Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಏಪ್ರಿಲ್ 25-29ರವರೆಗೆ ಈ 6 ರಾಶಿಗಳಿಗೆ ತುಂಬಾನೇ ಅದೃಷ್ಟಕರವಾಗಿದೆ
ಈ ವಾರ ಕೆಲವೊಂದು ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿದೆ. ಈ ವಾರ ಈ ರಾಶಿಗಳು ಹೆಚ್ಚಿನ ಅನುಕೂಲವನ್ನು ಪಡೆಯಲಿದ್ದಾರೆ ನೋಡಿ:
ವೃಷಭ ರಾಶಿ: ಈ ವಾರ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿಯ ನ್ನು ಕಾಣುವಿರಿ. ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ಪ್ರಮುಖ ನಿರ್ಧಾರ ನಿಮಗೆ ಲಾಭದಾಯಕವಾಗಲಿದೆ.ಈ ಅವಧಿಯಲ್ಲಿ ಪಾಲುದಾರಿಕೆಯಲ್ಲಿ ವ್ಯವಹಾರ ಪ್ರಾರಂಭಿಸಿದರೆ ಒಳ್ಳೆಯ ಲಾಭ ಗಳಿಸಬಹುದು. ಉದ್ಯೋಗಸ್ಥರಿಗೆ ಈ ವಾರ ಅನುಕೂಲಕರವಾಗಿದೆ. ಖರ್ಚು ಸ್ವಲ್ಪ ಮಿತಿಯಲ್ಲಿ ಮಾಡಿದರೆ ಯಾವುದೇ ಸಮಸ್ಯೆ ಇರಲ್ಲ. ಈ ವಾರದಲ್ಲಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.

ಮಿಥುನ ರಾಶಿ: ಈ ನಾಲ್ಕು ದಿನಗಳಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಈ ವಾರ ನಿಮ್ಮ ಆದಾಯ ಉತ್ತಮವಾಗಿರಲಿದೆ, ಆದ್ದರಿಂದ ಆರ್ಥಿಕವಾಗಿ ಈ ವಾರ ತುಂಬಾ ಒಳ್ಳೆಯದಿದೆ. ಉದ್ಯಮಿಗಳು ಯಾವುದೇ ಹಳೆಯ ಸಾಲದಿಂದ ಮುಕ್ತರಾಗಬಹುದು. ವ್ಯಾಪಾರಸ್ಥರು ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆ ಕಾಣುವಿರಿ. ವೈವಾಹಿಕ ಜೀವನದ ದೃಷ್ಟಿಯಿಂದಲೂ ಈ ನಾಲ್ಕು ದಿನ ಮುಖ್ಯವಾಗಲಿದೆ. ಏಕೆಂದರೆ ನಿಮ್ಮ ನಡುವೆ ಇರುವ ಮನಸ್ತಾಪ ದೂರಲಿದೆ. ಈ ವಾರ ಆರೋಗ್ಯ ಉತ್ತಮವಾಗಿರಲಿದೆ.
ಕರ್ಕ ರಾಶಿ: ಉದ್ಯಮಿಗಳಿಗೆ ಈ ವಾರ ತುಂಬಾನೇ ಅನುಕೂಲಕರವಾಗಿದೆ. ಕೌಟುಂಬಿಕ ಜೀವನದಲ್ಲಿ ತುಂಬಾ ಒಳ್ಳೆಯ ದಿನವಾಗಿರಲಿದೆ. ಇನ್ನು ಅವಾಹಿತರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ವಾರ ಒಳ್ಳೆಯ ಸಂಬಂಧ ಕೂಡಿಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರ್ಥಿಕ ವಿಷಯದಲ್ಲೂ ಈ ವಾರ ತುಂಬಾನೇ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಆರೋಗ್ಯದ ಕಡೆ ಗಮನಹರಿಸಿ.
ಕನ್ಯಾ ರಾಶಿ: ಈ ವಾರ ಹಣಕಾಸಿನ ವಿಷಯದಲ್ಲಿ ತುಂಬಾನೇ ಉತ್ತಮವಾಗಿರಲಿದೆ. ನಿಮ್ಮ ಪ್ರಮುಖ ಹಣಕಾಸಿ ಸಮಸ್ಯೆ ಬಗೆಹರಿಯಲಿದೆ. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ. ಯಾವುದೇ ಧಾರ್ಮಿಕ ಅಥವಾ ಶುಭ ಕಾರ್ಯಕ್ರಮವನ್ನು ಮನೆಯಲ್ಲಿ ಆಯೋಜಿಸಬಹುದು. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ಸು ಸಿಗಲಿದೆ. ನೀವು ಉದ್ಯಮಿಯಾಗಿದ್ದರೆ, ಈ ವಾರ ತುಂಬಾನೇ ಚೆನ್ನಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ತುಲಾ ರಾಶಿ: ಈ ವಾರ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿದ್ದರೆ ಬಯಸಿದ ಕಡೆ ಓದಲು ಅವಕಾಶ ದೊರೆಯಲಿದೆ. ಈ ವಾರ ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ಆರ್ಥಿಕ ವಿಷಯದಲ್ಲಿ ವಾರದ ಪ್ರಾರಂಭದಲ್ಲಿ ಸ್ವಲ್ಪ ಸವಾಲು ಅನಿಸಿದರೂ ನಂತರದ ದಿನಗಳಲ್ಲಿ ಏನೂ ತೊಂದರೆಯಿರಲ್ಲ, ನೀವು ನಿರೀಕ್ಷೆ ಮಾಡುತ್ತಿರುವ ಕಡೆಯಿಂದ ಹಣ ಸಿಗಲಿದೆ. ಆರೋಗ್ಯದ ಕಡೆ ಗಮನಹರಿಸಿ.
ಮೀನ ರಾಶಿ: ಕಳೆದ ವಾರ ನಿಮ್ಮ ಪ್ರಮುಖ ಕೆಲಸ ಬಾಕಿಯುಳಿದಿದ್ದರೆ ಈ ವಾರ ನಿಮ್ಮ ಕೆಲಸ ಯಾವುದೇ ಸಮಸ್ಯೆಯಿಲ್ಲದೆ ಬಗೆಹರಿಯಲಿದೆ.ವಿದ್ಯಾರ್ಥಿಗಳು ಗುರಿಮುಟ್ಟಲು ಮತ್ತಷ್ಟು ಪ್ರಯತ್ನಿಸಿ. ಈ ವಾರ ನೀವು ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಲು ಹೋಗಬೇಡಿ. ಕುಟುಂಬ ಜೀವನದಲ್ಲಿ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಈ ಅವಧಿಯಲ್ಲಿ ಆರೋಗ್ಯ ಉತ್ತಮವಾಗಿರಲಿದೆ.



Click it and Unblock the Notifications

