Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಹಿನ್ನೆಲೆ ಗಾಯನದಿಂದ ಅರಿಜಿತ್ ಸಿಂಗ್ ನಿವೃತ್ತಿ; ಅವರ ಆಸ್ತಿ ಎಷ್ಟು ಕೋಟಿ ಗೊತ್ತಾ? ಎರಡನೇ ಪತ್ನಿ ಯಾರು?
ಬಾಲಿವುಡ್‌ನಲ್ಲಿ ದಶಕದ ಕಾಲ ತಮ್ಮ ಹಾಡುಗಳ ಮೂಲಕ ಹೆಸರಾಗಿದ್ದ ಅರಿಜಿತ್ ಸಿಂಗ್ ಇನ್ನುಮುಂದೆ ಹಿನ್ನಲೆ ಗಾಯನ ಮಾಡುವುದಿಲ್ಲ ಎಂದು ನಿವೃತ್ತಿ ಘೋಷಿಸಿದ್ದಾರೆ. ಖ್ಯಾತ ಸಿಂಗರ್‌ನ ಈ ನಿರ್ಧಾರ ಅವರ ಅಭಿಮಾನಿಗಳಲ್ಲಿ ಆಘಾತಕ್ಕೆ ಕಾರಣವಾಗಿದೆ. ಕೇವಲ 38 ವರ್ಷದ ಅವರು ದಿಢೀರ್ ಈ ನಿರ್ಧಾರ ಕೈಗೊಂಡಿದ್ದು ಚಿತ್ರರಂಗಕ್ಕೂ ಸಹ ಅಚ್ಚರಿ ಮೂಡಿಸಿದೆ.
ಬಾಲಿವುಡ್‌ನ ನೂರಾರು ಸಿನಿಮಾಗಳಲ್ಲಿ ಅರಿಜಿತ್ ಹಾಡಿರುವ ಒಂದಾದರು ಹಾಡು ಕೇಳಬಹುದು. ಅವರು ಹಾಡಿರುವ ಬಹುತೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ಆ ಸಿನಿಮಾ ಕೂಡ ಗೆದ್ದಿರುವುದು ನೋಡಬಹುದು. ಇಂತಹ ಸಮಯದಲ್ಲಿ ಅವರು ನಿವೃತ್ತಿ ಹೇಳಿರುವುದು ಅಚ್ಚರಿ ತರಿಸಿದೆ. ಆದ್ರೆ ಅವರು ಇನ್ನುಮುಂದೆ ವೇದಿಕೆ ಕಾರ್ಯಕ್ರಮಗಳಲ್ಲಿ ಹಾಗೆ ಸ್ವಂತ ಸಂಗೀತ ರಚನೆಯು ಬಗ್ಗೆ ಗಮನ ಹರಿಸುವುದಾಗಿ ಹೇಳಿಕೊಂಡಿದ್ದಾರೆ.

"ನನಗೆ ಇನ್ನೂ ಕೆಲವು ಬಾಕಿ ಇರುವ ಬದ್ಧತೆಗಳು ಪೂರೈಸಬೇಕಾಗಿದೆ, ಮತ್ತು ನಾನು ಅವುಗಳನ್ನು ಪೂರ್ಣಗೊಳಿಸುತ್ತೇನೆ. ಆದ್ದರಿಂದ ಈ ವರ್ಷ ನೀವು ಇನ್ನೂ ಕೆಲವು ಬಿಡುಗಡೆಗಳನ್ನು ನೋಡಬಹುದು. ನಾನು ಸಂಗೀತ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಸ್ಟಷ್ಟಪಡಿಸುತ್ತೇನೆ ಎಂದು ಅವರು ವಿವರಿಸಿದ್ದಾರೆ. ಇಂಡಿಯನ್ ಐಡಲ್ ಕಾರ್ಯಕ್ರಮದ ಮೂಲಕ ಸಂಗೀತ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಅವರು ಈವರೆಗೆ ಸುಮಾರು 700ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಎಂದು ತಿಳಿದುಬಂದಿದೆ.
ಅರಿಜಿತ್ ಸಿಂಗ್ ಆಸ್ತಿ ಎಷ್ಟಿದೆ ಗೊತ್ತಾ?
ಅರಿಜಿತ್ ಸಿಂಗ್ ಅತಿ ಹೆಚ್ಚು ಗಳಿಕೆಹ ಹಾಡುಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ಪ್ರತಿ ಹಾಡಿಗೆ ಸುಮಾರು 8ರಿಂದ 10 ಲಕ್ಷ ರೂಪಾಯಿ ಶುಲ್ಕ ವಿಧಿಸುತ್ತಿದ್ದರು ಎಂದು ತಿಳಿದುಬಂದಿದೆ. ಹಾಗೆ ಕಾರ್ಪೋರೇಟ್ ಸಿಂಗಿಂಗ್ ಸೇರಿ ಖಾಸಗಿ ಹಾಡುಗಳಿಗೆ ಅವರು ಸುಮಾರು 25 ಲಕ್ಷ ರೂಪಾಯಿವರೆಗೂ ಶುಲ್ಕ ವಿಧಿಸುತ್ತಾರೆ. ಹಾಗೆ ಲೈವ್ ಕಾಂಟೆಸ್ಟ್‌ಗಳಿಂದ ಅವರು 2 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸುತ್ತಾರೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದ ಜಿಯಾಂಗಂಜ್‌ನಲ್ಲಿ ಜನಿಸಿದ್ದ ಅವರು ಸಾಮಾನ್ಯ ಜೀವನಶಯಲಿಯ ಹೊರತಾಗಿಯೂ 2026ರ ಅಂದಾಜಿನ ಪ್ರಕಾರ ಸುಮಾರು 414 ಕೋಟಿ ನಿವ್ವಳ ಮೌಲ್ಯದ ಆಸ್ತಿ ಹೊಂದಿದ್ದಾರೆ. ಪ್ರತಿ ವರ್ಷ ಅವರ ಆಸ್ತಿ ಮೌಲ್ಯ ದುಪ್ಪಟ್ಟಾಗುತ್ತಾ ಸಾಗಿತ್ತು. ಇತ್ತೀಚಿಗೆ ವಿದೇಶಗಳಲ್ಲಿ ಅವರ ಕಾರ್ಯಕ್ರಮಗಳು ಹೆಚ್ಚಾಗಿದ್ದವು. ಇದಿಷ್ಟೇ ಅಲ್ಲ ಅವರು ಮುಂಬೈನ ವರ್ಸೋವಾ ಪ್ರದೇಶದಲ್ಲಿ ಹಲವಾರು ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ಮತ್ತು ನವಿ ಮುಂಬೈನಲ್ಲಿ ಸುಮಾರು 8 ಕೋಟಿ ರೂ. ಮೌಲ್ಯದ ನಿವಾಸವನ್ನು ಹೊಂದಿದ್ದಾರೆ.
ಎರಡು ವಿವಾಹವಾಗಿದ್ದ ಅರಿಜಿತ್ ಸಿಂಗ್
ಅರಿಜಿತ್ ಸಿಂಗ್ ಗಾಯನ ವೃತ್ತಿ ಮಧುರವಾಗಿತ್ತಾದರು ಅವರ ಕೌಟುಂಬಿಕ ಜೀವನ ಏಳುಬೀಳುಗಳಿಂದ ತುಂಬಿತ್ತು. ಅರಿಜಿತ್ ಸಿಂಗ್ ಅವರ ಮೊದಲ ಪತ್ನಿ ರಿಯಾಲಿಟಿ ಶೋ ಫೇಮ್ ಗುರುಕುಲ್‌ನ ಸಹ ಸ್ಪರ್ಧಿ ರೂಪೇಖಾ ಬ್ಯಾನರ್ಜಿ ಎಂದು ವರದಿಯಾಗಿದೆ. 2013ರಲ್ಲಿ ವಿವಾಹವಾಗಿದ್ದ ಅವರು ಅದೇ ವರ್ಷ ವಿಚ್ಛೇದನ ಸಹ ಪಡೆದರು. ಕೆಲವೇ ತಿಂಗಳಲ್ಲಿ ಅವರ ವಿವಾಹ ಮುರಿದುಬಿದ್ದಿತು. ಇದಾಗಿ 2014ರಲ್ಲಿ ಅರಿಜಿತ್ ಎರಡನೇ ವಿವಾಹವಾದರು.
ಯಾರು ಈ ಎರಡನೇ ಪತ್ನಿ?
ಅರಿಜಿತ್ ಸಿಂಗ್ ಅವರ ಎರಡನೇ ವಿವಾಹವು 2014ರಲ್ಲಿ ನಡೆದಿತ್ತು. ಪಶ್ಚಿಮ ಬಂಗಾಳದ ತ್ರಿಪಾಠಿ ದೇವಸ್ಥಾನದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ತಮ್ಮ ಬಾಲ್ಯದ ಗೆಳತಿ ಕೋಯೆಲ್ ರಾಯ್ ಅವರನ್ನು ವಿವಾಹವಾದರು. ಕೋಯಲ್‌ಗೂ ಸಹ ಇದು ಎರಡನೇ ಮದುವೆಯಾಗಿತ್ತು. ಆಕೆಗೆ ಮೊದಲೇ ಒಂದು ಹೆಣ್ಣು ಮಗು ಸಹ ಇದೆ.



Click it and Unblock the Notifications
