Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಖಿ ಹಬ್ಬದಂದು ಸಹೋದರಿಗೆ ಅವರ ರಾಶಿಪ್ರಕಾರ ಈ ಗಿಫ್ಟ್ಸ್ ಲಕ್ಕಿ
ಸಹೋದರ-ಸಹೋದರಿಯ ಬಾಂಧವ್ಯ ಗಟ್ಟಿಯಾಗಿಸುವ ಹಬ್ಬ ರಾಖಿ ಹಬ್ಬ. ರಕ್ಷಾ ಬಂಧನನದ ದಿನ ಸಹೋದರಿ ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟುತ್ತಾಳೆ, ರಾಖಿ ಕಟ್ಟಿದ ಸಹೋದರಿಗೆ ಸಹೋದರ ಏನಾದರೂ ಗಿಫ್ಟ್ ನೀಡುವುದು ವಾಡಿಕೆ, ನೀವು ಸಹೋದರಿಗೆ ಗಿಫ್ಟ್ ನೀಡುವಾಗ ಅವಳ ರಾಶಿ ಪ್ರಕಾರ ಗಿಫ್ಟ್ ನೀಡಿದರೆ ಅದು ಅವಳಿಗೆ ಲಕ್ಕಿಯಾಗಿರುತ್ತದೆ ಎನ್ನುತ್ತದೆ ವೈದಿಕ ಶಾಸ್ತ್ರ. ಯಾವ ರಾಶಿಯವರಿಗೆ ಯಾವ ಬಗೆಯ ಗಿಫ್ಟ್ ನೀಡಿದರೆ ಒಳ್ಳೆಯದು ಎಂದು ನೋಡೋಣ:

ಮೇಷ ರಾಶಿ: ಮೇಷ ರಾಶಿಯ ನಿಮ್ಮ ಸಹೋದರಿಗೆ ಕಿವಿಯೋಲೆ, ಪೆಂಡೆಂಟ್ ಗಿಫ್ಟ್ ಆಗಿ ನೀಡಬಹುದು. ಮೇಷ ರಾಶಿಯ ಅಧಿಪತಿ ಮಂಗಳ, ಆದ್ದರಿಂದ ಕೆಂಪು ಬಣ್ಣದ ಡ್ರೆಸ್ ಕೂಡ ಕೊಡಿಸಬಹುದು.
ವೃಷಭ ರಾಶಿ: ವೃಷಭ ರಾಶಿಯ ಸಹೋದರಿಗೆ ಸಿಲ್ವರ್ ಅಥವಾ ಬಿಳಿ ಬಣ್ಣದ ಉಡುಗೊರೆ ನೀಡಿ. ಈ ಬಣ್ಣಗಳು ಅವಳ ಲಕ್ಕಿ ಕಲರ್ ಆಗಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಹಸಿರು ಬಣ್ಣದ ಗಿಫ್ಟ್ಸ್ ನೀಡಬಹುದು. ಹರಳಿನ ಆಭರಣ, ಹಸಿರು ಬಣ್ಣದ ಉಡುಪು ಹೀಗೆ ಅವಳ ಇಷ್ಟದ ವಸ್ತುಗಳನ್ನು ಗಿಫ್ಟ್ ಆಗಿ ನೀಡಬಹುದು.
ಕರ್ಕ ರಾಶಿ:ನೀವು ಕರ್ಕ ರಾಶಿಯ ನಿಮ್ಮ ಸಹೋದರಿಗೆ ಏನೇ ಗಿಫ್ಟ್ ನೀಡುವುದಾದರೂ ಅದರ ಜೊತೆಗೆ ಬಿಳಿ ಸಿಹಿ ತಿಂಡಿಯನ್ನು ಇಟ್ಟು ನೀಡಿ.
ಸಿಂಹ ರಾಶಿ: ನೀವು ಸಿಂಹ ರಾಶಿಯ ನಿಮ್ಮ ಸಹೋದರಿಗೆ ಗಿಫ್ಟ್ ನೀಡಲು ಹಳದಿ ಅಥವಾ ಕೇಸರಿ ಬಣ್ಣವನ್ನು ಆಯ್ದುಕೊಳ್ಳುವುದು ಒಳ್ಳೆಯದು.
ಕನ್ಯಾ ರಾಶಿ: ಕನ್ಯಾ ರಾಶಿಯ ಸಹೋದರಿಗೆ ನೀವು ಗಿಫ್ಟ್ಸ್ ಜೊತೆಗೆ ಗಣೇಶನ ಮೂರ್ತಿಯನ್ನು ನೀಡಿ, ಇದು ಅವಳ ಪಾಲಿಗೆ ಲಕ್ಕಿಯಾಗಿರುತ್ತದೆ.
ತುಲಾ ರಾಶಿ: ನೀವು ತುಲಾ ರಾಶಿಯ ಸಹೋದರಿಗೆ ಸೌಂದರ್ಯವರ್ಧಕಗಳನ್ನು ಗಿಫ್ಟ್ ಮಾಡಿದರೆ ಒಳ್ಳೆಯದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಸಹೋದರಿಗೆ ಗಿಫ್ಟ್ಸ್ ನೀಡಲು ಯಾವುದೇ ಲೋಹದ ಆಭರಣಗಳ ಗಿಪ್ಟ್ಸ್ ಹಾಗೂ ಕೆಂಪು ಡ್ರೆಸ್‌ಗಳನ್ನು ಗಿಫ್ಟ್ಸ್ ಆಗಿ ನೀಡಬಹುದು.
ಧನು ರಾಶಿ: ಧನು ರಾಶಿಯವರಿಗೆ ಚಿನ್ನದ ಆಭರಣ, ಹಳದಿ ಬಣ್ಣದ ಉಡುಪುಗಳನ್ನು ಉಡುಗೊರೆಯಾಗಿ ನೀಡಬಹುದು. ಇದರ ಜೊತೆಗೆ ಹಳದಿ ಬಣ್ಣದ ಶೋ ಪೀಸ್ ಅನ್ನು ಉಡುಗೊರೆಯಾಗಿ ನೀಡಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ನೀವು ಗಿಫ್ಟ್ಸ್ ಜೊತೆಗೆ ಕಬ್ಬಿಣದಿಂದ ಮಾಡಿದ ಶೋ ಪೀಸ್ ಅನ್ನು ಉಡುಗೊರೆಯಾಗಿ ನೀಡಿದರೆ ಒಳ್ಳೆಯದು.
ಕುಂಭ ರಾಶಿ: ಹರಳಿನ ಆಭರಣ ಅಥವಾ ಕಿಚನ್ ಐಟಂ ಅನ್ನು ನೀವು ಗಿಫ್ಟ್ಸ್ ಆಗಿ ನೀಡಿ. ಅವರ ಆಸಕ್ತಿಯ ವಸ್ತುಗಳನ್ನು ಗಿಫ್ಟ್ಸ್ ಆಗಿ ನೀಡುವ ಮೂಲಕ ಅವರ ಕಾರ್ಯಕ್ಕೆ ನಿಮ್ಮ ಬೆಂಬಲ ಸದಾ ಇರಲಿದೆ ಎಂಬುವುದನ್ನು ಸೂಚಿಸಿ.
ಮೀನ ರಾಶಿ: ಮೀನ ರಾಶಿಯ ಸಹೋದರಿಗೆ ಹರಳಿನ ಆಭರಣಗಳು, ತಾಮ್ರದ ವಸ್ತಗಳನ್ನು ಉಡುಗೊರೆಯಾಗಿ ನೀಡಿ.
ಈ ರಕ್ಷಾ ಬಂಧನ ನಿಮ್ಮಿಬ್ಬರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸಲಿ, ಸದಾ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು, ಜೀವನದಲ್ಲಿ ಖುಷಿ-ಖುಷಿಯಾಗಿರಿ.



Click it and Unblock the Notifications
