Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಿರುಷ್ಕಾ ಪುತ್ರನಿಗೆ ಅಕಾಯ್ ಹೆಸರಿಟ್ಟಿದ್ದೇಕೆ..? ಹೆಸರಿನ ಹಿಂದಿರುವ ಅರ್ಥವೇನು ಗೊತ್ತಾ?
ಕ್ರಿಕೆಟ್ ಪ್ರೇಮಿಗಳ ಚೀಕೂ, ಬೌಲರ್‌ಗಳ ಪಾಲಿನ ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ದಂಪತಿ ಗಂಡು ಮಗು ಜನಿಸಿರುವ ಕುರಿತು ಶುಭ ಸುದ್ದಿ ಹಂಚಿಕೊಂಡಿರುವುದು ನಿಮಗೆಲ್ಲಾ ಗೊತ್ತೆ ಇದೆ. ಫೆ. 15ರಂದು ಗಂಡು ಮಗು ಜನಿಸಿವುದಾಗಿ ಕೊಹ್ಲಿ ಸಂತಸ ಹಂಚಿಕೊಂಡಿದ್ದಾರೆ.
ಇದರ ಜೊತೆ ಅವರು ಮಗುವಿನ ಹೆಸರನ್ನೂ ರಿವೀಲ್ ಮಾಡಿದ್ದು, ಗಂಡು ಮಗುವಿಗೆ ಅಕಾಯ್ ಎಂದು ಹೆಸರಿಡಲಾಗಿದೆ. ಈ ಹೆಸರು ಕೇಳಿದಾಕ್ಷಣ ಕೆಲವರಿಗೆ ತುಂಬಾ ಹಳೆಯ ಹೆಸರು ಎನಿಸಿರಬಹುದು. ಆದರೆ ಈ ಹೆಸರಿನ ಹಿಂದಿರುವ ಅರ್ಥ ಹಾಗೂ ಅದನ್ನು ಇಡಲು ಸಹ ಕೆಲವು ಕಾರಣವಿದೆ ಎಂಬುದು ನಿಮಗೆ ತಿಳಿದಿರುವುದಿಲ್ಲ.
ಅಕಾಯ್ ಹೆಸರಿನ ಅರ್ಥವೇನು? ಸಂಸ್ಕೃತದಲ್ಲಿ ಅಕಾಯ್ ಎಂದರೆ ಏನು? ಈ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡಿದ್ದಾರೆ. ಈ ಹೆಸರಿನ ದೇವರಿದ್ದಾನಾ ಇಲ್ಲ ಯಾವುದಾದರು ಪುರಾಣ ಪ್ರಸಿದ್ಧ ಪಾತ್ರವಿತ್ತಾ ಎಂಬ ಕುರಿತ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ನೋಡಿ ಉತ್ತರ.

ಅಕಾಯ್ ಎಂಬುದು ಹಿಂದಿ ಪದವಾಗಿದ್ದು, ಟರ್ಕಿಶ್ ಮೂಲವಾಗಿದೆ. ಸಂಸ್ಕೃತದಲ್ಲಿ, ಅಕಾಯ್ ಎಂದರೆ ಕಾಯ್, ಅಕಾ ರೂಪ ಅಥವಾ ದೇಹವಿಲ್ಲದ ಯಾವುದಾದರೂ ಅಥವಾ ನಿರಾಕಾಯ ಎಂದು. ಇದು ಕಾಯ ಎಂಬ ಪದದಿಂದ ಬಂದಿದೆ, ಅಂದರೆ ದೇಹ. ಆದರೆ ಇಲ್ಲಿ ಶಕ್ತಿಶಾಲಿ ಎಂಬ ಅರ್ಥವನ್ನೂ ಅದು ನೀಡುತ್ತದೆ. ಜೊತೆಗೆ ಟರ್ಕಿಶ್ ಮೂಲದಲ್ಲಿ ಅಕಾಯ್ ಎಂದರೆ ಹೊಳೆಯುವ ಚಂದ್ರ ಎಂಬ ಅರ್ಥವೂ ಇದೆ.
ಇದಲ್ಲದೆ ಹಿಂದೂ ಪುರಾಣಗಳ ಪ್ರಕಾರ ನೋಡುವುದಾದರೆ ಅಕಾಯ್ ಎಂಬುದು ಬ್ರಹ್ಮನ ಹೆಸರಂತೆ, ಅಲ್ಲದೆ ಶಿವನನ್ನೂ ಅಕಾಯ್ ಎಂದು ಕರೆದಿರುವ ಉಲ್ಲೇಖಗಳಿವೆ. ಸಾಮಾನ್ಯವಾಗಿ ಶಕ್ತಿಯುತ ವ್ಯಕ್ತಿ ಎಂಬ ಅರ್ಥ ಕಲ್ಪಿಸುತ್ತದೆ.
ವಿರುಷ್ಕಾ ದಂಪತಿಯು 2021ರಲ್ಲಿ ಜನಿಸಿದ ತಮ್ಮ ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದರು. ವಮಿಕಾ ಎಂದರೆ ದುರ್ಗಾ ದೇವಿ ಎಂಬ ಅರ್ಥ ಬರುತ್ತದೆ. ಹೀಗಾಗಿ ಎರಡನೇ ಮಗುವಿನ ಹೆಸರನ್ನು ದೇವರ ಅರ್ಥ ಬರುವಂತೆ ಇಡಲಾಗಿದೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017 ಲ್ಲಿ ಇಟಲಿಯಲ್ಲಿ ವಿವಾಹವಾದರು. ಅವರು ತಮ್ಮ ಮೊದಲ ಮಗುವನ್ನು ಜನವರಿ 11, 2021 ರಂದು ವಮಿಕಾ ಎಂಬ ಹೆಣ್ಣು ಮಗಳನ್ನು ಸ್ವಾಗತಿಸಿದ್ದರು. ಕಳೆದ ವರ್ಷದಿಂದ ಅನುಷ್ಕಾ ಶರ್ಮಾ ಎರಡನೇ ಗರ್ಭಧಾರಣೆಯ ವದಂತಿಗಳು ಹರಿದಾಡುತ್ತಿತ್ತು.
ವಿರಾಟ್ ಇತ್ತೀಚಿಗೆ ಕ್ರಿಕೆಟ್‌ನಿಂದ ವಿರಾಮ ಪಡೆದಾಗ ಅನುಷ್ಕಾ ಗರ್ಭಿಣಿಯಾಗಿರುವುದು ದೃಢವಾಗಿತ್ತು. ಆದರೆ ಫೆ 15ರಂದು ಮಗು ಜನಿಸಿದ್ದರೂ ಯಾರಿಗೂ ತಿಳಿದಿರಲಿಲ್ಲ.
ವಿರಾಟ್ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ವಿರಾಮ ಪಡೆದಿದ್ದರು. ವೈಯಕ್ತಿಕ ಕಾರಣಗಳಿಂದ ಇಡೀ ಸರಣಿಯಿಂದ ಹಿಂದೆ ಸರಿದಿದ್ದರು. ನಂತರ, ಅವರ ಆಪ್ತ ಸ್ನೇಹಿತ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಂಚಿಕೊಂಡರು. ಈ ಮಾತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ಎಬಿಡಿ ಈ ಮಾತು ಬದಲಾಯಿಸಿ ನನಗೆ ಗೊತ್ತಿಲ್ಲಾ ಎಂದಿದ್ದರು. ಆದರೆ ಈಗ ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಂತಾಗಿದೆ.



Click it and Unblock the Notifications
