Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ರಾಶಿಗೆ ತಕ್ಕ ಪುರುಷರಲ್ಲಿ ಕಂಡು ಬರುವ ಉತ್ತಮ ಸ್ವಭಾವಗಳಿವು
ರಾಶಿಗೂ ವ್ಯಕ್ತಿಯ ಸ್ವಭಾವಕ್ಕೂ ಏನಾದರೂ ಸಂಬಂಧವಿದೆಯೇ? ಹೌದು ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಒಂದು ವ್ಯಕ್ತಿಯಂತೆ ಮತ್ತೊಂದು ವ್ಯಕ್ತಿಯ ಸ್ವಭಾವ ಇರುವುದಿಲ್ಲ, ಆದರೆ ಕೆಲವೊಂದು ಹೋಲಿಕೆಗಳಿರುತ್ತದೆ ಅಲ್ವಾ? ಹೌದು ಜ್ಯೋತಿಷ್ಯವು ರಾಶಿಗೆ ತಕ್ಕಂತೆ ವ್ಯಕ್ತಿಗಳಲ್ಲಿ ಕೆಲವೊಂದು ಸ್ವಭಾವವನ್ನು ಕಾಣಬಹುದು ಎಂದು ಹೇಳುತ್ತದೆ. ಇಲ್ಲಿ ರಾಶಿಗೆ ತಕ್ಕಂತೆ ಪುರುಷರ ಸ್ವಭಾವ ಹೇಗಿರುತ್ತದೆ ಎಂದು ಹೇಳಲಾಗಿದೆ.
ಯಾವ ರಾಶಿಯ ಪುರುಷರಲ್ಲಿ ಯಾವ ಬಗೆಯ ವಿಶೇಷ ಗುಣಗಳಿರುತ್ತದೆ ಎಂಬ ಕುತೂಹಲವೇ ಹಾಗಾದರೆ ಈ ಲೇಖನ ನಿಮಗಾಗಿ....

ಮೇಷ ರಾಶಿ
ಇವರು ಏನೇ ಮಾಡಲಿ ಅದರಲ್ಲಿ ಶೇ. 100ರಷ್ಟು ಡೆಡಿಕೇಷನ್ ತೋರಿಸುತ್ತಾರೆ. ಅವರು ಅವರಿಗೆ ಇಷ್ಟವಾಗಿರುವುದನ್ನೇ ಮಾಡುತ್ತಾರೆ, ಇವರು ಇತರರ ಜೊತೆಗೆ ಸುಲಭವಾಗಿ ಬೆರೆಯುತ್ತಾರೆ. ಏನಾದರೂ ನಿರ್ಧಾರಗಳನ್ನು ಪಟ್ ಅಂತ ತೆಗೆದುಕೊಳ್ಳುತ್ತಾರೆ.
ವೃಷಭ ರಾಶಿ
ಇವರು ಸ್ವತಂತ್ರ ಮನೋಭಾವದವರು. ಇವರು ತುಂಬಾ ಕೇರ್ ಮಾಡುವ ಸ್ವಭಾವದವರು, ಇತರರಿಗೆ ಕಷ್ಟ ಅಂತ ಬಂದರೆ ತಕ್ಷಣವೇ ಸಹಾಯಕ್ಕೆ ನಿಲ್ಲುವ ಸ್ವಭಾವದವರು, ಇವರು ಮನಸ್ಸಿನ ಮಾತು ಹೆಚ್ಚು ಕೇಳುವವರು, ಎಲ್ಲದರಲ್ಲೂ ಕಂಫರ್ಟ್ ಬಯಸುವವರು.
ಮಿಥುನ ರಾಶಿ
ತುಂಬಾ ಮಾನಾಡುತ್ತಾರೆ, ತುಂಬಾ ಸ್ನೇಹ ಸ್ವಭಾವದವರು, ತುಂಬಾ ಬುದ್ಧಿವಂತಿಕೆ ಸ್ವಭಾವದವರು, ಸಂಬಂಧ ವಿಷಯಕ್ಕೆ ಬಂದರೆ ಎಲ್ಲಾ ಸಂ ಬಂಧ ಚೆನ್ನಾಗಿರಬೇಕೆಂದು ಬಯಸುವ ಸ್ವಭಾವದವರು. ಇವರು ಸಾಹಸವನ್ನು ತುಂಬಾ ಇಷ್ಟಪಡುತ್ತಾರೆ.
ಕರ್ಕ ರಾಶಿ
ಕರ್ಕ ರಾಶಿಯ ಪುರುಷರು ಸ್ವಲ್ಪ ಎಮೋಷನಲ್ ಜೀವಿಗಳು. ಅವರು ಜೀವನದಲ್ಲಿರುವ ವ್ಯಕ್ತಿಗಳನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕರ್ಕ ರಾಶಿಯ ಪುರುಷ ತನ್ನ ಸಂಗಾತಿಯನ್ನು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಾನೆ.
ಸಿಂಹ ರಾಶಿ
ಇವರು ತುಂಬಾ ಬುದ್ಧಿವಂತರು, ಧೈರ್ಯವಂತರು. ಯಾವುದೇ ರಿಸ್ಕ್ ತೆಗೆಯಲು ಹಿಂದೆ ಮುಂದೆ ನೋಡಲ್ಲ. ತುಂಬಾ ಕ್ರಿಯೇಟಿವ್ ವ್ಯಕ್ತಿಗಳು. ಅವರ ಜೀವನದಲ್ಲಿ ಸಹಾಯ ಮಾಡಿದವರನ್ನು ಎಂದಿಗೂ ಮರೆಯಲ್ಲ.
ಕನ್ಯಾ ರಾಶಿ
ಕನ್ಯಾ ರಾಶಿಯವರು ತುಂಬಾನೇ ಮೃದು ಸ್ವಭಾವದವರು, ಅಲ್ಲದೆ ಪ್ರಾಕ್ಟಿಕಲ್ ಆಗಿ ಆಲೋಚಿಸುವವರು, ಒಳ್ಳೆಯ ಮಾತುಗಾರರೂ ಆಗಿರುತ್ತಾರೆ. ಬೇರೆ ವ್ಯಕ್ತಿಗಳನ್ನು ಬೇಗನೆ ಜಡ್ಜ್ ಮಾಡುವ ಸ್ವಭಾವ ಇವರಿಗಿರುತ್ತದೆ.
ತುಲಾ ರಾಶಿ
ಇವರು ಒಂದು ವಿಷಯವನ್ನು ಬೇರೆ-ಬೇರೆ ದೃಷ್ಟಿಕೋನದಿಂದ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬೇರೆಯವರ ಜೊತೆಗೆ ಸುಲಭವಾಗಿ ಬೆರೆಯುತ್ತಾರೆ. ಬೇರೆಯವರಿಗೆ ನೋವುಂಟು ಮಾಡಲು ಇಷ್ಟಪಡಲ್ಲ.
ವೃಶ್ಚಿಕ ರಾಶಿ
ಇವರು ತುಂಬಾ ಬುದ್ಧಿವಂತರು, ಅಲ್ಲದೆ ಧೈರ್ಯವಂತರು. ತಮ್ಮ ಗುಣದಿಂದ ಇತರರ ಗಮನ ಸೆಳೆಯುತ್ತಾರೆ. ಅಲ್ಲದೆ ಬೇರೆಯವರಿಗೆ ಧೈರ್ಯ ತುಂಬುವ ಗುಣ ಇವರಲ್ಲಿದೆ.
ಧನು ರಾಶಿ
ಇವರು ಹೊಸ ವಿಷಯ ಕಲಿಯಲು ತುಂಬಾನೇ ಆಸಕ್ತಿ ತೋರಿಸುತ್ತಾರೆ. ತಮ್ಮ ಆಸಕ್ತಿಯ ವಿಷಯವನ್ನು ಕಲಿಯಲು, ಮಾಡಲು ತುಂಬಾ ಆಸಕ್ತಿ ತೋರಿಸುತ್ತಾರೆ. ಅಲ್ಲದೆ ಹಾಸ್ಯ ಸ್ವಭಾವದವರು.
ಮಕರ ರಾಶಿ
ಇವರು ತಮಗೆ ಅನಿಸಿದಂತೆ ಬದುಕಲು ಇಷ್ಟಪಡುವವರು. ತಮ್ಮ ಗುರಿ ಮುಟ್ಟಲು ಶತ ಪ್ರಯತ್ನ ಮಾಡುತ್ತಾರೆ. ಯಾರೇ ಸಹಾಯ ಮಾಡಲಿ, ಮಾಡದಿರಲಿ ತಮ್ಮ ಗುರಿ ಮುಟ್ಟುವವರಿಗೆ ಬಿಡುವುದಿಲ್ಲ, ತುಂಬಾ ನಿಯತ್ತಿನ ಸ್ವಭಾವದವರು.
ಕುಂಭ ರಾಶಿ
ಪ್ರೀತಿಯಲ್ಲಿ ತುಂಬಾ ನಿಯತ್ತಿನ ಸ್ವಭಾವದವರು. ಪ್ರತಿಯೊಂದು ವಿಷಯವನ್ನು ಬೇರೆ ದೃಷ್ಟಿಕೋನದಿಂದ ನೋಡಲು ಇಷ್ಟಪಡುತ್ತಾರೆ. ಇವರು ನೋಡುವುದಕ್ಕಿಂತ ತಮ್ಮ ಬುದ್ಧಿವಂತಿಕೆಯಿಂದ ಹೆಚ್ಚು ಆಕರ್ಷಿತರಾಗುತ್ತಾರೆ.
ಮೀನ ರಾಶಿ
ಇವರು ಕೂಡ ತುಂಬಾ ಎಮೋಷನಲ್ ಸ್ವಭಾವದವರು. ಇವರು ತುಂಬಾ ರೊಮ್ಯಾಂಟಿಕ್ ವ್ಯಕ್ತಿಗಳು, ಅಲ್ಲದೆ ಸೂಕ್ಷ್ಮ ಸ್ವಭಾವದವರು.



Click it and Unblock the Notifications
