Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಚಪ್ಪಾಳೆ ತಟ್ಟಿದರೆ ಹೂವು ಅರಳುತ್ತಾ..? ಈ ವಿಡಿಯೋದಲ್ಲಿ ಏನಿದೆ ಗೊತ್ತಾ?
ನಿಸರ್ಗದಲ್ಲಿ ಎಂತಹ ಅಚ್ಚರಿಗಳು ವಿಸ್ಮಯಗಳು ಅಡಗಿರುತ್ತವೆ ಅನ್ನೋದನ್ನ ನಾವು ನೋಡಿರುತ್ತೇವೆ, ಕೆಲವೊಂದು ಅಚ್ಚರಿಯ ವಿಚಾರಗಳು ಎಂತವರನ್ನು ಅಚ್ಚರಿಗೆ ತಳ್ಳುತ್ತವೆ. ನಂಬಲು ಅಸಾಧ್ಯ ಎನಿಸುತ್ತವೆ. ಆದ್ರೆ ಮತ್ತೆ ಕೆಲವೊಂದನ್ನು ನಂಬಬೇಕೊ ಬೇಡವೋ ಎಂಬ ಗೊಂದಲಕ್ಕೆ ಬಿದ್ದಿರುತ್ತೇವೆ. ಮತ್ತೆ ಕೆಲವು ವಿಚಾರಗಳನ್ನ ನಾವು ಮತ್ತೆ ಮತ್ತೆ ಪರೀಕ್ಷಿಸಬೇಕು ಎಂದುಕೊಳ್ಳುವಂತೆ ಮಾಡುತ್ತವೆ. ಆದರೆ ನಿಸರ್ಗದಲ್ಲಿ ಅಚ್ಚರಿಗಳು ನಡೆಯುತ್ತಲೇ ಇರುತ್ತವೆ.
ಹಾಗೆ ಇಲ್ಲೊಂದು ವಿಡಿಯೋ ಸಹ ಈಗ ಇಂತಹ ಅಚ್ಚರಿಗೆ ಕಾರಣವಾಗಿದೆ. ನಿಸರ್ಗದಲ್ಲಿ ಎಂತಹ ಅಚ್ಚರಿಗಳು ಬೇಕಾದರು ನಡೆಯತ್ತೆ ಎಂಬ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ ಈ ವಿಡಿಯೋ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದನ್ನು ಕಂಡ ಜನರಂತು ಅಚ್ಚರಿ ಹೊರಹಾಕಿದ್ದಾರೆ.

ಈ ವಿಡಿಯೋದಲ್ಲಿ ಜನರು ಚಪ್ಪಾಳೆ ತಟ್ಟಿದಾಗ ಹೂವೊಂದು ಅರಳುವುದನ್ನು ನೋಡಬಹುದು. ಗಿಡದ ತುಂಬೆಲ್ಲಾ ಹಳದಿ ಹೂವುಗಳಿದ್ದು, ಜನ ಗಿಡದ ಬಳಿ ನಿಂತು ಚಪ್ಪಾಳೆ ತಟ್ಟುವಾಗ ಹೂವಿನ ಮೊಗ್ಗು ನಿಧಾನವಾಗಿ ಅರಳುತ್ತಿದೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಭಾರೀ ವೈರಲ್ ಆಗಿದೆ.
ಇದು ಯಾವ ಜಾತಿಯ ಗಿಡ, ಚಪ್ಪಾಳೆ ಹೊಡೆದಾಗ ಹೂವು ಅರಳುವುದು ಹೇಗೆ? ಇದಕ್ಕೆ ಏನು ಕಾರಣ ಎಂದು ನೆಟ್ಟಿಗರು ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದಾರೆ. ಆದರೆ ಅಲ್ಲಿ ನೆರದಿರುವ ಜನರು ಕೂಗುತ್ತಾ ಚಪ್ಪಾಳೆ ತಟ್ಟಿದಾಗ ಹೂವು ಅರಳುವುದನ್ನು ನಾವು ನೋಡಬಹುದು. ಆದರೆ ಇದು ಹೇಗೆ ಸಾಧ್ಯವಾಗುತ್ತದೆ ಎಂಬುದು ಮಾತ್ರ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
ಇಲ್ಲಿ ಅಚ್ಚರಿ ಹುಟ್ಟಿಸುವ ಅಂಶ ಏನೆಂದರೆ ಸಾಮಾನ್ಯವಾಗಿ ಹೂವುಗಳು ಬೆಳಗ್ಗೆ ವೇಳೆ ಅರಳಿರುತ್ತವೆ. ಅಂದರೆ ನಾವು ರಾತ್ರಿ ನೋಡಿದಾಗ ಮೊಗ್ಗುಗಳಾಗಿರುವ ಹೂವುಗಳು ಬೆಳಗ್ಗೆ ಎದ್ದಾಗ ಅರಳಿರುತ್ತವೆ. ಮತ್ತೆ ಸಂಜೆ ವೇಳೆ ಬಾಡಿಕೊಳ್ಳುತ್ತವೆ. ಸಾಮಾನ್ಯವಾಗಿ ಎಲ್ಲಾ ಹೂವುಗಳು ಕೂಡ ಇದೇ ರೀತಿ ನಿಯಮವಿದೆ.
ಈ ವಿಡಿಯೋದ ಅಸಲಿಯತ್ತೇನು?
ಜನರ ಗುಂಪು ಚಪ್ಪಾಳೆ ತಟ್ಟಿದ ಕಾರಣಕ್ಕೆ ಇಲ್ಲಿ ಹೂವು ಅರಳಿದೆ ಎಂದುಕೊಂಡರೆ ಅದು ತಪ್ಪಾಗಬಹುದು. ಏಕೆಂದರೆ ಈ ವಿಡಿಯೋದಲ್ಲಿರುವ ಹೂವಿನ ಹೆಸರು ಕಾಮನ್ ಈವ್ನಿಂಗ್ ಪ್ರಿಮೋಸ್ ಎಂದು. ಈ ಹೂವು ಸಂಜೆ ವೇಳೆ ಅರಳುತ್ತದೆ. ಅಂದರೆ ಜನರ ಗುಂಪು ಹೂವು ಅರಳುವ ಹೊತ್ತಿಗೆ ಚಪ್ಪಾಳೆ ತಟ್ಟಲು ಆರಂಭಿಸಿದೆ. ಅಲ್ಲಿ ಅದೇ ಸಮಯಕ್ಕೆ ಈ ಹೂವು ಕೂಡ ಅರಳಿದೆ ಅಷ್ಟೆ. ಆದರೆ ಇದನ್ನೇ ಅವರು ಚಪ್ಪಾಳೆ ತಟ್ಟಿದ್ದಕ್ಕೆ ಹೂವು ಅರಳಿದೆ ಎಂದುಕೊಂಡಿದ್ದಾರೆ.
ವೈಜ್ಞಾನಿಕವಾಗಿ ಓನೋಥೆರಾ ಬಿಯೆನ್ನಿಸ್ ಎಂದು ಕರೆಯಲ್ಪಡುವ ಈ ಹೂವು, ಒನಾಗ್ರೇಸಿ ಕುಟುಂಬಕ್ಕೆ ಸೇರಿದೆ. ಇದು ಪೂರ್ವ ಹಾಗೂ ಮಧ್ಯ ಉತ್ತರ ಅಮೆರಿಕಾದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಭಾರತದಲ್ಲಿಯೂ ಇದು ಹೂ ಬಿಡುವ ಸಸ್ಯವಾಗಿ ಗುರುತಿಸಿಕೊಂಡಿದೆ. ಸುಮಾರು 2 ಮೀಟರ್ ಉದ್ದಕ್ಕೆ ಇದು ಬೆಳೆಯಬಲ್ಲದು. ಈ ಹೂವಿನಲ್ಲಿ ಯಾವುದೆ ಸುವಾಸನೆ ಇರುವುದಿಲ್ಲ, ನೋಡಲು ಬಹಳ ಸುಂದರವಾಗಿ ಕಾಣಿಸುತ್ತದೆ.
ಸದ್ಯ ಈ ವಿಡಿಯೋ ಸುಮಾರು 6 ಮಿಲಿಯನ್ ವೀಕ್ಷಣೆ ಕಂಡಿದೆ. ನೋಡಿದವರೆಲ್ಲರು ಇದು ವಿಜ್ಞಾನಕ್ಕೆ ಅಚ್ಚರಿ ಹುಟ್ಟಿಸುವ ವಿಚಾರ ಎಂದಿದ್ದಾರೆ. ಅಲ್ಲದೆ ಇದೊಂದು ಪವಾಡ ಎಂದಿದ್ದಾರೆ. ಆದರೆ ಇಲ್ಲಿ ಅಂತಹ ಯಾವುದೇ ಘಟನೆ ನಾವು ವಿವರಿಸುವ ಅಗತ್ಯವಿಲ್ಲ. ಈ ಗಿಡದ ಲಕ್ಷಣವೇ ಇದಾಗಿದೆ, ಆ ಹೂವು ಸಂಜೆ ವೇಲೆ ಅರಳುತ್ತದೆ. ಅದೆ ಸಮಯಕ್ಕೆ ಅವರು ಚಪ್ಪಾಳೆ ತಟ್ಟಿದ್ದಾರೆ ಎಂದು ವಿಶ್ಲೇಷಿಸಬಹುದು.



Click it and Unblock the Notifications