿಕೆ ಒಡೆಯುವುದು
ಆಗಸ್ಟ್ 29: ಶ್ರಾವಣ ಸೋಮವಾರ
ಆಗಸ್ಟ್ 31 ಪ್ರದೋಷ ವ್ರತ
ಆಗಸ್ಟ್‌ನಲ್ಲಿರುವ ಮತ್ತಿತರ ವಿಶೇಷ ದಿನಗಳು
ಆಗಸ್ಟ್ 1 : ವರ್ಲ್ಡ್ ವೈಡ್ ವೆಬ್ ಡೇ
ಆಗಸ್ಟ್ 1: ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ
ಆಗಸ್ಟ್: ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ
ಆಗಸ್ಟ್ 1-7: ವಿಶ್ವ ಸ್ತನಪಾನ ವಾರ
ಆಗಸ್ಟ್ 4 : ಸ್ನೇಹಿತರ ದಿನ
ಆಗಸ್ಟ್ 6: ಹಿರೋಶಿಮಾ ದಿನ
ಆಗಸ್ಟ್ 7: ರಾಷ್ಟ್ರೀಯ ಕೈ ಮಗ್ಗದ ದಿನ
ಆಗಸ್ಟ್ 12: ಇಂಟರ್‌ನ್ಯಾಷನಲ್ ಯೂತ್ ಡೇ
ಆಗಸ್ಟ್ 13: ಅಂತರರಾಷ್ಟ್ರೀಯ ಎಡಗೈಗಳ ದಿನ
ಆಗಸ್ಟ್ 19: ವಿಶ್ವ ಮಾನವೀಯತೆ ದಿನ
ಆಗಸ್ಟ್ 20: ವಿಶ್ವ ಸೊಳ್ಳೆಗಳ ದಿನ
ಆಗಸ್ಟ್ 26: ಮಹಿಳಾ ಸಮಾನತೆ ದಿನ
ಅಗಸ್ಟ್ 30: ರಾಷ್ಟ್ರೀಯ ಚಿಕ್ಕ ಕೈಗಾರಿಗಳ ದಿನ



Click it and Unblock the Notifications
