Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸೆಪ್ಟೆಂಬರ್‌ನಲ್ಲಿ ಮತ್ತೊಂದು ಚಂದ್ರಗ್ರಹಣ..! ಯಾವಾಗ ಗೊತ್ತಾ?
2024ರಲ್ಲಿ 2 ಚಂದ್ರಗ್ರಹಣ ಹಾಗೂ 2 ಸೂರ್ಯ ಗ್ರಹಣ ಸಂಭವಿಸುತ್ತವೆ ಎಂಬುದು ಹಳೆಯ ವಿಚಾರ. ಈಗಾಗಲೇ ಒಂದು ಸೂರ್ಯ ಗ್ರಹಣ ಹಾಗು ಒಂದು ಚಂದ್ರಗ್ರಹಣ ಸಂಭವಿಸಿಯೂ ಆಗಿದೆ. ಕೆಲವು ದೇಶಗಳು ಈ ಎರಡೂ ವಿದ್ಯಮಾನ ಕಣ್ತುಂಬಿಕೊಂಡಿದ್ದಾರೆ. ಹಾಗೆ ಮತ್ತೆ ಕೆಲವು ದೇಶದಲ್ಲಿ ಇನ್ನೊಂದು ಚಂದ್ರಗ್ರಹಣ ಗೋಚರವಾಗುವುದು ಬಾಕಿ ಉಳಿಸಿದೆ.
ಚಂದ್ರಗ್ರಹಣ ಆಕಾಶದಲ್ಲಿ ಉಂಟಾಗಲಿರುವ ಬಹುದೊಡ್ಡ ವಿಸ್ಮಯದಲ್ಲಿ ಒಂದಾಗಿದೆ. ಈ ಬಾರಿ ಎರಡು ಚಂದ್ರಗ್ರಹಣ ಸಂಭವಿಸಲಿದೆ. ಈಗಾಗಲೇ ಸಂಪೂರ್ಣ ಚಂದ್ರಗ್ರಹಣವೊಂದು ಮುಗಿದಿದೆ. ಇನ್ನೊಂದು ಚಂದ್ರಗ್ರಹಣ ಇದೇ ಸೆಪ್ಟೆಂಬರ್‌ನಲ್ಲಿ ಸಂಭವಿಸುತ್ತಿದೆ. ಈ ಮೊದಲು ಮಾರ್ಚ್ 25ರಂದು ಒಂದು ಚಂದ್ರಗ್ರಹಣ ಸಂಭವಿಸಿತ್ತು, ಆದ್ರ ಈಗ ಸೆಪ್ಟೆಂಬರ್‌ನಲ್ಲಿ ಮತ್ತೊಂದು ಚಂದ್ರಗ್ರಹಣ ಸಂಭವಿಸುತ್ತಿದೆ.

ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ ಎಂಬುದನ್ನು ನಾವು ಶಾಲಾ ದಿನದಿಂಲದೇ ಕಲಿತ್ತಿದ್ದೇವೆ. ಭೂಮಿಯ ಈ ನೆರಳು ಚಂದ್ರನನ್ನು ಮುಚ್ಚಿಕೊಳ್ಳುತ್ತದೆ. ಇದರಿಂದ ವೈಜ್ಞಾನಿಕವಾಗಿ ನಮಗೆ ಚಂದ್ರ ಕೆಲಹೊತ್ತು ಮರೆಯಾಗುತ್ತಾನೆ. ಆದರೆ ಧಾರ್ಮಿಕ ದೃಷ್ಟಿಯಲ್ಲಿ ಇದು ದೊಡ್ಡ ವಿದ್ಯಮಾನಾಗಿದೆ.
ಸೆಪ್ಟೆಂಬರ್‌ನಲ್ಲಿ ಚಂದ್ರಗ್ರಹಣ ಯಾವಾಗ?
ಈ ವರ್ಷದ ಮೂರನೇ ಹಾಗೂ 2ನೇ ಚಂದ್ರಗ್ರಹಣವು ಇದೇ ಸೆಪ್ಟೆಂಬರ್ 18ರಂದು ಸಂಭವಿಸಲಿದೆ. ಕೆಲವು ಕಡೆ ಇದು 19ನೆ ತಾರೀಖು ಸಹ ಆಗಿರಬಹುದು.
ಸೆಪ್ಟೆಂಬರ್ ಚಂದ್ರಗ್ರಹಣ ಎಲ್ಲಿ ಗೋಚರವಾಗಲಿದೆ?
ಈ ಮೊದಲು ಮಾರ್ಚ್‌ನಲ್ಲಿ ಸಂಭವಿಸಿದ ಚಂದ್ರಗ್ರಹಣವು ಭಾರತದಲ್ಲಿ ಗೋಚರವಾಗಿರಲಿಲ್ಲ. ಅದೇ ರೀತಿ ಈ ಸೆಪ್ಟೆಂಬರ್‌ನಲ್ಲಿ ಸಂಭವಿಸುತ್ತಿರುವ ಸಂಪೂರ್ಣ ಚಂದ್ರ ಗ್ರಹಣವು ಸಹ ಭಾರತದಲ್ಲಿ ಗೋಚರವಾಗುವುದಿಲ್ಲ. ಇದು ಯೂರೋಪ್, ಆಫ್ರಿಕಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ಕೆಲವೊಂದು ಭಾಗದಲ್ಲಿ ಮಾತ್ರ ಗೋಚರವಾಗುತ್ತಿದೆ, ಆದರೆ ಭಾರತದಲ್ಲಿ ಗೋಚರಿಸುತ್ತಿಲ್ಲ.
2024 ರ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸದಿದ್ದರೂ, ಈ ಸಮಯದಲ್ಲಿ ಅನೇಕ ಜನರು ಧಾರ್ಮಿಕ ನಿಯಮಗಳ ಪಾಲಿಸುತ್ತಾರೆ. ಭಾರತೀಯ ಕಾಲಮಾನದ ಪ್ರಕಾರ ಅಂದು ಬೆಳಗ್ಗೆ 6:12 AM ರಿಂದ 10:17 AM ವರೆಗೆ ಸಂಭವಿಸುತ್ತದೆ ಎಂದು ತಿಳಿದುಬಂದಿದೆ. ಒಟ್ಟು ಸೂರ್ಯ ಗ್ರಹಣದ ಸಮಯ ಒಟ್ಟು 4 ಗಂಟೆ 5 ನಿಮಿಷಗಳಾಗಿರುತ್ತದೆ. ಈ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳು ನಡೆಯುವುದಿಲ್ಲ ಹಾಗೆ ಚಂದ್ರಗ್ರಹಣದ ಎಲ್ಲಾ ನಿಯಮಗಳನ್ನು ಅನುಸರಿಸಲಾಗುತ್ತದೆ.
ಚಂದ್ರಗ್ರಹಣದ ಸೂತಕ ಅವಧಿಯು ಗ್ರಹಣದ ಸಮಯಕ್ಕಿಂತ 9 ಗಂಟೆಗಳ ಮೊದಲು ಪ್ರಾರಂಭವಾಗುವುದು. ಆದರೆ ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಈ ಕಾರಣದಿಂದಾಗಿ ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಆದರೂ ಈ ಅವಧಿಯಲ್ಲಿ ಗ್ರಹಣದ ಆಚರಣೆಯಂತು ಮಾಡಿಯೇ ಮಾಡುತ್ತಾರೆ.
ಇನ್ನು ಮಾರ್ಚ್‌ನ ಚಂದ್ರಗ್ರಹಣವು ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಹಾಲೆಂಡ್, ಬೆಲ್ಜಿಯಂ, ನಾರ್ವೆ, ಸ್ವಿಟ್ಜರ್ಲೆಂಡ್, ಇಟಲಿ, ಜರ್ಮನಿ, ಫ್ರಾನ್ಸ್, ಅಮೆರಿಕ, ಜಪಾನ್, ರಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್‌ನಲ್ಲಿ ಗೋಚರವಾಗಿತ್ತು, ಈ ಬಾರಿಯೂ ಈ ಪ್ರದೇಶದಲ್ಲಿ ಗೋಚರಿಸುವುದು ಖಚಿತ. ಆದರೆ ಉಳಿದಂತೆ ಏಷ್ಯನ್ ದೇಶದಲ್ಲಿ ಗೋಚರವಾಗುವುದಿಲ್ಲ.



Click it and Unblock the Notifications
