Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಈ ನಾಲ್ಕು ರಾಶಿಯ ಮಹಿಳೆಯರು ವೃತ್ತಿ ಜೀವನದ ಜೊತೆಗೆ ಕುಟುಂಬವನ್ನೂ ನಿಭಾಯಿಸುತ್ತಾರೆ
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ತಮ್ಮ ವೃತ್ತಿ ಜೀವನವನ್ನು ತುಂಬಾನೇ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಮೊದಲೆಲ್ಲಾ ಎಷ್ಟೇ ದೊಡ್ಡ ಕೆಲಸದಲ್ಲಿದ್ದರೂ ಕೂಡ ಮಕ್ಕಳಾದ ಮೇಲೆ ಕೆಲಸಕ್ಕೆ ಗುಡ್‌ಬಾಯ್ ಹೇಳಿ ಮಕ್ಕಳನ್ನು ನೋಡಿಕೊಳ್ತಿದ್ರು. ಆದ್ರೆ ಈಗ ಹಾಗಲ್ಲ, ಮಹಿಳೆಯರು ಮದುವೆಯಾಗಿ ಮಕ್ಕಳಾದ ಮೇಲೂ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ ಎಲ್ಲೋ ಒಂದು ಕಡೆ ತಮ್ಮ ಕುಟುಂಬ, ಮಕ್ಕಳ ಕಡೆಗೆ ಹೆಚ್ಚಿನ ಗಮನ ವಹಿಸೋದಕ್ಕೆ ಆಗ್ತಿಲ್ಲ ಅನ್ನೋ ಕೊರಗು ಅವರನ್ನು ಕಾಡ್ತಿದೆ.
ಇನ್ನೂ ಕೆಲವು ಮಹಿಳೆಯರು ಕೆಲಸದ ಜೊತೆಗೆ ಮನೆಯ ಕಡೆಯೂ ಅಷ್ಟೇ ಪ್ರಾಮುಖ್ಯತೆಯನ್ನು ಕೊಟ್ಟು ತುಂಬಾನೇ ಸಂತೋಷವಾಗಿದ್ದಾರೆ. ಗಂಡ ಮಕ್ಕಳ ಜೊತೆಗೆ ಸುಂದರವಾಗಿ ಸಂಸಾರವನ್ನೂ ಸಾಗಿಸುತ್ತಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯ ಮಹಿಳೆಯರು ವೃತ್ತಿ ಜೀವನದ ಜೊತೆಗೆ ಮನೆಯನ್ನೂ ಚೆನ್ನಾಗಿ ನಡೆಸುತ್ತಾರಂತೆ. ಹಾಗಾದ್ರೆ ಆ ನಾಲ್ಕು ರಾಶಿಗಳು ಯಾವುದು ಅನ್ನೋದನ್ನ ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯ ಮಹಿಳೆಯರಿಗೆ ವೃತ್ತಿ ಜೀವನ ಹಾಗೂ ಕುಟುಂಬವನ್ನು ಯಾವ ರೀತಿ ನಿಭಾಯಿಸಬೇಕು ಅನ್ನೋ ಕಲೆ ಗೊತ್ತಿರುತ್ತದೆ. ಈ ರಾಶಿಯವರಿಗೆ ನೃತ್ಯ, ಚಿತ್ರಕಲೆ, ಶಾಪಿಂಗ್, ಫೋಟೋಗ್ರಾಫಿ, ಬರೆಯುವ ಹವ್ಯಾಸಗಳಿರುತ್ತದೆ. ಅವರು ಕುಟುಂಬವನ್ನು ನಿಭಾಯಿಸಬೇಕು ಅನ್ನೋ ಕಾರಣಕ್ಕಾಗಿ ತಮ್ಮ ಗುರಿಯನ್ನು ಬಿಟ್ಟು ಕೊಡೋದಿಲ್ಲ. ಎರಡನ್ನೂ ನಿಭಾಯಿಸುತ್ತಾರೆ. ಮೇಷ ರಾಶಿಯವರಲ್ಲಿ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ಹೀಗಾಗಿ ಒಂದಕ್ಕಾಗಿ ಮತ್ತೊಂದನ್ನು ಇವರು ತ್ಯಾಗ ಮಾಡೋದಕ್ಕೆ ಸಿದ್ಧರಿರೋದಿಲ್ಲ.
ವೃಷಭ ರಾಶಿ
ವೃಷಭ ರಾಶಿಯ ಮಹಿಳೆಯರು ಕುಟುಂಬಕ್ಕೆ ಹೆಚ್ಚಿನ ಮಹತ್ವ ಕೊಟ್ಟರೂ ಕೂಡ ತಮ್ಮ ವೃತ್ತಿ ಜೀವನಕ್ಕೆ ತಿಲಾಂಜಲಿ ಇಡೋದಿಲ್ಲ. ಬದಲಾಗಿ ಎರಡನ್ನು ತೂಗಿಸಿಕೊಂಡು ಹೋಗುತ್ತಾರೆ. ಆಫಿಸ್‌ನಲ್ಲಿ ಯಾವುದೇ ಕೆಲಸವಾಗಲಿ ಅದನ್ನು ಅವರು ಶ್ರದ್ಧೆಯಿಂದಲೇ ಮಾಡುತ್ತಾರೆ. ಇವರ ಈ ಗುಣದಿಂದಾಗಿಯೇ ಇವರು ತಮ್ಮ ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಇತ್ತ ಮನೆ, ಗಂಡ ಹಾಗೂ ಮಕ್ಕಳಿಗೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡುವ ಇವರು ಕುಟುಂಬದೊಂದಿಗೆ ಸಂತೋಷವಾಗಿರುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಮಹಿಳೆಯರಿಗೆ ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವರಿಗೆ ಕುಟುಂಬ ಹಾಗೂ ವೃತ್ತಿ ಜೀವನ ಎರಡನ್ನೂ ತೂಗಿಸಿಕೊಂಡು ಹೋಗೋದು ಕಷ್ಟ ಆಗೋದಿಲ್ಲ. ಇತ್ತ ವೃತ್ತಿ ಜೀವನದಲ್ಲೂ ಉತ್ತಮ ಕೆಲಸ ನಿರ್ವಹಿಸಿ ಯಶಸ್ವಿಯಾಗುತ್ತಾರೆ. ಅತ್ತ ಕುಟುಂಬಕ್ಕೂ ಗುಣಮಟ್ಟದ ಸಮಯ ನೀಡಿ ಅಲ್ಲೂ ಖುಷಿಯಾಗಿರ್ತಾರೆ. ಕರ್ಕಾಟಕ ರಾಶಿಯವರ ಗುಣ ಹೇಗೆಂದರೆ ಇವರು ತುಂಬಾನೇ ಚರುಕಾಗಿರ್ತಾರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳೋದಿಲ್ಲ, ಒತ್ತಡವಿಲ್ಲದೇ ಹೇಗೆ ಜೀವನ ನಡೆಸಬೇಕೆಂಬುದು ಇವರಿಗೆ ಗೊತ್ತಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಹಿಳೆಯರಿಗೆ ಕುಟುಂಬ ಹಾಗೂ ವೃತ್ತಿ ಜೀವನವನ್ನು ಚೆನ್ನಾಗಿ ನಿಭಾಯಿಸುವ ಕೌಶಲ್ಯವಿದೆ. ಇವರು ಯಾರನ್ನೂ ಅಷ್ಟು ಸುಲಭವಾಗಿ ನಂಬೋದಿಲ್ಲ ಹಾಗೂ ಪ್ರೀತಿಯಲ್ಲಿ ಬೀಳೋದಿಲ್ಲ. ಒಂದು ವೇಳೆ ಒಬ್ಬರಿಗೆ ಮನಸ್ಸು ಕೊಟ್ಟರೆ ಕಡೆವರೆಗೂ ಸಂಗಾತಿಗೆ ಹೆಗಲಾಗಿ ನಿಲ್ಲುವ ಗುಣ ಇವರಲ್ಲಿರುತ್ತದೆ. ವೃಶ್ಚಿಕ ರಾಶಿಯವರಲ್ಲೂ ಕೂಡ ನಾಯಕತ್ವದ ಗುಣ ಇದೆ. ಇವರು ಬೇರೆಯವರಿಂದ ಟೀಕೆಗೆ ಒಳಗಾಗೋದಕ್ಕೆ ಇಷ್ಟ ಪಡೋದಿಲ್ಲ. ಹೀಗಾಗಿ ಏನೇ ಕೆಲಸ ಮಾಡಬೇಕಾದರೂ ಮುಂಜಾಗರೂಕತೆಯಿಂದ ಮಾಡುತ್ತಾರೆ.



Click it and Unblock the Notifications

