Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಷೇರು ಮಾರುಕಟ್ಟೆಯಿಂದ ಅನಿಲ್ ಅಂಬಾನಿ 5 ವರ್ಷ ಬ್ಯಾನ್.! ಏಕೆ? ಅವರ ಆಸ್ತಿ ಎಷ್ಟಿದೆ ಗೊತ್ತಾ?
ಅನಿಲ್ ಅಂಬಾನಿ ಸದ್ಯ ಏಷ್ಯಾದ ಶ್ರೀಮಂತರದಲ್ಲಿ ಇವರೂ ಒಬ್ಬರು ರಿಲಯನ್ಸ್ ಹೋಮ್ ಫೈನಾಲ್ಸ್ ಸೇರಿ ಹಲವು ಸಂಸ್ಥೆಗಳ ಕಟ್ಟಿಕೊಂಡಿರುವ ಅವರು ಅಂಬಾನಿ ಗ್ರೂಪ್‌ನ ಕೆಲವು ಸಂಸ್ಥೆಗಳ ಮುನ್ನಡೆಸುತ್ತಿದ್ದಾರೆ. ಆದ್ರೆ ಈಗ ಷೇರು ಮಾರುಕಟ್ಟೆಯಿಂದ 5 ವರ್ಷದಗಳ ಕಾಲ ಬ್ಯಾನ್ ಮಾಡಲಾಗಿದೆ. ಭಾರತದ ಷೇರು ಮಾರುಕಟ್ಟೆಗೆ ಇದೊಂದು ಆಘಾತಕಾರಿ ಅಂಶವಾಗಿದೆ. ಜೊತೆಗೆ ಇಷ್ಟು ದೊಡ್ಡ ಚೈನಿಂಗ್ ಕಂಪನಿಯನ್ನು ಬ್ಯಾನ್ ಮಾಡಿದ್ದು ಇದೇ ಮೊದಲು ಎಂದು ತಿಳಿದುಬಂದಿದೆ.
ಸೆಕ್ಯುರಿಟೀಸ್ ಮಾರುಕಟ್ಟೆಗಳ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಎಡಿಎಜಿ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನ (ಆರ್‌ಎಚ್‌ಎಫ್‌ಎಲ್) ಮಾಜಿ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ (ಕೆಎಂಪಿಗಳು) ಸೇರಿದಂತೆ ಇತರ 24 ಘಟಕಗಳನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಐದು ವರ್ಷಗಳ ಕಾಲ ನಿಷೇಧಿಸಿದೆ ಎಂದು ವರದಿಯಾಗಿದೆ.

ಹಾಗಾದ್ರೆ ಅನಿಲ್ ಅಂಬಾನಿ ಆಧ್ಯಕ್ಷತೆಯ ಈ ಕಂಪನಿಗಳನ್ನು ಸೆಬಿ ಶೇರುಮಾರುಕಟ್ಟೆಯಿಂದ ಹೊರಗಿಟ್ಟಿದ್ದೇಕೆ? ದಂಡ ವಿಧಿಸಿರುವುದು ಏಕೆ? ಇದರಿಂದ ಮಾರುಕಟ್ಟೆಗೆ ಯಾವ ರೀತಿ ಹಾನಿಯಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅನಿಲ್ ಅಂಬಾನಿಗೆ 25 ಕೋಟಿ ರೂಪಾಯಿ ದಂಡದ ಜೊತೆಗೆ ಐದು ವರ್ಷಗಳ ಅವಧಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿನ ಸಹಭಾಗಿತ್ವವನ್ನು ನಿಷೇಧಿಸಲಾಗಿದೆ. ಜೊತೆಗೆ ಇತರ ಅಧಿಕಾರಿಗಳಿಗೂ ಕೂಡ ಈ ಪ್ರಕರಣದಲ್ಲಿ ದಂಡ ವಿಧಿಸಲಾಗಿದೆ. ಅನಿಲ್ ಅಂಬಾನಿ ಆರ್‌ಎಚ್‌ಎಫ್‌ಎಲ್‌ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ ಸಹಕಾರದೊಂದಿಗೆ ತನಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸಾಲದ ನೆಪದಲ್ಲಿ ನೀಡಿರುವ ಹಣದಲ್ಲಿ ವಂಚಿಸಿದ್ದಾರೆ ಎಂದು ಸೆಬಿಯ ತನಿಖೆ ತಿಳಿಸಿದೆ. ಹೀಗಾಗಿ ಅವರನ್ನು ಬ್ಯಾನ್ ಮಾಡಲಾಗಿದೆ.
Sebi, RHFL, ಒಂದು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿದೆ (NBFC), ಇದು ಗೃಹ ಸಾಲಗಳು, ಆಸ್ತಿಯ ಮೇಲಿನ ಸಾಲಗಳು ಮತ್ತು ಕಂಪನಿಯೊಳಗಿನ ಹಣವನ್ನು ಬೇರೆಡೆ ನೀಡುವುದು ಸೇರಿ ಹಲವು ವಿಚಾರಗಳ ಕುರಿತು ದೂರು ಕೇಳಿಬಂದಿತ್ತು. ಅಲ್ಲದೆ ಯಾವುದೇ ಅಡಮಾನ ಅಥವಾ ಸೆಕ್ಯೂರಿಟಿಯನ್ನಾಗಲೀ ಯಾವುದನ್ನೂ ಪಡೆಯದೆಯೇ, ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಲಾಗಿತ್ತು. ಇದರು ತನಿಖೆಯಲ್ಲಿ ತಿಳಿದುಬಂದಿತ್ತು. ಆರ್‌ಎಚ್‌ಎಫ್‌ಎಲ್ ಗ್ರೂಪ್ ಮುಖ್ಯಸ್ಥರಾದ ಅನಿಲ್ ಅಂಬಾನಿ ನೇರವಾಗಿ ಪ್ರಭಾವ ಬೀರಿ ಈ ಸಾಲಗಳನ್ನು ಮಂಜೂರು ಮಾಡಿಸಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ಅನಿಲ್ ಅಂಬಾನಿ ಪ್ರತಿಕ್ರಿಯೆ ಏನು?
ಷೇರು ಮಾರುಕಟ್ಟೆಯಿಂದ 5 ವರ್ಷ ಬ್ಯಾನ್ ಆದ ಕಾರಣ ಪ್ರತಿಕ್ರಿಯಿಸಿದ ಅವರು, ಫೆಬ್ರವರಿ 11, 2022 ರಂದು ಸೆಬಿಯ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಅವರು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಪವರ್‌ನ ಮಂಡಳಿಗಳಿಗೆ ರಾಜೀನಾಮೆ ನೀಡಿದ್ದಾರೆ ಮತ್ತು "ಕಳೆದ ಎರಡೂವರೆ ವರ್ಷಗಳಿಂದ ಹೇಳಿದ ಮಧ್ಯಂತರ ಆದೇಶವನ್ನು ಅನುಸರಿಸುತ್ತಿದ್ದಾರೆ" ಎಂದು ಅಂಬಾನಿ ವಕ್ತಾರರು ತಿಳಿಸಿದ್ದಾರೆ. ಆದರೆ ಅನಿಲ್ ಅಂಬಾನಿ ಈ ಕುರಿತಂತೆ ಕಾನೂನು ಪ್ರಕ್ರಿಯೆಗಳ ಪರಿಶೀಲನೆ ನಡೆಸಿ ಮಾಧ್ಯಮ ಪ್ರಕಟಣೆ ಹೊರಡಿಸುತ್ತಾರೆ ಎಂದು ವಕ್ತಾರರು ಹೇಳಿದ್ದಾರೆ.
ಅನಿಲ್ ಅಂಬಾನಿ ಆಸ್ತಿ ಎಷ್ಟಿದೆ ಗೊತ್ತಾ?
ಅನಿಲ್ ಅಂಬಾನಿ 1980ರಲ್ಲಿ ವ್ಯಾಪಾರ ವಲಯಕ್ಕೆ ಎಂಟ್ರಿ ಕೊಟ್ಟರು ತಂದೆ ಧೀರೂಬಾಯಿ ಅಂಬಾನಿ ಅವರು ಅನಾರೋಗ್ಯಕ್ಕೆ ಒಳಗಾದ ಬಳಿಕ ಅವರು ಉದ್ಯಮದ ಕಡೆ ಗಮನ ವಹಿಸಿದರು. ಆದರೆ ಏಳುಬೀಳಿನಲ್ಲಿ ಅವರ ಉದ್ಯಮ ಸಾಗಿತ್ತು, ಹಲವು ಬಾರಿ ಆರ್ಥಿಕ ಸಂಕಷ್ಟಕ್ಕು ಒಳಗಾಗಿತ್ತು. 2002 ರಲ್ಲಿ ಧೀರೂಭಾಯಿ ಅವರ ಮರಣದ ನಂತರ, ಅನಿಲ್ ಮತ್ತು ಅವರ ಹಿರಿಯರು ಸಹೋದರ ಮುಖೇಶ್ ಅಂಬಾನಿ ಜಂಟಿಯಾಗಿ ರಿಲಯನ್ಸ್ ಸಮೂಹವನ್ನು ಮುನ್ನಡೆಸಿದರು.
ಮಾರ್ಚ್ 4, 2024ರ ಪ್ರಕಾರ ಅನಿಲ್ ಅಂಬಾನಿ ಬರೋಬ್ಬರಿ 117.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ, ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು 2021, 2022 ಮತ್ತು 2023 ರಲ್ಲಿ ಫೋರ್ಬ್ಸ್ ನಿಯತಕಾಲಿಕದ ವಾರ್ಷಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ ವಿಶ್ವದ ಅಗ್ರ 10 ಶ್ರೀಮಂತ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಅವರ ಸಂಸ್ಥೆ ಬ್ಯಾನ್ ಆಗಿರುವುದು ಹೂಡಿಕೆದಾರರು ಹಾಗು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.



Click it and Unblock the Notifications