Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
40 ವರ್ಷದ ಹಿಂದೆ ಆಕಾಶದಲ್ಲಿ ತೇಲಾಡಿದ ಗಗನಯಾತ್ರಿ..! ಯಾರು ಈ ಸಾಧಕ ಗೊತ್ತಾ?
ಮಾನವನಿಗೆ ಆಗಸಗಳ ಬಗ್ಗೆ ಅದೆಷ್ಟು ಕುತೂಹಲವಿದೆ ಎಂದ್ರೆ ಈಗಲೂ ಆ ಬಗ್ಗೆ ಹೊಸ ಹೊಸ ವಿಚಾರಗಳ ಕಂಡುಹಿಡಿಯಲು ಆತ ಮುಂದಾಗುತ್ತಲೇ ಇದ್ದಾನೆ. ನಾವು ಮುಂದೊಂದು ದಿನ ಭೂಮಿಯ ಬಿಟ್ಟು ಮತ್ತೊಂದು ಭೂಮಿಯನ್ನು ಹುಡುಕುವ ಯತ್ನದಲ್ಲಿದ್ದೇವೆ.
ಖಗೋಳಶಾಸ್ತ್ರಜ್ಞರು, ತಂತ್ರಜ್ಞರು, ವಿಜ್ಞಾನಿಗಳು ಚಂದ್ರನ ಮೇಲೂ ಮತ್ತೊಮ್ಮೆ ಇಳಿಯುವ ಯತ್ನದಲ್ಲಿದ್ದಾರೆ. ಇದಕ್ಕೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತನ್ನ ಪ್ರಯತ್ನ ಮುಂದುವರೆಸಿದೆ. ಈ ನಡುವೆ ನಾಸಾ 40 ವರ್ಷದ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದು, ನೋಡುಗರ ಗಮನ ತನ್ನತ್ತ ಸೆಳೆದಿದೆ.
ನಲವತ್ತು ವರ್ಷಗಳ ಹಿಂದೆ ಇಂದು ಗಗನಯಾತ್ರಿಯೊಬ್ಬ ಆಕಾಶದಲ್ಲಿ ಮೊದಲ ಬಾರಿಗೆ ನಡೆದ ಫೋಟೋವೊಂದನ್ನು ನಾಸಾ ಹಂಚಿಕೊಂಡಿದೆ. ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನಿಂದ ಗಗನಯಾತ್ರಿಯೊಬ್ಬ ಆಕಾಶದಲ್ಲಿ ತೇಲಾಡಿದ ಫೋಟೋ ಇದಾಗಿದೆ.

ಅಮೆರಿಕದ ಗಗನಯಾತ್ರಿ ಬ್ರೂಸ್ ಮೆಕ್ ಕ್ಯಾಂಡ್ಲೆಸ್ II, ಸೌರಮಂಡಲದ ವಾಹನಕ್ಕೆ ಯಾವುದೇ ಹಗ್ಗವಾಗಲಿ, ಕೊಂಡಿಯಾಗಲಿ ಸಿಕ್ಕಿಸಿಕೊಳ್ಳದೆ ಮೊದಲ ಬಾರಿಗೆ ಆಕಾಶದ ಮೇಲೆ ನಡೆದಾಡಿದ ಫೋಟೋ ಇದಾಗಿದೆ. ಇದನ್ನು 40 ವರ್ಷದ ಹಿಂದೆ ಸೆರೆಹಿಡಿಯಲಾಗಿದೆ ಎಂದು ನಾಸಾ ಬರೆದುಕೊಂಡಿದೆ. ಇದಕ್ಕೂ ಮೊದಲು ಗಗನಯಾತ್ರಿಗಳು ಟೆಥರ್‌ಗಳನ್ನು ಹೊಂದಿರುತ್ತಿದ್ದರು. ಅಂದರೆ ಅವರಿಗೂ ಹಾಗೂ ಸ್ಪೇಸ್ ವಾಹನಕ್ಕೂ ನಡುವೆ ಹಗ್ಗ ಬಿಗಿಯಲಾಗಿರುತ್ತಿತ್ತು. ಆದರೆ ಬ್ರೂಸ್ ಮೆಕ್ ಕ್ಯಾಂಡ್ಲೆಸ್ II ಯಾವ ಸಹಾಯವೂ ಇಲ್ಲದೆ ಬಾಹ್ಯಾಕಾಶದಲ್ಲಿ ತೇಲಾಡಿದ್ದರು.
ನಾಸಾ ತನ್ನ ಪೋಸ್ಟ್‌ನಲ್ಲಿ ಆ ಗಗನಯಾತ್ರಿ ನೀಡಿದ್ದ ಹೇಳಿಕೆಯನ್ನೂ ನಮೂದಿಸಿದೆ. ಮೊದಲ ಬಾರಿ ಬಾಹ್ಯಾಕಾಶದಲ್ಲಿ ತೇಲಾಡಿದ್ದ ಗಗನಯಾತ್ರಿ ಸಂತಸ ಹಂಚಿಕೊಂಡಿದ್ದರು. "ನೀಲ್ [ಆರ್ಮ್ಸ್ಟ್ರಾಂಗ್] ಗೆ ಇದು ಒಂದು ಸಣ್ಣ ಹೆಜ್ಜೆಯಾಗಿರಬಹುದು, ಆದರೆ ಇದು ನನಗೆ ಒಂದು ದೊಡ್ಡ ಹಾರಾಟವಾಗಿದೆ" ಎಂದು ಆತ ಹೇಳಿಕೊಂಡಿದ್ದಾಗಿ ನಾಸಾ ಬರೆದುಕೊಂಡಿದೆ.
"ನಲವತ್ತು ವರ್ಷಗಳ ಹಿಂದೆ ಇಂದು, ಗಗನಯಾತ್ರಿಯೊಬ್ಬ ತನ್ನ ಬಾಹ್ಯಾಕಾಶ ನೌಕೆಯನ್ನು ಮೊಟ್ಟಮೊದಲ ಬಾರಿಗೆ ಟೆಥರ್ ಅಥವಾ ರಕ್ಷಣಾ ಹಗ್ಗವಿಲ್ಲದೆ ಹೊರಬಂದನು. ಗಗನಯಾತ್ರಿ ಬ್ರೂಸ್ ಮೆಕ್‌ಕ್ಯಾಂಡ್‌ಲೆಸ್ II ಅವರು ಕ್ರಾಫ್ಟ್‌ಗೆ ಜೋಡಿಸದೆ ಬಾಹ್ಯಾಕಾಶದಲ್ಲಿ ಚಲಿಸಿದ ಮೊದಲ ಗಗನಯಾತ್ರಿಯಾಗಿದ್ದಾರೆ, ಈ ಮೊದಲ 'ಫೀಲ್ಡ್' ಸಮಯದಲ್ಲಿ ಸಾರಜನಕ-ಚಾಲಿತ, ಕೈ-ನಿಯಂತ್ರಿತ ಬ್ಯಾಕ್‌ಪ್ಯಾಕ್ ಸಾಧನವನ್ನು ಮ್ಯಾನ್ಡ್ ಮ್ಯಾನ್ಯೂವರಿಂಗ್ ಯುನಿಟ್ (ಎಂಎಂಯು) ಎಂದು ಕರೆಯುತ್ತಾರೆ, "ನಾಸಾ ತಿಳಸಿದೆ.
ಗಗನಯಾತ್ರಿ ಮೆಕ್‌ಕ್ಯಾಂಡ್‌ಲೆಸ್ II ಬಾಹ್ಯಾಕಾಶದ ಕಪ್ಪು ಬಣ್ಣದಿಂದ ಸುತ್ತುವರಿದ ಬಿಳಿ ಬಾಹ್ಯಾಕಾಶ ಸೂಟ್‌ನಲ್ಲಿ ಧರಿಸಿರುವ ಸಣ್ಣ ಆಕೃತಿಯಂತೆ ಕಾಣಿಸುತ್ತಾನೆ. ಫೋಟೋದ ಕೆಳಗಿನ ಮೂರನೇ ಭಾಗದಲ್ಲಿ ಭೂಮಿಯು ಗೋಚರಿಸುತ್ತದೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ನಾಸಾ ಈ ಫೋಟೋವನ್ನು ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆಯೂ ಕೇಳಿಬಂದಿದೆ.
ರಾಬರ್ಟ್ ಎಲ್ ಗಿಬ್ಸನ್ ತೆಗೆದ ಛಾಯಾಚಿತ್ರ
ಈ ವಿಶೇಷ ಫೋಟೋವನ್ನು ಸೆರೆಹಿಡಿದ ವ್ಯಕ್ತಿಯನ್ನು ವಿವರಿಸುತ್ತಾ, 'ನಾಸಾ' ಬರೆದಿದೆ - ರಾಬರ್ಟ್ ಎಲ್. ಗಿಬ್ಸನ್, ವಿಮಾನದ ಪೈಲಟ್, ಬಾಹ್ಯಾಕಾಶ ವಾಹನ ಸಿಬ್ಬಂದಿಯಲ್ಲಿ ಏನೂ ಮಾಡದ ಏಕೈಕ ವ್ಯಕ್ತಿ, ಆದ್ದರಿಂದ ಮ್ಯಾಕ್ ಕ್ಯಾಂಡ್ಲೆಸ್ ಅವರು ಬಾಹ್ಯಾಕಾಶಕ್ಕೆ ಹೋದಾಗ, ಅವರು ಹ್ಯಾಸೆಲ್ಬ್ಲಾಡ್ ಕ್ಯಾಮೆರಾವನ್ನು ಎತ್ತಿಕೊಂಡು ಬಾಹ್ಯಾಕಾಶ ಇತಿಹಾಸದ ಪುಟಗಳಲ್ಲಿ ಈವೆಂಟ್ ಅನ್ನು ರೆಕಾರ್ಡ್ ಮಾಡಿದರು.
ನಾಸಾದ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದುವರೆಗೆ 13 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಐತಿಹಾಸಿಕ ಚಿತ್ರವನ್ನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ.



Click it and Unblock the Notifications
