Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಏಪ್ರಿಲ್ 2023 :ಈ 5 ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಒಳ್ಳೆಯದು
ಜ್ಯೋತಿಷ್ಯದ ಪ್ರಕಾರ ಈ ಏಪ್ರಿಲ್ ತಿಂಗಳ ರಾಶಿಫಲ ಪ್ರಕಾರ ಯಾರಿಗೆ ಶುಭ ಎಂದು ನೋಡುವುದಾದರೆ ಈ ತಿಂಗಳು ಕೆಲವೊಂದು ರಾಶಿಯವರಿಗೆ ಆರ್ಥಿಕವಾಗಿ ತುಂಬಾನೇ ಒಳ್ಳೆಯದಿದೆ.
ಈ ತಿಂಗಳಿನಲ್ಲಿ ಈ ಯಾವ ರಾಶಿಯವರಿಗೆ ಆರ್ಥಿಕ ತೊಂದರೆಯಿಲ್ಲ, ಉಳಿತಾಯ ಮಾಡಲು ಕೂಡ ಸಾಧ್ಯವಾಗುವುದು ನೋಡಿ:

ಮೇಷ ರಾಶಿ
ಮೇಷ ರಾಶಿಯವರಿಗೆ ಏಪ್ರಿಲ್ ತಿಂಗಳು ತುಂಬಾ ಒಳ್ಳೆಯದು. ಈ ತಿಂಗಳಿನಲ್ಲಿ ಅದೃಷ್ಟದ ಬೆಂಬಲ ಇರುವುದರಿಂದ ಕಾರ್ಯ ಕ್ಷೇತ್ರಸಲದಲಿ ಪ್ರಯೋಜನ ಪಡೆಯುತ್ತೀರಿ. ಆದ್ದರಿಂದಾಗಿ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಒಳ್ಳೆಯ ಉದ್ಯೋಗ ಅವಕಾಶ ಪಡೆಯುವಿರಿ. ಹಣದ ವಿಷಯದಲ್ಲಿ ಪ್ರಯೋಜನಕಾರಿಯಾಗಲಿದೆ. ಉದ್ಯಮಿಗಳಿಗೂ ಈ ಸಮಯ ಉತ್ತಮವಾಗಿದೆ. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳನ್ನು ಕಾಣುವಿರಿ. ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಕೌಟುಂಬಿಕ ಜೀವನದಲ್ಲಿರುವ ಸಮಸ್ಯೆಗಳು ದೂರಾಗುವುದು. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ಆರೋಗ್ಯದ ಕಡೆ ಗಮನಹರಿಸಿ.
ಮಿಥುನ ರಾಶಿ
ಏಪ್ರಿಲ್ ತಿಂಗಳು ಮಿಥುನ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಹಣದ ಸ್ಥಿತಿ ತುಂಬಾ ಚೆನ್ನಾಗಿರಲಿದೆ, ಆದಾಯದ ಮೂಲಗಳು ಹೆಚ್ಚಾಗುತ್ತವೆ. ತಿಂಗಳ ದ್ವಿತೀಯಾರ್ಧವು ಮತ್ತಷ್ಟು ಮಂಗಳಕರವಾಗಿರುತ್ತದೆ.
ಏಪ್ರಿಲ್ ತಿಂಗಳಿನಲ್ಲಿ ನೀವು ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಉದ್ಯಮಿಗಳು ಬಯಸಿದ ಫಲಿತಾಂಶಗಳನ್ನು ಪಡೆಯುವಿರಿ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗಸ್ಥರಿಗೆ ಈ ಸಮಯ ಒಳ್ಳೆಯದಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ತಿಂಗಳು ಆರ್ಥಿಕವಾಗಿ ತುಂಬಾನೇ ಚೆನ್ನಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಏಪ್ರಿಲ್ ತಿಂಗಳಿನಲ್ಲಿ ಉದ್ಯೋಗ-ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಪಡೆಯಬಹುದು. ಬೇರೆ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಹೊಸ ಅವಕಾಶಗಳು ದೊರೆಯಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕುಟುಂಬ ಹಾಗೂ ಪ್ರೇಮ ಜೀವನದಲ್ಲಿ ಖುಷಿ ಇರಲಿದೆ. ಹಣದ ವಿಷಯದಲ್ಲಿ, ಈ ಸಮಯವು ನಿಮಗೆ ಉತ್ತಮವಾಗಿದೆ. ನೀವು ಈ ಅವಧಿಯಲ್ಲಿ ಉಳಿತಾಯದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಆರೋಗ್ಯ ಕೂಡ ಚೆನ್ನಾಗಿರುವುದರಿಂದ ಈ ತಿಂಗಳು ತುಂಬಾನೇ ಉತ್ತಮವಾಗಿರಲಿದೆ.
ಸಿಂಹ ರಾಶಿ
ಹಣದ ವಿಷಯದಲ್ಲಿ ನೋಡುವುದಾದರೆ ಈ ತಿಂಗಳು ಸಿಂಹ ರಾಶಿಯವರಿಗೆ ತುಂಬಾನೇ ಚೆನ್ನಾಗಿದೆ. ನಿಮ್ಮ ಪ್ರಯತ್ನಗಳಿಗೆ ಒಳ್ಳೆಯ ಫಲ ಸಿಗಲಿದೆ. ವ್ಯಾಪಾರಸ್ಥರು ಒಳ್ಳೆಯ ಆರ್ಥಿಕ ಲಾಭ ಗಳಿಸುವುರಿ. ಕುಟುಂಬ ಜೀವನದಲ್ಲಿ ಖುಷಿ, ನೆಮ್ಮದಿ ಇರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಈ ಏಪ್ರಿಲ್ ತಿಂಗಳು ಆರ್ಥಿಕ ಲಾಭವನ್ನು ನೀಡುತ್ತದೆ. ಉದ್ಯೋಗ-ವ್ಯವಹಾರಗಳಿಗೆ ಸಂಬಂಧಿಸಿದಂತೆ ನೋಡುವುದಾದರೆ ಈ ಸಮಯ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಬರೀ ಅದೃಷ್ಟದ ಬಲ ನಂಬಿ ಕೂರುವ ಬದಲಿಗೆ ಹೆಚ್ಚಿನ ಪ್ರಯತ್ನ ಬೇಕಾಗತ್ತದೆ. ನಿಮ್ಮ ಪ್ರಯತ್ನಕ್ಕೆ ಖಂಡಿತ ಒಳ್ಳೆಯ ಫಳ ಸಿಗಲಿದೆ. ಈ ತಿಂಗಳಿನಲ್ಲಿ ಅಪೂರ್ಣವಾಗಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ದಾಂಪತ್ಯ ಚೆನ್ನಾಗಿರಲಿದೆ. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.



Click it and Unblock the Notifications
