Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಂಪು ಹವಳವನ್ನು ಧರಿಸುವಾಗ ಈ ವಿಚಾರ ಗೊತ್ತಿರಲಿ!
ಅನೇಕ ಜನ ಚಿನ್ನವನ್ನು ಇಷ್ಟ ಪಡ್ತಾರೆ. ಚಿನ್ನದ ಜೊತೆಗೆ ಮುತ್ತು, ಹವಳಗಳನ್ನು ಪೋಣಿಸಿ ಒಡವೆಯನ್ನು ಮಾಡಿಸಿಕೊಳ್ಳುತ್ತಾರೆ. ಹವಳ ಧರಿಸೋದ್ರಿಂದ ಅನೇಕ ಜನರ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಿದ್ರೆ ಇನ್ನೂ ಕೆಲವರ ಮೇಲೆ ಕೆಟ್ಟ ಪರಿಣಾಮವನ್ನೂ ಬೀರಬಹುದು. ಅಷ್ಟಕ್ಕೂ ಹವಳ ಧರಿಸೋದ್ರಿಂದ ಏನೆಲ್ಲಾ ಲಾಭಗಳಿದೆ? ಅದನ್ನು ಯಾವ ಸಮಯದಲ್ಲಿ ಧರಿಸ್ಬೇಕು ಅನ್ನೋದ್ರ ಬಗ್ಗೆ ತಿಳಿಸಿ ಕೊಡ್ತೀವಿ.

ಜ್ಯೋತಿಷ್ಯದ ಪ್ರಕಾರ ಕೆಂಪು ಹವಳವು ಮಂಗಳ ಗ್ರಹದಿಂದ ಆಳಲ್ಪಡುತ್ತದೆ. ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಚೈತನ್ಯ ಮತ್ತು ವ್ಯಕ್ತಿಯ ಬಯಕೆಗಳು, ಕ್ರಿಯೆಗಳು, ಉತ್ಸಾಹ, ಆಕ್ರಮಣಶೀಲತೆ ಮತ್ತು ಲೈಂಗಿಕ ಬಯಕೆಗಳಂತಹ ಇತರ ಗುಣಲಕ್ಷಣಗಳೊಂದಿಗೆ ಸಂಬಂಧಿಸಿದೆ.
ಮಂಗಳ ಗ್ರಹವನ್ನು ಯುದ್ಧದ ದೇವರು ಅಥವಾ ಸೈನ್ಯದ ಕಮಾಂಡರ್ ಎಂದೂ ಕರೆಯುತ್ತಾರೆ. ಯಾರ ಕುಂಡಲಿಯಲ್ಲಿ ಮಂಗಳನ ಬಲವಾದ ಉಪಸ್ಥಿತಿ ಇರುತ್ತದೆಯೋ ಅವರ ಜೀವನವನ್ನು ಧನಾತ್ಮಕವಾಗಿ ಪರಿಣಾಮ ಬೀರುತ್ತಂತೆ. ಮತ್ತು ನೀವು ಕೆಂಪು ಹವಳವನ್ನು ಧರಿಸಿದರೆ ಮಂಗಳನ ಈ ಪರಿಣಾಮವು ನಿಮ್ಮ ಮೇಲೆ ಧನಾತ್ಮಕವಾಗಿ ಇರಲಿದೆ ಅಂತ ಹೇಳಲಾಗುತ್ತದೆ.
ಮಾಂಗಲ್ಯ ಬಲವನ್ನು ಒಳಗೊಂಡಿರುವ ಕೆಂಪು ಹವಳ!
ಕೆಂಪು ಹವಳದ ಮಾಂಗಲ್ಯ ಬಲವನ್ನು ಒಳಗೊಂಡಿದೆ.ಸ ಅಂದರೆ ಮದುವೆ ಹೊಂದಾಣಿಕೆ. ನೀವು ಮದುವೆಗೆ ಸಂಬಂಧಿಸದಂತೆ ಏನಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಜ್ಯೋತಿಷಿಗಳು ನಿಮಗೆ ಕೆಂಪು ಹವಳದ ಉಂಗುರವನ್ನು ಧರಿಸೋದಕ್ಕೆ ಶಿಫಾರಸು ಮಾಡುತ್ತಾರೆ.
ಕೆಂಪು ಹವಳವನ್ನು ಧರಿಸೋದ್ರಿಂದ ಏನೆಲ್ಲಾ ಲಾಭಗಳಿದೆ?
1. ಕೆಂಪು ಹವಳವು ಮಂಗಳದಿಂದ ಆಳಲ್ಪಡುವುದರಿಂದ ಯಾರು ಹವಳವನ್ನು ಧರಿಸುತ್ತಾರೆಯೋ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತಂತೆ
2. ಕೆಂಪು ಹವಳವನ್ನು ಧರಿಸೋದ್ರಿಂದ ಮತ್ತೊಂದು ಪ್ರಯೋಜನ ಅಂದ್ರೆ ನಿಮ್ಮ ಆಲಸ್ಯ ದೂರವಾಗುತ್ತದೆ. ನೀವೇನಾದರೂ ಕೆಲಸವನ್ನು ಪದೇ ಪದೇ ಮುಂದಕ್ಕೆ ದೂಡುತ್ತಿದ್ದರೆ ಆ ಸಮಸ್ಯೆಗಳು ದೂರವಾಗುತ್ತೆ.
3. ಕೆಂಪು ಹವಳವು ಯಾವುದಾದರೂ ಲೈಂಗಿಕ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಎಲ್ಲಾ ರೀತಿಯ ಲೈಂಗಿಕ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು
4. ಕೆಂಪು ಹವಳ ಧರಿಸೋದ್ರಿಂದ ಮತ್ತೊಂದು ಪ್ರಯೋಜನವೆಂದರೆ ವ್ಯಕ್ತಿಯ ಮಾನಸಿಕ ಯೋಗಕ್ಷೇಮದ ಮೇಲೆ ಅದು ಧನಾತ್ಮಕ ಪ್ರಭಾವ ಬೀರುತ್ತದೆ. ನೀವು ಖಿನ್ನತೆಯಿಂದ ಬಳಲುತ್ತಿದ್ದರೆ ನೀವು ಕೆಂಪು ಹವಳವನ್ನು ಧರಿಸಬಹುದು
5. ಕೆಂಪು ಹವಳವು ಶತ್ರುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಮತ್ತು ಅಪಘಾತಗಳು, ಕಡಿತಗಳು, ಗಾಯಗಳು ಇತ್ಯಾದಿಗಳು ಆಗೋದ್ರಿಂದ ನಿಮ್ಮನ್ನು ರಕ್ಷಿಸುತ್ತದೆ.
6. ವೈದಿಕ ಜ್ಯೋತಿಷ್ಯದ ಪ್ರಕಾರ ಕೆಂಪು ಹವಳವನ್ನು ಧರಿಸುವ ವ್ಯಕ್ತಿ ಜನ್ಮ ದಿನಾಂಕ 9, 18 ಮತ್ತು 27 ಆಗಿದ್ದರೆ ಅವರು ಮತ್ತಷ್ಟು ಅದೃಷ್ಟಶಾಲಿಯಾಗಿರುತ್ತಾರೆ.
7. ಕೆಂಪು ಹವಳವನ್ನು ಧರಿಸುವುದರಿಂದ ದಂಪತಿಗಳಿಗೆ ಆಗುವ ಮತ್ತೊಂದು ಪ್ರಯೋಜನ ಏನೆಂದರೆ ಕೆಂಪು ಹವಳವು ದಾಂಪತ್ಯದಲ್ಲಿ ಕೋಪವನ್ನು ತಗ್ಗಿಸಲು ಮತ್ತು ವೈಯಕ್ತಿಕ ಸಾಮರಸ್ಯವನ್ನು ಕಡಿಮೆ ಮಾಡಲು ಸಹಕರಿಸುತ್ತದೆ
8. ಸಶಸ್ತ್ರ ಪಡೆಗಳಿಗೆ ಸೇರಲು ಬಯಸುವವರು ಕೆಂಪು ಹವಳವನ್ನು ಧರಿಸಬೇಕು. ಇದರ ಶಕ್ತಿಯು ನಿಮಗೆ ಸಕ್ರಿಯವಾಗಿರಲು ಮತ್ತು ಸವಾಲುಗಳನ್ನು ಸುಲಭವಾಗಿ ನಿಭಾಯಿಸಲು ಶಕ್ತಿಯನ್ನು ನೀಡುತ್ತದೆ.
9. ನೀವು ಕತ್ತಲೆಯ ಭಯವನ್ನು ಹೊಂದಿದ್ದರೆ ಈ ಹವಳದ ಉಂಗುರವನ್ನು ಧರಿಸಿ. ಇದು ನಿಮ್ಮಲ್ಲಿರುವ ಭಯವನ್ನು ಹೋಗಲಾಡಿಸುತ್ತದೆ
10. ಕೆಂಪು ಹವಳವನ್ನು ಧರಿಸೋದ್ರಿಂದ ನಿಮ್ಮಲ್ಲಿರುವ ದದ್ದುಗಳು, ಮೊಡವೆಗಳು ಮತ್ತು ಚರ್ಮದ ಸಮಸ್ಯೆಗಳು ದೂರ ಆಗುತ್ತದೆ
11. ಕೆಂಪು ಹವಳವನ್ನು ಧರಿಸೋದ್ರಿಂದ ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಇನ್ನೂ ದುಷ್ಟ ಕಣ್ಣು ಮತ್ತು ಮಾಟಮಂತ್ರದಿಂದ ನಿಮ್ಮನ್ನು ರಕ್ಷಿಸುತ್ತದೆ.
12. ಗರ್ಭಾವಸ್ಥೆಯಲ್ಲಿ ಕೆಂಪು ಹವಳವನ್ನು ಧರಿಸುವುದರಿಂದ ಗರ್ಭಪಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮತ್ತು ಪಾರ್ಶ್ವವಾಯು, ಮುಟ್ಟಿನ ಅಸ್ವಸ್ಥತೆಯಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ.
13. ನಿಮಗೆ ಸ್ಟೇಜ್ ಫಿಯರ್ ಇದ್ರೂ ಕೂಡ ಕೆಂಪು ಹವಳವನ್ನು ಧರಿಸೋದನ್ನು ಮರೀಬೇಡಿ. ಏಕೆಂದರೆ ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಈ ರೀತಿ ಕೆಂಪು ಹವಳವನ್ನು ಧರಿಸೋದು ತುಂಬಾನೇ ಒಳ್ಳೆಯದು. ಆದರೆ ನೀವು ಯಾವುದಕ್ಕೂ ಮೊದಲು ತಜ್ಞರನ್ನು ಸಂಪರ್ಕಿಸಿ ಧರಿಸಿದರೆ ಉತ್ತಮ.



Click it and Unblock the Notifications



