Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಹಿಳೆ ವಿರುದ್ಧ ಕಣಕ್ಕಿಳಿದಿದ್ದು ಪುರುಷನಾ..? ಏನಿದು ಬಾಕ್ಸಿಂಗ್ ವಿವಾದ..!!
ಪ್ಯಾರಿಸ್ ಒಲಿಂಪಿಕ್ ಆರಂಭಗೊಂಡಾಗಿನಿಂದಲೂ ಒಂದಲ್ಲಾ ಒಂದು ವಿವಾದಗಳು ಸಹ ಹುಟ್ಟಿಕೊಳ್ಳುತ್ತಿವೆ. ಕ್ರೀಡಾಪಟುಗಳಿಗೆ ಸರಿಯಾಗಿ ವ್ಯವಸ್ಥೆ ಮಾಡಲಾಗಿಲ್ಲ ಎಂದು ವಿವಾದ ಕೇಳಿಬಂದಿತ್ತು. ಜೊತೆಗೆ ಅಲ್ಲಿನ ಸರ್ಕಾರದ ವಿರುದ್ಧ ದುಂದುವೆಚ್ಚ ಮಾಡಲಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆಯೂ ವರದಿಯಾಗಿತ್ತು. ಆದ್ರೆ ಈಗೊಂದು ವಿಚಿತ್ರ ಘಟನೆ ನಡೆದಿದ್ದು, ಇಡೀ ಕ್ರೀಡಾಕೂಟಕ್ಕೆ ಕಪ್ಪು ಚುಕ್ಕೆಯಾಗುವ ಸಂಭವದಂತೆ ಕಾಣುತ್ತಿದೆ.
ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಮಹಿಳೆಯ ಎದುರಾಳಿಯಾಗಿ ಪುರುಷ ಬಾಕ್ಸರ್‌ನನ್ನು ಕಣಕ್ಕಿಳಿಸಿದ್ದರು ಎಂಬ ವಿವಾದ ಹುಟ್ಟಿಕೊಂಡಿದೆ. ಇಂದು ನಡೆದ ಮಹಿಳೆಯರ 66 ಕೆ.ಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅಲ್ಜೀರಿಯಾದ ಇಮಾನೆ ಖೇಲಿಫ್ ಹಾಗೂ ಇಟಾಲಿಯನ್ ಬಾಕ್ಸರ್ ಏಂಜಲೀನಾ ಕ್ಯಾರಿನಿ ಕಣಕ್ಕಿಳಿದಿದ್ದರು. ಆದರೆ ಈ ಸ್ಪರ್ಧಿ ಪುರುಷ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಅಲ್ಜೀರಿಯಾದ ಇಮಾನೆ ಖೆಲಿಫ್ ವಿರುದ್ಧ ಇಟಾಲಿಯನ್ ಬಾಕ್ಸರ್ ಏಂಜಲೀನಾ ಕ್ಯಾರಿನಿ ಕೇವಲ 46 ಸೆಕೆಂಡ್ ಮಾತ್ರ ಬಾಕ್ಸಿಂಗ್ ನಡೆಸಿ ರಿಂಗ್‌ನಿಂದ ಹೊರನಡೆದರು. ಈ ಪಂದ್ಯ ಮುಂದುವರೆಸುವುದಿಲ್ಲ ಎಂದು ಆಕೆ ಕೆಳಗಿಳಿದು ಹೋದಳು. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಆಕೆಯ ಎದುರಾಳಿ ಮಹಿಳೆಯೇ ಅಲ್ಲ ಪುರುಷ ಎಂಬ ಹೊಸ ಚರ್ಚೆ ಆರಂಭಗೊಂಡಿದೆ.
ಖೇಲಿಫ್‌ನ ಪಂಚ್‌ಗಳು ತನ್ನ ಇಡೀ ವೃತ್ತಿಜೀವನದಲ್ಲಿ ತಾನು ಎದುರಿಸಿದ ಅತ್ಯಂತ ಕಷ್ಟಕರವಾದವು ಎಂದು ಕ್ಯಾರಿನಿ ಹೇಳಿದ್ದಾಳೆ. ಒಂದೇ ಸುತ್ತಿನಲ್ಲಿ ಆಕೆಯ ಮುಖದಲ್ಲಿ ರಕ್ತ ಚಿಮ್ಮಿದೆ. ಬಳಿಕ ಕ್ಯಾರಿನಿ ಈ ಪಂದ್ಯ ಮುಂದುವರೆಸುವುದಿಲ್ಲ ಎಂದು ಹೇಳಿ ಕಣ್ಣೀರಿಡುತ್ತಾ ರಿಂಗ್‌ನಿಂದ ಹೊರಬಂದಿದ್ದಾಳೆ.
2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅಲ್ಜೀರಿಯನ್, ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಚಿನ್ನದ ಪದಕದ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರು ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್‌ನ (ಐಬಿಎ) ಅರ್ಹತಾ ಮಾನದಂಡಗಳನ್ನು ಪೂರೈಸದ ಕಾರಣ ಅನರ್ಹಗೊಳಿಸಲಾಗಿತ್ತು, ಆದರೆ ಪಲಿಂಪಿಕ್ ಸ್ಪರ್ಧೆಯಲ್ಲಿ ಭಾಗಿಯಾಗಲು ಅವರು ಅರ್ಹತೆ ಗಿಟ್ಟಿಸಿದ್ದಾರೆ.
ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ಕ್ಯಾರಿನಿ 'ನಾನು ರಿಂಗ್‌ನಿಂದ ಹೊರಬರಲು ಕಾರಣವಾಗಿದ್ದು ನನ್ನ ಮೂಗಿಗೆ ಆಗಿದ್ದ ಗಾಯ. ಆದರೆ ನನ್ನ ಎದುರಾಳಿಯ ಬಗ್ಗೆ ನಾನು ಮಾತನಾಡಲಾರೆ. ನನಗೆ ಇದು ಸೋಲಲ್ಲ. ಈ ರಿಂಗ್ ನನಗೆ ಜೀವನ ನೀಡಿದೆ. ಬಾಕ್ಸರ್ ಆಗಿ ನನ್ನ ಕೆಲಸ ನಾನು ಮಾಡಿದ್ದೇನೆ' ಎಂದಿದ್ದಾಳೆ.
ಈ ಘಟನೆಯ ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯು ಹೇಳಿಕೆ ಬಿಡುಗಡೆ ಮಾಡಿದೆ, ಈ ಹೇಳಿಕೆಯಲ್ಲಿ ಇಮಾನೆ ಖೆಲಿಫ್ ದೀರ್ಘಕಾಲದಿಂದ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರುವುದನ್ನು ಉಲ್ಲೇಖಿಸಿದೆ. ಜೊತೆಗೆ ಖೆಲಿಫ್ ಮಾತ್ರವಲ್ಲ ಈ ಹಿಂದೆ 2023 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕದಿಂದ ನಿರಾಕರಿಸಲ್ಪಟ್ಟ ತೈವಾನ್‌ನ 2 ಬಾರಿ ವಿಶ್ವ ಚಾಂಪಿಯನ್ ಲಿನ್ ಯು-ಟಿಂಗ್ ಎಂಬಾತನಿಗೂ ಈ ಬಾರಿಯ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಭಾಗಿಯಾಗಲು ಅನುಮತಿ ನೀಡಲಾಗಿದೆ.
ಜೊತೆಗೆ ಒಲಿಂಪಿಕ್‌ನಲ್ಲಿ ಇವರ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಡಿದ ಎಲ್ಲರು ಕಮೆಂಟ್‌ಗಳ ಮಾಡಿದ್ದಾರೆ. ಈ ಪಂದ್ಯದಲ್ಲಿ ಪುರುಷನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಲಿಂಗ ಪರಿವರ್ತನೆಗೊಂಡವರಿಗೆ ಈ ಕ್ರೀಡೆಗಳಿಗೆ ಅವಕಾಶ ನೀಡಬಾರದು ಎಂಬ ವಾದ ಮಾಡುತ್ತಿದ್ದಾರೆ. ಆದ್ರೆ ಇಲ್ಲಿ ನಿಯಮಗಳು ಹೇಳುವುದೇ ಬೇರೆಯಾಗಿದೆ.
ಸದ್ಯ ಈ ವಿವಾದ ಎಲ್ಲಿಗೆ ತಲುಪಲಿದ ಎಂಬುದು ಭಾರೀ ಕುತೂಹಲ ಮೂಡಿಸಿದ್ದು, ಐಒಸಿ ಈ ಕುರಿತು ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.



Click it and Unblock the Notifications
