Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ವಾಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿದ್ದರೆ ಸಂಕಷ್ಟ, ಸಮಸ್ಯೆ ತಪ್ಪಿದ್ದಲ್ಲ
ಮನೆ ಚಿಕ್ಕದಾಗಿರಲಿ, ದೊಡ್ಡದಾಗಿರಲಿ, ಮನೆಯೆಂದರೆ ಗಡಿಯಾರ ಇದ್ದೇ ಇರುತ್ತದೆ, ಈಗಂತೂ ಕೈಯಲ್ಲಿ ಮೊಬೈಲ್ ಇರುತ್ತೆ, ಸಮಯ ಎಷ್ಟಾಯ್ತು ಎಂದು ಮೊಬೈಲ್ ನೋಡಿ ತಿಳಿಯುತ್ತೇವೆ, ಆದರೂ ಗಡಿಯರ ಇರಲೇಬೇಕು ಅಲ್ವಾ?
ಆದರೆ ಮನೆಯಲ್ಲಿ ಗರಿಯಾರ ಎಲ್ಲಿಂದರಲ್ಲಿ ಇಡುವಂತಿಲ್ಲ ಎಂಬುವುದು ಗೊತ್ತೇ? ವಾಸ್ತುಶಾಸ್ತ್ರ ಪ್ರಕಾರ ಗಡಿಯಾರ ಕೆಲವು ಕಡೆ ಇಡುವಂತೆಯೇ ಇಲ್ಲ, ಆ ಸ್ಥಳಗಳು ನೆಗೆಟಿವ್ ಎನರ್ಜಿ ಆಕರ್ಷಿಸುತ್ತದೆಯಂತೆ. ವಾಸ್ತು ಶಾಸ್ತ್ರ ಪ್ರಕಾರ ಗಡಿಯಾರ ಎಲ್ಲಿಡಬೇಕು ? ಎಂದು ನೋಡೋಣ ಬನ್ನಿ:

ಉತ್ತರ ಅಥವಾ ಪೂರ್ವ ಭಾಗದಲ್ಲಿ
ಮನೆಯಲ್ಲಿ ಅಥವಾ ಆಫೀಸ್‌ನಲ್ಲಿ ಗಡಿಯಾರ ನೇತು ಹಾಕುವುದಾದರೆ ಉತ್ತರ ಅಥವಾ ಪೂರ್ವ ದಿಕ್ಕಿಗೆ ನೇತು ಹಾಕಬೇಕು, ಈ ದಿಕ್ಕುಗಳು ಧನಾತ್ಮಕ ಶಕ್ತಿಯನ್ನು ಹೆಚ್ಚು ಆಕರ್ಷಿಸುತ್ತದೆ.
ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಡಬೇಡಿ
ಸಾಮನ್ಯವಾಗಿ ಗಡಿಯಾರ ನೇತು ಹಾಕುವಾಗ ಇದೆಲ್ಲಾ ಗಮನಿಸುವವರು ಕಡಿಮೆ, ಆದರೆ ವಾಸ್ತುಶಾಸ್ತ್ರ ಪ್ರಕಾರ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಗಡಿಯಾರ ನೇತು ಹಾಕಬಾರದು.
ಎತ್ತರ ಕೂಡ ಮುಖ್ಯ
ಗಡಿಯಾರವನ್ನು ತುಂಬಾ ಎತ್ತರದಲ್ಲಿ ನೇತು ಹಾಕಬಾರದು, ತುಂಬಾ ಕೆಳಗಡೆಯೂ ಇಡಬಾರದು, ನೀವು ಕೂತಾಗ ಹ ಹೆಚ್ಚಿನ ಶ್ರಮವಿಲ್ಲದೆ ಆ ಗಡಿಯಾರ ನೋಡುವಂತಿರಬೇಕು.
ಸರಿಯಾದ ಟೈಂ ತೋರಿಸದ ಗಡಿಯಾರ ಮನೆಯಲ್ಲಿ ಇಡಬೇಡಿ
ಮನೆಯಲ್ಲಿ ಕೆಲವೊಂದು ಗಡಿಯಾರ ಬ್ಯಾಟರಿಯಿಲ್ಲ ಅಥವಾ ಹಾಳಾಗಿದೆ ಎಂಬ ಕಾರಣಕ್ಕೆ ಸರಿಯಾದ ಸಮಯ ತೋರಿಸುತ್ತಿರಲ್ಲ, ಅಂಥ ಗಡಿಯಾರ ಮನೆಯಲ್ಲಿದ್ದರೆ ಬ್ಯಾಟರಿ ಹಾಕಬೇಕಾಗಿರುವುದಕ್ಕೆ ಬ್ಯಾಟರಿ ಹಾಕಿ, ಹಾಳಾಗಿದ್ದರೆ ಸರಿಪಡಿಸಿ ಅಥವಾ ಬಿಸಾಡಿ, ಮನೆಯ ಗೋಡೆಗೆ ಮಾತ್ರ ನೇತು ಹಾಕಬೇಡಿ. ಇನ್ನು ಒಡೆದು ಹೋದ ಗಡಿಯಾರ ಕೂಡ ಬಳಸಬೇಡಿ.
ಬೆಡ್‌ರೂಂನಲ್ಲಿ ಗಡಿಯಾರ ನೇತು ಹಾಕಬೇಡಿ
ಬೆಡ್‌ರೂಂನಲ್ಲಿ ಗಡಿಯಾರ ಇರುವುದು ಅಷ್ಟು ಸೂಕ್ತವಲ್ಲ ಇದ್ದರೂ ನೀವು ಮಲಗಿದಾಗ ನಿಮ್ಮ ಕಣ್ಣಿಗೆ ಬೀಳುವಂತೆ ಇರಬಾರದು ಎಂದು ಹೇಳಲಾಗುವುದು.
ಆಕರ್ಷಕ ಗಡಿಯಾರ
ಆಕರ್ಷಕ ಗಡಿಯಾರಗಳು ಮನೆಯ ಗೋಡೆಯ ಅಂದವನ್ನು ಹೆಚ್ಚಿಸುತ್ತದೆ. ಕಪ್ಪು, ಡಲ್ ಆಗಿ ಕಾಣುವ ಗಡಿಯಾರಕ್ಕಿಂತ ಆಕರ್ಷಕವಾಗಿ ಕಾಣುವ ಗಡಿಯಾರ ಬಳಸಿ.
ಗಡಿಯಾರದ ಶೇಪ್ ಕೂಡ ಮುಖ್ಯವೇ?
ವಾಸ್ತು ಶಾಸ್ತ್ರ ಪ್ರಕಾರ ವೃತ್ತಾಕಾರದ ಗಡಿಆರ ಬಳಸುವುದು ಸೂಕ್ತವೆಂದು ವಾಸ್ತುಶಾಸ್ತ್ರ ಹೇಳುತ್ತದೆ.



Click it and Unblock the Notifications
