Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ ಗ್ರಹಣದ ಬಳಿಕ ಫೆ.28ಕ್ಕೆ ಮತ್ತೊಂದು ಅಚ್ಚರಿ: ಬರಿಗಣ್ಣಲ್ಲಿ ನೋಡಬಹುದು ಪ್ಲಾನೆಟ್ ಪರೇಡ್
ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬರ ವ್ಯಕ್ತಿಗೂ ಕಳೆದ ಕೆಲ ದಿನದ ಹಿಂದೆ ನಡೆದ ಸೂರ್ಯ ಗ್ರಹಣ ಬಹಳ ಅಚ್ಚರಿ ತಂದಿರಬಹುದು. ಹಾಗೆ ಈಗ ಮತ್ತೊಂದು ವಿದ್ಯಮಾನ ನಡೆಯಲಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಆಕಾಶದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು ವಿಚಿತ್ರ ಹಾಗೆ ಅಚ್ಚರಿ ತರಬಹುದು. ಅದರಲ್ಲೂ ಈಗ ಪ್ಲಾನೆಟ್ ಪರೇಡ್ ಮತ್ತೆ ನಡಯುತ್ತಿರುವುದು ಹಲವರಿಗೆ ಅಚ್ಚರಿ ತರಿಸಿದೆ.
ನಾಸಾ ಪ್ರಕಾರ ಬುಧ, ಶುಕ್ರ, ನೆಪ್ಚೂನ್, ಶನಿ, ಯುರೇನಸ್ ಮತ್ತು ಗುರು ಗ್ರಹವು ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳಲಿವೆ. ಅವು ಬಹಳಷ್ಟು ಅಂತರದಲ್ಲಿದ್ದರೂ ಕೂಡ ಒಂದೇ ಸಾಲಿನಲ್ಲಿ ಕಾಣಿಸುವ ಕಾರಣ ಬಹಳ ಸಮೀಪಕ್ಕೆ ಬಂದಂತೆ ಗೋಚರವಾಗಲಿದೆ. ಈ ವಿದ್ಯಮಾನವನ್ನು ಗ್ರಹಗಳ ಪಥ ಸಂಚಲನ ಎಂಬುದಾಗಿ ಕರೆಯಲಾಗಿದೆ. ಈ ವಿದ್ಯಮಾನ ಈಗ ಮತ್ತೆ ಸಂಭವಿಸುತ್ತಿದೆ.

ಇದೇ ಫೆ 28 ರಂದು ಈ ರೀತಿಯ ಪ್ಲಾನೆಟ್ ಪರೇಡ್ ನೋಡಲು ಸಿಗುತ್ತಿದೆ. ಹೀಗಾಗಿ ಈ ಸಮಯವು ಖಗೋಳಶಾಸ್ತ್ರಜ್ಞರಿಗೆ ಬಹಳ ಮುಖ್ಯವಾದ ದಿನವಾಗಿರಲಿದೆ. ಈ ವಿದ್ಯಮಾನ ಸಂಭವಿಸಲು 6 ಗ್ರಹಗಳು ಸಾಲಾಗಿ ಚಲಿಸಲಿವೆ. ಆದ್ರೆ ನಾವು 4 ಗ್ರಹಗಳನ್ನು ಬರಿಗಣ್ಣನಿಂದ ನೋಡಬಹುದು. ಯುರೇನಸ್ ಮತ್ತು ನೆಪ್ಚೂನ್ ಅನ್ನು ಬರಿಗಣ್ಣನಿಂದ ವೀಕ್ಷಿಸಲು ಸಾಧ್ಯವಾಗುವುದಿಲ್ಲ.
ಈ ದಿನದಂದು ಎರಡೂ ಬದಿಗಳಲ್ಲಿ ನೀವು ಈ ಬಿಗಿಯಾದ ಸಮೂಹವನ್ನು ಹಲವಾರು ದಿನಗಳವರೆಗೆ ಅಥವಾ ವಾರಗಳವರೆಗೆ ನೋಡಲು ಸಾಧ್ಯವಾಗುತ್ತದೆ. ಗ್ರಹಗಳು ತಮ್ಮ ಕಕ್ಷೆಗಳಲ್ಲಿ ನಿಧಾನವಾಗಿ ಚಲಿಸುವುದರಿಂದ, ಜೋಡಣೆ ಕ್ರಮೇಣ ಬದಲಾಗುತ್ತದೆ, ಬಾಹ್ಯಾಕಾಶ ಉತ್ಸಾಹಿಗಳಿಗೆ ಇದು ಸಾಕಷ್ಟು ಸಮಯ ಆಗಿರಲಿದೆ. ಮೂರು, ನಾಲ್ಕು ಅಥವಾ 5 ಗ್ರಹಗಳು ಒಂದೇ ಸಾಲಿನಲ್ಲಿ ಚಲಿಸುವ ಪ್ರಕ್ರಿಯೆಯನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದ್ರೆ 6 ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ಅಪರೂಪದ ವಿದ್ಯಮಾನ ಆಗಿರಲಿದೆ.
ಹಾಗೆ ಈ ವಿದ್ಯಮಾನದ ನಂತರ ಇನ್ನು 2047ರ ವರೆಗೆ ಒಟ್ಟಗೆ 7 ಗ್ರಹಗಳ ಸಾಲುಗಳು ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಅದರೊಳಗೆ ಎರಡರಿಂದ 5 ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸುವ ವಿದ್ಯಮಾನಗಳು ನಡೆಯಲಿದೆ ಎಂದು ಹೇಳಲಾಗಿದೆ. ಇನ್ನು ಈ ಪಥ ಸಂಚಲನ ನೋಡಲು ನಾಸಾ ಸೇರಿದಂತೆ ಜಗತ್ತಿನ ಹಲವು ಬಾಹ್ಯಾಕಾಶ ಸಂಸ್ಥೆಗಳು, ವಿಜ್ಞಾನ ಕೇಂದ್ರಗಳು, ವಿಶ್ವವಿದ್ಯಾಲಯಗಳು, ತಾರಾ ವೀಕ್ಷಣ ಕೇಂದ್ರಗಳು ತಯಾರಿ ನಡೆಸಿವೆ. ಬಹುತೇಕ ಕಡೆ ಅದ್ರಲ್ಲೂ ಹವಾಮಾನ ಸಾಮಾನ್ಯವಾಗಿರುವ ಕಡೆಗಳಲ್ಲಿ ಈ ವಿದ್ಯಮಾನ ಮತ್ತಷ್ಟು ನಿಖರವಾಗಿ ಹಾಗೆ ಸ್ಪಷ್ಟವಾಗಿ ನೋಡಬಹುದು.
ಈ ವಿದ್ಯಮಾನವನ್ನ ನೋಡಲು ವಿಸ್ತಾರವಾದ ಪ್ರದೇಶದ ಅಗತ್ಯವಿದೆ. ಅದ್ರಲ್ಲೂ ಸೂರ್ಯ ಮುಳುಗುವ ಅರ್ಧ ಗಂಟೆಯ ಮುನ್ನ ಬಹಳ ಚೆನ್ನಾಗಿ ಗೋಚರಿಸುತ್ತದೆ. ಸೂರ್ಯನ ಬೆಳಕು ಹೆಚ್ಚು ಪ್ರಕಾಶಮಾನವಾಗಿ ಬೀಳದೆ ಇರುವ ಕಾರಣ ನಿಮ್ಮ ಕಣ್ಣುಗಳು ಈ ಗ್ರಹಗಳನ್ನು ಗ್ರಹಿಸುತ್ತವೆ. ಫಡ. 28ರಂದು ಸಂಜೆಯ 30 ನಿಮಿಷಗಳ ಕಾಲದಲ್ಲಿ ಪಶ್ಚಿಮ ದಿಕ್ಕಿನತ್ತ ನೋಡಿದಾಗ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು. ಶುಕ್ರ ಮತ್ತು ಬುಧ ಕ್ಷಿತಿಜಕ್ಕೆ ಹತ್ತಿರದಲ್ಲಿ ಸ್ಥಾನ ಪಡೆಯುತ್ತವೆ, ನಂತರ ಶನಿ ಮತ್ತು ನೆಪ್ಚೂನ್, ಆದರೆ ಯುರೇನಸ್ ಮತ್ತು ಗುರು ಗ್ರಹಗಳು ಆಕಾಶದಲ್ಲಿ ಹೆಚ್ಚು ಎತ್ತರದಲ್ಲಿ ಸ್ಥಾನ ಪಡೆಯುತ್ತವೆ.
ಕಳೆದ ವರ್ಷ ಕೂಡ ಇಂತಹದ್ದೆ ವಿದ್ಯಮಾನ ನಡೆದಿತ್ತು, ಸತತ 2 ದಿನಗಳ ಕಾಲ ವಿಶ್ವದ ಹಲವು ಭಾಗದಲ್ಲಿ ಪ್ಲಾನೆಟ್ ಪರೇಡ್ ವೀಕ್ಷಿಸಲಾಗಿತ್ತು.



Click it and Unblock the Notifications











