Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
12 ರೋಬೋಟ್‌ಗಳನ್ನೇ ಅಪಹರಿಸಿದ ಮತ್ತೊಂದು ರೋಬೊಟ್..! ವಿಡಿಯೋ ನೋಡಿದರೆ ಅಚ್ಚರಿಯಾಗುತ್ತೆ.!
ಎಐ ತಂತ್ರಜ್ಞಾನ ಎಷ್ಟೊಂದು ಮುಂದುವರೆದಿದೆ ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ. ಮುಂದೊಂದು ದಿನ ಎಐ ಎಲ್ಲಾ ರಂಗದಲ್ಲೂ ಕಾಲಿಟ್ಟು, ತನ್ನ ಪ್ರಭಾವ ಉಂಟು ಮಾಡುವುದು ಖಚಿತ. ಈಗಾಗಲೆ ಎಲ್ಲಾ ಕಾರ್ಯಗಳಲ್ಲೂ ಎಐಗಳು ಕೆಲಸ ಮಾಡುತ್ತಿವೆ. ಈಗ ಹೊಸ ಹೊಸ ರಂಗಕ್ಕೂ ಎಐ ಬಂದುಬಿಟ್ಟಿದೆ. ನಾವು ಮಾಡುವ ಪ್ರತಿಯೊಂದು ಕೆಲಸಗಳು ಕೂಡ ಈ ಎಐಗಳಿದ ಕಡಿಮೆಯಾಗುತ್ತಿದೆ. ಬೆರಳ ತುದಿಯಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುವಂತಹ ಕಾರ್ಯ ಮಾಡುತ್ತಿವೆ.
ಈಗ ಆನ್‌ಲೈನ್‌ನಲ್ಲಿ ಈ ಎಐ ರೋಬೊಟ್‌ನ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಎಐ ರೋಬೋಟ್ ಒಂದು ತನ್ನಂತೆ ಇರುವ ಉಳಿದ ಎಐ ರೋಬೊಟ್‌ಗಳನ್ನು ಕಿಡ್ನಾಪ್ ಮಾಡಿರುವ ಅಚ್ಚರಿಯ ಹಾಗೂ ಅಪರೂಪದ ಘಟನೆ ಇದಾಗಿದೆ. ಎರ್ಬಾಯ್ ಎಂಬ ಹೆಸರಿನ ಪುಟ್ಟ ಎಐ ರೋಬೊಟ್ ಈಗ ಅಪಹರಣ ಕೆಲಸ ಮಾಡಿ ಸಿಕ್ಕಿಬಿದ್ದಿದೆ.

ಚೀನಾದ ಶಾಂಘೈಯಲ್ಲಿರುವ ಒಂದು ದೊಡ್ಡ ಎಐ ರೋಬೊಟ್ ಶೂರೂಮ್‌ನಲ್ಲಿ ಇಂತಹದೊಂದು ಅಚ್ಚರಿ ನಡೆದಿದೆ. ರಾತ್ರಿ ವೇಳೆ ಈ ಸಣ್ಣ ಎರ್ಬಾಯ್ ಎಂಬ ರೋಬೊಟ್ ಉಳಿದ 12 ರೋಬೊಟ್‌ಗಳನ್ನು ಅಪಹರಿಸಿದೆ ಎಂದು ವಿಡಿಯೋ ಹರಿದಾಡುತ್ತಿದೆ. ಈ ಎಐ ರೋಬೊಟ್‌ಗಳು ತಮ್ಮಷ್ಟಕ್ಕೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವಂತಹ ಸಾಮರ್ಥ್ಯ ಹೊಂದಿದ್ದಾವೆ.
ಶೋರೂಮ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾದಲ್ಲಿ ಈ ರೋಬೊಟ್‌ನ ಕೆಲಸ ದಾಖಲಾಗಿದೆ. ರಾತ್ರಿ ಪುಟ್ಟ ಹೆಜ್ಜೆ ಇಟ್ಟು ಬಂದ ರೋಬೊಟ್ ಎಲ್ಲಾ ರೋಬೊಟ್‌ಗಳ ಜೊತೆಗೆ ಸಂವಹನ ನಡೆಸುತ್ತಿರುವುದು ಕೂಡ ಕಂಡುಬರುತ್ತದೆ. ಅನಂತರ ಉಳಿದೆಲ್ಲಾ ರೋಬೊಟ್‌ಗಳು ಈ ಪುಟ್ಟ ಏರ್ಬಾಯ್ ಅನ್ನು ಫಾಲೋ ಮಾಡುತ್ತಿರುವುದು ದಾಖಲಾಗಿದೆ.
ರೋಬೊಟ್ ಮಾತುಕತೆ ಹೇಗಿತ್ತು.
ರಾತ್ರಿ ವೇಳೆ ಕಾರ್ಯಾಚರಣೆಗಿಳಿದ ಈ ಏರ್ಬಾಯ್ ರೋಬೊಟ್ ಅಲ್ಲಿದ್ದ ರೋಬೊಟ್‌ಗಳ ಎದುರು ನಿಂತು ಮಾತನಾಡುತ್ತಿದೆ. ಚೀನಿ ಭಾಷೆಯಲ್ಲಿ ಇವು ಸಂಹವನ ನಡೆಸುತ್ತಿವೆ. ನೀವು ಇನ್ನೂ ಕಲಸ ಮಾಡುತ್ತಿದ್ದೀರಾ ಎಂದು ಏರ್ಬಾಯ್ ಕೇಳುತ್ತಿದೆ. ಇದಕ್ಕೆ ಉತ್ತರಿಸಿದ ಇನ್ನೊಂದು ರೋಬೊಟ್ ನಾನು ಎಂದಿಗೂ ಕೆಲಸದಿಂದ ಹೊರ ಬರುವುದಿಲ್ಲ ಎಂದಿದೆ. ಹಾಗಾದ್ರೆ ನೀವು ಮನೆಗೆ ಹೋಗುವುದಿಲ್ಲವೇ ಎಂದು ಏರ್ಬಾಯ್ ಮರು ಪ್ರಶ್ನೆ ಮಾಡಿದೆ. ಇದಕ್ಕೆ ನನಗೆ ಯಾವುದೇ ಮನೆಯಿಲ್ಲ ಎಂದು ಮತ್ತೊಂದು ರೋಬೊಟ್ ಹೇಳುತ್ತಿದೆ.
ಹಾಗಾದರೆ ನನ್ನೊಂದಿಗೆ ಬನ್ನಿ ಎಂದು ಏರ್ಬಾಯ್ ರೋಬೊಟ್ ಅಲ್ಲಿಂದ ನಡೆಯುತ್ತಿದೆ, ಏರ್ಬಾಯ್ ಹೋಗುತ್ತಿರುವುದನ್ನು ಕಂಡ ಉಳಿದ ರೋಬೊಟ್‌ಗಳು ಅದನ್ನು ಹಿಂಬಾಲಿಸಿ ಶೋರೂಮ್‌ನಿಂದ ಹೊರಬರುತ್ತಿವೆ. ಪುಟ್ಟ ರೋಬೊಟ್ ಉಳಿದೆಲ್ಲಾ ರೋಬೊಟ್‌ಗಳ ಆಪರೇಟಿಂಗ್ ಸಿಸ್ಟಂನಲ್ಲಿರುವ ಲೋಪದೋಷವನ್ನು ಬಳಸಿಕೊಂಡು ಈ ಕೃತ್ಯ ಎಸಗಿದೆ ಎಂದು ರೋಬೊಟ್ ತಯಾರಿಕ ಕಂಪನಿ ಹ್ಯಾಂಗ್‌ಝೌ ತಿಳಿಸಿದೆ. ಇದೊಂದು ಪರೀಕ್ಷೆಯೂ ಆಗಿ ನಮಗೆ ಸಹಕಾರಿಯಾಗಿದೆ, ನಾವು ಈ ದೋಷ ಸರಿಪಡಿಸಲು ಮುಂದಾಗುತ್ತೇವೆ ಎಂದಿದ್ದಾರೆ.
ಏರ್ಬಾಯ್ ರೋಬೊಟ್ ಅನ್ನು ಬೇರೊಂದು ಕಂಪನಿ ನಿರ್ಮಿಸಿದೆ, ಆದ್ರೆ ಉಳಿದೆಲ್ಲಾ ರೋಬೊಟ್‌ಗಳು ಮತ್ತೊಂದು ಕಂಪನಿಗೆ ಸೇರಿವೆ. ಹೀಗಾಗಿ ಒಂದು ಕಂಪನಿಯ ಎಐ ರೋಬೊಟ್ ಮತ್ತೊಂದು ಕಂಪನಿಯ ರೋಬೊಟ್ ಅನ್ನು ಅಪಹರಿಸಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ರೋಬೊಟ್‌ಗಳು ಶೋರೂಮ್‌ನ ಮತ್ತೊಂದು ಜಾಗದಲ್ಲಿ ಪತ್ತೆಯಾಗಿದ್ದವು ಎಂದು ವರದಿಯಾಗಿದೆ.
ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಅಚ್ಚರಿಗೆ ಒಳಗಾಗಿದ್ದಾರೆ. ಒಂದು ಎಐ ರೋಬೊಟ್ ಇಷ್ಟೊಂದು ಬುದ್ದಿವಂತಿಕೆಯಿಂದ ಉಳಿದೆಲ್ಲಾ ರೋಬೊಟ್‌ಗಳನ್ನು ತನ್ನೊಂದಿಗೆ ಕರೆದೊಯ್ಯುತ್ತಿದೆ, ಅವುಗಳು ತನ್ನ ಮಾತು ಕೇಳುವಂತೆ ಮಾಡುತ್ತಿದೆ ಎಂದರೆ ಮುಂದೊಂದು ದಿನ ಇದೇ ರೋಬೊಟ್‌ಗಳು ತನ್ನಂತಿರುವ ರೋಬೊಟ್‌ಗಳಿಗೆ ಆಜ್ಞೆ ನೀಡಿ ಏನು ಬೇಕಾದರು ಮಾಡಿಸಿಕೊಳ್ಳಬಹುದು. ಇದೊಂದು ಅಪಾಯಕಾರಿ ಹೆಜ್ಜೆಯಾಗಬಹುದು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.



Click it and Unblock the Notifications
