Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಮೇ 1ರಿಂದ ಎಟಿಎಂ ಬಳಕೆ ದುಬಾರಿ..! ಏನೆಲ್ಲಾ ಬದಲಾಗುತ್ತಿದೆ ಗೊತ್ತಾ?
ಏಪ್ರಿಲ್ ತಿಂಗಳು ಅಂತ್ಯವಾಗುತ್ತಿದೆ. ಹಾಗೆ ಮೇ ಹತ್ತಿರವಾಗುತ್ತಿದ್ದು, ಈ ಸಮಯದಲ್ಲಿ ಹಲವು ಬದಲಾವಣೆಗಳ ನಾವು ನೋಡಬಹುದಾಗಿದೆ. ಆದರಲ್ಲೂ ಮೇ ತಿಂಗಳು ಹಲವು ಬದಲಾವಣೆಗೆ ಕಾರಣವಾಗುವಂತಹ ತಿಂಗಳಾಗಿದೆ. ಮುಖ್ಯವಾಗಿ ಜನರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುವ ಹಲವು ವಿಚಾರಗಳಲ್ಲಿ ಬದಲಾವಣೆ ನೋಡಬಹುದಾಗಿದೆ.
ಅದರಲ್ಲೂ ಬ್ಯಾಂಕಿಂಗ್ ವ್ಯವಹಾರ ಸಂಬಂಧಿಸಿದಂತೆ ಹಾಗೆ ದೈನಂದಿನ ವ್ಯವಹಾರಗಳಲ್ಲಿ ಬದಲಾವಣೆ ನಾವು ನೋಡಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಮೇ ತಿಂಗಳ ಆರಂಭದಿಂದ ಹಲವು ಬದಲಾವಣೆಗಳ ತರಲು ಮುಂದಾಗಿದೆ. ಎಲ್ಲಾ ಬ್ಯಾಂಕ್‌ಗಳು ಮತ್ತೊಮ್ಮೆ ಗ್ರಾಹಕರಿಗೆ ಬರೆಹಾಕಲು ಮುಂದಾಗಿದೆ. ಅದರಂತೆ ಮೇ ತಿಂಗಳಿನಿಂದ ನಿಮ ಎಟಿಎಂ ಬಳಕೆಯ ಮೇಲೆ ಶುಲ್ಕ ಹೆಚ್ಚಿಸಲು ಮುಂದಾಗಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳಿಂದ ಹಣ ತೆಗೆಯುವ ಶುಲ್ಕದಲ್ಲಿ ಹೆಚ್ಚಳ ಮಾಡಿದೆ. ಗ್ರಾಹಕರು ಮಾಸಿಕವಾಗಿ ಬಳಸಿಕೊಳ್ಳುತ್ತಿದ್ದ ಉಚಿತ ಮಿತಿಯು ಮುಗಿದ ಬಳಿಕ ಈ ಶುಲ್ಕ ಅನ್ವಯವಾಗಲಿದೆ. ಅಂದರೆ ಉಚಿತ ವಹಿವಾಟು ಮುಗಿದ ಬಳಿಕ ಪ್ರತಿ ವಹಿವಾಟಿಗೆ ಬರೋಬ್ಬರಿ 23 ರೂಪಾಯಿ ಪಾವತಿಸಬೇಕಿದೆ. ಈ ಮೊದಲು ಈ ದರವು 21 ರೂಪಾಯಿ ಎಂದು ನಿಗದಿಯಾಗಿತ್ತು.
ತಮ್ಮ ಸ್ವಂತ ಬ್ಯಾಂಕ್ ಎಟಿಎಂನಲ್ಲಿ ಉಚಿತವಾಗಿ 5 ವಹಿವಾಟು ನಡೆದಿದ ಬಳಿಕ ಈ ಶುಲ್ಕ ವಿಧಿಸಲಾಗುತ್ತದೆ. ಹಾಗೆ ಮೆಟ್ರೋ ನಗರದಲ್ಲಿ ತಮ್ಮ ಬ್ಯಾಂಕ್‌ನ ಎಟಿಎಂಗೆ ಉಚಿತ 3 ವಹಿವಾಟು ನಡೆಸಬಹುದು. ಗ್ರಾಹಕರು ಈ ಮಿತಿ ಮೀರಿದರೆ ಪ್ರತಿ ವಹಿವಾಟಿಗೆ ಅವರು 23 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಎಟಿಎಂ ಕಾರ್ಯಾಚರಣೆಯ ವೆಚ್ಚ ಕಡಿಮೆ ಮಾಡಲು ಹಾಗೆ ಬ್ಯಾಂಕ್‌ಗಳಿಗಿರುವ ನಿರ್ವಹಣ ವೆಚ್ಚ ಸರಿದೂಗಿಸಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ತಿಳಿದುಬಂದಿದೆ.
ಯುಪಿಐ ಪಾವತಿಗೆ ಜಿಎಸ್‌ಟಿ ಇದೆಯೇ?
ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯುಪಿಐ ಪಾವತಿ ಕುರಿತಾದ ಸುದ್ದಿಗಳು ಹರಿದಾಡಿವೆ. ಇನ್ನು ಮುಂದೆ 2 ಸಾವಿರ ರೂಪಾಯಿಗೂ ಮೀರಿದ ವಹಿವಾಟು ಮಾಡಿದರೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತಾಗಿ ಹಣಕಾಸು ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ಇದು ಸುಳ್ಳು ಮಾಹಿತಿ ಎಂದಿದೆ. ₹2,000 ಕ್ಕಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ GST ವಿಧಿಸುವ ಚಿಂತನೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ಯುಪಿಐ ಪೇಮೆಂಟ್ ಮೇಲೆ ಯಾವುದೇ ತೆರಿಗೆ ವಿಧಿಸಿಲ್ಲ ಈ ಹಿಂದೆ ಇದ್ದ ಎಂಡಿಆರ್ (ಮರ್ಚೆಂಟ್ ಡಿಸ್ಕೌಂಟ್ ರೇಟ್) ಕೂಡ ರದ್ದು ಮಾಡಲಾಗಿದೆ ಎಂದು ತಿಳಿಸಿದೆ.
ಮೇ 1ರಂದು ತೈಲ ದರ ಪರಿಷ್ಕರಣೆ
ತೈಲ ಕಂಪನಿಗಳು ಪ್ರತಿ ತಿಂಗಳ ಆರಂಭದ ದಿನದಲ್ಲಿ ತಮ್ಮ ದರ ಪರಿಷ್ಕರಣೆ ಮಾಡಲಿವೆ. ಈ ತಿಂಗಳ ಮೇ 1ರಂದು ಕೂಡ ಹೊಸ ದರ ಪರಿಷ್ಕರಣೆ ಆಗುವ ಸಾಧ್ಯತೆ ಇದೆ. ಈ ವೇಳೆ ಎಲ್‌ಪಿಜಿ, ಪೆಟ್ರೋಲ್, ಡೀಸೆಲ್ ದರಗಳಲ್ಲಿ ವ್ಯತ್ಯಾಸ ಆಗಬಹುದು, ಹಾಗೆ ಈ ಸಮಯದಲ್ಲಿ ಎಲ್‌ಪಿಜಿ ದರ ಏರಿಳಿತ ನೋಡಬಹುದು.
ಈ ಮೊದಲು ಏಪ್ರಿಲ್ 1ರಂದು ಗೃಹ ಬಳಕೆಯ ಅಡುಗೆ ಅನಿಲ ದರ 50 ರೂಪಾಯಿ ಏರಿಕೆಯಾಗಿತ್ತು. 14.2 ಕೆ.ಜಿ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿತ್ತು. ಹಾಗೆ ಎಲ್‌ಪಿಜಿ ಸಿಲಿಂಡರ್ ವಿತರಕರ ಒಕ್ಕೂಟವು ಈಗ ಕಮಿಷನ್ ದರ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದು, ಮೇ 1ರಂದು ಮತ್ತೆ ದರ ಹೆಚ್ಚಳಗಾಗುವ ಸಾಧ್ಯತೆ ಅಧಿಕವಾಗಿದೆ. ಎಲ್‌ಪಿಜಿ ಸಿಲಿಂಡರ್ ವಿತರಕರ ಒಕ್ಕೂಟ ಈಗ ಬರೋಬ್ಬರಿ ಕಮಿಷನ್ ದರವನ್ನು ಬರೋಬ್ಬರಿ 150 ರೂಪಾಯಿಗೆ ಹೆಚ್ಚಿಸುವಂತೆ ಆಗ್ರಹಿಸಿವೆ.



Click it and Unblock the Notifications
