ಇಂದು ಭೂಮಿಯ ಸಮೀಪಕ್ಕೆ ಬರಲಿವೆ 2 ಕ್ಷುದ್ರಗ್ರಹ.! ಇಲ್ಲಿದೆ ಸಮಯ..!

ಆಗಸದಲ್ಲಿ ನಡೆಯುವ ಹಲವು ವಿದ್ಯಮಾನಗಳು ಅಚ್ಚರಿಯ ಜೊತೆಗೆ ಕುತೂಹಲಕ್ಕೂ ಕಾರಣವಾಗುತ್ತವೆ. ಅದರಲ್ಲೂ ಕೆಲವೊಂದು ವಿದ್ಯಮಾನವಂತು ಯಾರು ಕೂಡ ಊಹಿಸದಂತಹ ಘಟನೆಗಳಿಗೆ ಸಾಕ್ಷಿಯಾಗುತ್ತವೆ. ಹಾಗೆ ಇತ್ತಿಚಿಗೆ ಗ್ರಹಗಳ ಪಥ ಸಂಚಲನದಂತಹ ಅಪರೂಪದ ವಿದ್ಯಮಾನವು ಎಲ್ಲರ ಗಮನ ಸೆಳೆದಿತ್ತು. ಆದ್ರೆ ಈಗ ಕ್ಷುದ್ರಗ್ರಹದ ಚಲನೆ ಖಗೋಳ ವಿಜ್ಞಾನಿಗಳ ಕಣ್ಣು ಆಕಾಶದತ್ತ ತಿರುಗಿಸುವಂತೆ ಮಾಡಿದೆ.

ಭೂಮಿ ರಚನೆಯಾದಾಗಿನಿಂದ ಸಣ್ಣ ಪುಟ್ಟ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿವೆ. ಹಾಗೆ ಇಂದಿಗೂ ಕ್ಷುದ್ರಗ್ರಹದ ಭೀತಿ ಹೆಚ್ಚುತ್ತಲೇ ಇದೆ. ಸದ್ಯ ಈಗ ಭೂಮಿಯತ್ತ ಎರಡು ಕ್ಷುದ್ರಗ್ರಹಗಳು ವೇಗವಾಗಿ ಚಲಿಸುತ್ತಿವೆ. ಇಂದು ಭೂಮಿಗೆ ಅತ್ಯಂತ ಸಮೀಪದಲ್ಲೇ ಹಾಸು ಹೋಗುತ್ತಿವೆ. 2025 DT4 ಮತ್ತು 2025 DG3 ಎಂದು ಹೆಸರಿಸಲಾದ ಕ್ಷುದ್ರಗ್ರಹಗಳು ಭೂಮಿಯತ್ತ ಸಾಗುತ್ತಿವೆ.

Asteroid Alert 2 Space Rocks to Make Close Approach to Earth Today - Timing Revealed

ಒಂದು ಅಂದರೆ ಮಾರ್ಚ್ 4ರಂದು ಭೂಮಿಗೆ ಅತ್ಯಂತ ಸಮೀಪಕ್ಕೆ ಬರುತ್ತಿವೆ ಎಂದು ನಾಸಾ ತಿಳಿಸಿದೆ. ಇದರಿಂದ ಭೂಮಿಗೆ ಯಾವುದೇ ಹಾನಿ ಆಗುವ ನಿರೀಕ್ಷೆ ಇಲ್ಲದಿದ್ದರೂ ಖಗೋಳಶಾಸ್ತ್ರಜ್ಞರು ಈ ಅಪರೂಪದ ವಿದ್ಯಮಾನದ ಕುರಿತು ಆಸಕ್ತಿ ಹೊಂದಿದ್ದಲ್ಲದೆ, ಈ ಎರಡು ಕ್ಷುದ್ರಗ್ರಹಗಳ ಕುರಿತು ಮತ್ತಷ್ಟು ದಾಖಲೆಗಳ ಪಡೆಯಲು ಅವರು ಉತ್ಸುಕರಾಗಿದ್ದಾರೆ.

ಮೊದಲ ಕ್ಷುದ್ರಗ್ರಹ 2025 DT4ಯು ಅತ್ಯಂತ ವೇಗವಾಗಿ ಚಲಿಸುತ್ತಿದೆ. ಅಂದರೆ ಅಂದಾಜು ಪ್ರತಿ ಗಂಟೆಗೆ 64,805 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಇದು ಒಂದು ದೊಡ್ಡ ವಿಮಾನದ ಗಾತ್ರವಿದೆ ಸುಮಾರು 110 ಅಡಿಯಷ್ಟು ಅಗಲವಾಗಿದೆ ಎಂದು ತಿಳಿದುಬಂದಿದೆ. ಇದು ಮಾರ್ಚ್ 4ರಂದು ಸಮಯ ಮಧ್ಯಾಹ್ನ 1:46ರ ಸಮಯದಲ್ಲಿ ಭೂಮಿಗೆ ಅತ್ಯಂತ ಹತ್ತಿರದಲ್ಲಿ ಹಾದು ಹೋಗಲಿದೆ. ಭೂಮಿಯಿಂದ ಸುಮಾರು 2,440,000 ಕಿ.ಮೀಟರ್ ದೂರದಲ್ಲಿ ಬರಲಿದೆ. ಇದು ಭೂಮಿಗೆ ಅತ್ಯಂತ ಸುರಕ್ಷಿತ ದೂರವಾಗಿದೆ, ಯಾವ ಸಂಭವನೀಯ ಹಾನಿ ಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಹಾಗೆ ಮತ್ತೊಂದು ಕ್ಷುದ್ರಗ್ರಹವಾಗಿರುವ 2025 DG3 ಕೂಡ ಭೂಮಿಯ ಸಮೀಪಕ್ಕೆ ಬರಲಿದೆ. ಇದು ಅಂತಾರಾಷ್ಟ್ರೀಯ ಸಮಯ ರಾತ್ರ 8:11ರ ಸುಮಾರಿಗೆ ಭೂಮಿಗೆ ಅತ್ಯಂತ ಹತ್ತಿರದ ಸಮೀಪಕ್ಕೆ ಬರಲಿದೆ. ಇದು ಸುಮಾರು 100 ಅಡಿ ಅಗಲ ಹೊಂದಿರುವ ಕ್ಷುದ್ರಗ್ರಹ ಆಗಿದೆ. ಇದು ಗಂಟೆಗೆ 28,883 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಇದು ಭೂಮಿಯಿಂದ ಬರೋಬ್ಬರಿ 6,290,000 ಕಿಲೋಮೀಟರ್ ದೂರದಲ್ಲಿ ಚಲಿಸಲಿದೆ. ಹೀಗಾಗಿ ಭೂಮಿಗೆ ಅಪ್ಪಳಿಸುವ ಯಾವುದೇ ಅಪಾಯವಿಲ್ಲ.

ಈ ಎರಡೂ ಕ್ಷುದ್ರಗ್ರಹಗಳು ಗಾತ್ರದಲ್ಲಿ ದೊಡ್ಡದಾಗಿದ್ದರೂ ಕೂಡ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಯಾವ ಕ್ಷುದ್ರಗ್ರಹವು 150 ಮೀಟರ್‌ಗಳಿಗಿಂತ ದೊಡ್ಡದಾಗಿದ್ದರೆ ಮತ್ತು ಭೂಮಿಯಿಂದ 4.6 ಮಿಲಿಯನ್ ಕಿಲೋಮೀಟರ್‌ಗಳ ಹತ್ತರದಲ್ಲಿದ್ದರೆ ಮಾತ್ರ ಅಂತಹ ಕ್ಷುದ್ರಗ್ರಹವನ್ನು ಅಪಾಯಕಾರಿ ಕ್ಷುದ್ರಗ್ರಹ ಎಂದು ವರ್ಗೀಕರಿಸಲಾಗಿದೆ. ಇದರಲ್ಲಿ 2025 DT4 ಕ್ಷುದ್ರಗ್ರಹವು ಭೂಮಿಗೆ ಹತ್ತಿರವಾಗಿ ಬಂದರೂ ಇದರಿಂದ ಅಪಾಯವಿಲ್ಲ, ಏಕೆಂದರೆ ಇದರ ಗಾತ್ರ ಸಣ್ಣದಾಗಿದೆ, ಹೀಗಾಗಿ ಅಪಾಯಕಾರಿ ಅಲ್ಲದೆ ಕ್ಷುದ್ರಗ್ರಹ ಎಂಬ ವರ್ಗೀಕರಣದಲ್ಲಿ ಈ ಕ್ಷುದ್ರಗ್ರಹ ಚಲಿಸಲಿದೆ.

ಅಪಾಯ ಹೆಚ್ಚಿಸಿರುವುದು 2024 YR4 ಕ್ಷುದ್ರಗ್ರಹ

2023ರಲ್ಲಿ ಪತ್ತೆ ಮಾಡಲಾಗಿರುವ ಈ ಕ್ಷುದ್ರಗ್ರಹಕ್ಕೆ 2024 YR4 ಎಂದು ಹೆಸರಿಡಲಾಗಿದೆ. ಇದು 2032ರ ಡಿಸೆಂಬರ್‌ನಲ್ಲಿ ಭೂಮಿಯ ಅತ್ಯಂತ ಸಮೀಪ ಬರಲಿದೆ. ಇದು ಒಂದು ಫುಟ್‌ಬಾಲ್ ಮೈದಾನದಷ್ಟು ದೊಡ್ಡದಾಗಿದೆ. ಹಾಗೆ ವೇಗವಾಗಿ ಭೂಮಿಯತ್ತ ಚಲಿಸಿದೆ. ಹೀಗಾಗಿ ಇದು ಅಪಾಯಕಾರಿ ಕ್ಷುದ್ರಗ್ರಹ ಎಂದು ವರ್ಗೀಕರಿಸಲಾಗಿದೆ. ಇದರ ಕುರಿತು ಇನ್ನು ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ.

English summary

Asteroid Alert: 2 Space Rocks to Make Close Approach to Earth Today - Timing Revealed

Two asteroids are currently hurtling towards Earth. They are both approaching very close to Earth today. The asteroids, named 2025 DT4 and 2025 DG3, are heading towards Earth.
Story first published: Tuesday, March 4, 2025, 7:03 [IST]
X
Desktop Bottom Promotion