Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹ ಪತ್ತೆ..! ವಾಸಯೋಗ್ಯವೂ ಆಗಿದ್ಯಂತೆ..!
ಸದ್ಯ ಜೀವಿಗಳು ವಾಸವಿರುವ ಏಕೈಕ ಗ್ರಹ ಅಂದ್ರೆ ಅದು ಭೂಮಿ ಎಂದು ಎಲ್ಲರಿಗೂ ತಿಳಿದಿದೆ. ಅದ್ರೆ ಬೇರೆ ಗ್ರಹದಲ್ಲಿ ಜೀವಿಗಳು ವಾಸವಿದ್ದವೇ ಎಂಬ ಕುರಿತ ಅಧ್ಯಯನಗಳು ನಡೆಯುತ್ತಲೇ ಇವೆ. ಅದರಲ್ಲೂ ಮಂಗಳ ಗ್ರಹದಲ್ಲಿ ಜೀವಿಗಳಿದ್ದವೇ ಎಂಬ ಕುರಿತು ಅಧ್ಯಯನ ನಿರಂತರವಾಗಿ ನಡೆಯುತ್ತಿವೆ. ಚಂದ್ರನ ಮೇಲೂ ತಲುಪಿರುವ ಮಾನವ ಬೇರೆ ಗ್ರಹಗಳಲ್ಲಿ ನೆಲೆಸಬಹುದೇ ಎಂಬ ಹುಡುಕಾಟದಲ್ಲಿ ನಿರತನಾಗಿದ್ದಾನೆ. ಇದಕ್ಕಾಗಿ ನಿತ್ಯವೂ ಒಂದಲ್ಲಾ ಒಂದು ಅಧ್ಯಯನಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಆದ್ರೆ ಈವರೆಗೂ ಜೀವಿಗಳಿರುವಂತಹ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಆದ್ರೆ ಮಾನವ ಯೋಗ್ಯವಾದ ಮತ್ತೊಂದು ಗ್ರಹದ ಹುಡುಕಾಟದಲ್ಲಿ ವಿಜ್ಞಾನಿಗಳ ತಂಡ ನಿರತವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಈಗ ನಮ್ಮ ಸೌರ ಮಂಡಲದಿಂದ ಹೊರಗೆ ಮತ್ತೊಂದು ಗ್ಯಾಲಕ್ಸಿಯಲ್ಲಿ ಹೊಸದೊಂದು ಗ್ರಹ ಪತ್ತೆಯಾಗಿದ್ದು ಬಹುತೇಕ ಅಲ್ಲಿ ಮಾನವರು ಜೀವಿಸಬಹುದಾದ ವಾತಾವರಣವಿದೆ ಎಂದು ತಿಳಿದುಬಂದಿದೆ.

ಭೂಮಿಯಿಂದ ಜ್ಯೋತಿರ್ವಷಗಳ ದೂರದಲ್ಲಿರುವ ಗ್ರಹವೊಂದನ್ನು ನಾಸಾ ವಿಜ್ಞಾನಿಗಳು ಪತ್ತೆ ಮಾಡಿದ್ದು, ಭೂಮಿಯಂತಯೇ ವಾತಾವರಣ ಇರುವ ಸಾಧ್ಯತೆ ಇದೆ ಎಂದಿದ್ದಾರೆ.
ಗ್ಲೀಸ್ 12 ಬಿ ಎಂದು ಹೆಸರಿಸಲಾದ ಹೊಸದೊಂದು ಗ್ರಹವು "ಎಕ್ಸೋಪ್ಲಾನೆಟ್", ಅಥವಾ "ಎಕ್ಸೋಪ್ಲಾನೆಟ್" ಅನ್ನು NASA ದ TESS (ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್) ಮತ್ತು ಇತರ ಹಲವು ಸೌಲಭ್ಯಗಳನ್ನು ಬಳಸಿಕೊಂಡು ಎರಡು ಅಂತರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ತಂಡಗಳಿಂದ ಪತ್ತರ ಮಾಡಲಾಗಿದೆ.
ತಜ್ಞರ ಪ್ರಕಾರ, Gliese 12 b ಭೂಮಿಯ ಗಾತ್ರವನ್ನು ಹೊಂದಿದೆ, ಇದು ನಮ್ಮ ಸೌರವ್ಯೂಹಕ್ಕೆ ಗಮನಾರ್ಹವಾಗಿ ಹತ್ತಿರದಲ್ಲಿದೆ ಮತ್ತು ನಮಗೆ ತಿಳಿದಿರುವಂತೆ ಅಲ್ಲಿ ಜೀವ ಸಂಕುಲಗಳಿಗೆ ಅನುಕೂಲಕರವಾದ ವಾತಾವರಣವೂ ಇದೆ ಎನ್ನಲಾಗಿದೆ.
"ಗ್ಲೀಸ್ 12 ಎಂದು ಕರೆಯಲ್ಪಡುವ ಈ ಗ್ರಹವು 40 ಬೆಳಕಿನ ವರ್ಷಗಳ ದೂರದಲ್ಲಿರುವ ತಂಪಾದ ಕೆಂಪು ಕುಬ್ಜ ಗ್ರಹ ಎಂದು ತಿಳಿದುಬಂದಿದೆ. ನಕ್ಷತ್ರವು ಸೂರ್ಯನ ಗಾತ್ರದ ಕೇವಲ ಶೇ. 27ರಷ್ಟು ಸೂರ್ಯನ ಮೇಲ್ಮೈ ತಾಪಮಾನದ ಸುಮಾರು ಶೇ.60 ರಷ್ಟು ಹೊಂದಿದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಗ್ರಹವು 12.8 ದಿನಗಳಿಗೊಮ್ಮೆ ಒಂದು ಸುತ್ತು ಬರುತ್ತದೆ. ಅದರ ವೇಗ ಅತ್ಯಂತ ನಿಧಾನವಾಗಿದೆ. ಈ ಗ್ರಹದ ಮೇಲ್ಮೈ ತಾಪಮಾನ ಸುಮಾರು 42 ಡಿಗ್ರಿ ಇರಬಹುದು ಎಂದು ನಾಸಾ ತಿಳಿಸಿದೆ. ಸಂಶೋಧನೆಯ ಸಹ-ನೇತೃತ್ವ ವಹಿಸಿರುವ ಟೋಕಿಯೊದ ಆಸ್ಟ್ರೋಬಯಾಲಜಿ ಸೆಂಟರ್‌ನ ಪ್ರಾಜೆಕ್ಟ್ ಅಸಿಸ್ಟೆಂಟ್ ಪ್ರೊಫೆಸರ್ ಮಸಾಯುಕಿ ಕುಜುಹರಾ ತಿಳಿಸಿರುವಂತೆ, ಸಮಶೀತೋಷ್ಣ ವಲಯದಲ್ಲಿ ಭೂಮಿಯ ಗಾತ್ರದ ಪ್ರಪಂಚವನ್ನು ನಾವು ಕಂಡುಕೊಂಡಿದ್ದೇವೆ" ಎಂದು ಹೇಳಿದರು. ಆದರೆ ಈ ಗ್ರಹವು ತನ್ನೊಳಗೆ ವಾತಾವರಣ ಹೊಂದಿದೆ ಎಂದು ನಾವು ಭಾವಿಸುವುವುದಿಲ್ಲ ಎಂದಿದ್ದಾರೆ.
ಅಚ್ಚರಿಯ ವಿಚಾರವೆಂದರೆ ಭೂಮಿ ಅತ್ಯಂತ ಹತ್ತಿರವಿರುವ ಗ್ರಹಗಳಲ್ಲಿ ಇದೂ ಒಂದಾಗಿದೆ. ಇದು ಅದರ ನಕ್ಷತ್ರದ ವಾಸಯೋಗ್ಯ ವಲಯದಲ್ಲಿದೆ ಅಥವಾ ಅದರ ಅಂಚಿನಲ್ಲಿದೆ - ಆದ್ದರಿಂದ, ಅದು ವಾಸಯೋಗ್ಯವಾಗಿರಬಹುದು" ಎಂದು ಸಂಶೋಧನೆಯ ಸಹ-ನೇತೃತ್ವ ವಹಿಸಿದ್ದ ಯೂನಿವರ್ಸಿಟಿ ಕಾಲೇಜ್ ಲಂಡನ್ ವಿಜ್ಞಾನಿ ಲಾರಿಸ್ಸಾ ಪ್ಯಾಲೆಥೋರ್ಪ್ ಹೇಳಿದ್ದಾರೆ. ಇದೊಂದೆ ಗ್ರಹ ಈಗ ಹೆಚ್ಚು ಭೂಮಿಗೆ ಹೋಲಿಕೆಯಾಗುತ್ತಿದೆ.
ಆದರೆ ಇನ್ನೂ ಭೂಮಿಗೆ ಹತ್ತಿರವಿರುವ ಗ್ರಹಗಳ ಪೈಕಿ ವಾಸ ಯೋಗ್ಯವಾಗಿರುವ ಗ್ರಹಗಳ ಹುಡುಕಾಟ ಮುಂದುವರೆದಿದೆ. ಆದ್ರೆ ಈ ಗ್ರಹವೂ ವಾಸಯೋಗ್ಯ ಹಾಗೂ ಜೀವರಾಶಿಗಳಿಗೆ ಅನುಕೂಲಕರ ವಾತಾವರಣ ಹೊಂದಿರುವ ಕುರಿತಂತೆ ತಜ್ಞರು ಪ್ರತಿಪಾಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಧ್ಯಯನ ಮೂಲಕ ಗ್ರಹದ ಸಂಬಂಧ ಮತ್ತಷ್ಟು ಮಾಹಿತಿ ಹೊರಬೀಳಬೇಕಿದೆ.



Click it and Unblock the Notifications
