Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಭೂಮಿಗೆ ಅಪ್ಪಳಿಸಲಿದೆ ಕ್ಷುದ್ರಗ್ರಹ..! ನಿಖರ ದಿನಾಂಕ ಘೋಷಿಸಿದ ನಾಸಾ..!
ಸೌರವ್ಯೂಹದಲ್ಲಿ ಆಕಾಶಕಾಯಗಳ ನಡುವೆ ಕ್ಷುದ್ರಗ್ರಹಗಳು ಸಹ ಇವೆ. ಈ ಕ್ಷುದ್ರಗ್ರಹಗಳು ಯಾವ ನಿಯಂತ್ರಣಕ್ಕೂ ಸಿಗದೆ ಅಡ್ಡಾದಿಡ್ಡಿಯಾಗಿ ಚಲಿಸುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ನಮ್ಮ ಸೌರಮಂಡಲದಲ್ಲೇ ಸಾಕಷ್ಟು ಇರುವ ಕ್ಷುದ್ರಗ್ರಹಗಳಲ್ಲಿ ಹಲವು ನಮ್ಮ ಭೂಮಿಯ ಸಮೀಪವೇ ಹಾದುಹೋಗುತ್ತವೆ.
ಅಲ್ಲದೆ ಭೂಮಿಗೆ ಬಂದು ಅಪ್ಪಳಿಸಿರುವ ಘಟನೆಗಳು ಸಹ ವರದಿಯಾಗಿವೆ. ಹಿಂದೊಮ್ಮೆ ಸೈಬೀರಿಯಾದ ಮೇಲೆ ಕ್ಷುದ್ರಗ್ರಹವೊಂದು ಅಪ್ಪಳಿಸಿತ್ತು. ಕೋಟ್ಯಂತರ ವರ್ಷಗಳ ಹಿಂದೆ ಈ ಭೂಮಿ ಮೇಲಿದ್ದ ಡೈನೋಸಾರ್ ಸಂತತಿ ನಶಿಸಿ ಹೋಗಲು ಈ ಕ್ಷುದ್ರಗ್ರಹವೇ ಕಾರಣ ಎಂದು ನಂಬಲಾಗಿದೆ.

ಆಗಲೇ ತಿಳಿಸಿದಂತೆ ನಕ್ಷತ್ರ, ಗ್ರಹಗಳಂತೆ ಕ್ಷುದ್ರಗ್ರಹವೂ ಆಕಾಶ ಕಾಯ. ಇವುಗಳನ್ನು ಕಿರುಗ್ರಹಗಳೆಂದೂ ಕರೆಯುತ್ತಾರೆ. ಇಂಗ್ಲೀಷ್‌ನಲ್ಲಿ ಅಸ್ಟಿರಾಯ್ಡ್ ಎನ್ನುತ್ತಾರೆ. ಗ್ರಹಗಳಂತೆ ಇವೂ ಕೂಡ ಸೂರ್ಯನನ್ನು ಪ್ರದಕ್ಷಿಣೆ ಹಾಕುತ್ತವೆ. ಮಂಗಳ ಮತ್ತು ಗುರು ಗ್ರಹದ ನಡುವಿನ ಕಕ್ಷೆಗಳಲ್ಲಿ ಈ ಗ್ರಹಗಳು ಸುತ್ತುತ್ತವೆ.
ಹಲವು ಬಾರಿ ಕ್ಷುದ್ರಗ್ರಹಗಳ ಭೂಮಿಗಳತ್ತ ಹಾಗೂ ಭೂಮಿಯ ಸನಿಹದಲ್ಲೇ ಹಾದು ಹೋಗಿರುವ ಉದಾಹರಣೆಗಳಿವೆ. ಅದರಲ್ಲೂ ಕೆಲವೊಮ್ಮೆ ಬರಿಗಣ್ಣಿಗೆ ಕಾಣುವಷ್ಟು ಹತ್ತಿರದಲ್ಲಿ ಹಾದು ಹೋಗುತ್ತವೆ. ಮತ್ತೆ ಕೆಲವೊಮ್ಮೆ ಭೂಮಿಯ ಕಡೆ ಬರುವಂತಹ ಕ್ಷುದ್ರಗ್ರಹಗಳನ್ನು ಅಲ್ಲಿಯೇ ಸ್ಪೋಟಿಸಲಾಗುತ್ತದೆ ಇಲ್ಲವೆ ಅವು ದಿಕ್ಕು ಬದಲಿಸುವಂತೆಯೂ ಮಾಡಲಾಗುತ್ತದೆ.
ಆದರೆ ಈಗ ಕ್ಷುದ್ರಗ್ರಹವೊಂದು ಸಂಭಾವ್ಯ ಭೂಮಿ ಅಪ್ಪಳಿಸುವ ಕುರಿತು ತಜ್ಞರ ತಂಡ ಮಾಹಿತಿ ನೀಡಿದೆ. ಈ ಬಾರಿ ಶೇ.72ರಷ್ಟು ಪ್ರಮಾಣ ಈ ಕ್ಷುದ್ರಗ್ರಹ ಭೂಮಿ ಅಪ್ಪಳಿಸುವ ಸಾಧ್ಯತೆ ಇದೆಯಂತೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ 72% ಸಾಧ್ಯತೆಯನ್ನು ಹೊಂದಿದೆ ಮತ್ತು ಅದನ್ನು ತಡೆಯಲು ನಾವು ಸಾಕಷ್ಟು ಸಿದ್ಧವಾಗಿಲ್ಲದಿರಬಹುದು ಎಂದು ತಿಳಿಸಿದೆ. ಸುಮಾರು 14 ವರ್ಷಗಳ ನಂತರ ಈ ಕ್ಷುದ್ರಗ್ರಹ ಭೂಮಿ ತಲುಪಲಿದೆಯಂತೆ. ಈಗಾಗಲೆ ಅದರ ವೇಗ ಸಹ ಹೆಚ್ಚಾಗಿದ್ದು, ಭೂಮಿಯ ವಾತಾವರಣ ತಲುಪಬೇಕಾದರೆ 14 ವರ್ಷ ಬೇಕಂತೆ.
ಅಂದರೆ ನಿಖರವಾಗಿ ಹೇಳಬೇಕೆಂದರೆ 2038 ಜುಲೈ 12ರಂದು ಅದು ಭೂಮಿ ಅಪ್ಪಳಿಸಬಹುದು ಎಂದು ನಾಸಾ ತಿಳಿಸಿದೆ. ಈ ಸಮಯಕ್ಕೆ ಆ ಕ್ಷುದ್ರಗ್ರಹದ ಆಕಾರ ಹಾಗೂ ಗಾತ್ರ ಸೇರಿದಂತೆ ನಿಖರವಾದ ವೇಗ ಗುರುತು ಪತ್ತೆ ಸಾಧ್ಯವಾಗಿಲ್ಲವಂತೆ. ಈ ಕ್ಷುದ್ರಗ್ರಹದ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕಲು ಅದರ ಅಪಾಯ ಅಳೆಯಲು ಇನ್ನಷ್ಟು ಸಮಯಾವಕಾಶವಿದೆ ಎಂದು ನಾಸಾ ತಿಳಿಸಿದೆ. ಈ ಕ್ಷುದ್ರಗ್ರಹವನ್ನು ನ್ಯೂ ಸರ್ವೇಯರ್ ಎಂಬ ಅತ್ಯಂತ ಶಕ್ತಿಶಾಲಿ ದೂರದರ್ಶಕದ ಮೇಲ್ವೀಚಾರಣೆ ಮಾಡಲು ನಾಸಾ ಮುಂದಾಗಿದೆ. ಇದು ಭೂಮಿ ಬಂದೊದಗುವ ಅಪಾಯಗಳನ್ನು ದಶಕಗಳ ಮೊದಲೇ ಪತ್ತೆ ಮಾಡುವಷ್ಟು ಬಲಶಾಲಿಯಾಗಲಿದೆಯಂತೆ. 2028ರ ವೇಳೆಗೆ ಈ ದೂರ್ದರ್ಶಕದ ಕೆಲಸ ಅಂತಿಮ ಘಟ್ಟ ತಲುಪಲಿದೆ ಎಂದು ನಾಸಾ ತಿಳಿಸಿದೆ.
ಒಂದು ಸಾವಿರ ಕಿಮೀ ಅಥವಾ ಅದಕ್ಕಿಂತ ಕಡಿಮೆ ವ್ಯಾಸ ಇರುವ ಆಕಾಶಕಾಯವನ್ನು ಕ್ಷುದ್ರ ಗ್ರಹ ಎಂದು ಪರಿಗಣಿಸಲಾಗುತ್ತದೆ. ಇವು ಯಾವ ಗ್ರಹಗಳ ಸಮೀಪ ಹಾದು ಹೋಗುತ್ತವೇಯೋ ಆಗ ಆ ಗ್ರಹದ ಗುರುತ್ವಾಕರ್ಷಣಾ ಬಲಕ್ಕೆ ಒಳಗಾಗುತ್ತವೆ, ಈ ವೇಳೆ ವೇಗ ಪಡೆದು ಕೊಂಡು ಗ್ರಹಗಳತ್ತ ಸಾಗುತ್ತವೆ. ಅಲ್ಲದೆ ವಾತಾವರಣಕ್ಕೆ ಅವು ಸೇರಿದಾಗ ಬೆಂಕಿಯ ಉಂಡೆಯಾಗಿ ಮಾರ್ಪಡುತ್ತವೆ. ಈ ಇವು ಭೂಮಿಗೆ ಅಪ್ಪಳಿಸಿದರೆ ಬಹುದೊಡ್ಡ ಅನಾಹುತ ಸಂಭವಿಸುತ್ತದೆ.
1908, ಜೂನ್ 30ರಂದು ರಷ್ಯಾದ ಸೈಬೀರಿಯಾದ ಒಂದು ಪ್ರದೇಶದಲ್ಲಿ ಪುಟ್ಟ ಕ್ಷುದ್ರಗ್ರಹವೊಂದು ಅಪ್ಪಳಿಸಿ ಭಾರೀ ಸ್ಫೋಟವಾಗಿತ್ತು. 160-200 ಅಡಿ ಗಾತ್ರದ ಇದ್ದ ಈ ಕ್ಷುದ್ರಗ್ರಹ ಅಪ್ಪಳಿಸಿದ ಪರಿಣಾಮ 2,150 ಚದರ ಕಿಮೀ ವ್ಯಾಪ್ತಿಯ ಅರಣ್ಯ ಪ್ರದೇಶದ 8 ಕೋಟಿ ಮರಗಳು ನೆಲಸಮವಾಗಿತ್ತು.



Click it and Unblock the Notifications











