Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತಿಮಿಂಗಿಲ ಶಾರ್ಕ್ ನೋಡಲು ಬಂದವರಿಗೆ ಶಾಕ್..! ಮೀನನ್ನೇ ನಕಲಿ ಮಾಡಿದ ಚೀನಾ..!!
ಚೀನಾ ನಾವು ಯೋಚಿಸುವುದಕ್ಕಿಂತ 10, 20 ವರ್ಷ ಮುಂದೆ ಇರುತ್ತೆ, ಅಲ್ಲಿನ ತಂತ್ರಜ್ಞಾನ, ಕ್ರಿಯಾಶೀಲತೆ ಎಲ್ಲರನ್ನು ನಿಬ್ಬೆರಗಾಗಿಸುತ್ತೆ. ಅದರಲ್ಲೂ ಯಾಂತ್ರಿಕವಾಗಿ ಚೀನಾ ತುಂಬಾನೆ ಮುಂದುವರೆದಿರುವ ದೇಶವಾಗಿದೆ. ದುಬಾರಿ ಎಂದ ಪದಕ್ಕೆ ಪರ್ಯಾಯವಾಗಿ ಚೀನಾದ ವಸ್ತುಗಳನ್ನು ನಾವು ನೋಡಬಹುದು. ಹಾಗೆ ಚೀನಾ ಎಲ್ಲಾ ವಸ್ತುಗಳ ನಕಲು ಮಾಡುವುದನ್ನು ಸಹ ನಾವು ನೋಡಿದ್ದೇವೆ. ಐಫೆಲ್ ಟವರ್ ಅನ್ನು ಕೂಡ ನಕಲು ಮಾಡಿರುವ ಕೀರ್ತಿಗೆ ಚೀನಾಗೆ ಸಲ್ಲುತ್ತದೆ.
ಆದ್ರೆ ಈಗ ಸಮುದ್ರದಲ್ಲಿರುವ ಮೀನನ್ನೂ ಸಹ ನಕಲಿಯಾಗಿಸಿ ಚರ್ಚೆಗೆ ಕಾರಣವಾಗಿದೆ. ಹೌದು ಚೀನಾದ ವಿಶ್ವವಿಖ್ಯಾತ Xiaomeisha ಸೀ ವರ್ಲ್ಡ್ ಅಕ್ವೇರಿಯಂನಲ್ಲಿ ತಿಮಿಂಗಿಲ ಶಾರ್ಕ್ ಅನ್ನು ನಕಲು ಮಾಡಿ ಸುದ್ದಿಯಾಗಿದೆ. ಈ ಅಕ್ವೇರಿಯಂ ವಿಶ್ವದಲ್ಲೆ ಅತ್ಯಂತ ದೊಡ್ಡ ಮೀನುಗಳ ಸಂಗ್ರಹಾಲಯ ಎಂಬ ಕೀರ್ತಿಗೆ ಪಾತ್ರವಾಗಿತ್ತು.

ಸುಮಾರು 5 ವರ್ಷಗಳ ಕಾಲ ನಿರಂತರವಾಗಿ ಮುಚ್ಚಲ್ಪಟ್ಟಿದ್ದ ಈ ಅಕ್ವೇರಿಯಂ ಕಳೆದ ತಿಂಗಳಿನಿಂದ ಮತ್ತೆ ಪ್ರವಾಸಿಗರಿಗೆ ತೆರೆದುಕೊಂಡಿದೆ. ಈ ಅಕ್ವೇರಿಯಂನ ವಿಶೇಷವೆಂದರೆ ನೀವು ಅದರ ಒಳಗೆ ಪ್ರವೇಶಿಸಬಹುದು. ಅಂದರೆ ನಿಮ್ಮ ತಲೆಯ ಮೇಲೆ ಬೃಹತ್ ಗಾತ್ರದ ಗಾಜುಗಳ ನಡುವೆ ಮೀನುಗಳನ್ನು ನೋಡಬಹುದು.
ಅತ್ಯಂತ ಸಮೀಪದಿಂದ ದೊಡ್ಡ ದೊಡ್ಡ ಮೀನುಗಳ ನೋಡಲು ಈ ಅಕ್ವೇರಿಯಂ ಅನುವು ಮಾಡಿ ಕೊಡುತ್ತಿತ್ತು. ಅಕ್ಟೋಬರ್ 1ರಿಂದ ಮತ್ತೆ ತೆರೆದ ಈ ಅಕ್ವೇರಿಯಂ ನೋಡಲು ಮೊದಲ ದಿನವೇ ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಈ ಅಕ್ವೇರಿಯಂನ ವಿಶೇಷ ಎಂದು ತಿಮಿಂಗಿಲ ಶಾರ್ಕ್ ಬಹಳ ಹೆಸರುವಾಸಿಯಾಗಿತ್ತು.
ಒಬ್ಬರಿಗೆ 40 ಯುಸ್ ಡಾಲರ್ ಟಿಕೆಟ್ ನಿಗದಿಯಾಗಿದ್ದು, ಈ ತಿಮಿಂಗಿಲ ಶಾರ್ಕ್ ನೋಡಲೆಂದೇ ಕಾತುರದಿಂದ ಪ್ರವಾಸಿಗರು ಬಂದಿದ್ದರು. ಆದ್ರೆ ಈ ಶಾರ್ಕ್ ನಕಲಿ ಎಂದು ತಿಳಿದು ಆಕ್ರೋಶ ಹೊರಹಾಕಿದ್ದಾರೆ. ಹಾಗೆ ಹಣ ವಾಪಾಸು ನೀಡುವಂತೆಯೂ ಆಗ್ರಹಿಸಿರುವುದು ವರದಿಯಾಗಿದೆ. ತಿಮಿಂಗಿಲ ಶಾರ್ಕ್ (ರಿಂಕೋಡಾನ್ ಟೈಪಸ್) ಉಳಿದಿರುವ ಅತಿದೊಡ್ಡ ಮೀನು ಜಾತಿಯಾಗಿದೆ. ಸುಮಾರು 18 ಮೀಟರ್ ಉದ್ದವಿರುವ ಅತೀ ದೊಡ್ಡ ಮೀನು ಎಂಬ ಕೀರ್ತಿ ಪಡೆದಿದೆ.
ಆದ್ರೆ ಈ ಮೀನು ನಕಲಿಯಾಗಿದ್ದು ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಚಲಿಸುವ ರೊಬೋಟಿಕ್ ಮೀನು ಆಗಿದೆ. ಮೊದಲಿಗೆ ಈ ಮೀನು ಅಕ್ವೇರಿಯಂನಲ್ಲಿ ಕಂಡ ಪ್ರವಾಸಿಗರು ನಿಬ್ಬೆರಗಾದರು. ಇಷ್ಟು ದೊಡ್ಡ ಮೀನನ್ನು ಹತ್ತಿರದಿಂದ ಕಂಡ ಅವರು ಚಕಿತರಾಗಿದ್ದರು, ಆದ್ರೆ ಮೀನಿನ ಮೈಮೇಲೆ ರೊಬೋಟಿಕ್ ರಚನೆಗಳು ಕಂಡುಬಂದಿದೆ. ಇದರಿಂದ ಪ್ರವಾಸಿಗರು ಶಾಕ್‌ಗೆ ಒಳಾಗಾಗಿದ್ದರು.
ಆದ್ರೆ ಈ ವಿವಾದ ಕುರಿತು ಪ್ರತಿಕ್ರಿಯಿಸಿರುವ Xiaomeisha ಸೀ ವರ್ಲ್ಡ್, ನಾವು ಎಲ್ಲಿಯೂ ಈ ತಿಮಿಂಗಿಲ ಶಾರ್ಕ್ ನೈಜ ಶಾರ್ಕ್ ಎಂದು ಘೋಷಿಸಿರಲಿಲ್ಲ. ಹಾಗೆ ಈ ಶಾರ್ಕ್‌ಗಳನ್ನು ಹಿಡಿಯುವುದು, ಮಾರಾಟ, ಪ್ರದರ್ಶನ ಎಲ್ಲವೂ ಕಾನೂನು ಬಾಹಿರವಾಗಿದೆ. ಹೀಗಾಗಿ ರೊಬೋಟಿಕ್ ತಿಮಿಂಗಿಲ ಶಾರ್ಕ್ ಅನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂದಿದೆ.
ಇದಕ್ಕೂ ಮೊದಲು ಬಳಿ ಕಪ್ಪು ಬಣ್ಣದ ಪಾಂಡಗಳನ್ನು ತೋರಿಸುವ ಬದಲಾಗಿ ಅದೇ ರೀತಿಯ ಬಣ್ಣವನ್ನು ನಾಯಿಗಳಿಗೆ ಬಳಿದು ವಿವಾದಕ್ಕೆ ಕಾರಣವಾಗಿತ್ತು. ಚೀನಾದ ಜಿಯಾಂಗ್ಸು ಪ್ರಾಂತ್ಯದ ತೈಝೌ ಮೃಗಾಲಯದಲ್ಲಿ ಈ ಘಟನೆ ನಡೆದಿತ್ತು. ಹೊಸ ಜಾತಿಯ ಪ್ರಾಣಿಗಳನ್ನು ಪ್ರವಾಸಿಗರಿಗೆ ತೋರಿಸುವುದಾಗಿ ಹೇಳಿ ನಾಯಿಗಳಿಗೆ ಪಾಂಡ ರೀತಿಯ ಬಣ್ಣ ಬಳಿಯಲಾಗಿತ್ತು, ಇದು ಪ್ರಾಣಿ ಪ್ರಿಯರು ಸೇರಿ ಪ್ರವಾಸಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ರೆ ಈಗ ತಿಮಿಂಗಿಲ ಶಾರ್ಕ್ ತೋರಿಸುವ ನೆಪದಲ್ಲಿ ರೊಬೋಟಿಕ್ ಮೀನು ತೋರಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.



Click it and Unblock the Notifications
