Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ನಿಜವಾಗುತ್ತಿದೆ ಬಾಬಾ ವಂಗಾ ನುಡಿದ ಮತ್ತೊಂದು ಭವಿಷ್ಯ..! ಏನದು ಗೊತ್ತಾ?
ನೀವು ಬಾಬಾ ವಂಗಾ ಹೆಸರು ಕೇಳಿರಬಹುದು, ಆಕೆ ನುಡಿದಿರುವ ಭವಿಷ್ಯಗಳು ನಿಜವಾಗುತ್ತಿರುವುದನ್ನು ಸಹ ನೀವು ಗಮನಿಸಿರಬಹುದು. ಈಗ ಮತ್ತೊಂದು ಆಜೆಯ ಭವಿಷ್ಯ ನಿಜವಾಗಿದೆ. ಆಕೆ ಹತ್ತಾರು ವರ್ಷಗಳ ಹಿಂದೆ ನುಡಿದಿರುವ ಭವಿಷ್ಯಗಳು ಈಗ ನಿಜವಾಗುತ್ತಿವೆ.
ಇನ್ನು ಬಾಬಾ ವಂಗಾ 2024ರ ಕುರಿತು ನುಡಿದಿದ್ದ ಭವಿಷ್ಯಗಳಲ್ಲಿ ಕೆಲವೊಂದು ಈಗ ನಿಜವಾಗುತ್ತಿದೆ. ಬಾಬಾ ವಂಗಾ, ಅವರ ನಿಜವಾದ ಹೆಸರು ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ, ಈಕೆ ಭವಿಷ್ಯದ ಘಟನೆಗಳನ್ನು ಊಹಿಸುವ ಸಾಮರ್ಥ್ಯ ಹೊಂದಿದ್ದರಿಂದ ವ್ಯಾಪಕವಾದ ಮನ್ನಣೆ ಪಡೆದರು.

ಅವರು ಜನವರಿ 31, 1911 ರಂದು ಒಟ್ಟೋಮನ್ ಸಾಮ್ರಾಜ್ಯದಲ್ಲಿ (ಈಗಿನ ಆಧುನಿಕ ಮ್ಯಾಸಿಡೋನಿಯಾ) ಜನಿಸಿದರು ಮತ್ತು ಅವರು ಆಗಸ್ಟ್ 11, 1996 ರಂದು ಬಲ್ಗೇರಿಯಾದಲ್ಲಿ ನಿಧನರಾದರು. ಜಾಗತಿಕ ಘಟನೆಗಳ ಬಗ್ಗೆ ಭವಿಷ್ಯ ನುಡಿಯುವ ಖ್ಯಾತಿಯಿಂದಾಗಿ ಬಾಬಾ ವಂಗಾ ಅವರನ್ನು "ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್" ಎಂದು ಕರೆಯಲಾಗುತ್ತದೆ.
ಅವಳು ಮಗುವಾಗಿದ್ದಾಗ ಚಂಡಮಾರುತದ ಸಮಯದಲ್ಲಿ ಅವಳು ದೃಷ್ಟಿ ಕಳೆದುಕೊಂಡಿದ್ದಳಂತೆ, ಆದರೆ ಅವಳ ಬೆಂಬಲಿಗರ ಪ್ರಕಾರ, ಈ ಘಟನೆಯು ಅವಳ ಅತೀಂದ್ರಿಯ ಸಾಮರ್ಥ್ಯಗಳನ್ನು ಹೆಚ್ಚಿಸಿತು. ಅವಳು ಅದೃಶ್ಯ ಮತ್ತು ಅಲೌಕಿಕ ಶಕ್ತಿಗಳನ್ನು ನೋಡಬಹುದು ಮತ್ತು ಅವುಗಳ ಜೊತೆ ಸಂವಹನ ಮಾಡುವ ಶಕ್ತಿ ಇದೆ ಎಂದು ಆಕೆ ಹೇಳಿಕೊಂಡಿದ್ದಳು.
ಹಾಗಾದರೆ ಈಗ ನಿಜವಾಗಿರುವ ಆಕೆಯ ಮತ್ತೊಂದು ಭವಿಷ್ಯವಾಣಿ ಏನು? ಆಕೆ ಈ ವರ್ಷ ಸಂಭವಿಸಲಿರುವ ಭವಿಷ್ಯವಾಣಿಗಳಲ್ಲಿ ಎಷ್ಟು ಸಂಭವಿಸಬಹುದು ಎಂಬುದನ್ನು ನೋಡಿ.
ಆರ್ಥಿಕ ಬಿಕ್ಕಟ್ಟು
ವಂಗಾ ಅವರ ಮತ್ತೊಂದು ಭಯಾನಕ 2024 ಭವಿಷ್ಯ ಅದು ನಿಜವಾಗುತ್ತಿದೆ, ಆರ್ಥಿಕ ಬಿಕ್ಕಟ್ಟು. ಯುಕೆ ಮತ್ತು ಜಪಾನ್‌ನಂತಹ ದೇಶಗಳು ಕಠಿಣ ಆರ್ಥಿಕ ಪರಿಸ್ಥಿತಿಗಳಿಗೆ ಸಾಕ್ಷಿಯಾಗುತ್ತಿವೆ ಎಂದು ವರದಿಯಾಗಿದೆ. ಇವುಗಳ ಹೊರತಾಗಿ, ಇನ್ನೂ ಅನೇಕ ದೇಶಗಳು ಆರ್ಥಿಕ ಹಿಂಜರಿತದ ಬೆದರಿಕೆಯನ್ನು ಎದುರಿಸುತ್ತಿವೆ ಎಂದು ವರದಿಯಾಗಿದೆ.
ಪುಟಿನ್ ಅಂತ್ಯ
2024ಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹತ್ಯೆಯ ಬಗ್ಗೆ. ವರದಿಗಳ ಪ್ರಕಾರ, ಪುಟಿನ್ ಮೇಲೆ ಈಗಾಗಲೇ ಐದು ಹತ್ಯೆಯ ಪ್ರಯತ್ನಗಳು ನಡೆದಿವೆ. ಆದರೆ ವಂಗಾ ಪ್ರಕಾರ ಪುಟಿನ್ 2024ರಲ್ಲಿ ಹತ್ಯೆಯಾಗಲಿದ್ದಾರೆ ಎಂದಿದ್ದಳು.
ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ
ಇನ್ನು ಬಾಬಾ ವಂಗಾ 2024ರ ಕುರಿತು ನುಡಿದಿದ್ದ ಭವಿಷ್ಯವೊಂದು ನಿಜವಾಗಿದೆ. ಆಕೆ 2024ರಲ್ಲಿ ಎರಡು ಮಾರಕ ಕಾಯಿಲೆಗಳಿಗೆ ಚುಚ್ಚುಮದ್ದು ಕಂಡುಹಿಡಿಯಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಈಗ ರಷ್ಯಾ ಮಾರಕ ಕ್ಯಾನ್ಸರ್‌ಗೆ ಚುಚ್ಚುಮದ್ದು ಕಂಡು ಹಿಡಿದಿರುವುದಾಗಿ ತಿಳಿಸಿದೆ. ಹೌದು ರಷ್ಯಾವು ಕ್ಯಾನ್ಸರ್‌ಗೆ ಚುಚ್ಚುಮದ್ದು ಕಂಡು ಹಿಡಿದಿದೆಯಂತೆ. ಈ ಕುರಿತು ಖುದ್ದು ಪ್ರಧಾನಿ ವ್ಲಾದಿಮರ್ ಪುಟೀನ್ ಮಾಹಿತಿ ಹಂಚಿಕೊಂಡಿದ್ದಾರೆ. 2024ರಲ್ಲಿ ಕ್ಯಾನ್ಸರ್ ಮತ್ತು ಆಲ್ಝೈಮರ್ ಕಾಯಿಲೆಗೆ ಪರಿಹಾರಗಳನ್ನು ಕಂಡುಹಿಡಿಯಲಾಗುವುದು ಎಂದು ಬಾಬಾ ವಂಗಾ ಹೇಳಿದ್ದರು. ಇದರಲ್ಲಿ ಕ್ಯಾನ್ಸರ್ ಭವಿಷ್ಯ ನಿಜವಾಗಿದೆ.
ಈಗ ಆಕೆ ಆರ್ಥಿಕ ಹಿಂಜರಿತದ ಕುರಿತು ಹೇಳಿದ್ದ ಭವಿಷ್ಯ ಸಹ ನಿಜವಾಗುತ್ತಿದೆ. ಆಕೆಯ ಪ್ರಕಾರ ವಿಶ್ವದ ಹಲವು ರಾಷ್ಟ್ರಗಳು ಸಾಲದ ಸುಳಿಗೆ ಸಿಲುಕಲಿದೆಯಂತೆ. ಸಾಲದ ಪ್ರಮಾಣ ಏರುಗತಿಯಲ್ಲಿದ್ದರೆ ಅಭಿವೃದ್ಧಿ ತೀರ ಕಳಪೆಯಾಗಲಿದೆಯಂತೆ. ಇದು ಪೂರ್ವದಿಂದ ಪಶ್ಚಿಮಕ್ಕೆ ಬೀಕರವಾಗಿ ಹರಡಲಿದ್ದು, ದಿವಾಳಿತನ ಬಾಗಿಲಿಗೆ ಬರಲಿದೆ ಎಂದಿದ್ದಳು. ಅದರಂತೆ ಈಗ ಜಪಾನ್ ಹಾಗೂ ಇಂಗ್ಲೆಂಡ್ ಸದ್ಯ ಆರ್ಥಿಕ ಸಮಸ್ಯೆಗೆ ಸಿಲುಕಿವೆ ಎನ್ನಲಾಗಿದ್ದು, ವಂಗಾ ಅವರ ಭವಿಷ್ಯ ನಿಜವಾಗಲಿದ್ಯಾ ಎಂಬ ಕುತೂಹಲ ಮೂಡಿಸಿದೆ.



Click it and Unblock the Notifications

