Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ವಜ್ರದ ಉಂಗುರ ಧರಿಸೋದ್ರಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತೆ?
ವಜ್ರ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಬಾರಿಯಾದ್ರು ವಜ್ರ ಹಾಕಿಕೊಳ್ಳಬೇಕು ಅನ್ನೋ ಆಸೆ ಖಂಡಿತ ಇರುತ್ತೆ. ಆದರೆ ಚಿನ್ನಕ್ಕೆ ಹೋಲಿಕೆ ಮಾಡಿದ್ರೆ ವಜ್ರ ತುಂಬಾನೇ ದುಬಾರಿ. ಹೀಗಾಗಿ ವಜ್ರಕ್ಕೆ ಅಷ್ಟೆಲ್ಲಾ ಖರ್ಚು ಮಾಡುವ ಬದಲು ಜನ ಚಿನ್ನವನ್ನೇ ಖರೀದಿ ಮಾಡುತ್ತಾರೆ.

ವಜ್ರ ಒಂದು ರೀತಿಯಲ್ಲಿ ಶ್ರೀಮಂತರ ಆಭರಣ ಅಂತಾನೇ ಹೇಳಬಹುದು. ಕೆಲವರು ವಜ್ರ ಹಾಕಿಕೊಳ್ಳಲೇಬೇಕು ಅಂತ ಆಸೆ ಇದ್ದವರು ಚಿಕ್ಕದಾಗಿ ವಜ್ರದ ಉಂಗುರವಾದ್ರು ಇರಲಿ ಅಂತ ಅದನ್ನು ತೊಟ್ಟುಕೊಳ್ತಾರೆ. ಆದರೆ ನಿಮಗೊತ್ತಾ ವಜ್ರದ ಉಂಗುರ ಹಾಕೋದ್ರಿಂದ ಏನೆಲ್ಲಾ ಪರಿಣಾಮ ಬೀಳುತ್ತೆ ಅಂತ. ಅಷ್ಟಕ್ಕು ವಜ್ರದ ಉಂಗುರ ಧರಿಸೋದು ಒಳ್ಳೆಯದಾ? ಕೆಟ್ಟದ್ದಾ? ತಿಳೀಯೋಣ ಬನ್ನಿ.
ವಜ್ರದ ಉಂಗುರ ಧರಿಸೋದ್ರಿಂದ ನಮ್ಮ ಅದೃಷ್ಟ ಕೈಕೊಡುತ್ತಾ?
ವಜ್ರದ ಉಂಗುರ ಧರಿಸೋದ್ರಿಂದ ನಮಗೆ ದುರಾದೃಷ್ಟ ವಕ್ಕರಿಸುತ್ತೆ ಅಂತ ಅನೇಕರು ಅಂದುಕೊಂಡಿದ್ದಾರೆ. ಹೌದು ಈಗಲೂ ಕೂಡ ಅನೇಕ ಮಂದಿ ವಜ್ರ ಧರಿಸೋದ್ರಿಂದ ಶಾಪ ಸುತ್ತಿಕೊಳ್ಳುತ್ತೆ, ದುರಾದೃಷ್ಟ ಎದುರಾಗುತ್ತೆ ಎಂದೆಲ್ಲಾ ನಂಬಿಕೊಂಡಿದ್ದಾರೆ. ಆದರೆ ವೈಜ್ಞಾನಿಕ ಪುರಾವೆಗಳು ಬೇರೆಯದ್ದೇ ಕಥೆಯನ್ನು ಹೇಳುತ್ತವೆ. ಅದೇನಂದ್ರೆ ವಜ್ರವು ಪ್ರೀತಿ ಮತ್ತು ಬದ್ಧತೆಯ ಸಂಕೇತವಾಗಿದೆ. ಇದನ್ನು ಧರಿಸಿದ್ರೆ ನಮ್ಮ ಧನಾತ್ಮಕ ಶಕ್ತಿ ಹೆಚ್ಚಾಗುತ್ತಂತೆ.
ವಜ್ರದ ಉಂಗುರ ಧರಿಸೋದ್ರಿಂದ ದೈಹಿಕವಾಗಿ ಹಾನಿಯಾಗುತ್ತಾ?
ವಜ್ರದ ಚೂಪಾದ ಅಂಚುಗಳು ಅದನ್ನು ಧರಿಸಿದವರಿಗೆ ಹಾನಿ ಮಾಡುತ್ತೆ ಅಂತ ಹೇಳ ಹೇಳಲಾಗುತ್ತದೆ. ಆದರೆ ಇದು ನಮ್ಮ ಕಲ್ಪನೆಗೆ ದೂರವಿಯಷ್ಟೇ. ವಜ್ರಗಳು ಯಾವತ್ತಿಗೂ ತಮ್ಮ ಬಾಳಿಕೆ ಹಾಗೂ ಗಡಸುತನಕ್ಕೆ ಹೆಸರುವಾಸಿಯಾಗಿರುತ್ತದೆ. ಇದರಿಂದ ಒಬ್ಬರಿಗೆ ಹಾನಿಯಾಗೋದು ತುಂಬಾನೇ ಕಡಿಮೆ. ಈಗೆಲ್ಲಾ ಯಾವ ಡಿಸೈನ್ ನಲ್ಲೂ ಕೂಡ ವಜ್ರಗಳು ಲಭ್ಯವಾಗ್ತಿದ್ದು, ನಮಗಿಷ್ಟವಾದ ಡಿಸೈನ್ ಅನ್ನು ಹೇಳಿ ಮಾಡಿಸಿಕೊಳ್ಳಬಹುದು. ಇನ್ನೂ ವಜ್ರದ ಚೂಪುಗಳು ತಾಗದಂತೆ ಡಿಸೈನ್ ಮಾಡಿಕೊಂಡರೆ ಆಯ್ತು.
ವಜ್ರದ ಉಂಗುರ ಧರಿಸೋದ್ರಿಂದ ದೈಹಿಕ ಮತ್ತು ಭಾವನಾತ್ಮಕ ಪ್ರಯೋಜನಗಳೇನು?
ಹೌದು, ವಜ್ರದ ಉಂಗುರಗಳನ್ನು ಧರಿಸೋದ್ರಿಂದ ಭಾವನಾತ್ಮಕ ಮತ್ತು ದೈಹಿಕ ಪ್ರಯೋಜನಗಳು ಕೂಡ ಇದೆ. ಅವುಗಳು ಯಾವುದು ಅಂತ ನೋಡೋದಾದ್ರೆ :
ಪ್ರೀತಿ ಮತ್ತು ಬದ್ಧತೆಯ ಸಂಕೇತ
ಡೈಮಂಡ್ ರಿಂಗ್ ಸಾಮಾನ್ಯವಾಗಿ ನಿಶ್ಚಿತಾರ್ಥಗಳು ಮತ್ತು ವಿವಾಹಗಳೊಂದಿಗೆ ಸಂಬಂಧ ಹೊಂದಿದೆ. ಆ ಸಮಯದಲ್ಲೇ ಹೆಚ್ಚಿನವರು ಡೈಮಂಡ್ ರಿಂಗ್ ಮಾಡಿಸಿಕೊಳ್ತಾರೆ. ಇದು ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿ ಮತ್ತು ಬದ್ಧತೆಯ ಆಳವಾದ ಬಂಧವನ್ನು ಸಂಕೇತಿಸುತ್ತದೆ. ಈ ಉಂಗುರವನ್ನು ಧರಿಸುವುದು ದಂಪತಿಗಳಿಬ್ಬರ ನಡುವಿನ ಪ್ರೀತಿ ಮತ್ತು ಬಾಂಧವ್ಯವನ್ನು ಹೆಚ್ಚು ಮಾಡುತ್ತಂತೆ.
ನಿಮ್ಮೊಳಗಿನ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ
ವಜ್ರದ ಉಂಗುರವನ್ನು ಧರಿಸೋದು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಾಗುವಂತೆ ಮಾಡುತ್ತದೆ. ವಜ್ರದ ಸೊಬಗು ಮತ್ತು ಸೌಂದರ್ಯವು ಧರಿಸಿದವರ ಮೌಲ್ಯವನ್ನು ಹೆಚ್ಚಿಸುತ್ತದೆ. ವಜ್ರ ನಿಮ್ಮ ಸ್ವಾಭಿಮಾನದ ಸಂಕೇಯವನ್ನು ಪ್ರತಿನಿಧಿಸುತ್ತದೆ.
ವಜ್ರದ ಉಂಗುರದ ಕಾಳಜಿ ಮಾಡೋದು ಹೇಗೆ?
ವಜ್ರದ ಉಂಗುರವನ್ನು ಧರಿಸುವವರು ಅದರ ಕಾಳಜಿ ಮಾಡೋದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕೂ ವಜ್ರದ ಉಂಗುರದ ಕಾಳಜಿ ಹೇಗಿರಬೇಕು ಅನ್ನೋದನ್ನು ತಿಳಿಯೋಣ.
ನಿಯಮಿತವಾಗಿ ಶುಚಿಗೊಳಿಸಿ
ವಜ್ರದ ಉಂಗುರ ಯಾವಾಗಲೂ ಪಳಪಳವಾಗಿ ಹೊಳೆಯಬೇಕೆಂದರೆ ಅದನ್ನು ಯಾವಾಗಲೂ ಸ್ವಚ್ಛಗೊಳಿಸುತ್ತಾ ಇರಬೇಕು. ಉಂಗುರದಲ್ಲಿ ಸಂಗ್ರಹವಾದ ಕೊಳಕು ಮತ್ತು ಎಣ್ಣೆಗಳಿಂದಾಗಿ ವಜ್ರಗಳು ಕಾಲಾನಂತರದಲ್ಲಿ ತಮ್ಮ ಪ್ರಕಾಶವನ್ನು ಕಳೆದುಕೊಳ್ಳಬಹುದು. ಸಾಬೂನು ನೀರು ಮತ್ತು ಮೃದುವಾದ ಬ್ರಷ್ ಅನ್ನು ಬಳಸಿಕೊಂಡು ನಿಮ್ಮ ವಜ್ರದ ಉಂಗುರವನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ಹರಳು ಕಿತ್ತು ಹೋದರೆ ವಜ್ರದ ಅಂಗಡಿಗೆ ತೆಗೆದುಕೊಂಡು ಹೋಗಿ ವೃತ್ತಿಪರರ ಹತ್ತಿರ ತೋರಿಸಿ.
ಕೆಲವು ಸಂದರ್ಭದಲ್ಲಿ ಡೈಮಂಡ್ ರಿಂಗ್ ಧರಿಸಬೇಡಿ!
ವಜ್ರಗಳು ತುಂಬಾ ವರ್ಷ ಬಳಕೆ ಬರುತ್ತವೆಯಾದರೂ ಅದರ ಕಾಳಜಿ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ನೀವೇನಾದರೂ ಶ್ರಮದಾಯಕ ಚಟುವಟಿಕೆಗಳನ್ನು ಮಾಡುವಾಗ ಅಥವಾ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವ ಮೊದಲು ವಜ್ರದ ಉಂಗುರವನ್ನು ತೆಗೆದಿಟ್ಟು ಕೆಲಸ ಮಾಡಿದರೆ ಒಳ್ಳೆಯದು. ಇದರಿಂದಾಗಿ ಅದು ಹೆಚ್ಚು ದಿನಗಳವರೆಗೂ ಬಾಳಿಕೆ ಬರುತ್ತದೆ.
ವಜ್ರದ ಉಂಗುರವನ್ನು ಧರಿಸುವುದರಿಂದ ಯಾವುದೇ ರೀತಿ ಸಮಸ್ಯೆ ಇಲ್ಲ. ಇದರಿಂದ ತುಂಬಾನೇ ಒಳ್ಳೆಯದಾಗುತ್ತದೆ. ಆದರೆ ಕೆಲವೊಂದು ವಿಚಾರದ ಬಗ್ಗೆ ಗಮನ ಹರಿಸಬೇಕಷ್ಟೇ.



Click it and Unblock the Notifications
