Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಅರ್ಜುನ್ ತೆಂಡೂಲ್ಕರ್ ನಿಶ್ಚಿತಾರ್ಥ: ಯಾರು ಈ ಸಚಿನ್ ತೆಂಡೂಲ್ಕರ್ ಸೊಸೆ.!
ಭಾರತ ಕ್ರಿಕೆಟ್ ತಂಡದ ಹೆಸರು ಕೇಳಿದ್ದರೆ ಒಂದಿಷ್ಟು ಮಂದಿ ದಿಗ್ಗಜರ ಹೆಸರು ನೆನಪಾಗುತ್ತೆ. ಅದ್ರಲ್ಲೂ ಸಚಿನ್ ತೆಂಡೂಲ್ಕರ್ ಹೆಸರು ಎಲ್ಲರಿಗೂ ನೆನಪಾಗುತ್ತೆ. ಕ್ರಿಕೆಟ್ ದೇವರು ಎಂದೇ ಹೆಸರು ಪಡೆದ ಅವರು ಯಾರು ಮಾಡಿರದಂತಹ ಸಾಧನೆಗಳ ಮಾಡಿ ಎಲ್ಲರ ಗಮನ ಸೆಳೆದ ಕ್ರೀಡಾಪಟು. ಹಾಗೆ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಕ್ರಿಕೆಟ್ ಲೋಕಕ್ಕೆ ಈಗ ತಾನೆ ಎಂಟ್ರಿ ಕೊಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಐಪಿಎಲ್‌ಗೆ ಆಯ್ಕೆಯಾಗಿದ್ದರೂ ಈ ಸೀಸನ್‌ನಲ್ಲಿ ಅವರು ಮೈದಾನಕ್ಕಿಳಿದಿಲ್ಲ. ಆದ್ರೆ ಇಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. 25 ವರ್ಷದ ಯುವ ಆಟಗಾರ ನಿಶ್ಚಿತಾರ್ಥ ಮಾಡಿಕೊಂಡಿರುವುದು ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ ಯಾರು ಈಕೆ?

ಅರ್ಜುನ್ ತೆಂಡೂಲ್ಕರ್, ಸಾನಿಯಾ ಚಾಂದೋಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿಕೊಂಡಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ಆಹ್ವಾನಿತ ಆಪ್ತರು ಮಾತ್ರ ಭಾಗಿಯಾಗಿದ್ದರು. ಸಾನಿಯಾ ಮುಂಬೈನ ಪ್ರಸಿದ್ಧ ವ್ಯಾಪಾರ ಕುಟುಂಬದಿಂದ ಬಂದವರು. ಈ ನಿಶ್ಚಿತಾರ್ಥವು ಖಾಸಗಿ ಸಮಾರಂಭದಲ್ಲಿ ನಡೆಯಿತು, ಇದರಲ್ಲಿ ಎರಡೂ ಕುಟುಂಬಗಳ ಆಪ್ತ ಸದಸ್ಯರು ಮತ್ತು ಸ್ನೇಹಿತರು ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಬಾಲ್ಯದ ಸ್ನೇಹಿತರು ಎಂದು ತಿಳಿದುಬಂದಿದೆ.
ಸಚಿನ್ ಸೊಸೆ ಆಗಲಿರುವ ಸಾನಿಯಾ ಚಾಂದೋಕ್ ಯಾರು?
ಸಾನಿಯಾ ಚಾಂದೋಕ್ ರವಿ ಘಾಯ್ ಅವರ ಮೊಮ್ಮಗಳು. ಸಾನಿಯಾ ಅವರ ಕುಟುಂಬವು ಮುಂಬೈನ ದೊಡ್ಡ ಉದ್ಯಮಿಗಳಲ್ಲಿ ಒಂದಾಗಿದೆ. ಅವರ ಕುಟುಂಬವು ಇಂಟರ್ ಕಾಂಟಿನೆಂಟಲ್ ಮೆರೈನ್ ಡ್ರೈವ್ ಹೋಟೆಲ್ ಮತ್ತು ಬ್ರೂಕ್ಲಿನ್ ಕ್ರೀಮರಿಯಂತಹ ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಹೊಂದಿದೆ. ಸಾನಿಯಾ ಚಾಂದೋಕ್ ಒಂದು ವ್ಯಾಪಾರ ಕುಟುಂಬದಿಂದ ಬಂದವರು.
ಹಾಗೆ ಸಾನಿಯಾ ಕೂಡ ತಮ್ಮದೇ ಸ್ವಂತ ಉದ್ಯಮ ತೆರೆದಿದ್ದಾರೆ. ಮುಂಬೈನಲ್ಲಿರುವ ಮಿಸ್ಟರ್ ಪಾವ್ಸ್ ಎಂಬ ಪ್ರೀಮಿಯಂ ಪ್ರಾಣಿ ಸಲೂನ್ ಆಗಿದೆ. ಪೆಟ್ ಸಲೂನ್‌ನಿಂದ ಮತ್ತಷ್ಟು ದೊಡ್ಡ ಹಸರು ಕೂಡ ಮಾಡಿದ್ದಾರೆ. ಸಾನಿಯಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಸಹ ಪಡೆದಿದ್ದಾರೆ. ಸದ್ಯ ಇವರಿಬ್ಬರ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಿವಾಹ ಕುರಿತಾದ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಅರ್ಜುನ್ ತೆಂಡೂಲ್ಕರ್ ಕುರಿತು
ಅರ್ಜುನ್ ತೆಂಡೂಲ್ಕರ್ ಅವರು ಕ್ರಿಕೆಟ್ ಲೋಕದಲ್ಲಿ ತಮ್ಮ ಪ್ರದರ್ಶನ ಅಥವಾ ಪ್ರತಿಭೆ ಮೂಲಕ ಗುರುತಿಸುಕೊಳ್ಳುವಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಗಳಿಸಿಲ್ಲ. 25 ವರ್ಷದ ಅರ್ಜುನ್ ತೆಂಡೂಲ್ಕರ್ ಆಲ್ ರೌಂಡರ್ ಆಟಗಾರರಾಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ತಂಡಕ್ಕಾಗಿ ಆಡುತ್ತಾರೆ. ಅವರು ಇಲ್ಲಿಯವರೆಗೆ 17 ಪ್ರಥಮ ದರ್ಜೆ, 18 ಲಿಸ್ಟ್-ಎ ಮತ್ತು 24 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರ ಹೊರತಾಗಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಒಟ್ಟು 5 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 3 ವಿಕೆಟ್‌ಗಳನ್ನು ಮತ್ತು 13 ರನ್‌ಗಳನ್ನು ಗಳಿಸಿದ್ದಾರೆ.
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ, ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಪರ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯಲಿಲ್ಲ. ಮುಂಬೈ ಇಂಡಿಯನ್ಸ್ ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ಉಳಿಸಿಕೊಂಡಿತ್ತು ಆದರೆ ಅವರು ಋತುವಿನ ಉದ್ದಕ್ಕೂ ಬೆಂಚ್‌ನಲ್ಲಿಯೇ ಇದ್ದರು.
ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 37 ವಿಕೆಟ್‌ಗಳನ್ನು ಮತ್ತು 532 ರನ್‌ಗಳನ್ನು ಗಳಿಸಿದ್ದಾರೆ. ಲಿಸ್ಟ್-ಎ ಪಂದ್ಯಗಳಲ್ಲಿ ಅವರು 25 ವಿಕೆಟ್‌ಗಳನ್ನು ಮತ್ತು 102 ರನ್‌ಗಳನ್ನು ಗಳಿಸಿದ್ದಾರೆ.



Click it and Unblock the Notifications