Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಮಾಸ ಭವಿಷ್ಯ: ಸಿಂಹ ರಾಶಿಯವರೇ ಆಗಸ್ಟ್ ತಿಂಗಳು ನಿಮಗೆ ಅದ್ಭುತವಾಗಿದೆ
ಗ್ರಹಗತಿಗಳ ಸ್ಥಾನದ ಪ್ರಕಾರ ಆಗಸ್ಟ್ ತಿಂಗಳು ಸಿಂಹ ರಾಶಿಯವರಿಗೆ ಹೇಗೆ ಇರಲಿದೆ ಎಂದು ಹೇಳಲಾಗಿದೆ. ಸಿಂಹ ರಾಶಿಯವರಲ್ಲಿ ಗುರು ಒಂಭತ್ತನೇ ಮನೆಯಲ್ಲಿ ಶನಿ 7ನೇ ಮನೆಯಲ್ಲಿ, ರಾಹು ಒಂಭತ್ತನೇ ಮನೆಯಲ್ಲಿದೆ.
ಅಲ್ಲದೆ ಶುಕ್ರ ಗ್ರಹ 8ನೇ ಮನೆಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿದೆ, ಬುಧ ಕೂಡ ಆಗಸ್ಟ್ 24ರಿಂದ ಈ ಸಂಚಾರ ಹಿಮ್ಮುಖ ಚಲನೆ ಪ್ರಾರಂಭಿಸಲಿದೆ. ಈ ಗ್ರಹಗತಿಗಳ ಚಲನೆ ಸಿಂಹ ರಾಶಿಯವರ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ ಎಂದು ನೋಡುವುದಾದರೆ...

ಈ ತಿಂಗಳು ಗುರುವಿನ ದೆಸೆಯಿಂದ ನಿಮಗೆ ಅತ್ಯುತ್ತಮವಾಗಿದೆ, ಆದರೆ ಶನಿಯ ಸ್ಥಾನದಿಂದಾಗಿ ಕೆಲ ಸಮಸ್ಯೆಗಳು ಉಂಟಾಗಬಹುದು, ಆದರೆ ಗುರುವಿನ ಬಲವಾದ ಸ್ಥಾನದಿಂದಾಗಿ ಯಾವುದೇ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಈ ಅವಧಿ ಆರ್ಥಿಕ ದೃಷ್ಟಿಯಿಂದ, ಕುಟುಂಬ ಜೀವನದ ದೃಷ್ಟಿಯಿಂದ ನೋಡುವುದಾದರೆ ಉತ್ತಮವಾಗಿದೆ.
ವೃತ್ತಿ ಜೀವನ
ಸಿಂಹ ರಾಶಿಯವರಿಗೆ ಗುರುವಿನ ಸ್ಥಾನದಿಂದ ವೃತ್ತಿ ಜೀವನ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಬಡ್ತಿ ಪಡೆಯುವಿರಿ. ಶನಿಯು 7ನೇ ಸ್ಥಾನದಲ್ಲಿ ಇರುವುದರಿಂದ ವೃತ್ತಿ ಜೀವನದಲ್ಲಿ ಕೆಲ ಸವಾಲುಗಳನ್ನೂ ಎದುರಿಸಬಹುದು. ವೃತ್ತಿ ಜೀವನದಲ್ಲಿ ಎಲ್ಲಾ ಕೆಲಸವನ್ನು ಮೊದಲೇ ಯೋಜನೆ ಹಾಕಿ ಅದರಂತೆ ಪೂರ್ಣಗೊಳಿಸಲು ಪ್ರಯತ್ನಿಸುವುದು ಒಳ್ಳೆಯದು.
ವ್ವಹಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರಿಗೂ ಅವಧಿ ಅನುಕೂಲಕರವಾಗಿದೆ, ಹೊಸ ಹೂಡಿಕೆಗೆ ಈ ಅವಧಿ ಅನುಕೂಲಕರವಾಗಿದೆ.
ಆರ್ಥಿಕ ಜೀವನ
ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳು ನಿಮಗೆ ಉತ್ತಮವಾಗಿದೆ. ಆದರೆ ಶನಿಯ ಸ್ಥಾನದಿಂದಾಗಿ ಅನಗ್ಯತ ಖರ್ಚುಗಳೂ ಉಂಟಾಗಲಿದೆ. ಈ ತಿಂಗಳು ನಿಮ್ಮ ಸಂಗಾತಿಯ ಆರೋಗ್ಯ ಸಮಸ್ಯೆಯಿಂದಾಗಿ ಅಧಿಕ ಹಣ ಖರ್ಚಾಗುವುದು., ಈ ಅವಧಿಯಲ್ಲಿ ಯಾವುದೇ ಹೊಸ ವ್ಯವಹಾರಕ್ಕೆ ಕೈ ಹಾಕಲು ಹೋಗಬೇಡಿ. ಬುಧ ಮೊದಲನೇ ಮನೆಯಲ್ಲಿ ಇರುವುದರಿಂದ ಈ ಸ್ಥಾನ ನಿಮಗೆ ಅನುಕೂಲಕರವಲ್ಲ. ಈ ಅವಧಿಯಲ್ಲಿ ಆರೋಗ್ಯದ ಕಾರಣಕ್ಕೆ ಅಧಿಕ ಹಣ ಖರ್ಚು ಉಂಟಾಗುವುದು.
ಆರೋಗ್ಯ ಜೀವನ
ಗುರು 9ನೇ ಸ್ಥಾನದಲ್ಲಿ ಇರುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನೀವು ಹೆಚ್ಚು ಲವಲವಿಕೆಯಿಂದ ಕೂಡಿರುತ್ತೀರಿ. ಆರೋಗ್ಯ ಉತ್ತಮವಾಗಿರುವುದರಿಂದ ನಿಮ್ಮ ಕೆಲಸ ಕಾರ್ಯಗಳ ಕಡೆ ಗಮನಹರಿಸಲು ಸಾಧ್ಯವಾಗುವುದು.
ಪ್ರೀತಿ, ಮದುವೆ, ಕುಟುಂಬ ಜೀವನ
ಪ್ರೀತಿ ಹಾಗೂ ವೈವಾಹಿಕ ಜೀವನಕ್ಕೆ ಈ ಅವಧಿ ಅನುಕೂಲಕರವಾಗಿದೆ. ಪ್ರೇಮಿಗಳು ಮದುವೆಯಾಗಲು ಬಯಸಿದರೆ ಈ ಅವಧಿಯಲ್ಲಿ ನಿಮ್ಮ ಮನೆಯವರ ಒಪ್ಪಿಗೆ ಪಡೆಯಲು ಸಾಧ್ಯವಾಗುವುದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆದರೆ ಶುಕ್ರ ಹಿಮ್ಮುಖ ಚಲನೆಯಲ್ಲಿರುವುದರಿಂದ ಪ್ರೇಮ, ವೈವಾಹಿಕ ಜೀವನದಲ್ಲಿ ಅತೃಪ್ತಿ ಉಂಟಾಗುವುದು.
ಕುಟುಂಬ ಜೀವನ: ಕುಟುಂಬ ಜೀವನ ಚೆನ್ನಾಗಿರಲಿದೆ ಆದರೆ ಬುಧ ಹಿಮ್ಮುಖ ಚಲನೆಯಲ್ಲಿರುವಾಗ ಕುಟುಂಬ ಜೀವನದಲ್ಲಿ ಕೆಲ ಸಮಸ್ಯೆಗಳು ಕಂಡು ಬರಬಹುದು.
ಪರಿಹಾರ:
- ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
- ಆದಿತ್ಯ ಹೃದಯಂ ಸ್ತೋತ್ರ ಪಠಿಸಿ.



Click it and Unblock the Notifications











