Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ: ನನಸಾಗದೆ ಉಳಿಯಿತು ಅದೊಂದು ಕನಸು!
ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ನಾಸಾ ಗಗನಯಾತ್ರಿಯಾಗಿ ಹಲವು ಗಗನಯಾತ್ರೆ ಯಶಸ್ವಿಯಾಗಿ ಪೂರೈಸಿದ ಅವರು ಈಗ ನಿವೃತ್ತಿ ಹೇಳಿದ್ದಾರೆ. ಕೆಲ ತಿಂಗಳ ಹಿಂದೆ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮರಳಿ ಚೇತರಿಸಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಅವರು ನಿವೃತ್ತಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅವರು ಹಲವು ತಿಂಗಳ ಕಾಲ ಸಿಲುಕಿದ್ದರು. ಇದಾದ ಬಳಿಕ ಅವರನ್ನು ವಿಶೇಷ ಕಾರ್ಯಾಚರಣೆ ಮೂಲಕ ವಾಪಾಸು ಭೂಮಿಗೆ ಕರೆತರಲಾಗಿತ್ತು. ಈಗ ಅವರು ಅಚ್ಚರಿ ಎಂಬಂತೆ ನಿವೃತ್ತಿ ಹೇಳಿದ್ದಾರೆ. ಕಳೆದ ಡಿಸೆಂಬರ್ 31ರಂದು ಅವರು ನಿವೃತ್ತಿ ನೀಡಿದ್ದರು. ಈಗ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

ಸುನೀತಾ ವಿಲಿಯಮ್ಸ್ ಕೇವಲ ಒಂದು ವಾರದ ಐಎಸ್‌ಎಸ್ ಪ್ರಯಾಣ ಮಾಡಬೇಕಿತ್ತು ಆದ್ರೆ ಸ್ಟಾರ್ಲೈನರ್ ಕ್ಯಾಪ್ಸುಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಾಪಸ್ ಭೂಮಿಗೆ ಬರಲು ಆಗಿರಲಿಲ್ಲ. ಹೀಗಾಗಿ ಸುಮಾರು 6 ತಿಂಗಳ ಕಾಲ ಅವರು ಅಲ್ಲಿಯೇ ಉಳಿದರು. ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಅನಂತರ ಖಾಸಗಿ ಗಗನಯಾನ ಸಂಸ್ಥೆಯಾಗಿದ್ದ ಸ್ಪೇಸ್ ಎಕ್ಸ್ ಸಂಯೋಗದೊಂದಿಗೆ ಅವರು ಭೂಮಿಗೆ ಮರಳುವಲ್ಲಿ ಯಶಸ್ವಿಯಾದರು.
ಸುನೀತಾ 1965ರ ಸೆ. 19ರಂದು ಓಹಿಯೋದ ಯೂಕ್ಲಿಡ್‌ನಲ್ಲಿ ಜನಿಸಿದರು. ಆದ್ರೆ ಅವರ ತಂದೆ ತಾಯಿ ಮೂಲತಃ ಭಾರತದವರಾಗಿದ್ದರು. ಗುಜರಾತ್ ಮೂಲದ ವೈದ್ಯರಾಗಿದ್ದ ದೀಪಕ್ ಪಾಂಡ್ಯ, ಉರ್ಸುಲಿನ್ ಬೋವಿ ಪಾಂಡ್ಯ ಅವರ ಮಗಳಾಗಿ ಜನಿಸಿದ್ದರು. ವಿಲಿಯಮ್ಸ್ ಮ್ಯಾಸಚೂಸೆಟ್ಸ್‌ನ ನೀಡ್‌ಹ್ಯಾಮ್‌ನಲ್ಲಿ ಬೆಳೆದರು ಮತ್ತು ನೀಡ್‌ಹ್ಯಾಮ್ ಅನ್ನು ತಮ್ಮ ಮನೆಯಾಗಿ ನೋಡುತ್ತಾರೆ. ಅವರು ನೀಡ್‌ಹ್ಯಾಮ್ ಹೈಸ್ಕೂಲ್‌ನಲ್ಲಿ ತಮ್ಮ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಮಾಡಿದರು. ಬಳಿಕ ಅಮೆರಿಕನ್ ವ್ಯಕ್ತಿಯ ವಿವಾಹವಾಗಿದ್ದರು.
ಈಡೇರದ ಸುನೀತಾ ಕನಸು
ಸುನೀತಾ ವಿಲಿಯಮಸ್ ಗಗನಯಾನ ಕ್ಷೇತ್ರದಲ್ಲಿ ಹಲವು ರೀತಿ ಸಾಧನೆ ಮಾಡಿರುವ ಮಹಿಳೆ. ಆದ್ರೆ ಅವರ ಆಸೆಯೊಂದು ಹಾಗೆಯೇ ಉಳಿದಿದೆಯಂತೆ. ಅವರು ನಾಸಾದೊಂದಿಗೆ ಅಧ್ಯಯನದಲ್ಲಿ ತೊಡಗಿದ್ದಾಗಿಂದಲೂ ಚಂದ್ರನ ಮೇಲೆ ಇಳಿಯುವ ಮಹಾ ಆಸೆ ಹೊಂದಿದ್ದರಂತೆ. ಇದಕ್ಕಾಗಿ ಅವರು ತಮ್ಮಲ್ಲೇ ತಯಾರಿಯನ್ನು ನಡೆಸಿದ್ದರಂತೆ.
ನಾಸಾದ ಮುಂದಿನ ಮಾನವ ಚಂದ್ರಯಾನ ಮಿಷನ್ ಯಾವಾಗ ಆರಂಭವಾಗಲಿದೆ ಎಂಬ ಕುತೂಹಲದಲ್ಲೇ ಅವರು ಸಮಯ ಕಳೆದಿದ್ದರಂತೆ. ಹಾಗೆ ಚಂದ್ರನ ಮೇಲೆ ಉಳಿಯುವ ಕನಸು ಕಂಡಿದ್ದರಂತೆ. ಆದ್ರೆ ಇದು ಕನಸಾಗಿಯೇ ಉಳಿದಿದೆ. ಹಾಗೆ ಇದುವರೆಗೆ ಅತೀ ಹೆಚ್ಚು ಬಾಹ್ಯಾಕಾಶ ಯಾತ್ರೆ ಮುಗಿಸಿರುವ ಏಕೈಕ ಮಹಿಳಾ ಗಗನಯಾತ್ರಿ ಅವರಾಗಿದ್ದಾರೆ.
ಒಟ್ಟು ಅವರು ಮೂರು ಬಾರಿ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿ ಪ್ರಯಾಣ ಮಾಡಿದ್ದಾರೆ. ಆದ್ರೆ ಮೂರನೇ ಬಾರಿ ಅವರು ತಾಂತ್ರಿಕ ದೋಷದ ಕಾರಣ ಅಲ್ಲಿಯೇ ಸಿಲುಕಿದ್ದರು. ಸುನಿತಾ ವಿಲಿಯಮ್ಸ್ ಮೊಟ್ಟ ಮೊದಲ ಬಾರಿಗೆ ಡಿಸೆಂಬರ್ 9, 2006ರಲ್ಲಿ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು.
1993 ರಲ್ಲಿ ಅವರು ಟೆಸ್ಟ್ ಫ್ಲೈಟ್ ಸ್ಕೂಲ್‌ನಿಂದ ಪದವಿ ಪಡೆದು, 1995 ರಲ್ಲಿ ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದರು. 30 ವರ್ಷಗಳ ವೃತ್ತಿಜೀವನದಲ್ಲಿ 30ಕ್ಕೂ ಹೆಚ್ಚು ವಿವಿಧ ರೀತಿಯ ವಿಮಾನಗಳಲ್ಲಿ 3,000 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ಪೈಲಟ್ ಆಗಿ ವ್ಯಾಪಕ ಅನುಭವ ಹೊಂದಿದ್ದಾರೆ. ಸುನೀತಾ ವಿಲಿಯಮ್ಸ್ ಅವರನ್ನು ನಂತರ 1998 ರಲ್ಲಿ ನಾಸಾ ತನ್ನ ಸಂಸ್ಥೆಗೆ ಆಯ್ಕೆ ಮಾಡಿಕೊಂಡಿತು. ಇದಾದ ಬಳಿಕ ಅವರು ಹಲವು ಬಾರಿ ಗಗನಯಾನ ಸೇರಿದಂತೆ ಸ್ಪೇಸ್ ಮಿಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.



Click it and Unblock the Notifications
