Latest Updates
-
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ?
ಆಗಸ್ಟ್ ತಿಂಗಳು ಮಿಥುನ ರಾಶಿಯವರಿಗೆ ಅನುಕೂಲಕರವಾಗಿದೆ ನೋಡಿ
ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಮಿಥುನ ರಾಶಿಯವರ ಆಗಸ್ಟ್ ತಿಂಗಳ ಭವಿಷ್ಯವನ್ನು ನೀಡಲಾಗಿದ್ದು ಆಗಸ್ಟ್ ತಿಂಗಳು ಮಿಥುನ ರಾಶಿಯವರಿಗೆ ಹೇಗೆ ಇರಲಿದೆ ಎಂದು ನೋಡೋಣ ಬನ್ನಿ:
ಲಾಭದಾಯಕ ಗ್ರಹವಾದ ಗುರು ಮಿಥುನ ರಾಶಿಯವರ 11ನೇ ಮನೆಯಲ್ಲಿದ್ದು ಈ ಸ್ಥಾನ ನಿಮಗೆ ಅನುಕೂಲಕರವಾಗಿದೆ, ಇದರ ಸ್ಥಾನದಿಂದ ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ಮಂಗಳ ನಿಮ್ಮ ನಾಲ್ಕನೇ ಮನೆಯಲ್ಲಿ ಇರುವುದರಿಂದ ಆರೋಗ್ಯ, ಒತ್ತಡ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಬುಧ ನಿಮ್ಮ ಅನುಕೂಲಕರ ಸ್ಥಾನದಲ್ಲಿ ಇರಲಿದೆ, ಆದರೆ ಬುಧ ಹಿಮ್ಮುಖ ಚಲನೆಯಲ್ಲಿರುವಾಗ ಹಣಕಾಸಿನ ತೊಂದರೆ ಕಾಣಿಸಬಹುದು.

ಗ್ರಹಗತಿಗಳ ಸ್ಥಾನದ ಪ್ರಕಾರ ಆಗಸ್ಟ್ ತಿಂಗಳು ಮಿಥುನ ರಾಶಿಯವರಿಗೆ ಹೇಗಿರಲಿದೆ ಎಂದು ವಿವರವಾಗಿ ನೋಡುವುದಾದರೆ...
ವೃತ್ತಿಜೀವನ
ವೃತ್ತಿ ಜೀವನದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ, ಈ ಅವಧಿಯಲ್ಲಿ ಹೊಸ ಉದ್ಯೋಗ ಅವಕಾಶವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ಕೆಲಸದಲ್ಲಿ ಪ್ರಗತಿ ಪಡೆಯುತ್ತೀರಿ. ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಈ ಅವಧಿಯಲ್ಲಿ ಶುಭ ಸುದ್ದಿ ಸಿಗಲಿದೆ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಗುರುತಿಸಿಕೊಳ್ಳುವಿರಿ, ಉತ್ತಮ ಪ್ರಗತಿ ಕಾಣುವಿರಿ.
ಆರ್ಥಿಕ ಜೀವನ
ಈ ತಿಂಗಳು ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ಹನ್ನೊಂದನೇ ಮನೆಯಲ್ಲಿ ಗುರು ಇರುವುದರಿಂದ ಆರ್ಥಿಕ ಲಾಭ ಉಂಟಾಗಲಿದೆ. ಗುರುವಿನ ಅನುಕೂಲಕರ ಸ್ಥಾನದಿಂದಾಗಿ ಈ ಅವಧಿಯಲ್ಲಿ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ, ಅಲ್ಲದೆ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯಬಹುದು.
ಆರೋಗ್ಯ
ಗುರು 11ನೇ ಮನೆಯಲ್ಲಿ ಇರುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಕೇತು ಐದನೇ ಮನೆಯಲ್ಲಿರುವುದರಿಂದ, ನೀವು ಆತಂಕ ಮತ್ತು ಅಸುರಕ್ಷಿತತೆಯನ್ನು ಅನುಭವಿಸಬಹುದು. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.
ಪ್ರೀತಿ, ವೈವಾಹಿಕ ಜೀವನ
ಪ್ರೇಮಿಗಳಿಗೆ, ವಿವಾಹಿತರಿಗೆ ಈ ತಿಂಗಳು ಅನುಕೂಲಕರವಾಗಿದೆ. ನೀವು ಹಾಗೂ ಸಂಗಾತಿ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ. ಈ ಅವಧಿಯಲ್ಲಿ ಅವಾಹಿತರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಶುಭ ಕಾರ್ಯ ಶೀಘ್ರದಲ್ಲಿಯೇ ನೆರವೇರಲಿದೆ.
ಮಿಥುನ ರಾಶಿಯ ಅಧಿಪತಿ ಬುಧ, ಗುರು, ರಾಹುವಿನ ಸಂಯೋಗವು ಉತ್ತಮ ಸ್ಥಾನದಲ್ಲಿದೆ. ಇದರಿಂದಾಗಿ ಕುಟುಂಬದ ಎಲ್ಲ ಸದಸ್ಯರ ನಡುವೆ ಉತ್ತಮ ಹೊಂದಾಣಿಕೆಯನ್ನು ಕಾಪಾಡಿಕೊಳ್ಳುವ ಸಾಧ್ಯತೆಯಿದೆ.
ಪರಿಹಾರ
*ವಿಘ್ನ ನಿವಾರಕನ ಆರಾಧಿಸಿ



Click it and Unblock the Notifications