Latest Updates
-
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ!
ಮಾಸ ಭವಿಷ್ಯ: ಕನ್ಯಾ ರಾಶಿಯವರೇ ಆಗಸ್ಟ್ ತಿಂಗಳು ನಿಮ್ಮ ರಾಶಿಫಲ ಹೇಗಿದೆ ನೋಡಿ
ಗ್ರಹಗತಿಗಳ ಸ್ಥಾನದ ಪ್ರಕಾರ ಆಗಸ್ಟ್ ತಿಂಗಳು ಕನ್ಯಾ ರಾಶಿಯವರಿಗೆ ಹೇಗೆ ಇರಲಿದೆ ಎಂದು ಹೇಳಲಾಗಿದೆ. ಕನ್ಯಾ ರಾಶಿಯವರಲ್ಲಿ ಗುರು ಮತ್ತು ರಾಹು 8ನೇ ಮನೆಯಲ್ಲಿ ಶನಿಯು 6ನೇ ನಮೆನಯಲ್ಲಿದೆ. ಅಲ್ಲದೆ ಕೇತು 2ನೇ ಮನೆಯಲ್ಲಿದೆ, ಶನಿಯು 6ನೇ ಸ್ಥಾನದಲ್ಲಿ ಇರುವುದರಿಂದ ಈ ಅವಧಿ ನಿಮಗೆ ಅನುಕೂಲಕರವಾಗಿದೆ ಆದರೆ ಹಿಮ್ಮುಖ ಚಲನೆಯಲ್ಲಿ ಇರುವುದರಿಂದ ಕೆಲಸ-ಕಾರ್ಯಗಳಲ್ಲಿ ಸ್ವಲ್ಪ ವಿಳಂಬ ಉಂಟಾಗಬಹುದು.
ಶುಕ್ರ 11ನೇ ಮನೆಯಲ್ಲಿ ಹಿಮ್ಮುಖ ಸ್ಥಾನದಲ್ಲಿದೆ. ಈ ಗ್ರಹಗಳ ಸ್ಥಾನವೂ ನಿಮಗೆ ಈ ತಿಂಗಳಿನಲ್ಲಿ ಮಿಶ್ರಫಲ ನೀಡಲಿದೆ. ಈ ತಿಂಗಳು ಕನ್ಯಾ ರಾಶಿಯವರಿಗೆ ಹೇಗೆ ಇರಲಿದೆ ಎಂದು ನೋಡುವುದಾದರೆ...

ವೃತ್ತಿ ಜೀವನ
ವೃತ್ತಿ ಜೀವನದಲ್ಲಿ ನಿಮಗೆ ಮಿಶ್ರಫಲ. ಗುರು ಹಾಗೂ ಶುಕ್ರನ ಸ್ಥಾನ ನಿಮಗೆ ಶುಭ ಫಲ ನೀಡಲಿದೆ, ಆದರೆ ಶನಿಯು ಆರನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರುವುದರಿಂದ ಕೆಲಸ ಕಾರ್ಯಗಳು ಸ್ವಲ್ಪ ವಿಳಂಬವಾಗಬಹುದು. ವ್ಯಾಪಾರಸ್ಥರು ಈ ಅ ಅವಧಿಯಲ್ಲಿ ಮಧ್ಯಮ ಲಾಭವನ್ನು ಪಡೆಯಬಹುದು. ಉದ್ಯೋಗಸ್ಥರು ಕೆಲ ಒತ್ತಡ ಸ್ಥಿತಿ ಎದುರಿಸಬಹುದು. ನಿಮ್ಮೆಲ್ಲಾ ಕಾರ್ಯಗಳನ್ನು ಮುಂಚಿತವಾಗಿ ಪ್ಲ್ಯಾನ್ ಮಾಡಿ ಮಾಡಿದರೆ ಪ್ರಯೋಜನ ಸಿಗಲಿದೆ. ಈ ಅವಧಿಯಲ್ಲಿ ಪಾಲಿದಾರಿಕೆ ವ್ಯವಹಾರ ಮಾಡುತ್ತಿರುವವರು ಮಧ್ಯಮ ಲಾಭವನ್ನು ಪಡೆಯಬಹುದು.
ಆರ್ಥಿಕ ಜೀವನ
ಈ ತಿಂಗಳ ನಿಮ್ಮ ಆರ್ಥಿಕ ಜೀವನದ ಬಗ್ಗೆ ನೋಡುವುದಾದರೆ ರಾಹು ಮತ್ತು ಗುರು ಮನೆಯಲ್ಲಿ ಇರುವುದರಿಂದ ಖರ್ಚು ಹೆಚ್ಚಿರಲಿದೆ. ಶುಕ್ರನ ಸ್ಥಾನದಿಂದ ಧನಹಾನಿ ಉಂಟಾಗುವುದು. ಅಗ್ಯತ ವಸ್ತುಗಳನ್ನು ಖರೀದಿಸಲು ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುವುದು. ವ್ಯಾಮ್ಮ ಆರೋಗ್ಯಪಾರಸ್ಥರು ಈ ತಿಂಗಳು ನಿರೀಕ್ಷಿಸಿದ ಲಾಭ ಪಡೆಯಲು ಕಷ್ಟವಾಗುವುದು.
ಆರೋಗ್ಯ
ನಿಮ್ಮ ಆರೋಗ್ಯ ಬಗ್ಗೆ ಹೇಳುವುದಾದರೆ ಈ ತಿಂಗಳು ಕೆಲ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ರಾಹು ಮತ್ತು ಕೇತು 8ನೇ ಮನೆಯಲ್ಲಿದೆ ಇದರಿಂದಾಗಿ ಜೀರ್ಣಕ್ರಿಯೆ ಹಾಗೂ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಬಹುದು. ನೀವು ನಿಮ್ಮ ಆಹಾರಕ್ರಮ ಹಾಗೂ ವ್ಯಾಯಾಮದ ಕಡೆ ಗಮನಹರಿಸುವುದು ಒಳ್ಳೆಯದು.
ಪ್ರೀತಿ, ಮದುವೆ, ಕುಟುಂಬ ಜೀವನ
ಪ್ರೇಮ ಹಾಗೂ ವೈವಾಹಿಕ ಜೀವನದಲ್ಲಿ ನಿಮ್ಮ ಹಾಗೂ ಸಂಗಾತಿ ನಡುವೆ ಸ್ವಲ್ಪ ಅಂತರ ಉಂಟಾಗಬಹುದು. ಭಾವನಾತ್ಮಕವಾಗಿ ಹೊಂದಾಣಿಕೆಯ ಕೊರತೆ ಉಂಟಾಗಬಹುದು. ಈ ಅವಧಿಯಲ್ಲಿ ಸಮಧಾನದಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಸಮಸ್ಯೆ ದೊಡ್ಡದಾಗುವುದು ತಡೆಗಟ್ಟಬಹುದು. ಕುಟುಂಬದಲ್ಲಿಯೂ ಸಣ್ಣ ಪುಟ್ಟ ಸಮಸ್ಯೆಗಳಿಂದಾಗಿ ನೆಮ್ಮದಿ ಹಾಳಾಗುವುದು. ಚಿಕ್ಕ ವಿಷಯವನ್ನು ದೊಡ್ಡದು ಮಾಡಲು ಹೋಗಬೇಡಿ.
ಪರಿಹಾರ
- ಶ್ರೀಗಣೇಶನಿಗೆ ಪ್ರತಿದಿನ ಪೂಜೆ ಮಾಡಿ
- ಶನಿವಾರ ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಅರ್ಪಿಸಿ.



Click it and Unblock the Notifications