Latest Updates
-
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ?
ಆಗಸ್ಟ್ ತಿಂಗಳು ಕರ್ಕ ರಾಶಿಯವರೇ ಈ ವಿಷಯದಲ್ಲಿ ಜಾಗ್ರತೆ!
ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಕರ್ಕ ರಾಶಿಯವರ ಆಗಸ್ಟ್ ತಿಂಗಳ ಭವಿಷ್ಯವನ್ನು ನೀಡಲಾಗಿದ್ದು ಆಗಸ್ಟ್ ತಿಂಗಳು ಕರ್ಕ ರಾಶಿಯವರಿಗೆ ಹೇಗೆ ಇರಲಿದೆ ಎಂದು ನೋಡೋಣ ಬನ್ನಿ:
ಕರ್ಕ ರಾಶಿಯವರಲ್ಲಿ ಗುರು 10ನೇ ಮನೆಯಲ್ಲಿದೆ,ಶನಿಯು ಕರ್ಕ ರಾಶಿಯ 8ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನೀವು ವೃತ್ತಿ ಜೀವನದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ನಾಲ್ಕನೇ ಮನೆಯಲ್ಲಿ ಕೇತುವಿನ ಸ್ಥಾನವಿದೆ, ಮಂಗಳನು 3ನೇ ಮನೆಯಲ್ಲಿ ಇದೆ. ಈ ಗ್ರಹಗಳ ಸ್ಥಾನದಿಂದ ಈ ತಿಂಗಳು ಹೇಗಿರಲಿದೆ ಎಂದು ನೋಡೋಣ ಬನ್ನಿ:

ವೃತ್ತಿ ಜೀವನ
ಗುರು 10ನೇ ಮನೆಯಲ್ಲಿ ಇರುವುದರಿಂದ ಈ ಸಂಚಾರ ನಿಮಗೆ ಅನುಕೂಲಕರವಲ್ಲ ಶನಿಯು 8ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರುವುದರಿಂದ ಈ ಅವಧಿ ನೀವು ಹೆಚ್ಚು ಗಮನಹರಿಸಬೇಕಾಗಿದೆ. ಉದ್ಯೋಗ ಬದಲಾವಣೆಯಾಗಬಹುದು, ವೃತ್ತಿ ಜೀವನದಲ್ಲಿ ಅನೇಕ ಏಳು ಬೀಳು ಉಂಟಾಗಬಹುದು. ಕೆಲವರಿಗೆ ಕೆಲಸದಲ್ಲಿ ಹಲವು ಬದಲಾವಣೆಗಳಾಗಬಹುದು, ಇನ್ನು ಕೆಲವರು ಕೆಲಸ ಕಳೆದುಕೊಳ್ಳಬಹುದು. ಆದರೆ ಮಂಗಳ ನಿಮಗೆ ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ನಿಮ್ಮೆಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದು.
ವ್ಯಾಪಾರಸ್ಥರು ಈ ತಿಂಗಳು ಬಯಸಿದ ಲಾಭ ಪಡೆಯಲು ಕಷ್ಟವಾಗಬಹುದು. ಈ ತಿಂಗಳು ಯಾವುದೇ ಹೊಸ ವ್ಯವಹಾರಕ್ಕೆ ಕೈ ಹಾಕಬೇಡಿ, ನಿರೀಕ್ಷಿತ ಲಾಭ ಪಡೆಯಲು ಕಷ್ಟವಾಗಬಹುದು. ಪ್ರಯಾಣ ಮಾಡುವಾಗ ಸ್ವಲಪ್ ಜಾಗ್ರತೆವಹಿಸಿ, ಅಜಾಗರೂಕತೆಯಿಂದ ಧನಹಾನಿಯಾಗುವ ಸಂಭವವಿದೆ, ಇನ್ನು ಕುಟುಂಬದಲ್ಲಿ ಆಸ್ತಿ ವಿವಾದ ಉಂಟಾಗುವ ಸಾಧ್ಯತೆ ಇದೆ.
ಆರ್ಥಿಕ ಜೀವನ
ಆರ್ಥಿಕವಾಗಿ ನೋಡಿದರೆ ಗ್ರಹಗಳ ಸ್ಥಾನ ನಿಮಗೆ ಅನುಕೂಲಕರವಲ್ಲ. ಈ ತಿಂಗಳು ಅನಿಶ್ಚಿತ ಖರ್ಚುಗಳನ್ನು ಎದುರಿಸಬೇಕಾಗಬಹುದು. ಗುರು ಹತ್ತನೇ ಮನೆಯಲ್ಲಿರುವುದರಿಂದ ನಿಮ್ಮ ಕೆಲಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಆರ್ಥಿಕ ಸಮಸ್ಯೆ ಉಂಟಾಗಬಹುದು. ಹಣದ ಕೊರತೆಯಿಂದ ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗಬಹುದು.
ಆರೋಗ್ಯ ಜೀವನ
ಸ್ಥಳೀಯರು ಈ ತಿಂಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ವಿಶೇಷವಾಗಿ ನಿಮ್ಮ ಕಣ್ಣುಗಳು ಮತ್ತು ಹಲ್ಲುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಧ್ಯಾನ ಮತ್ತು ಯೋಗ ನಿಮಗೆ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಈ ಅವಧಿಯಲ್ಲಿ ತಾಯಿಯ ಆರೋಗ್ಯಕ್ಕೆ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಶನುಯ ಹಿಮ್ಮುಖ ಚಲನೆಯಿಂದಾಗಿ ಕೈ ಕಾಲುಗಳಲ್ಲಿ, ನರಗಳಲ್ಲಿ ನೋವು ಉಂಟಾಗಬಹುದು.
ಪ್ರೀತಿ, ಮದುವೆ, ವೈವಾಹಿಕ ಜೀವನ, ಕುಟುಂಬ ಜೀವನ
ಕರ್ಕ ರಾಶಿಯವರು ಪ್ರೇಮ ವ್ಯವಹಾರಗಳಲ್ಲಿ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಎಂಟನೇ ಮನೆಯಲ್ಲಿ ಶನಿಯ ಉಪಸ್ಥಿತಿಯು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಮಂಗಳನ ಸ್ಥಾನ ಅನುಕೂಲಕರವಾಗಿರುವುದರಿಂದ ಯಾವುದೇ ದೊಡ್ಡ ಸಮಸ್ಯೆಯಾಗದಂತೆ ಸರಿದೂಗಿಸಿಕೊಂಡು ಹೋಗಲು ಸರಿಯಾಗುತ್ತೆ.ಮಂಗಳನ ಅನುಕೂಲಕರ ಪರಿಣಾಮದಿಂದ ಪ್ರೇಮ ಸಂಬಂಧಗಳು ಮತ್ತು ವೈವಾಹಿಕ ಜೀವನದಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಕುಟುಂಬದಲ್ಲಿ ಉತ್ತಮ ಸಾಮರಸ್ಯದ ಕೊರತೆಯಿಂದ ಸಮಸ್ಯೆಗಳ ಸಾಧ್ಯತೆಯಿದೆ.
ಪರಿಹಾರ
- ಪ್ರತಿ ಶನಿವಾರ ಶನಿ ದೇವರನ್ನು ಪೂಜಿಸಿ.
- ಮಂಗಳವಾರ ಹನುಮಂತನ ಪೂಜಿಸಿ
- ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications