Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಷಾಡ ಮಾಸಿಕ ಶಿವರಾತ್ರಿ : ಉಪವಾಸ ಹಾಗೂ ಪೂಜಾ ವಿಧಾನ ಹೇಗಿರಬೇಕು?
ಮಹಾದೇವ ಭಕ್ತರ ಮುಗ್ಧ ಭಕ್ತಿಗೆ ಖಂಡಿತ ಒಲಿಯುತ್ತಾನೆ. ನಿಷ್ಕಲ್ಮಶ ಮನಸ್ಸಿನಿಂದ ಒಂದು ಲೋಟ ನೀರು ಅರ್ಪಿಸಿದರೂ ಕೂಡ ಶಿವ ಸಂತೃಪ್ತನಾಗುತ್ತಾನಂತೆ. ಅದೇ ರೀತಿ ಭಕ್ತಿಯಿಂದ ಯಾರು ಶೀವನನ್ನು ಬೇಡಿಕೊಳ್ಳುತ್ತಾರೆಯೋ ಅವರ ಸಕಲ ಸಂಕಷ್ಟಗಳನ್ನು ಶಿವ ಈಡೇರಿಸುತ್ತಾನೆ. ಪ್ರತಿ ಸೋಮವಾರವು ಶಿವನಿಗೆ ಸಮರ್ಪಿತವಾಗಿದ್ದರೂ ಕೂಡ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಮಹಾದೇವನನ್ನು ಮೆಚ್ಚಿಸಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ದಿನವನ್ನುಮಾಸಿಕ ಶಿವರಾತ್ರಿ ಎಂದು ಕರೆಯಲಾಗುತ್ತದೆ.
ಶಿವನಿಗೆ ಪ್ರಿಯವಾದ ದಿನದಂದು ರಾತ್ರಿ ಜಾಗರಣೆ ಮಾಡಿ ಶಿವಪೂಜೆ ಮಾಡಬೇಕೆಂಬ ನಿಯಮವಿದೆ. ಅದೇ ರೀತಿ, ಮಾಸಿಕ ಶಿವರಾತ್ರಿಯ ದಿನದಂದು ಉಪವಾಸವನ್ನು ಆಚರಿಸುವುದರಿಂದ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಅಷ್ಟಕ್ಕು ಆಷಾಢ ಮಾಸದ ಶಿವರಾತ್ರಿಯನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಆ ದಿನ ಉಪವಾಸ ಹಾಗೂ ಪೂಜಾ ವಿಧಾನ ಹೇಗಿರಬೇಕು ಅನ್ನೋದನ್ನು ತಿಳಿಯೋಣ.

ಆಷಾಢ ಮಾಸಿಕ ಶಿವರಾತ್ರಿ 2023 ದಿನಾಂಕ :
ಆಷಾಢ ಮಾಸದ ಮಾಸಿಕ ಶಿವರಾತ್ರಿಯ ಉಪವಾಸವನ್ನು 16 ಜೂನ್ 2023 ರಂದು ಆಚರಿಸಲಾಗುತ್ತದೆ. ಸಮಸ್ಯೆಗಳನ್ನು ಹೋಗಲಾಡಿಸಲು ಶಿವರಾತ್ರಿಯ ದಿನದಂದು ಶಿವಲಿಂಗದ ರುದ್ರಾಭಿಷೇಕವನ್ನು ಮಾಡುವುದು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಶಿವನ ವಿವಾಹವು ಈ ದಿನಾಂಕದಂದು ನಡೆಯಿತು, ಕೆಲವು ನಂಬಿಕೆಗಳ ಪ್ರಕಾರ, ಈ ದಿನಾಂಕದಂದು ಮೊದಲ ಬಾರಿಗೆ, ಮಹಾದೇವನು ಶಿವಲಿಂಗದ ರೂಪದಲ್ಲಿ ಪ್ರಕಟವಾಗುತ್ತಾನೆ ಎಂದು ಪರಿಗಣಿಸಲಾಗಿದೆ.
ಆಷಾಢ ಮಾಸಿಕ ಶಿವರಾತ್ರಿ 2023 ಮುಹೂರ್ತ :
ಆಷಾಢ ಮಾಸದ ಮಾಸಿಕ ಶಿವರಾತ್ರಿಯು ಜೂನ್ 16, 2023 ರಂದು ಬೆಳಿಗ್ಗೆ 08:39 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಜೂನ್ 17, 2023 ರಂದು ಬೆಳಿಗ್ಗೆ 09:11 ಕ್ಕೆ ಕೊನೆಗೊಳ್ಳುತ್ತದೆ.
ಶಿವ ಪೂಜೆ ಸಮಯ - 17 ಜೂನ್ 2023, 12.02 ಮಧ್ಯರಾತ್ರಿ - 12.42 ಮಧ್ಯರಾತ್ರಿಯವರೆಗೆ
ರಾತ್ರಿ ವೇಳೆ ಶಿವಪೂಜೆಯನ್ನು ಏಕೆ ಮಾಡುತ್ತಾರೆ ?
ಶಿವನು ಚತುರ್ದಶಿ ದಿನ ರಾತ್ರಿ ವಿವಾಹವಾದನು. ಮಹಾದೇವನು ವಿನಾಶದ ದೇವರಾಗಿದ್ದರಿಂದ ಆತ ರಾತ್ರಿಯನ್ನು ಪ್ರೀತಿಸುತ್ತಾನೆ. ರಾತ್ರಿಯು ವಿನಾಶದ ಅವಧಿಯನ್ನು ಪ್ರತಿನಿಧಿಸುತ್ತದೆ. ತಜ್ಞರ ಪ್ರಕಾರ ಉಪವಾಸ ಮಾಡುತ್ತಾ ಇಂದ್ರಿಯ ಮತ್ತು ಮನಸ್ಸನ್ನು ನಿಯಂತ್ರಿಸುವ ವ್ಯಕ್ತಿಯು ರಾತ್ರಿಯಲ್ಲಿ ಎಚ್ಚರ ಇರುವ ಮೂಲಕ ತನ್ನ ಗುರಿಯನ್ನು ಸಾಧಿಸಲು ಪ್ರಯತ್ನಿಸಬಹುದಂತೆ. ಅಷ್ಟೇ ಅಲ್ಲದೇ, ರಾತ್ರಿ ಸಮಯದಲ್ಲಿ ಏಕಾಗ್ರತೆಯಿಂದ ಶಿವನನ್ನು ಪೂಜಿಸುವುದು ಸುಲಭ.
ಮಾಸಿಕ ಶಿವರಾತ್ರಿ ಪೂಜೆಯನ್ನು ಯಾವ ರೀತಿ ಮಾಡಬೇಕು?
ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಸೂರ್ಯಾಸ್ತದ ನಂತರ ವಿಶೇಷವಾಗಿ ಪ್ರದೋಷ ಅವಧಿಯಲ್ಲಿ ಮತ್ತು ರಾತ್ರಿಯ ನಾಲ್ಕು ಗಂಟೆಗಳು ಶಿವನ ಆರಾಧನೆಗೆ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಮಾಸಿಕ ಶಿವರಾತ್ರಿಯ ದಿನ ರಾತ್ರಿ ಜಾಗರಣೆ ಮಾಡಿ ನಾಲ್ಕು ಪ್ರಹರಗಳನ್ನು ಪೂಜಿಸುವುದರಿಂದ ಮಹಾದೇವನು ಬಹಳ ಸಂತೋಷ ಪಡುತ್ತಾನಂತೆ.
ಮೊದಲ ಪ್ರಹಾರದಲ್ಲಿ ಸಂಜೆ 6 ರಿಂದ 9 ರವರೆಗೆ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಬೇಕು ಎರಡನೇ ಹಂತದಲ್ಲಿ ಮೊಸರಿನಿಂದ ಅಭಿಷೇಕ ಮಾಡಬೇಕು. ಇದರಿಂದ ನಿಮ್ಮ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತದೆ, ಮೂರನೇ ಹಂತದಲ್ಲಿ ತುಪ್ಪದ ಅಭಿಷೇಕ ಮಾಡೋದ್ರಿಂದ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಾಗುತ್ತಂತೆ. ಮತ್ತು ನಾಲ್ಕನೇ ಹಂತದಲ್ಲಿ ಜೇನುತುಪ್ಪದೊಂದಿಗೆ ಪೂಜಿಸುವುದು ಮೋಕ್ಷವನ್ನು ಪಡೆಯಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ಒಟ್ಟಿನಲ್ಲಿ ಶಿವ ಪೂಜೆಯನ್ನು ಯಾರು ಭಕ್ತಿಯಿಂದ ಮಾಡುತ್ತಾರೆಯೋ ಅವರಿಗೆ ಖಂಡಿತ ಶಿವ ಒಲಿಯುತ್ತಾನೆ.



Click it and Unblock the Notifications

